Covid 19 Variant: ಅಪಾಯಕಾರಿ ದೇಶಗಳಿಂದ ಬಂದ 10 ಜನರಿಗೆ ಕೋವಿಡ್‌ ಸೋಂಕು!

*ಮುಂಬೈನಲ್ಲಿ 6, ದೆಹಲಿಯಲ್ಲಿ 4 ಜನರಲ್ಲಿ ಸೋಂಕು ದೃಢ
*ಎಲ್ಲಾ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಆರಂಭ
*125 ಕೋಟಿ ಡೋಸ್‌ ಲಸಿಕೆ : ಲಕ್ಷಕ್ಕಿಂತ ಕೆಳಗಿಳಿದ ಸಕ್ರಿಯ ಕೇಸು 

10 people found positive for covid19 who came from at high risk countries mnj

ನವದೆಹಲಿ (ಡಿ. 02): ಕೋವಿಡ್‌ನ ಒಮಿಕ್ರೋನ್‌ ರೂಪಾಂತರಿ (Covid19 New Variant Omicron) ತಳಿ ಪತ್ತೆಯಾಗಿರುವ ಅಥವಾ ಒಮಿಕ್ರೋನ್‌ ವಿಷಯದಲ್ಲಿ ಅಪಾಯಕಾರಿ ಎಂದು ಪರಿಗಣಿಸಲಾದ ‘ಅಟ್‌ ರಿಸ್ಕ್‌’ ದೇಶಗಳಿಂದ ಮಹಾರಾಷ್ಟ್ರಕ್ಕೆ (Maharashtra ಆಗಮಿಸಿದ ಆರು ಮಂದಿ ಮತ್ತು ದೆಹಲಿಗೆ (Delhi) ಆಗಮಿಸಿದ ನಾಲ್ವರಲ್ಲಿ ಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅವರ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸ್‌ ಪರೀಕ್ಷೆಗೆ ಕಳಿಸಲಾಗಿದೆ. ‘ಕೋವಿಡ್‌ ಪಾಸಿಟಿವ್‌ (Covid19 Positive) ಬಂದ ಆರೂ ಮಂದಿ ರೋಗಲಕ್ಷಣ ಇಲ್ಲದವರು ಅಥವಾ ಅಲ್ಪ ಪ್ರಮಾಣದ ರೋಗಲಕ್ಷಣ ಇರುವವರಾಗಿದ್ದಾರೆ. ಅವರ ಸಂಪರ್ಕಗಳನ್ನು ಪತ್ತೆಹಚ್ಚಲಾಗುತ್ತಿದೆ. ಆರರಲ್ಲಿ ಮೂರು ಮಂದಿ ಮುಂಬೈನವರಾಗಿದ್ದು, ಇನ್ನಿಬ್ಬರು ಪಿಂಪ್ರಿ-ಚಿಂಚ್ವಾಡ ಮತ್ತು ಒಬ್ಬರು ಪುಣೆಯವರಾಗಿದ್ದಾರೆ’ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ಬ್ರಿಟನ್‌ ಮತ್ತು ನೆದರ್‌ಲೆಂಡ್‌ನಿಂದ ದೆಹಲಿಗೆ ಆಗಮಿಸಿದ ತಲಾ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಎಲ್ಲಾ 10 ಜನರನ್ನು ಐಸೋಲೇಷನ್‌ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ರಿಟನ್‌, ಯುರೋಪಿಯನ್‌ ರಾಷ್ಟ್ರಗಳು, ಆಫ್ರಿಕನ್‌ ರಾಷ್ಟ್ರಗಳು ಸೇರಿದಂತೆ ಹಲವು ಒಮಿಕ್ರೋನ್‌ ಅಪಾಯವಿರುವ ದೇಶಗಳನ್ನು ‘ಅಟ್‌ ರಿಸ್ಕ್‌’ (At Risk) ದೇಶಗಳು ಎಂದು ಮಹಾರಾಷ್ಟ್ರ ಗುರುತಿಸಿದ್ದು, ಅಲ್ಲಿಂದ ಬಂದವರಿಗೆ ಕಡ್ಡಾಯವಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್‌ (Institutional Quarantine) ನಿಯಮ ಜಾರಿಗೊಳಿಸಿದೆ. ಅವರು ತಮ್ಮದೇ ವೆಚ್ಚದಲ್ಲಿ ಹೋಟೆಲ್‌ಗಳಲ್ಲಿ ಉಳಿದುಕೊಂಡು, ಎರಡನೇ ದಿನ, ನಾಲ್ಕನೇ ದಿನ ಮತ್ತು ಏಳನೇ ದಿನ ಆರ್‌ಟಿಪಿಸಿಆರ್‌ (RTPCR Test) ಟೆಸ್ಟ್‌ ಮಾಡಿಸಿಕೊಳ್ಳಬೇಕಿದೆ.

Covishield as booster dose: ಒಮಿಕ್ರೋನ್ ಭೀತಿ, ಬೂಸ್ಟರ್ ಡೋಸ್‌ಗೆ ಅನುಮತಿ ಕೇಳಿದ ಸೀರಂ

125 ಕೋಟಿ ಡೋಸ್‌ ದಾಟಿದ ಲಸಿಕೆ ವಿತರಣೆ!

ದೇಶದಲ್ಲಿ ಕೋವಿಡ್‌ ಲಸಿಕೆ (Covid19 Vaccine) ವಿತರಣೆ ಪ್ರಮಾಣ ಬುಧವಾರ 125 ಕೋಟಿ ದಾಟುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಬುಧವಾರ ರಾತ್ರಿಯವರೆಗೂ 80 ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಲಸಿಕೆ ನೀಡುವ ಮೂಲಕ ದೇಶದಲ್ಲಿ ವಿತರಿಸಲಾದ ಕೋವಿಡ್‌ ಲಸಿಕೆಯ ಪ್ರಮಾಣ 125 ಕೋಟಿ ಗಡಿದಾಟಿದೆ ಎಂದು ತಿಳಿಸಿದೆ. 2021ರ ಜ.16ರಂದು ದೇಶದಲ್ಲಿ ಕೋವಿಡ್‌ ಲಸಿಕೆ ವಿತರಣೆ ಆರಂಭವಾಗಿತ್ತು. ಇದುವರೆಗೂ 79.31 ಕೋಟಿ ಜನರಿಗೆ ಮೊದಲ ಡೋಸ್‌ ಮತ್ತು 45.70 ಕೋಟಿ ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ.

1 ಲಕ್ಷಕ್ಕಿಂತ ಕೆಳಗಿಳಿದ ಸಕ್ರಿಯ ಕೇಸು!

ಕೋವಿಡ್‌ ಸೋಂಕು ಕಾಣಿಸಿಕೊಂಡ ಒಂದೂವರೆ ವರ್ಷದ ನಂತರ ದೇಶದಲ್ಲಿ ಸಕ್ರಿಯ ಪ್ರಕರಣಗಳು (Positive Cases) 1 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 1520 ಸೋಂಕಿತರು ಗುಣಮುಖರಾಗಿದ್ದು (Recovered) , 99,023 ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಇದು 547 ದಿನದ ಕನಿಷ್ಠವಾಗಿದೆ. ಇದೇ ಅವಧಿಯಲ್ಲಿ 8,954 ಜನರು ಸೋಂಕಿಗೆ ತುತ್ತಾಗಿದ್ದರೆ, 267 ಜನರು ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕು 3.45 ಕೋಟಿಗೆ ಹಾಗೂ ಒಟ್ಟು ಸಾವು 4.69 ಲಕ್ಷಕ್ಕೆ ಏರಿಕೆಯಾಗಿದೆ.

Omicron: ವಿದ್ಯಾರ್ಥಿಗೆ ಕೊರೋನಾ ದೃಢ: ಶಾಲೆಗೆ ರಜೆ

ಅಮೆರಿಕದಲ್ಲಿ (USA) ಇನ್ನೂ ಸಹ 94.19 ಲಕ್ಷ, ರಷ್ಯಾದಲ್ಲಿ (Russia) 10.28 ಲಕ್ಷ, ಬ್ರಿಟನ್‌ನಲ್ಲಿ (Britain) 10.21 ಲಕ್ಷ, ಜರ್ಮನಿಯಲ್ಲಿ (Germany) 8.41 ಲಕ್ಷ ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳು 1 ಲಕ್ಷಕ್ಕಿಂತ ಕಡಿಮೆಯಾಗಿದೆ. ಈವರೆಗೆ ದೇಶದಲ್ಲಿ 124.10 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

Latest Videos
Follow Us:
Download App:
  • android
  • ios