Junior Hockey World Cup‌: ಭಾರತ ಮಹಿಳಾ ಹಾಕಿ ತಂಡಕ್ಕೆ ಹ್ಯಾಟ್ರಿಕ್‌ ಜಯ

* ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಪ್ರದರ್ಶನ

* ಲೀಗ್ ಹಂತದ ಮೂರೂ ಪಂದ್ಯ ಗೆದ್ದು ಬೀಗಿದ ಭಾರತ

* ಶುಕ್ರವಾರ ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ ದಕ್ಷಿಣ ಕೊರಿಯ ಎದುರಾಳಿ

Mumtaz scores hat trick goal as India beat Malaysia in Junior Hockey World Cup kvn

ಪಾಟ್‌ಶೆಫ್‌ಸ್ಟ್ರೋಮ್(ಏ.06)‌: ಕಿರಿಯರ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ (Junior Hockey World Cup) ಭಾರತ ತಂಡ ಸತತ 3ನೇ ಗೆಲುವು ಸಾಧಿಸಿದ್ದು, ಅಜೇಯವಾಗಿಯೇ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ‘ಡಿ’ ಗುಂಪಿನಲ್ಲಿರುವ ಭಾರತ, ಮಂಗಳವಾರ ನಡೆದ ಗುಂಪು ಹಂತದ ಕೊನೆ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 4-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿತು. 

ಪಂದ್ಯದ ಆರಂಭದಿಂದಲೇ ಎದುರಾಳಿ ವಿರುದ್ಧ ಪ್ರಾಬಲ್ಯ ಸಾಧಿಸಿದ್ದ ಭಾರತ ಮೊದಲಾರ್ಧದಲ್ಲಿ 3 ಗೋಲು ಬಾರಿಸಿತು. ಭಾರತದ ಪರ ಮುಮ್ತಾಜ್‌ 10, 26 ಹಾಗೂ 59ನೇ ನಿಮಿಷದಲ್ಲಿ ಹ್ಯಾಟ್ರಿಕ್‌ ಗೋಲು ಬಾರಿಸಿದರು. ಸಂಗೀತಾ 11ನೇ ನಿಮಿಷದಲ್ಲಿ ಗೋಲು ಹೊಡೆದರು. 'ಡಿ' ಗುಂಪಿನಲ್ಲಿ ಮೂರು ಪಂದ್ಯಗಳನ್ನಾಡಿ 9 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದೆ. ಲೀಗ್ ಹಂತದಲ್ಲಿ ಅಜೇಯ ಪ್ರದರ್ಶನದ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿರುವ ಭಾರತೀಯ ಮಹಿಳಾ ಹಾಕಿ ತಂಡವು, ನಾಕೌಟ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಕೊರಿಯ ತಂಡವನ್ನು ಎದುರಿಸಲಿದೆ. ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸವಾಲನ್ನು ಮೆಟ್ಟಿನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಶನಿವಾರ ವೇಲ್ಸ್‌ ವಿರುದ್ಧ ಮೊದಲ ಪಂದ್ಯದಲ್ಲಿ 5-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಭಾರತ, 2ನೇ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ 2-1 ಗೋಲುಗಳಲ್ಲಿ ಗೆದ್ದಿತ್ತು. ಕ್ವಾರ್ಟರ್‌ ಫೈನಲ್‌ ಹಂತ ಏ.8ರಿಂದ ಆರಂಭಗೊಳ್ಳಲಿದೆ.

ಕೊರಿಯಾ ಓಪನ್‌: ಸೆನ್‌, ಮಾಳವಿಕಾ 2ನೇ ಸುತ್ತಿಗೆ

ಸಿಂಚೊನ್‌(ದ.ಕೊರಿಯಾ): ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಭಾರತದ ಯುವ ಶಟ್ಲರ್‌ ಲಕ್ಷ್ಯ ಸೆನ್‌ (Lakshya Sen) ಹಾಗೂ ಮಾಳವಿಕಾ ಬನ್ಸೋದ್‌ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ (Korea Open) ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಇಂದಿನಿಂದ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಆರಂಭ

ಮಂಗಳವಾರ ನಡೆದ ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿ 20 ವರ್ಷದ ಸೆನ್‌, ದ.ಕೊರಿಯಾದ ಚೊಯಿ ಜಿ ಹೂನ್‌ ವಿರುದ್ಧ 14-21, 21-16, 21-18 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಅವರು ಇಂಡೋನೇಷ್ಯಾದ ಶೇಸರ್‌ ಹಿರೇನ್‌ ವಿರುದ್ಧ ಸ್ಪರ್ಧಿಸಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಚೀನಾದ ಹಾನ್‌ ಯೂ ವಿರುದ್ಧ 20​-22, 22​-20, 21​-10 ಸೆಟ್‌ಗಳಲ್ಲಿ ಜಯ ಗಳಿಸಿದರು. ಆದರೆ ಸ್ವಿಸ್‌ ಓಪನ್‌ ರನ್ನರ್‌-ಅಪ್‌ ಎಚ್‌.ಎಸ್‌.ಪ್ರಣಯ್‌ ಮೊದಲ ಸುತ್ತಿನಲ್ಲೇ ಮಲೇಷ್ಯಾದ ಚೀಮ್‌ ಜೂನ್‌ ವಿರುದ್ಧ ಆಘಾತ ಅನುಭವಿಸಿದರು. ಪುರುಷರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್‌-ವಿಷ್ಣುವರ್ಧನ್‌, ಬೊಕ್ಕಾ ನವನೀತ್‌-ಸುಮೀತ್‌ ರೆಡ್ಡಿ ಜೋಡಿ ಸೋಲನುಭವಿಸಿತು.

ರಾಜ್ಯದ ಅಭಿನಯಗೆ ಚಿನ್ನ

ಕಲ್ಲಿಕೋಟೆ: 25ನೇ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಕೂಟದ 4ನೇ ದಿನವಾದ ಮಂಗಳವಾರ ಕರ್ನಾಟಕ ಚಿನ್ನದ ಖಾತೆ ತೆರೆಯಿತು. ಮಹಿಳೆಯರ ಹೈ ಜಂಪ್‌ನಲ್ಲಿ ಅಭಿನಯ ಶೆಟ್ಟಿ 1.83 ಎತ್ತರಕ್ಕೆ ನೆಗೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಕರ್ನಾಟಕದ ಪದಕಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕರ್ನಾಟಕವು ಕೂಟದಲ್ಲಿ ಇದುವರೆಗೂ 1 ಚಿನ್ನ, 2 ಬೆಳ್ಳಿ, 3 ಕಂಚು ಜ

ಸ್ಕೀಯಿಂಗ್‌: ರಾಜ್ಯದ ಜಿಯಾಗೆ ಚಿನ್ನದ ಪದಕ

ಬೆಂಗಳೂರು: ಆಲ್‌ ಇಂಡಿಯಾ ಆಹ್ವಾನಿತ ಸ್ಕೀಯಿಂಗ್‌ ಹಾಗೂ ಸ್ನೋಬೋರ್ಡ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಜಿಯಾ ಚಿನ್ನದ ಪಕದ ಗೆದ್ದುಕೊಂಡಿದ್ದಾರೆ. ಶನಿವಾರ ಆರಂಭವಾಗಿ ಮೂರು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ನಡೆದ ಟೂರ್ನಿಯಲ್ಲಿ ಜಿಯಾ ಅಂಡರ್‌-16 ವಿಭಾಗದ ಜೈಂಟ್‌ ಸ್ಲಾಲೊಮ್‌ ವಿಭಾಗದಲ್ಲಿ ಬಂಗಾರದ ಪದಕಕ್ಕೆ ಕೊರಳೊಡಿದ್ದರು.

Latest Videos
Follow Us:
Download App:
  • android
  • ios