Asianet Suvarna News Asianet Suvarna News

ಅಜಾದಿ ಕಾ ಅಮೃತ್ ಮಹೋತ್ಸವ: ಏಷ್ಯಾನೆಟ್ ನ್ಯೂಸ್ ಕಾರ್ಯಕ್ಕೆ ಮೆಚ್ಚುಗೆ

ರಾಜ್‌ಘಾಟ್‌ನ ಗಾಂಧಿ ಸ್ಮೃತಿಯ ಬಳಿ ವಜ್ರಜಯಂತಿ ಯಾತ್ರೆಯ ಸಿಕ್ತು ಚಾಲನೆ. ಸಂಸ್ಕೃತಿ, ಸ್ವಾತಂತ್ರದ ಕಿಡಿಗಳನ್ನು ಸಾರುವ ಸಂದೇಶವನ್ನು ಹೊತ್ತು ಎನ್‌ಸಿಸಿ ಕೆಡೆಟ್‌ಗಳ ನೃತ್ಯ ಅನಾವರಣ. ಆಜಾದಿ ಕಾ ಆಮೃತ್ ಮಹೋತ್ಸವ ಹಿನ್ನೆಲೆಯಲ್ಲಿ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಸಿಕ್ತು ಮೆಚ್ಚುಗೆ. 

azadi ka amrit mahotsav appreciation for Asianet News work gvd
Author
Bangalore, First Published Aug 9, 2022, 12:17 AM IST

ನವದೆಹಲಿ (ಆ.09): ರಾಜ್‌ಘಾಟ್‌ನ ಗಾಂಧಿ ಸ್ಮೃತಿಯ ಬಳಿ ವಜ್ರಜಯಂತಿ ಯಾತ್ರೆಯ ಸಿಕ್ತು ಚಾಲನೆ. ಸಂಸ್ಕೃತಿ, ಸ್ವಾತಂತ್ರದ ಕಿಡಿಗಳನ್ನು ಸಾರುವ ಸಂದೇಶವನ್ನು ಹೊತ್ತು ಎನ್‌ಸಿಸಿ ಕೆಡೆಟ್‌ಗಳ ನೃತ್ಯ ಅನಾವರಣ. ಆಜಾದಿ ಕಾ ಆಮೃತ್ ಮಹೋತ್ಸವ ಹಿನ್ನೆಲೆಯಲ್ಲಿ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಸಿಕ್ತು ಮೆಚ್ಚುಗೆ. ಉತ್ತರ ಇಂಡಿಯಾ ಯಾತ್ರೆಯ ಅಂತಿಮ ಚರಣಕ್ಕೆ ಸೋಮವಾರ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಅಜಯ್ ಕುಮಾರ್ ಎನ್‌ಸಿಸಿ ಕೆಡೆಟ್‌ಗಳಿಗೆ ಧ್ವಜ ನೀಡುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಅಮೃತ ಮಹೋತ್ಸವ ಈ ಗಳಿಗೆಗಳು ಚರಿತ್ರಾತ್ಮಕವಾದವು. 

ಇದೊಂದು ಸರ್ಕಾರಿ ಕಾರ್ಯಕ್ರಮ ಅಲ್ಲ ಬದಲಿಗೆ ಪ್ರತಿಯೊಬ್ಬರ ಕಾರ್ಯಕ್ರಮ ಎಂದರು. ಎನ್‌ಸಿಸಿ ಕೆಡೆಟ್‌ಗಳನ್ನು ಇಂಡಿಯಾ @75 ಈ ಕಾರ್ಯಕ್ರಮದ ಭಾಗವಾಗಿಸಿ  ಬಹಳ ಖುಷಿಕೊಟ್ಟಿದೆ. ಎನ್‌ಸಿಸಿ ವಿಶ್ವದ ಬಹುದೊಡ್ಡ ಸಮವಸ್ತ್ರದ ಯುವ ಸಂಘಟನೆ. ಇವರ ಸಾಧನೆಗಳು, ಸೇವೆ ಸಾಹಸಗಾಥೆಗಳ ಮೇಲೆ ಹೆಚ್ಚು ಹೆಚ್ಚು ಬೆಳಕು ಚೆಲ್ಲಬೇಕಿದೆ. ಇಂಥ ಎನ್‌ಸಿಸಿ ಕೆಡೆಟ್‌ಗಳನ್ನು ಬಳಸಿಕೊಂಡು ಯಾತ್ರೆಯ ರೂಪದಲ್ಲಿ ದೇಶ ಸಂಚಾರ ಮಾಡುವ ಕೆಲಸವನ್ನು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಹಮ್ಮಿಕೊಂಡಿರುವುದು ಬಹಳ ಒಳ್ಳೆಯ ಕೆಲಸ. ಎನ್‌ಸಿಸಿ ಕೆಲಸ ಭವಿಷ್ಯದ ಯುವಕರಿಗೆ ದಾರಿದೀಪವಾಗಿಲಿದೆ ಎಂದರು.

Azadi Ka Amrit Mahotsav: ಆ.5 ರಿಂ 15ರವರಗೆ ಹಂಪಿ ಸೇರಿದಂತೆ ಐತಿಹಾಸಿಕ ಸ್ಮಾರಕಗಳ ಭೇಟಿ ಉಚಿತ!

ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಎಕ್ಸಿಕ್ಯೂಟಿವ್ ಚೆರ‍್ಮನ್ ರಾಜೇಶ್ ಕಾಲ್ರಾ, ಒಂದು ಕಡೆಯ ಸಂಸ್ಕೃತಿಯನ್ನು ಮತ್ತೊಂದು ಕಡೆ ಬೇಸೆಯುವ ಕೆಲಸ ಎನ್‌ಸಿಸಿ ಕೆಡೆಟ್‌ಗಳ ಮೂಲಕ ಮಾಡಲಾಗುತ್ತಿದೆ. ಜೊತೆಗೆ ಪ್ರಾಚೀನ ಮತ್ತು ನವಭಾರತವನ್ನು ಜೋಡಿಸುತ್ತದೆ ಎಂದರು. ದಕ್ಷಿಣ ಇಂಡಿಯಾದಲ್ಲಿ ಕೇರಳ ರಾಜ್ಯಪಾಲರು ಚಾಲನೆ ನೀಡಿದರು. ನಂತರ ಕರ್ನಾಟಕದಲ್ಲಿ ರಾಜ್ಯಪಾಲ ಥಾವರ್ ಚೆಂದ್ ಗೆಲ್ಹೋಟ್ ಚಾಲನೆ ನೀಡಿದರು. ಉತ್ತರ ಇಂಡಿಯಾ ಸುತ್ತುವ ಈ ಅಂತಿಮ ಚರಣ ಯಾತ್ರೆಗೆ ಅಜಯ್ ಕುಮಾರ್ ಚಾಲನೆ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಮೃನವೀರೇಳಿಸಿದ ನೃತ್ಯ: ದೇಶದ ವಿವಿಧ ರಾಜ್ಯಗಳ ಎನ್‌ಸಿಸಿ ಕೆಡೆಟ್‌ಗಳು ಈ ಯಾತ್ರೆ ಭಾಗವಾಗಿದ್ದು ಇಂಡಿಯಾ-ಪಾಕಿಸ್ತಾನ್ ಗಡಿಯ ಅಟಾರಿಯಿಂದ ಹಿಡಿದು ಉತ್ತರ ಇಂಡಿಯಾ ಪ್ರಮುಖ ಸ್ಥಳಗಳಿಗೆ, ರಕ್ಷಣಾ ಇಲಾಖೆಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದೆ. ಆಯಾ ಸ್ಥಳಗಳಲ್ಲಿ ತಮ್ಮ ತವರು ರಾಜ್ಯಗಳ ಸಂಸ್ಕೃತಿ, ಸ್ವಾತಂತ್ರಯೋಧರ ಸಂದೇಶ, ಬಲಿದಾನದ ಕಥೆಗಳು, ಹೋರಾಟ ಚಿತ್ರಣವನ್ನು ಈ ಎನ್‌ಸಿಸಿ ಕೆಡೆಟ್‌ಗಳು ಕಟ್ಟಿಕೊಡಲಿದ್ದಾರೆ. ಇದರ ಭಾಗವಾಗಿ ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂಧ್ರ-ತೆಲಂಗಾಣ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಸೇರಿ ಉತ್ತರ ರಾಜ್ಯಗಳ ಕೆಡೆಟ್‌ಗಳು ಭಾಗಿಯಾಗಿದ್ದರು.

Har Ghar Tiranga : ಪ್ರೇರಣೆ ನೀಡುವ ಸಂಕಲ್ಪದೊಂದಿಗೆ ತಿರಂಗಾ Rallyಯಲ್ಲಿ ಜೋಶಿ ಭಾಗಿ 

ಸಂಕ್ರಾಂತಿ ಕಿಚ್ಚು, ಸಂಭ್ರಮ, ತೆಲಂಗಾಣದ ಯಲ್ಲಮ್ಮ ಬೋನಾಲು, ಕೋಲಾಟ ಮುಂತಾದವುಗಳ ಕುರಿತಾದ ಆಂಧ್ರ-ತೆಲಂಗಾಣ ಕೆಡೆಟ್‌ಗಳ ನೃತ್ಯ ಎಲ್ಲರ ಮನಸೋರೆಗೊಳಿಸಿತು. ಅದೇ ರೀತಿಯಲ್ಲಿ ಉತ್ತರಪ್ರದೇಶ, ಪಂಜಾಬ್ ಕೆಡೆಟ್‌ಗಳು ಕೂಡ ನೃತ್ಯಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಎನ್‌ಸಿಸಿ ಡಿಜಿ ಲೆಫ್ಟಿನೆಂಟ್ ಜನರಲ್ ಗುರುಬೀರ್ ಪಾಲ್ ಸಿಂಗ್, ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಮ್ಯಾನೇಜಿಂಗ್ ಎಡಿಟರ್ ಮನೋಜ್ ಕೆ ದಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Follow Us:
Download App:
  • android
  • ios