India@75: ಸ್ವಾತಂತ್ರ್ಯಕ್ಕೆ 75 ವರ್ಷದ ನಿಮಿತ್ತ 75 ಕೇಂದ್ರ ಸಚಿವರ ಯೋಗ

*  ರಾಜ್ಯದಲ್ಲಿ ಜೋಶಿ, ರಾಜೀವ್‌, ಖೂಬಾ, ಶೋಭಾ ಯೋಗ
*  ಕೊಯಮತ್ತೂರು ತಮಿಳುನಾಡು ರಾಜನಾಥ್‌ ಸಿಂಗ್‌
*  ತ್ರ್ಯಯಂಬಕೇಶ್ವರ ದೇವಾಲಯ, ನಾಸಿಕ್‌ ಅಮಿತ್‌ ಶಾ

75 Union Minister Yoga for 75 Years for Independence grg

ನವದೆಹಲಿ(ಜೂ.21):  ದೇಶ ಸ್ವಾತಂತ್ರ್ಯ ಕಂಡು 75 ವರ್ಷಗಳಾಗುತ್ತಿರುವ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಮೋದಿ ಸರ್ಕಾರದ 75 ಸಚಿವರು ದೇಶದ ವಿವಿಧ ಭಾಗಗಳಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಈ ಪೈಕಿ ರಾಜನಾಥ ಸಿಂಗ್‌ ಕೊಯಮತ್ತೂರಿನಲ್ಲಿ, ಅಮಿತ್‌ ಶಾ ಮಹಾರಾಷ್ಟ್ರದ ತ್ರ್ಯಂಬಕೇಶ್ವರದಲ್ಲಿ, ನಿತಿನ್‌ ಗಡ್ಕರಿ ನಾಗಪುರದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಕರ್ನಾಟಕದಿಂದ ಆಯ್ಕೆಯಾಗಿರುವ ಕೇಂದ ಸಚಿವರಾದ ನಿರ್ಮಲಾ ಸೀತಾರಾಮನ್‌ ದಿಲ್ಲಿಯಲ್ಲಿ, ಪ್ರಹ್ಲಾದ ಜೋಶಿ ಹಂಪಿಯಲ್ಲಿ, ರಾಜೀವ್‌ ಚಂದ್ರಶೇಖರ್‌ ಪಟ್ಟದಕಲ್ಲಿನಲ್ಲಿ, ಶೋಭಾ ಕರಂದ್ಲಾಜೆ, ಶೋಭಾ ಕರಂದ್ಲಾಜೆ ಹಳೆಬೀಡಿನಲ್ಲಿ, ಭಗವಂತ ಖೂಬಾ ವಿಜಯಪುರದ ಗೋಳಗುಮ್ಮಟದಲ್ಲಿ, ಎ. ನಾರಾಯಣಸ್ವಾಮಿ ಮಹಾಬಲಿಪುರಂನಲ್ಲಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

International Yoga Day 2022: ಜನ ಪ್ರತಿನಿಧಿಗಳು, ವಿದ್ಯಾರ್ಥಿಗಳಿಂದ ಎಲ್ಲೆಡೆ ಯೋಗಾಭ್ಯಾಸ

ಕೊಯಮತ್ತೂರು ತಮಿಳುನಾಡು ರಾಜನಾಥ್‌ ಸಿಂಗ್‌
ತ್ರ್ಯಯಂಬಕೇಶ್ವರ ದೇವಾಲಯ, ನಾಸಿಕ್‌ ಅಮಿತ್‌ ಶಾ
ಜಿರೋ ಮೈಲ್‌ಸ್ಟೋನ್‌ ಮಹಾರಾಷ್ಟ್ರ ನಿತಿನ್‌ ಗಡ್ಕರಿ ರಸ್ತೆ ಮತ್ತು ಹೆದ್ದಾರಿ
ಜಂತರ್‌ಮಂತರ್‌ ನವದೆಹಲಿ ನಿರ್ಮಲಾ ಸೀತಾರಾಮನ್‌ ಆರ್ಥಿಕ
ರೆಸಿಡೆನ್ಸಿ ಲಖನೌ ಉತ್ತರಪ್ರದೇಶ ಸ್ಮೃತಿ ಇರಾನಿ
ಅಯೋಧ್ಯಾ ಉತ್ತರಪ್ರದೇಶ ಭೂಪೇಂದ್ರ ಯಾದವ್‌
ಪ್ಯಾಗೊಂಗ್‌ ಸರೋವರ ಲಡಾಖ್‌ ಕಿರಿಣ ರಿಜಿಜು
ಕೆಂಪುಕೋಟೆ ದೆಹಲಿ ಹರ್‌ದೀಪ್‌ ಸಿಂಗ್‌ ಪುರಿ
ಏಕತಾ ಪ್ರತಿಮೆ ಗುಜರಾತ್‌ ಮನ್‌ಸುಖ್‌ ಮಾಂಡವೀಯ

ಇದೇ ಮೊದಲ ಬಾರಿ ಯೋಗದ ‘ಗಾರ್ಡಿಯನ್‌ ರಿಂಗ್‌’

ನವದೆಹಲಿ: ಸೂರ್ಯನ ಸುತ್ತ ಹೇಗೆ ಪ್ರಭಾವಳಿ ಇರುತ್ತದೋ ಅದೇ ಮಾದರಿಯಲ್ಲಿ ಇದೇ ಮೊದಲ ಬಾರಿ ‘ಗಾರ್ಡಿಯನ್‌ ರಿಂಗ್‌’ ಹೆಸರಿನಲ್ಲಿ ಈ ಸಲ ಯೋಗ ದಿನಾಚರಣೆ ವಿಶ್ವದ 79 ದೇಶಗಳಲ್ಲಿ ನಡೆಯಲಿದೆ.

ಯೋಗ ಜೀವನದ ಭಾಗವಲ್ಲ, ಯೋಗವೇ ಜೀವನದ ದಾರಿ: ಪ್ರಧಾನಿ ಮೋದಿ

ಯೋಗದಲ್ಲಿ ಸೂರ್ಯನಮಸ್ಕಾರ ಅತಿ ಮುಖ್ಯ. ಸೂರ್ಯ ವಿಶ್ವದಲ್ಲಿ ಮೊದಲು ಉದಯಿಸುವ ಫಿಜಿಯಲ್ಲಿ ಹಾಗೂ ಆಸ್ಪ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಯೋಗ ದಿನಾಚರಣೆಗೆ ಆರಂಭಕ್ಕೆ ಶ್ರೀಕಾರ ಹಾಕಲಾಗುತ್ತದೆ. ನಂತರ ಹೇಗೆ ಸೂರ್ಯ ಉದಯಿಸುತ್ತಾನೋ ಆಯಾ ದೇಶಗಳಲ್ಲಿ ಯೋಗ ದಿನಾಚರಣೆ ಸಾಗುತ್ತದೆ. ದಿನದ ಕೊನೆಗೆ ಭಾರತೀಯ ಕಾಲಮಾನ ರಾತ್ರಿ 10ಕ್ಕೆ (ಆಗ ಅಮೆರಿಕ, ಕೆನಡಾದಲ್ಲಿ ನಸುಕಿನ ಜಾವ) ಕೆನಡಾದ ಟೊರಂಟೋ ಹಾಗೂ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಯೋಗ ದಿನಾಚರಣೆಗೆ ಮಂಗಳ ಹಾಡಲಾಗುತ್ತದೆ.

16 ಸಮಯ ವಲಯದಲ್ಲಿ ನಡೆಯುವ ಯೋಗ ದಿನಾಚರಣೆಯನ್ನು ಆಯಾ ದೇಶಗಳ ಕಾಲಮಾನಕ್ಕೆ ಅನುಗುಣವಾಗಿ ಭಾರತೀಯ ಸರ್ಕಾರಿ ಟೀವಿ ವಾಹಿನಿಯಾದ ‘ದೂರದರ್ಶನ’, ನಸುಕಿನ ಜಾವ 3ರಿಂದ ರಾತ್ರಿ 10ರವರೆಗೆ ನೇರಪ್ರಸಾರ ಮಾಡಲಿದೆ.
 

Latest Videos
Follow Us:
Download App:
  • android
  • ios