ನೌಕಾಪಡೆ ಸ್ವಾವಲಂಬನ್ ಸೆಮಿನಾರ್‌ನಲ್ಲಿ ಮೋದಿ ಭಾಷಣ, ಶತ್ರು ರಾಷ್ಟ್ರಕ್ಕೆ ಸಂದೇಶ!
ನೌಕಾ ಆವಿಷ್ಕಾರ ಮತ್ತು ಸ್ವದೇಶೀಕರಣದ ಸ್ವಾವಲಂಬನ್ ಸೆಮಿನಾರ್‌ನಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ನೌಕಾಪಡೆಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಶತ್ರು ರಾಷ್ಟ್ರಗಳಿಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನವದೆಹಲಿ(ಜು.18): ಭಾರತೀಯ ಸೇನೆಯಲ್ಲಿ ಆತ್ಮನಿರ್ಭರ ಭಾರತ ಈಗಿನ ಕಾಲಕ್ಕೆ ಅತ್ಯಂತ ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ನೌಕಾಪಡ ಸ್ವಾವಲಂಬನ್ ಸೆಮಿನಾರ್ ಆಯೋಜಿಸವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಮೋದಿ ಹೇಳಿದ್ದಾರೆ. ನೌಕಾ ಸೇನೆಯಲ್ಲಿ ಎರಡು ರಾಷ್ಟ್ರಗಳು ಅಥವಾ ಹೆಚ್ಚಿನ ರಾಷ್ಟ್ರಗಳು ಜಂಟಿ ಅಭ್ಯಾಸ ನಡೆಸುವುದು ಸಾಮಾನ್ಯವಾಗಿದೆ. ಇದೀಗ ನೌಕಾಪಡೆಯಲ್ಲಿ ಸ್ವಾವಲಂಬನ್ ಕೂಡ ಒಂದು ರೀತಿಯಲ್ಲಿ ಜಾಯಿಂಟ್ ಎಕ್ಸೈಸ್ ಆಗಿದೆ ಎಂದು ಮೋದಿ ಹೇಳಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ನೌಕಾ ಪಡೆ ಆಯೋಜಿಸಿದ ನೌಕಾ ಆವಿಷ್ಕಾರ ಮತ್ತು ಸ್ವದೇಶೀಕರಣದ ಸ್ವಾವಲಂಬನ್ ಸೆಮಿನಾರ್ ಉದ್ದೇಶಿ ಮೋದಿ ಮಾತನಾಡಿದರು. ದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ನೌಕಾ ಸೇನಾ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಸೇರಿದಂತೆ ಹಲವು ಸೇನಾಧಿಕಾರಿಗಳ ಉಪಸ್ಥಿತರಿದ್ದರು.
ಅಜಾದಿ ಕಾ ಅಮೃತಮಹೋತ್ಸವ ಸಂದರ್ಭದಲ್ಲಿ ಈ ರೀತಿಯ ಸ್ವಾವಲಂಬನ್ ಬಹುದೊಡ್ಡ ಯೋಜನೆ ನೌಕಾಪಡೆ ಕೈಗೆತ್ತಿಕೊಂಡಿರುವುದು ಮತ್ತಷ್ಟು ಉತ್ತೇಜನ ನೀಡಲಿದೆ. ನಮ್ಮ ಸಮುದ್ರದ ಗಡಿ ರಕ್ಷಣೆ ಅತ್ಯಂತ ಸವಾಲಿನಿಂದ ಕೂಡಿದೆ. ಹೀಗಾಗಿ ನೌಕಾಪಡೆ ಸಮಯಕ್ಕೆ ತಕ್ಕಂತೆ ಅಧುನಿಕತೆ, ಅತ್ಯಾಧುನಿಕ ನೌಕೆಗಳೊಂದಿಗೆ ಮೇಲ್ದರ್ಜೆಗೇರಬೇಕಾದ ಅನಿವಾರ್ಯತೆ ಇದೆ ಎಂದು ಮೋದಿ ಹೇಳಿದ್ದಾರೆ. ಸ್ವಾವಲಂಬಿಯಿಂದ ಭಾರತ ಹೆಚ್ಚು ಶಕ್ತಿಯುತವಾಗಲಿದೆ. ಇದರಿಂದ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ.