* ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ* ಭಾರತ ತಂಡ ಫ್ರಾನ್ಸ್‌ ವಿರುದ್ಧ 1-3 ಗೋಲುಗಳಿಂದ ಸೋಲು* ಫೈನಲ್‌ನಲ್ಲಿ ಜರ್ಮನಿ ವಿರುದ್ಧ 2-1 ಗೋಲುಗಳಿಂದ ಗೆದ್ದ ಅರ್ಜೆಂಟೀನಾ

ಭುವನೇಶ್ವರ(ಡಿ.06): ಕಳೆದ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ಭಾರತ, ಈ ವರ್ಷ ಕಿರಿಯರ ಹಾಕಿ ವಿಶ್ವಕಪ್‌ನಲ್ಲಿ (Junior Hockey World Cup) ಪೋಡಿಯಂ ಮೇಲೆ ನಿಲ್ಲುವ ಅವಕಾಶವನ್ನು ಕಳೆದುಕೊಂಡಿತು. ಭಾನುವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ ಫ್ರಾನ್ಸ್‌ ವಿರುದ್ಧ 1-3 ಗೋಲುಗಳಲ್ಲಿ ಸೋಲು ಅನುಭವಿಸಿತು. ಫ್ರಾನ್ಸ್‌ನ ನಾಯಕ ಟಿಮೊಥೀ ಕ್ಲೆಮೆಂಟ್‌ ಹ್ಯಾಟ್ರಿಕ್‌ ಗೋಲು ಬಾರಿಸಿ ಆತಿಥೇಯರಿಗೆ ಆಘಾತ ನೀಡುವ ಮೂಲಕ ತಮ್ಮ ತಂಡಕ್ಕೆ ಕಂಚಿನ ಪದಕವನ್ನು ಗೆಲ್ಲಿಸಿಕೊಟ್ಟರು. 

ಕ್ಲೆಮೆಂಟ್‌ 26, 34 ಹಾಗೂ 47ನೇ ನಿಮಿಷಗಳಲ್ಲಿ ಪೆನಾಲ್ಟಿಕಾರ್ನರ್‌ ಮೂಲಕ ಗೋಲು ಬಾರಿಸಿದರು. ಭಾರತ ಪರ 42ನೇ ನಿಮಿಷದಲ್ಲಿ ಸುದೀಪ್‌ ಚಿರ್ಮಾಕೊ ಏಕೈಕ ಗೋಲು ಗಳಿಸಿದರು. ಫ್ರಾನ್ಸ್‌ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ 4-5 ಗೋಲುಗಳಿಂದ ಸೋತಿದ್ದ ಭಾರತ, ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಜಯಗಳಿಸಿತ್ತು. ಆದರೆ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಪರಾಭವಗೊಂಡು ಫೈನಲ್‌ಗೇರುವ ಅವಕಾಶದಿಂದ ವಂಚಿತವಾಗಿತ್ತು.

ಅರ್ಜೆಂಟೀನಾ ಚಾಂಪಿಯನ್‌

ಜೂನಿಯರ್ ಹಾಕಿ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಜರ್ಮನಿ (Germany) ವಿರುದ್ಧ 2-1 ಗೋಲುಗಳಿಂದ ಗೆದ್ದ ಅರ್ಜೆಂಟೀನಾ 2ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ತಂಡ 2005ರಲ್ಲಿ ಮೊದಲ ಬಾರಿಗೆ ಟ್ರೋಫಿ ಜಯಿಸಿತ್ತು. ಆರು ಬಾರಿಯ ಜೂನಿಯರ್ ಹಾಕಿ ವಿಶ್ವಕಪ್ ಚಾಂಪಿಯನ್ ಜರ್ಮನಿ ತಂಡದ ಏಳನೇ ಟ್ರೋಫಿ ಗೆಲ್ಲುವ ಕನಸನ್ನು ಅರ್ಜೆಂಟೀನಾ ಭಗ್ನಗೊಳಿಸಿದೆ. 

ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾದ ಲೌಟಾರೊ ಡೊಮೆನ್‌ ಬಾರಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಬಲಿಷ್ಠ ಜರ್ಮನಿ ಎದುರು ಭರ್ಜರಿ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿದೆ. ಲೌಟಾರೊ ಡೊಮೆನ್‌ ಪಂದ್ಯದ 10ನೇ, 25ನೇ ಹಾಗೂ 50ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸುವ ಮೂಲಕ ಮಿಂಚಿದರು. ಇನ್ನು ಫ್ರಾಂಕೋ ಆಗೊಸ್ಟಿನಿ 60ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ ಅಂತರವನ್ನು 4-1ಕ್ಕೆ ಹಿಗ್ಗಿಸಿದರು.

ಮಹಿಳಾ ಹಾಕಿ: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 13-0 ಜಯ

ಡೊಂಗೇ(ದ. ಕೊರಿಯಾ): ಡ್ರ್ಯಾಗ್‌ಫ್ಲಿಕರ್‌ ಗುರ್ಜಿತ್‌ ಕೌರ್‌ 5 ಗೋಲು ಬಾರಿಸಿ, ಭಾನುವಾರದಿಂದ ಆರಂಭಗೊಂಡ ಏಷ್ಯನ್‌ ಮಹಿಳಾ ಹಾಕಿ ಚಾಂಪಿಯನ್ಸ್‌ ಟ್ರೋಫಿಯ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ ವಿರುದ್ಧ ಭಾರತ 13-0 ಗೋಲುಗಳ ಗೆಲುವು ಸಾಧಿಸಲು ನೆರವಾದರು. 

Junior Hockey World Cup: ಕಂಚಿನ ಪದಕಕ್ಕಾಗಿಂದು ಭಾರತ-ಫ್ರಾನ್ಸ್‌ ಕಾದಾಟ

ಪಂದ್ಯದ 2ನೇ ನಿಮಿಷದಲ್ಲೇ ಭಾರತ ಗೋಲಿನ ಖಾತೆ ತೆರಯಿತು. ಪೆನಾಲ್ಟಿ ಸ್ಟ್ರೋಕ್‌ ಮೂಲಕ ಗುರ್ಜಿತ್‌ ಗೋಲು ಬಾರಿಸಿದರು. ಮೊದಲ ಕ್ವಾರ್ಟರ್‌ ಮುಕ್ತಾಯಕ್ಕೆ ಭಾರತ 5-0 ಮುನ್ನಡೆ ಸಾಧಿಸಿತು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದ ಬಳಿಕ ಭಾರತ ತಂಡ ಆಡಿದ ಮೊದಲ ಪಂದ್ಯವಿದು. ಸೋಮವಾರ ಭಾರತ ತನ್ನ 2ನೇ ಪಂದ್ಯವನ್ನು ಮಲೇಷ್ಯಾ ವಿರುದ್ಧ ಆಡಲಿದೆ.

ಪೊಲೀಸ್‌ ಹಾಕಿ ಟೂರ್ನಿ: ಕರ್ನಾಟಕ ಶುಭಾರಂಭ

ಬೆಂಗಳೂರು: 70ನೇ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಕರ್ನಾಟಕ ಶುಭಾರಂಭ ಮಾಡಿದೆ. ಭಾನುವಾರ ನಡೆದ 'ಡಿ' ಗುಂಪಿನ ಪಂದ್ಯದಲ್ಲಿ ಹರ್ಯಾಣ ಪೊಲೀಸ್‌ ವಿರುದ್ದ ರಾಜ್ಯ ತಂಡ 5-3 ಗೋಲುಗಳಲ್ಲಿ ಗೆಲುವು ಸಾಧಿಸಿತು.

BWF World Tour Finals: ಫೈನಲ್‌ನಲ್ಲಿ ಎಡವಿದ ಸಿಂಧುಗೆ ಬೆಳ್ಳಿ

ಕರ್ನಾಟಕ ಪರ ನಾಯಕ ಪ್ರದೀಪ್ ಹ್ಯಾಟ್ರಿಕ್‌(10ನೇ ನಿಮಿಷ, 48ನೇ ನಿಮಿಷ, 57ನೇ ನಿಮಿಷ) ಗೋಲು ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದೆರಡು ಗೋಲುಗಳನ್ನು ರಾಜಶೇಖರ್ ಶಿವಗುತ್ತಿ(36ನೇ ನಿಮಿಷ) ಹಾಗೂ ಪರಮೇಶ್(59ನೇ ನಿಮಿಷ) ಬಾರಿಸಿದರು.