ಆಜಾದಿ ಕಾ ಅಮೃತ್ ಮಹೋತ್ಸವ: ರಾಯಚೂರು ಯುವಕರಿಂದ ವಿನೂತನ ಜಾಗೃತಿ ಜಾಥಾ
* ನರಸರೆಡ್ಡಿ ಎಂಬುವರ ನೇತೃತ್ವದಲ್ಲಿ ಸೈಕಲ್ ಜಾಥಾ
* ಜಾಥಾ ಉದ್ದಕ್ಕೂ ಪರಿಸರ ಮತ್ತು ಸ್ವಾತಂತ್ರ್ಯ ಮಹೋತ್ಸವದ ಬಗ್ಗೆ ಜಾಗೃತಿ
* ಕಳೆದ 9 ವರ್ಷಗಳಿಂದ ಸೈಕಲ್ ಜಾಥಾ
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು(ಜು.10): ದೇಶದ ಮೂಲೆ ಮೂಲೆಗಳಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವುದು ಕಾಮಾನ್. ಆದ್ರೆ ರಾಯಚೂರು ನಗರದ ರಾಜೇಂದ್ರ ಗಂಜ್ ನ ಯುವಕರ ತಂಡವೊಂದು ವಿನೂತನ ಜಾಗೃತಿ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಲು ಮುಂದಾಗಿದ್ದಾರೆ. ಕಳೆದ 8 ವರ್ಷದಿಂದ ಪರಿಸರ ಬೆಳೆಸಿ ನಾಡು ಉಳಿಸಿ ಅಂತ ಯುವಕರು ಸೈಕಲ್ ಜಾಥಾ ಮಾಡಿದ್ರು. ರಾಯಚೂರಿನಿಂದ
ತಿರುಪತಿಗೆ ಸೈಕಲ್ ನಲ್ಲಿ ತೆರಳಿದ ಯುವಕರ ತಂಡ ತಿಮ್ಮಪ್ಪ ನ ದರ್ಶನ ಪಡೆದು ರಾಯಚೂರಿಗೆ ಬಂದಿದ್ರು. ಈ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರ ಸಾಹಸ ಮತ್ತು ನಮ್ಮ ದೇಶದ ಸಾಧನೆಗಳನ್ನು ಕುರಿತು ಜನರಿಗೆ ತಿಳಿಸುತ್ತಾ ಸೈಕಲ್ ಜಾಥಾ ಮಾಡಲು ಯುವಕರ ತಂಡ ಮುಂದಾಗಿದೆ. ರಾಯಚೂರಿನಿಂದ ತಿರುಪತಿವರೆಗೆ 450ಕ್ಕೂ ಹೆಚ್ಚು ಕಿ.ಮೀ. ದೂರವಾಗಲಿದ್ದು, ದಾರಿ ಉದ್ದಕ್ಕೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು 15 ಜನ ಯುವಕರ ತಂಡ ಸಜ್ಜಾಗಿ ಪ್ರಯಾಣ ಬೆಳೆಸಿದ್ದಾರೆ.
India@75: ಬ್ರಿಟಿಷರ ವಿರುದ್ಧ ಗುಪ್ತ ಸೈನ್ಯ ಕಟ್ಟಿದ್ದ ವಿಜಯಪುರದ ಕರಿಭಂಟನಾಳ ಸ್ವಾಮೀಜಿ
ನಿತ್ಯ ಸೈಕಲ್ ನಲ್ಲಿ 150 ಕಿ.ಮೀ. ಪ್ರಯಾಣ
ರಾಯಚೂರಿನಿಂದ ಶುರುವಾಗಿರುವ ಸೈಕಲ್ ಜಾಥಾವೂ ಒಂದು ದಿನಕ್ಕೆ ಸುಮಾರು 150ಕಿ.ಮೀ. ದೂರು ಪ್ರಯಾಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಮಾರ್ಗದಲ್ಲಿ ಬರುವ ಪ್ರತಿಯೊಂದು ಹಳ್ಳಿಯಲ್ಲಿ ಸೈಕಲ್ ಜಾಥಾ ತೆರಳುತ್ತಾ ಮರ- ಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ..ಪರಿಸರ ಉಳಿದರೇ ನಾವು - ನೀವೂ ಈ ಭೂಮಿ ಮೇಲೆ ಬದುಕಲು ಸಾಧ್ಯ. ಪರಿಸರ ನಾಶ ಮಾಡಬೇಡಿ ಅಂತ ಹೇಳುತ್ತಾ ಗ್ರಾಮೀಣ ಜನರಿಗೆ ಸಸಿಗಳನ್ನು ನೀಡುತ್ತಾ ಕೆಲವು ಕಡೆ ಯುವಕರೇ ಸಸಿ ನೆಟ್ಟು ಗ್ರಾಮೀಣ ಜನರಿಗೆ ಪೋಷಣೆ ಮಾಡಲು ತಿಳಿಸುತ್ತಾ ಜಾಥಾ ಮುಂದಾಗಿದ್ದಾರೆ.
ಮೂರು ದಿನಗಳ ಕಾಲ ಸೈಕಲ್ ಜಾಗೃತಿ ಜಾಥಾ:
ರಾಯಚೂರಿನಿಂದ ತಿರುಪತಿ ಸುಮಾರು 450 ಕಿ.ಮೀ. ದೂರವಾಗುತ್ತೆ..ನಿತ್ಯ 150ಕಿ.ಮೀ. ಸೈಕಲ್ ನಲ್ಲಿ ಜಾಥಾ ಮಾಡುವ ಈ ಯುವಕರು ಮೊದಲ ದಿನ ಗುತ್ತಿ, ಎರಡನೇ ದಿನ ಆಂಧ್ರದ ಕಡಪ ಮತ್ತು ಮೂರನೇ ದಿನ ತಿರುಪತಿ ತಲುಪಲಿದ್ದಾರೆ. ಈ ಮೂರು ದಿನವೂ ಸಹ ಯುವಕರು Save the tree save the life ಎಂಬ ಸಂದೇಶ ಸಾರುತ್ತಾ ಸೈಕಲ್ ಜಾಥಾ ನಡೆಸಲಿದ್ದಾರೆ.
Vijayapura: ಕ್ರಾಂತಿಯೋಗಿಗೆ ಅಪಚಾರ ಮಾಡಿದ ವಿಜಯಪುರ ಜಿಲ್ಲಾಡಳಿತ!
ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ವಿಶೇಷ ಜಾಥಾ
ಕಳೆದ 8 ವರ್ಷಗಳಿಂದ ಸೈಕಲ್ ಜಾಥಾ ಮಾಡಿದ ಯುವಕರು ಈ ವರ್ಷ 9ನೇ ವರ್ಷದ ಸೈಕಲ್ ಜಾಥಾ ಕೈಗೊಂಡಿದ್ದಾರೆ. ಪ್ರತಿ ವರ್ಷ ಗಿಡ- ಮರಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ಹೋಗುತ್ತಿದ್ದ ತಂಡ ಈ ಸಹ ಜೈಕಾರ ಹಾಕುತ್ತಾ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರ ಹೋರಾಟಗಾರನ್ನು ಸ್ಮರಿಸುತ್ತಾ ಭಾರತ್ ಮಾತಾ ಕೀ ಜೈ..ಎಂದು ಹೇಳುತ್ತಾ ಮಾರ್ಗ ಉದ್ದಕ್ಕೂ ತಿರುಪತಿ ತಿಮ್ಮಪ್ಪ ನ ನೆನೆಯುತ್ತಾ ಸೈಕಲ್ ಜಾಥಾ ಕೈಗೊಂಡಿದ್ದಾರೆ. ಈ ಯುವಕರ ಜಾಥಾಕ್ಕೆ ಪ್ರತಿ ಗ್ರಾಮದಲ್ಲಿಯೂ ಅದ್ಧೂರಿ ಸ್ವಾಗತವೂ ದೊರೆಯುತ್ತಿದೆ.
ಒಟ್ಟಿನಲ್ಲಿ ಸದಾಕಾಲ ಗಂಜ್ ನಲ್ಲಿ ಬ್ಯುಸಿಯಾಗಿರುತ್ತಿದ್ದವರು. ನಮ್ಮಿಂದ ಸಮಾಜಕ್ಕೆ ಹೊಸದೊಂದು ಸಂದೇಶ ನೀಡಬೇಕು. ಜೊತೆಗೆ ತಿರುಪತಿ ತಿಮ್ಮಪ್ಪನ ದರ್ಶನವೂ ಪಡೆಯಬೇಕೆಂದು ಭಾವಿಸಿ ಯುವಕರು ಸೈಕಲ್ ಜಾಥಾ ಕೈಗೊಂಡಿದ್ದಾರೆ. ಜಾಥಾ ಉದ್ದಕ್ಕೂ ಪರಿಸರ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವ ಮಹತ್ವ ತಿಳಿಸಲು ಮುಂದಾಗಿದ್ದಾರೆ.