Asianet Suvarna News Asianet Suvarna News

INDIA@75: ಧರಂಸಿಂಗ್‌ ಫೌಂಡೇಶನ್‌ನಿಂದ 50 ಸಾವಿರ ಧ್ವಜ ಹಸ್ತಾಂತರ

ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್‌ ಸ್ಮರಣಾರ್ಥ ಪ್ರತಿಷ್ಠಾನದ ಮೂಲಕ ಜಿಲ್ಲಾಡಳಿತದಿಂದ 50 ಸಾವಿರ ಧ್ವಜಗಳನ್ನು ಖರೀದಿಲಾಯಿತು.. ಎಲ್ಲ ಧ್ವಜಗಳನ್ನ ಖರೀದಿಸಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಜನತೆಗೆ ಉಚಿತವಾಗಿ ನೀಡಲಾಗುತ್ತಿದೆ.

India75 50 thousand flags handed over by Dharamsingh Foundation Jevargi rav
Author
Bengaluru, First Published Aug 12, 2022, 9:12 AM IST

ಜೇವರ್ಗಿ (ಆ.12) : ದೇಶದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅಮೃತ ಮಹೋತ್ಸವವನ್ನು ಪ್ರತಿಯೊಬ್ಬರು ಹಬ್ಬದಂತೆ ಆಚರಣೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಆ.13ರಿಂದ 15ರವರೆಗೆ ಪ್ರತಿ ಮನೆ ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸಲು ಧರಂಸಿಂಗ್‌ ಫೌಂಡೇಶನ್‌ 50 ಸಾವಿರ ಬಾವುಟಗಳನ್ನು ತಾಲೂಕಿನ ಆಡಳಿತಕ್ಕೆ ಹಸ್ತಾಂತರಿಸಿದೆ. ಜೇವರ್ಗಿಯ ತಹಸೀಲ್ದಾರ್‌ ಕಚೇರಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಶಾಸಕ ಡಾ.ಅಜಯ್‌ ಸಿಂಗ್‌ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ತಹಸೀಲ್ದಾರ್‌ಗಳಿಗೆ 50 ಸಾವಿರ ಧ್ವಜಗಳನ್ನು ಹಸ್ತಾಂತರಿಸಿದರು.

ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಜಯ್‌ ಸಿಂಗ್‌(Dr.Ajay Singh), ದಿ.ಧರಂಸಿಂಗ್‌ ಸ್ಮರಣಾರ್ಥ ಪ್ರತಿಷ್ಠಾನದ ಮೂಲಕವೇ ಜಿಲ್ಲಾಡಳಿತದಿಂದ 50 ಸಾವಿರ ಧ್ವಜಗಳನ್ನು ಖರೀದಿಸಲಾಗಿದೆ. ಇವನ್ನೆಲ್ಲ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಜನತೆಗೆ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಮನೆಗಳ ಮೇಲೆ 3 ದಿನ ಧ್ವಜಾರೋಹಣ ಮಾಡುವ ಮೂಲಕ ಅಮೃತ ಸ್ವಾತಂತ್ರ್ಯ ಮಹೋತ್ಸವ ಸಂಭ್ರಮಿಸಬೇಕು ಎಂಬುದೇ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಭಿಮಾನವಿದ್ದರೆ ದೇಶ ಅಭಿವೃದ್ಧಿ: ಜೇವರ್ಗಿ ಹಾಗೂ ಯಡ್ರಾಮಿ ಸೇರಿದಂತೆ ಉಭಯ ತಾಲೂಕುಗಳಲ್ಲಿ 53 ಸಾವಿರ ಮನೆಗಳಿವೆ. ¶ೌಂಡೇಷನ್‌ 50 ಸಾವಿರ ಧ್ವಜಗಳನ್ನು ವಿತರಿಸುತ್ತಿದೆ. ಆ.13ರಿಂದ 15ರ ವರೆಗೆ ಮನೆ ಮನೆಯಲ್ಲೂ ಧ್ವಜಾರೋಹಣ ನೆರವೇರಿಸಬೇಕು. ದೇಶದ ಬಗ್ಗೆ ಪ್ರೀತಿ ಅಭಿಮಾನ, ಗೌರವ, ಪ್ರತಿಯೊಬ್ಬರಲ್ಲಿಯೂ ಇದ್ದಾಗ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ. ಆ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಪ್ರತಿಯೊಬ್ಬರೂ ತಮ್ಮ ಮನೆ, ಮನೆಗಳ ಮೇಲೆ 13ರಂದು ಧ್ವಜಾರೋಹಣ ನೆರವೇರಿಸಿ 15ರಂದು ಸಾಯಾಂಕಾಲ ಕೆಳಗೆ ಇಳಿಸಬೇಕು ಹೇಳಿದರು.

India @75: 5ನೇ ದಿನಕ್ಕೆ ಕಾಲಿಟ್ಟ ಎಎಸ್ ಪಾಟೀಲ್ ನಡಹಳ್ಳಿ ಯುವಜನ ಸಂಕಲ್ಪ ನಡಿಗೆ

 

1 ಕಿ.ಮೀ. ಉದ್ದದ ತಿರಂಗಾ ಮೆರವಣಿಗೆ: 75ನೇ ಅಮೃತ ಮಹೋತ್ಸವ ನಿಮಿತ್ತ ಆ.14ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ರಿಲಾಯನ್ಸ್‌ ಪಂಪ್‌ನಿಂದ ತಾಲೂಕು ಕ್ರೀಡಾಂಗಣದವರೆಗೆ 1 ಕಿ.ಮೀ. ಉದ್ದದ ರಾಷ್ಟ್ರಧ್ವಜ ಮೆರವಣಿಗೆ ಮಾಡುವ ಮಾಡಲಾಗುತ್ತಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳ ಜೊತೆಗೆ ಸೇರಿಕೊಂಡು ಮೆರವಣಿಗೆ ನಡೆಯುತ್ತಿದೆ. ಪಕ್ಷಾತೀತವಾಗಿ ಎಲ್ಲಾ ಪಕ್ಷದ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದರು.

ಆ.15 ರಂದು ಬೆಳಗ್ಗೆ 8.20ಕ್ಕೆ ತಹಸೀಲ್ದಾರ್‌ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. 9 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. 14 ಮತ್ತು 15 ರಂದು ಕ್ರೀಡಾಂಗಣದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಧರ್ಮಸಿಂಗ್‌ ¶ೌಂಡೇಷನ್‌ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕ ಡಾ.ಅಜಯಸಿಂಗ್‌ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಸಂಜೀವಕುಮಾರ ದಾಸರ, ಯಡ್ರಾಮಿ ತಹಸೀಲ್ದಾರ್‌ ಶಾಂತಗೌಡ ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ತಾಳಿಕೋಟಿ, ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಅಲ್ಲಾವುದ್ದೀನ್‌ ಸಾಗರ, ಆಹಾರ ಇಲಾಖೆಯ ಶಿರಸ್ತೇದಾರ ಡಿ.ಬಿ.ಪಾಟೀಲ, ಮುಖಂಡರಾದ ಸಿದ್ದಲಿಂಗರೆಡ್ಡಿ ಇಟಗಿ, ರುಕುಂ ಪಟೇಲ ಇಜೇರಿ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಖಾಸಿಂ ಪÜಟೇಲ್‌ ಮುದವಾಳ, ಮಹಿಮೂದ್‌ ನೂರಿ, ನೀಲಕಂಠ ಅವಂಟಿ, ಚಂದ್ರಶೇಖರ ನೇರಡಗಿ, ಮುಖಂಡರಾದ ಹಣಮಂತರಾವ ಭೂಸನೂರ್‌, ಮರೆಪ್ಪ ಸರಡಗಿ ಇದ್ದರು.

Follow Us:
Download App:
  • android
  • ios