ಸ್ವಾತಂತ್ರ್ಯ ಯೋಧರಿಗೆ ನಮನ ಸಲ್ಲಿಸಲು ‘ಡಿಜಿಟಲ್‌ ಜ್ಯೋತಿ’: ಪ್ರಧಾನಿ ಮೋದಿ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.13ರಿಂದ 15ರವರೆಗೆ ಪ್ರತಿ ಮನೆಮನೆಗಳಲ್ಲೂ ರಾಷ್ಟ್ರ ಧ್ವಜ ಹಾರಿಸುವ ಅಥವಾ ಪ್ರದರ್ಶಿಸುವ ‘ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.

pm narendra modi urges people to take part in paying digital tributes to freedom fighters gvd

ನವದೆಹಲಿ (ಜು.24): ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.13ರಿಂದ 15ರವರೆಗೆ ಪ್ರತಿ ಮನೆಮನೆಗಳಲ್ಲೂ ರಾಷ್ಟ್ರ ಧ್ವಜ ಹಾರಿಸುವ ಅಥವಾ ಪ್ರದರ್ಶಿಸುವ ‘ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೆ ಕರೆ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮತ್ತೊಂದು ವಿಶಿಷ್ಟ ಹಾಗೂ ವಿನೂತನ ಅಭಿಯಾನ ಆರಂಭಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ನಮನ ಸಲ್ಲಿಸಲು ‘ಡಿಜಿಟಲ್‌ ಜ್ಯೋತಿ’ ಎಂಬ ಕಾರ್ಯಕ್ರಮ ಪ್ರಕಟಿಸಿದ್ದಾರೆ.

ಇದಕ್ಕಾಗಿ ದೆಹಲಿಯ ಸೆಂಟ್ರಲ್‌ ಪಾರ್ಕ್‌ನಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ದೇಶದ ನಾಗರಿಕರು ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು, ಇ-ಮೇಲ್‌, ಮೊಬೈಲ್‌ ಸಂಖ್ಯೆ ಹಾಗೂ ಸಂದೇಶವನ್ನು ಬಿತ್ತರಿಸಿದರೆ ಡಿಜಿಟಲ್‌ ಜ್ಯೋತಿಯ ಬೆಳಕು ಪ್ರಕಾಶಿಸಲಿದೆ. ಈ ವಿಶಿಷ್ಟ ಅಭಿಯಾನದಲ್ಲಿ ಪಾಲ್ಗೊಂಡು, ಆಜಾದಿ ಕಾ ಅಮೃತ ಮಹೋತ್ಸವವನ್ನು ಬಲಪಡಿಸುವಂತೆ ಪ್ರಧಾನಿ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಷರೀಫ್ ಶೀಘ್ರದಲ್ಲೇ ಭೇಟಿ, ವೇದಿಕೆ ಸಿದ್ದ!

‘ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರಿಗೆ ವಿಶಿಷ್ಟ ಗೌರವ ಸಲ್ಲಿಸುವುದೇ ಡಿಜಿಟಲ್‌ ಜ್ಯೋತಿ. ಸ್ವಾತಂತ್ರ್ಯ ಹೋರಾಟಗಾರರಿಗೆ ಹೃತ್ಪೂರ್ವಕ ಕೃತಜ್ಞತಾ ಸಂದೇಶಗಳನ್ನು ತಂತ್ರಜ್ಞಾನದ ಸಹಾಯದಿಂದ ಹಂಚಿಕೊಳ್ಳಲು ಇದು ಬಳಕೆಯಾಗುತ್ತದೆ’ ಎಂದು ಹೇಳಿದ್ದಾರೆ.

ನೀವೂ ಜ್ಯೋತಿ ಬೆಳಗಿ:
- digitaltribute.in ವೆಬ್‌ಸೈಟ್‌ಗೆ ಹೋಗಿ.
- ಅಲ್ಲಿ ಹೆಸರು, ಇ-ಮೇಲ್‌, ಮೊಬೈಲ್‌ ಸಂಖ್ಯೆ ನಮೂದಿಸಿ, ನಿಮ್ಮ ಫೋಟೋ ಅಪ್‌ಲೋಡ್‌ ಮಾಡಿ
- ಅಲ್ಲೇ ಇರುವ ಸಂದೇಶವನ್ನು ಆಯ್ಕೆ ಮಾಡಿಕೊಳ್ಳಿ. ತನ್ಮೂಲಕ ಗೌರವ ಸಲ್ಲಿಸಿ.
- ಹೆಚ್ಚು ಹೆಚ್ಚು ಮಂದಿ ಸಂದೇಶ ಕಳುಹಿಸಿದರೆ ದೆಹಲಿಯ ಸೆಂಟ್ರಲ್‌ ಪಾರ್ಕ್‌ನ ದೀಪಗಳು ಹೆಚ್ಚು ಬೆಳಗುತ್ತವೆ
- ಅದರ ಚಿತ್ರವನ್ನು ಸೆರೆಹಿಡಿದು ನಿಮ್ಮ ಇ-ಮೇಲ್‌ ಹಾಗೂ ವಾಟ್ಸಾಪ್‌ಗೆ ಕಳುಹಿಸಲಾಗುತ್ತದೆ.

ನೌಕಾಪಡೆ ಸ್ವಾವಲಂಬನ್ ಸೆಮಿನಾರ್‌ನಲ್ಲಿ ಮೋದಿ ಭಾಷಣ, ಶತ್ರು ರಾಷ್ಟ್ರಕ್ಕೆ ಸಂದೇಶ!

3 ದಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.13ರಿಂದ 15ರವರೆಗೆ ದೇಶದ ನಾಗರಿಕರು ಮನೆ ಮನೆಗಳಲ್ಲೂ ರಾಷ್ಟ್ರ ಧ್ವಜ ಹಾರಿಸಬೇಕು ಅಥವಾ ಪ್ರದರ್ಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕರೆ ನೀಡಿದ್ದಾರೆ. ತನ್ಮೂಲಕ ಕೇಂದ್ರ ಸರ್ಕಾರದ ‘ಹರ್‌ ಘರ್‌ ತಿರಂಗಾ’ (ಮನೆ ಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನವನ್ನು ಬೆಂಬಲಿಸಿ ಶಕ್ತಿ ತುಂಬುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, 1947ರ ಜು.22ರಂದು ರಾಷ್ಟ್ರ ಧ್ವಜವನ್ನು ಅಂಗೀಕರಿಸಲಾಯಿತು ಎಂದು ಹೇಳಿದ್ದಾರೆ. ಜತೆಗೆ ಹರ್‌ ಘರ್‌ ತಿರಂಗಾ ಅಭಿಯಾನದಿಂದಾಗಿ ರಾಷ್ಟ್ರ ಧ್ವಜದೊಂದಿಗಿನ ನಮ್ಮ ನಂಟು ಮತ್ತಷ್ಟು ಬಿಗಿಯಾಗುತ್ತದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios