ಕೊರೋನಾ ವೈರಸ್: ಕೊಡವ ಕೌಟುಂಬಿಕ ಹಾಕಿ ಉತ್ಸವ ರದ್ದು!

ಕೊರೋನಾ ವೈರಸ್‌ಗೆ ಕೊಡವರ ಪ್ರತಿಷ್ಠಿತ ಹಾಕಿ ಕಪ್ ಉತ್ಸವ ರದ್ದಾಗಿದೆ. ಇದೀಗ ಸತತ 2ನೇ ಬಾರಿ ಕೊಡವ ಹಾಕಿ ಕಪ್ ರದ್ದಾಗುತ್ತಿರುವುದು ಕೊಡವರಲ್ಲಿ ನಿರಾಸೆ ತಂದಿದೆ. 

Kodava hockey fest canceled due to coronavirus

ಮಡಿಕೇರಿ(ಮಾ.25): ವಿಶ್ವದೆಲ್ಲೆಡೆ ಮಾರಕ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಡಿಕೇರಿಯಲ್ಲಿ ನಡೆಸಲಾಗುತ್ತಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ರದ್ದು ಪಡಿ​ಸ​ಲಾ​ಗಿದೆ. 23ನೇ ಹಾಕಿ ಉತ್ಸವ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಆಯೋಜಿಸಲಾಗಿದ್ದು, ಪೂರ್ವ ಸಿದ್ಧತೆ ಪೂರ್ಣಗೊಳಿಸಲಾಗಿತ್ತು. ಅಲ್ಲದೆ ಲಕ್ಷಾಂತರ ರು. ಖರ್ಚು ಮಾಡಲಾಗಿತ್ತು. ಈ ಬಾರಿ ಮುಕ್ಕಾಟೀರ ಕುಟುಂಬದ ನೇತೃತ್ವದಲ್ಲಿ ಕ್ರೀಡಾ​ಕೂಟ ನಡೆಯಬೇಕಿತ್ತು. 

ಕೊರೋನಾ ವೈರಸ್ ತಡೆಯಲು; ಭಾರತೀಯ ಕ್ರೀಡಾ ತಾರೆಯರಿಂದ ನೆರವಿನ ಹಸ್ತ!

ಕರೋನಾ  ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೊಡವ ಹಾಕಿ ಆಯೋಜಕರು ಕೌಟುಂಬಿಕ ಹಾಕಿ ಟೂರ್ನಿಯನ್ನು ರದ್ದು ಮಾಡಿದ್ದಾರೆ. ಈಗಾಗಲೇ ಹಲವು ಕ್ರೀಡೆಗಳು ರದ್ದಾಗಿದೆ. ಐಪಿಎಲ್ ಟೂರ್ನಿ ನಡೆಯೋದು ಬಹುತೇಕ ಅನುಮಾನವಾಗಿದೆ. 2020ರ ಟೊಕಿಯೋ ಒಲಿಂಪಿಕ್ಸ್ ಕೂಟವನ್ನು ರದ್ದು ಮಾಡಿ 2021ಕ್ಕೆ ಆಯೋಜಿಸಲು ನಿರ್ಧರಿಸಲಾಗಿದೆ. ಇದೀಗ ಕೊಡವರ ಪ್ರತಿಷ್ಠಿತ ಹಾಕಿ ಟೂರ್ನಿ ಕೂಡ ಕೊರೋನಾ ವೈರಸ್‌ಗೆ ಬಲಿಯಾಗಿದೆ.

ಕೊಡವ ಹಾಕಿ ಕಪ್ ಟೂರ್ನಿ ಈ ಬಾರಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದರೆ, ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಕೂಟ ರದ್ದಾಗಿತ್ತು. ಭಾರಿ ಮಳೆಯಿಂದಾಗಿ ಕೊಡಗು ಬಹುತೇಕ ಕೊಚ್ಚಿ ಹೋಗಿತ್ತು. ಸಂಕಷ್ಟಕ್ಕೆ ಸಿಲುಕಿದ ಕೊಡಗೂ ಹಾಕಿ ಟೂರ್ನಿಯನ್ನು ರದ್ದು ಮಾಡಿತ್ತು.

Latest Videos
Follow Us:
Download App:
  • android
  • ios