Asianet Suvarna News Asianet Suvarna News

ಸ್ವಾತಂತ್ರ್ಯ ದಿನಾಚರಣೆಗೆ ದಿನಗಣನೆ: ತ್ರಿವರ್ಣದಿಂದ ಕಂಗೊಳಿಸಿದ ಭಸ್ತಾ ಡ್ಯಾಂ

75ನೇ ಸ್ವಾತಂತ್ರ ದಿನಾಚರಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ರಾಷ್ಟ್ರಧ್ವಜದಲ್ಲಿರುವ ತ್ರಿವರ್ಣದ ಬಣ್ಣಗಳ ಆರಾಧನೆ ಎಲ್ಲೆಡೆಯೂ ಕಂಡು ಬರುತ್ತಿದ್ದು ಈ ಮೂರು ಬಣ್ಣಗಳಲ್ಲಿ ವಿವಿಧ ವರ್ಣರಂಜಿತ ಚಿತ್ತಾರಗಳನ್ನು ಕಲಾವಿದರು ಮೂಡಿಸುತ್ತಿದ್ದಾರೆ.

75th Independence day celebration, Maharashtra's Bhatsa dam decorated with tricolor akb
Author
Bangalore, First Published Aug 11, 2022, 6:06 PM IST

ಮುಂಬೈ: 75ನೇ ಸ್ವಾತಂತ್ರ ದಿನಾಚರಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ರಾಷ್ಟ್ರಧ್ವಜದಲ್ಲಿರುವ ತ್ರಿವರ್ಣದ ಬಣ್ಣಗಳ ಆರಾಧನೆ ಎಲ್ಲೆಡೆಯೂ ಕಂಡು ಬರುತ್ತಿದ್ದು ಈ ಮೂರು ಬಣ್ಣಗಳಲ್ಲಿ ವಿವಿಧ ವರ್ಣರಂಜಿತ ಚಿತ್ತಾರಗಳನ್ನು ಕಲಾವಿದರು ಮೂಡಿಸುತ್ತಿದ್ದಾರೆ. ಈ ನಡುವೆ ಮಹಾರಾಷ್ಟ್ರದಲ್ಲಿ ಜಲಾಶಯದಿಂದ ಧುಮ್ಮಿಕ್ಕುವ ನೀರು ಕೂಡ ರಾಷ್ಟ್ರಧ್ವಜದ ತ್ರಿವರ್ಣದಿಂದ ಕಂಗೊಳಿಸುತ್ತಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ ಕರೆ ನೀಡಿದ್ದ ಹರ್ ಘರ್‌ ತಿರಂಗಾ ಆಂದೋಲನದ ಭಾಗವಾಗಿ ಭಸ್ತಾ ಜಲಾಶಯದಿಂದ ಹರಿಯುವ ನೀರು ಈ ರೀತಿ ರಾಷ್ಟ್ರಧ್ವಜದ ಮೂರು ವರ್ಣದಲ್ಲಿ ಕಾಣುವಂತೆ ಬೆಳಕಿನ ಚಿತ್ತಾರ ಮಾಡಲಾಗಿದೆ. ಭಸ್ತಾ ಜಲಾಶಯವೂ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ನೀರೊದಗಿಸುತ್ತಿದೆ. ಈ ಜಲಾಶಯ ಈಗ ರಾತ್ರಿಯ ಸಮಯದಲ್ಲಿ ರಾಷ್ಟ್ರಧ್ವಜದ ಬಣ್ಣದಲ್ಲಿ ಕಂಗೊಳಿಸುತ್ತಿದೆ.

ಮಹಾರಾಷ್ಟ್ರದ ವಸತಿ ಹಾಗೂ ನಗರಾಭಿವೃದ್ಧಿ ವ್ಯವಹಾರಗಳ ಪ್ರಕಾರ ಈ ಜಲಾಶಯವೂ ಮಹಾರಾಷ್ಟ್ರದ ಥಾಣೆಯಲ್ಲಿ ಇದ್ದು, ಹರ್ ಘರ್ ತಿರಂಗದ ಭಾಗವಾಗಿ ಈ ಜಲಾಶಯವನ್ನು ಮೂರು ಬಣ್ಣಗಳಿಂದ ಶೃಂಗರಿಸಲಾಗಿದೆ. ದೇಶದ ಮೇಲಿನ ನಮ್ಮ ಪ್ರೀತಿ ಅಭಿಮಾನಕ್ಕೆ ಸರಿ ಸಾಟಿ ಯಾವುದು ಇಲ್ಲ, ಅದು ಎಲ್ಲಾ ಎಲ್ಲೆಗಳನ್ನು ಮೀರಿದ್ದು ಎಂದು ಮಹಾರಾಷ್ಟ್ರದ ನಗರಾಭಿವೃದ್ಧಿ ವ್ಯವಹಾರಗಳ ಇಲಾಖೆ ಪೋಸ್ಟ್‌ನಲ್ಲಿ ತಿಳಿಸಿದೆ. ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಐದು ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

INDIA@75: ಬೆಂಗಳೂರಿಗರಿಗೆ ಬಂಪರ್ ಗಿಫ್ಟ್ ನೀಡಿದ ಬಿಎಂಟಿಸಿ! ಫ್ರೀ ಪ್ರಯಾಣ ಮಜಾ ಉಡಾಯಿಸಿ

ಈ ವಿಡಿಯೋ ನೋಡಿದವರೊಬ್ಬರು ಕಾಮೆಂಟ್ ಮಾಡಿದ್ದು, ಸುಂದರವಾದ ವಿಡಿಯೋ, ಹರ್‌ ಘರ್ ತಿರಂಗಾ ಸುಂದರವಾಗಿದೆ. ಇದೊಂದು ಇಡೀ ರಾಷ್ಟ್ರವನ್ನು ಒಂದು ಗೂಡಿಸುವಲ್ಲಿ ಸುಂದರವಾದ ಪ್ರಯತ್ನ, ಇದರೊಂದಿಗೆ ಸ್ವಚ್ಛ ಭಾರತದ ಮೂಲಕ ನಮಗೆ ನಮ್ಮ ಭರವಸೆ ಮತ್ತು ಮುಂದಿನ ಪೀಳಿಗೆಗೆ ನಮ್ಮ ಕೊಡುಗೆಯಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. 

ನಿಜವಾಗಿಯೂ ಸುಂದರವಾಗಿದೆ ಜೈಹಿಂದ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 75ನೇ ಸ್ವಾತಂತ್ರ ದಿನಾಚರಣೆ ಆಚರಿಸಲು ದೇಶ ಸಂಪೂರ್ಣವಾಗಿ ಸಿದ್ಧಗೊಳ್ಳುತ್ತಿದೆ. 75ನೇ ಸ್ವಾತಂತ್ರ ದಿನಾಚರಣೆ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗಾ ಎಂಬ ಆಂದೋಲನವನ್ನು ಜುಲೈ22 ರಂದು ಆರಂಭಿಸಿದ್ದಾರೆ. ಈ ಆಂದೋಲನವೂ ದೇಶದ ಪ್ರತಿಯೊಬ್ಬರಲ್ಲೂ ದೇಶ ಭಕ್ತಿಯನ್ನು ಪ್ರೇರೇಪಿಸಿ ಪ್ರತಿಯೊಬ್ಬರು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶ ಹೊಂದಿದೆ. ಅಲ್ಲದೇ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯಲ್ಲಿ ಆಗಸ್ಟ್ 13 ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೇರೆಪಿಸುತ್ತಿದೆ. 

India@75: ಇಂಕ್ವಿಲಾಬ್ ಝಿಂದಾಬಾದ್‌ ಘೋಷಣೆಯ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾದ ಹಸ್ರತ್ ಮೊಹಾನಿ

 

ಇತ್ತೀಚೆಗೆ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸರು 72 ಅಡಿ ಉದ್ದದ ರಾಷ್ಟ್ರಧ್ವಜವನ್ನು ಮಸೋರಿಯ ನಾಗ ಮಂದಿರ್ ಸಮೀಪ ಇರುವ ಐಟಿಬಿಪಿ ಅಕಾಡೆಮಿಯಲ್ಲಿ ಹಾರಿಸಿದ್ದರು. ಅಲ್ಲದೇ ಇದಕ್ಕೂ ಮೊದಲು ಭಾರತೀಯ ಕೋಸ್ಟ್‌ ಗಾರ್ಡ್ ಸಿಬ್ಬಂದಿಯೂ ಕೂಡ ಸಮುದ್ರದಾಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದರು.
 

Follow Us:
Download App:
  • android
  • ios