ಬ್ಯುನಸ್‌ ಐರಿಸ್(ಫೆ.02)‌: ಭಾರತ ಮಹಿಳಾ ಹಾಕಿ ತಂಡ, ಅರ್ಜೆಂಟೀನಾ ಪ್ರವಾಸದಲ್ಲಿನ ಕೊನೆಯ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿದೆ. ಇಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ನಂ.2 ಅರ್ಜೆಂಟೀನಾ ವಿರುದ್ಧ ಭಾರತ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿದೆ. 

ಪಂದ್ಯದ 35ನೇ ನಿಮಿಷದಲ್ಲಿ ಭಾರತ ತಂಡದ ನಾಯಕಿ ರಾಣಿ ರಾಂಪಾಲ್‌ ಗೋಲು ದಾಖಲಿಸಿದರು. ಇನ್ನು ಅರ್ಜೆಂಟೀನಾ ಪರ ಎಮಿಲಾ ಪೋರ್ಚರಿಯೋ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. 

ಹಾಕಿ: ಚಿಲಿ ಹಿರಿಯರ ತಂಡದ ಎದುರು ಭಾರತ ಕಿರಿಯರ ತಂಡ ದಿಗ್ವಿಜಯ

ಶನಿವಾರ ನಡೆದ 3ನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯವನ್ನು 1-2 ಹಾಗೂ 2-3 ರಿಂದ ಸೋಲುಂಡಿತ್ತು. ಇದಕ್ಕೂ ಮುನ್ನ ಅರ್ಜೆಂಟೀನಾ ಜೂನಿಯರ್ ತಂಡದ ಎದುರು 2-2, 1-1 ರಿಂದ ಸಮಬಲ ಸಾಧಿಸಿತ್ತು.