ಕೊರೋನಾ ಮಧ್ಯೆ ಭಯ ಬಿದ್ದು ಚಿಂತೆಗೆ ಜಾರುವವರಿಗೆ ಟಾನಿಕ್ ಕೊಡೋದೇ ಈ ಉತ್ಸಾಹಿಗಳು. ಇಳಿವಯಸ್ಸಿನಲ್ಲೂ ಕೊರೋನಾ ಜೊತೆ ಫೈಟ್ ಮಾಡೋ ರೀತಿ ಮಾತ್ರ ನಿಜಕ್ಕೂ ಅದ್ಭುತ.

95 ವರ್ಷದ ಅಜ್ಜಿಯೊಬ್ಬರು ರಾಜ್‌ಕೋಟ್‌ನಲ್ಲಿ ಹಾಸಿಗೆಯಲ್ಲಿದ್ದಕೊಂಡೇ ಗರ್ಭಾ ಸಾಂಗ್‌ಗೆ ಉತ್ಸಾಹದಲ್ಲಿ ಸ್ಟೆಪ್ ಹಾಕೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

BP, ಶುಗರ್ ಇದ್ರೂ ಮನೆಯಲ್ಲೇ ಕೊರೋನಾ ಸೋಲಿಸಿದ 100ರ ವೃದ್ಧೆ

ಕೊರೋನಾ ಪಾಸಿಟಿವ್ ದೃಢಪಟ್ಟ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆಯುತ್ತಿರುವ ಅಜ್ಜಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಗೋಲಿಯೋಂಕಿ ರಾಸ್‌ಲೀಲಾ ರಾಮ್ ಲೀಲಾ ಸಿನಿಮಾದ ಪ್ರಸಿದ್ಧ ಗಾರ್ಭಾ ಹಾಡು ಮೋರ್ ಬನಿ ತಂಘಾಟ್ ಕರೇ ಹಾಡಿಗೆ ಕುಳಿತಲ್ಲೇ ಸ್ಟೆಪ್ಟ್ ಹಾಕಿದ್ದಾರೆ.

ಬಹಳಷ್ಟು ಜನರು ಅಜ್ಜೀ ಬೇಗ ಹುಷಾರಾಗಿ ಬನ್ನಿ, ನಿಮ್ಮ ಸ್ಪಿರಿಟ್‌ಗೆ ಹ್ಯಾಟ್ಸ್ ಆಫ್, ರೆಸ್ಪೆಕ್ಟ್ ಎಂದು ಕಮೆಂಟ್ ಮಾಡಿ ಹುರಿದುಂಬಿಸಿದ್ದಾರೆ. ಅಜ್ಜಿಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona