Asianet Suvarna News Asianet Suvarna News

ಕಿರಿಯರ ಮಹಿಳಾ ಹಾಕಿ: ಫೈನ​ಲ​ಲ್ಲಿ ಇಂದು ಭಾರ​ತ-ಕೊರಿ​ಯಾ ಫೈಟ್

ಕಿರಿಯತ ಮಹಿಳಾ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿಂದು ಫೈನಲ್ ಕದನ
ಪ್ರಶಸ್ತಿಗಾಗಿಂದು ಭಾರತ ಹಾಗೂ ಕೊರಿಯಾ ನಡುವೆ ಕದನ
ಎರಡನೇ ಬಾರಿಗೆ ಫೈನಲ್‌ ಪ್ರವೇಶಿಸಿರುವ ಭಾರತ ಕಿರಿಯರ ಮಹಿಳಾ ಹಾಕಿ ತಂಡ

Womens Junior Asia Cup India take on Korea in Final Encounter kvn
Author
First Published Jun 11, 2023, 10:04 AM IST

ಕಾ​ಕ​ಮಿ​ಗ​ಹ​ರಾ​(​ಜ​ಪಾ​ನ್‌​): ಆತಿ​ಥೇಯ ಜಪಾನ್‌ ವಿರುದ್ಧ ಸೆಮಿಫೈನಲ್‌ನಲ್ಲಿ 1-0 ಗೋಲಿನ ರೋಚಕ ಗೆಲು​ವು ಸಾಧಿಸಿದ ಭಾರತ, ಕಿರಿಯ ಮಹಿ​ಳೆ​ಯರ ಏಷ್ಯಾ​ಕಪ್‌ ಹಾಕಿ ಟೂರ್ನಿ​ಯಲ್ಲಿ 2ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಜೊತೆಗೆ ​ವರ್ಷಾಂತ್ಯ​ದಲ್ಲಿ ಚಿಲಿ​ಯಲ್ಲಿ ನಡೆ​ಯ​ಲಿ​ರುವ ಎಫ್‌​ಐ​ಎಚ್‌ ಕಿರಿಯರ ಮಹಿಳಾ ವಿಶ್ವ​ಕ​ಪ್‌ಗೂ ಅರ್ಹತೆ ಗಿಟ್ಟಿ​ಸಿ​ಕೊಂಡಿತು.

ಶನಿ​ವಾರ ನಡೆದ 8ನೇ ಆವೃ​ತ್ತಿಯ ಕಿರಿಯ ಮಹಿ​ಳೆ​ಯರ ಏಷ್ಯಾ​ಕಪ್‌ ಹಾಕಿ ( Women’s Junior Asia Cup) ಟೂರ್ನಿಯ ಸೆಮೀ​ಸ್‌​ನಲ್ಲಿ ಭಾರತದ ಪರ 47ನೇ ನಿಮಿ​ಷ​ದಲ್ಲಿ ಸುನೆ​ಲಿತಾ ಟೊಪ್ಪೊ ಏಕೈಕ ಗೋಲು ಬಾರಿಸಿ ತಂಡ​ವನ್ನು ಪ್ರಶಸ್ತಿ ಸುತ್ತಿ​ಗೇ​ರಿ​ಸಿ​ದರು. ಎರಡೂ ತಂಡ​ಗ​ಳಿಗೂ ತಲಾ 12 ಪೆನಾಲ್ಟಿಕಾರ್ನರ್‌ ಅವ​ಕಾಶ ಸಿಕ್ಕರೂ ಯಾವುದೇ ಗೋಲು ದಾಖ​ಲಾ​ಗ​ಲಿಲ್ಲ. ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿ​ರುವ ಭಾರತ, ಭಾನು​ವಾರ ಫೈನ​ಲ್‌​ನಲ್ಲಿ 4 ಬಾರಿ ಚಾಂಪಿ​ಯನ್‌ ಕೊರಿ​ಯಾ ವಿರುದ್ಧ ಸೆಣಸಲಿದೆ. ಕೊರಿಯಾ ಸೆಮೀ​ಸ್‌​ನಲ್ಲಿ ಚೀನಾ​ವನ್ನು 2-0 ಗೋಲು​ಗ​ಳಿಂದ ಮಣಿಸಿ ಫೈನ​ಲ್‌​ಗೇ​ರಿತು.

ಭಾರತಕ್ಕಿದು ಎರಡನೇ ಫೈನಲ್‌: ಕಿರಿಯ ಮಹಿ​ಳೆ​ಯರ ಏಷ್ಯಾ​ಕಪ್‌ ಹಾಕಿ ಟೂರ್ನಿ​ಯಲ್ಲಿ ಭಾರತ ತಂಡವು ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಈ ಮೊದಲು 2012ರಲ್ಲಿ ಭಾರತ ಕಿರಿಯರ ಮಹಿಳಾ ಹಾಕಿ ತಂಡವು ಪ್ರತಿಷ್ಠಿತ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು.

ಪ್ರೊ ಲೀಗ್ ಹಾಕಿ: ನೆದರ್‌ಲೆಂಡ್ಸ್‌ ವಿರುದ್ದ ಭಾರತಕ್ಕೆ ಸೋಲು

ಐಂಡ್‌ಹೊವೆನ್‌: ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ, ನೆದರ್‌ಲೆಂಡ್ಸ್‌ ವಿರುದ್ದ ಸತತ ಎರಡನೇ ಸೋಲು ಅನುಭವಿಸಿದೆ. ಬುಧವಾರ ಮೊದಲ ಮುಖಾಮುಖಿಯಲ್ಲಿ 1-4 ಗೋಲುಗಳಿಂದ ಸೋತಿದ್ದ ಭಾರತ, ಶನಿವಾರ 2-3 ಗೋಲುಗಳಿಂದ ಪರಾಭವಗೊಂಡಿತು. 

ಹಾಲಿ ಚಾಂಪಿಯನ್‌ ನೆದರ್‌ಲೆಂಡ್ಸ್‌ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟವಾಡಲು ಮುಂದಾಯಿತು. ಹೀಗಾಗಿ 6ನೇ ನಿಮಿಷದಲ್ಲೇ ಡುಕೊ ತೆಲ್ಗೆನ್ಕ್ಯಾಂಪ್‌ ಗೋಲು ಬಾರಿಸಿದರು. ಇದಾದ ಕೆಲ ಸಮಯದಲ್ಲಿ ಅಂದರೆ 17ನಿಮಿಷದಲ್ಲಿ ಭಾರತದ ಸಂಜಯ್ ಆಕರ್ಷಕ ಗೋಲು ಬಾರಿಸುವ 1-1 ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಬಳಿಕ ನೆದರ್‌ಲೆಂಡ್ಸ್‌ನ ಬೋರಿಸ್‌ ಬುಕರ್ದೆತ್(40)  ಹಾಗೂ ತೆಜೆಪ್‌ ಹುಯಿನ್‌ಮೇಕರ್ಸ್‌(45) ಕೇವಲ 5 ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿದರು. ಇನ್ನು 45ನೇ ನಿಮಿಷದಲ್ಲಿ ಗುರ್ಜಾಂತ್ ಸಿಂಗ್ ಗೋಲು ಬಾರಿಸಿದರು. ಇದಾದ ಬಳಿಕ ಭಾರತ ಸಾಕಷ್ಟು ಪೈಪೋಟಿ ನೀಡಿತಾದರೂ, ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಭಾರತ ಎದುರು ವಿಶ್ವದ ನಂ.1 ಹಾಕಿ ತಂಡವಾದ ನೆದರ್‌ಲೆಂಡ್ಸ್ ತಂಡವು ಸತತ ಎರಡನೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು.

ರೆಸ್ಲ​ರ್‌​ಗಳ ಆರೋಪ ನಿಜ, ಬ್ರಿಜ್‌ರ ಅಸ​ಭ್ಯ ವರ್ತ​ನೆ​ಯನ್ನು ಕಣ್ಣಾರೆ ಕಂಡಿ​ದ್ದೇನೆ ಎಂದ ಅಂತಾರಾಷ್ಟ್ರೀಯ ರೆಫ್ರಿ!

ಇದರ ಹೊರತಾಗಿಯೂ ಸದ್ಯ ಭಾರತ 15 ಪಂದ್ಯಗಳಲ್ಲಿ 27 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತ ಭಾನುವಾರ ಅರ್ಜೆಂಟೀನಾ ವಿರುದ್ದ ಆಡಲಿದೆ.

ಪ್ಯಾರಿಸ್‌ ಡೈಮಂಡ್‌ ಲೀಗ್‌: ಶ್ರೀಶಂಕರ್‌ಗೆ 3ನೇ ಸ್ಥಾನ

ಪ್ಯಾರಿ​ಸ್‌: ಭಾರ​ತದ ತಾರಾ ಲಾಂಗ್‌​ಜಂಪ್‌ ಪಟು ಮುರಳಿ ಶ್ರೀಶಂಕರ್‌ ಪ್ರತಿ​ಷ್ಠಿತ ಪ್ಯಾರಿಸ್‌ ಡೈಮಂಡ್‌ ಲೀಗ್‌​ನಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಇದ​ರೊಂದಿಗೆ ಡೈಮಂಡ್‌ ಲೀಗ್‌​ನಲ್ಲಿ ಅಗ್ರ 3ರಲ್ಲಿ ಸ್ಥಾನ ಪಡೆದ ಭಾರತದ 3ನೇ ಅಥ್ಲೀಟ್‌ ಎನಿ​ಸಿ​ಕೊಂಡರು. ಈ ಮೊದಲು ಜಾವೆ​ಲಿ​ನ್‌​ನಲ್ಲಿ ನೀರಜ್‌ ಚೋಪ್ರಾ, ಡಿಸ್ಕಸ್‌ ಎಸೆ​ತ​ದಲ್ಲಿ ವಿಕಾಸ್‌ ಗೌಡ ಈ ಸಾಧನೆ ಮಾಡಿದ್ದರು. 

ಶುಕ್ರ​ವಾರ ರಾತ್ರಿ ನಡೆದ ಕೂಟ​ದಲ್ಲಿ 24 ವರ್ಷದ ಶ್ರೀಶಂಕರ್‌ ತಮ್ಮ 3ನೇ ಪ್ರಯ​ತ್ನ​ದಲ್ಲಿ 8.09 ಮೀ. ದೂರಕ್ಕೆ ಜಿಗಿದು 3ನೇ ಸ್ಥಾನಿ​ಯಾ​ದರು. ಶ್ರೀಶಂಕರ್‌ ಮುಂಬ​ರುವ ವಿಶ್ವ ಚಾಂಪಿ​ಯ​ನ್‌​ಶಿ​ಪ್‌ಗೆ ಇನ್ನಷ್ಟೇ ಅರ್ಹತೆ ಪಡೆ​ಯ​ಬೇಕಿದೆ. ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಗುರಿಯನ್ನು 8.25 ಮೀ.ಗೆ ನಿಗದಿಪಡಿಸಲಾಗಿದೆ.
 

Follow Us:
Download App:
  • android
  • ios