Asianet Suvarna News Asianet Suvarna News

ರಂಗೋಲಿ ಸ್ಪರ್ಧೆ: 76 ನಿಮಿಷದಲ್ಲಿ 76 ರಾಷ್ಟ್ರಧ್ವಜ -ಡಾ.ಭಾರತಿ ಮರವಂತೆ ವಿಶ್ವದಾಖಲೆ!

  • ರಂಗೋಲಿಯಲ್ಲಿ 76 ನಿಮಿಷಗಳಲ್ಲಿ 76 ರಾಷ್ಟ್ರಧ್ವಜ -ಡಾ.ಭಾರತಿ ಮರವಂತೆ ವಿಶ್ವದಾಖಲೆ.
  • ತಮಿಳುನಾಡಿನ ಮಯಿಳದುತುರೈನ ಜಾಕಿಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸಂಸ್ಥೆಯವರು ಆಯೋಜನೆ.
  • 76 ನಿಮಿಷಗಳಲ್ಲಿ 76 ಭಾರತದ ರಾಷ್ಟ್ರಧ್ವಜಗಳನ್ನು ರಂಗೋಲಿಯಲ್ಲಿ ಬಿಡಿಸುವ ದಾಖಲೆ.

 

Rangoli Competition Dr.Bharti Maravante World Record rav
Author
First Published Sep 21, 2022, 3:27 PM IST

ಉಡುಪಿ (ಸೆ.21) : ತಮಿಳುನಾಡಿನ ಮಯಿಳದುತುರೈ ಜಿಲ್ಲೆಯಲ್ಲಿ ಜಾಕಿಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸಂಸ್ಥೆಯವರು(ಜಾಕಿ ಕ್ರಿಯೇಶನ್ಸ್) ಆಯೋಜಿಸಿದ ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 76 ನಿಮಿಷಗಳಲ್ಲಿ 76 ಭಾರತದ ರಾಷ್ಟ್ರಧ್ವಜಗಳನ್ನು ರಂಗೋಲಿಯಲ್ಲಿ ಬಿಡಿಸುವ ದಾಖಲೆಯಲ್ಲಿ ರಂಗೋಲಿ ಕಲಾವಿದ ಡಾ.ಭಾರತಿ ಮರವಂತೆಯವರು ಯಶಸ್ವಿಯಾಗಿದ್ದಾರೆ.\

30 ಗಂಟೆಗಳಲ್ಲಿ ಲೇಹ್-ಟು-ಮನಾಲಿ ಸವಾರಿ, ಕಾಶ್ಮೀರಿ ಸೈಕ್ಲಿಸ್ಟ್ ವಿಶ್ವ ದಾಖಲೆ ಯತ್ನ

21-ಆಗಸ್ಟ್-2022ರಂದು ಅಂತರ್ಜಾಲ(Online)ದ ಮೂಲಕ ಡಾ.ಭಾರತಿ ಮರವಂತೆ(Dr.Bharati Maravante)ಯವರು ಸಂಸ್ಥೆಯವರು ಸೂಚಿಸಿದ ನಿರ್ಧಿಷ್ಟ ಸಮಯದಲ್ಲಿ 76 ನಿಮಿಷಗಳಲ್ಲಿ 76 ಭಾರತದ ರಾಷ್ಟ್ರಧ್ವಜಗಳನ್ನು ಅನನ್ಯ ಕೌಶಲದಿಂದ ಏಕವ್ಯಕ್ತಿಯಾಗಿ ರಚಿಸಿದ್ದರು. ಬೃಹತ್ ಗಾತ್ರದ(30 25 ಅಡಿ)ಲ್ಲಿ ಧ್ವಜದ ಪ್ರಮಾಣತೆಗೆ ಅನುಗುಣವಾಗಿ(2ಅನುಪಾತದಲ್ಲಿ ಮತ್ತು ತ್ರಿವರ್ಣ-ಚಕ್ರ( 24ಗೆರೆಗಳು ಚಿತ್ರದಲ್ಲಿ ನೋಡಬಹುದು)ವನ್ನು 76 ರಾಷ್ಟ್ರಧ್ವಜಗಳನ್ನು 76 ನಿಮಿಷಗಳ ಅವಧಿಗೆ ಮುಂಚಿತವಾಗಿ ಪೂರ್ಣಗೊಳಿಸಿ ವಿಶ್ವದಾಖಲೆ(World record) ನಿರ್ಮಿಸಿದ್ದಾರೆ. 

ದೇಶಭಕ್ತಿ ಹುಟ್ಟಿಸುವ ಈ ಕಲಾ ಪ್ರದರ್ಶನದಲ್ಲಿ ಜಾಗತಿಕ ಮಟ್ಟದಲ್ಲಿ ವಿವಿಧ ರಾಷ್ಟ್ರಗಳ ಕಲಾವಿದರು. ವಿವಿಧ ಕೌಶಲ್ಯಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.ತಮಿಳುನಾಡಿ(Tamilnadu)ನ ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ(Jockey Book of World Records Organization)ಯವರು ಪ್ರಮಾಣಪತ್ರ, ಟ್ರೋಪಿ, ಮೆಡಲ್, ಬ್ಯಾಡ್ಜ್, ಟಿಶರ್ಟ್ ಇತ್ಯಾದಿಗಳನ್ನು ನೀಡಿ ಡಾ.ಭಾರತಿ ಮರವಂತೆಯವರನ್ನು ಗೌರವಿಸಿದ್ದಾರೆ. 

ತಮಿಳುನಾಡಿನ ನಿರ್ಧಿಷ್ಟ ಸ್ಥಳದಲ್ಲಿ ಮತ್ತು ಅಂತರ್ಜಾಲದಲ್ಲಿ ನಡೆದಿರುವ ಈ ಪ್ರದರ್ಶನದಲ್ಲಿ ಡಾ.ಭಾರತಿ ಮರವಂತೆಯವರು ಅಂತರ್ಜಾಲದ ಮೂಲಕ ರಂಗೋಲಿ ಕಲೆಯನ್ನು ಪ್ರದರ್ಶಿಸಿದ್ದರು. ಈ ಸಂದರ್ಭದ ಬೃಹತ್ ಗಾತ್ರದ ರಂಗೋಲಿ ಕಲಾಪ್ರದರ್ಶನವನ್ನು ವೀಡಿಯೋ ಛಾಯಾಚಿತ್ರಗಳ ಮೂಲಕ ಕಾಯ್ದಿರಿಸಲಾಗಿದೆ. ಭಾರತದ ಸಾಂಸ್ಕೃತಿಕ ಕಲೆಯ ಉಳಿವಿನ ಮತ್ತು ದೇಶಭಕ್ತಿ ಹುಟ್ಟಿಸುವ ವಿಷಯವಾಗಿರುವ ಈ ರಂಗೋಲಿ ಕಲಾಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಡಾ.ಭಾರತಿ ಮರವಂತೆ ಸಂಕ್ಷಿಪ್ತ ಪರಿಚಯ:

ಡಾ.ಭಾರತಿ ಮರವಂತ ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾಗಿದ್ದು 'ಕರಾವಳಿ ಕರ್ನಾಟಕದ ರಂಗೋಲಿ ಕಲೆ' ವಿಷಯಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ. `ಜನಪದ ಚಿತ್ತಾರಗಳು' ವಿಷಯದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಕಿರು ಸಂಶೋಧನೆ, ಕನ್ನಡ ಜಾನಪದ ನಿಘಂಟು ಯೋಜನೆಯಲ್ಲಿ ಕೆಲಸ, ಆಫ್ರಿಕನ್ ಜಾನಪದ ವಿಶ್ವಕೋಶಕ್ಕೆ ಸಂಶೋಧನಾ ಬರವಣೆಗೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರಿಂದ `ರಂಗಭೂಮಿಯಲ್ಲಿ ಬಣ್ಣಗಾರಿಕೆ' ವಿಷಯದಲ್ಲಿ ಕಲಾವಿದರ ಫೆಲೋಶಿಪ್‌ ಭಾರತಿಯವರಿಗೆ ಲಭಿಸಿದೆ. ರಂಗೋಲಿ ಕಲಾ ಪರಿಷತ್ತಿನ ಸಂಸ್ಥಾಪಕಾರಾಗಿ ರಂಗೊಲಿ ಪತ್ರಿಕೆಯ ಸಂಪಾದಕರಾಗಿಯೂ 14 ಸಂಪುಟ ಹೊರ ತಂದಿದ್ದಾರೆ.

24 ಗಂಟೆಯಲ್ಲಿ 81 ಆನ್‌ಲೈನ್ ಕೋರ್ಸ್: ಹೊಸ ದಾಖಲೆ ಬರೆದ 'ಮಲ್ಲು ಕುಟ್ಟಿ'

5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಂಗೋಲಿ ತರಬೇತಿ, 13ಕ್ಕೂ ಹೆಚ್ಚು ಕೃತಿ ಓದುಗರಿಗೆ ತಲುಪಿವೆ. ನಾಡಿನಾದ್ಯಂತ ಸಾವಿರಕ್ಕೂ ಮಿಕ್ಕಿ ಬೃಹತ್ ರಂಗವಲ್ಲಿ ಪ್ರದರ್ಶನ, 75ಕ್ಕೂ ಹೆಚ್ಚು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಸಮ್ಮೇಳನಗಳಲ್ಲಿ ಜಾನಪದದ ವಿಷಯದ ಕುರಿತು ಪ್ರಬಂಧ ಮಂಡನೆ ಮಾಡಿದ್ದಾರೆ.

Follow Us:
Download App:
  • android
  • ios