Asianet Suvarna News Asianet Suvarna News

ಭಾರತ ಮಹಿಳಾ ಹಾಕಿ ಟೀಂನ 7 ಮಂದಿಗೆ ಕೊರೋನಾ ಸೋಂಕು ದೃಢ!

ಅಭ್ಯಾಸ ಶಿಬಿರಕ್ಕೆ ಬೆಂಗಳೂರಿನ ಸಾಯ್ ಕೇಂದ್ರಕ್ಕೆ ಬಂದ ಭಾರತದ 7 ಮಹಿಳಾ ಹಾಕಿ ಆಟಗಾರ್ತಿಯರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Indian womens hockey captain Rani Rampal among 7 players to test positive for Coronavirus in SAI kvn
Author
Bengaluru, First Published Apr 28, 2021, 9:16 AM IST

ಬೆಂಗಳೂರು(ಏ.28): ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಸೇರಿ 7 ಆಟಗಾರ್ತಿಯರಿಗೆ ಕೊರೋನಾ ಸೋಂಕು ತಗುಲಿದೆ. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ದ ಕೇಂದ್ರದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಆಟಗಾರ್ತಿಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 

ತಮ್ಮ ಊರುಗಳಿಂದ ಅಭ್ಯಾಸ ಶಿಬಿರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಆಟಗಾರ್ತಿಯರನ್ನು ಏಪ್ರಿಲ್ 24ರಂದು ಪರೀಕ್ಷಿಸಲಾಗಿತ್ತು. ರಾಣಿ ಜೊತೆಗೆ ಸವಿತಾ ಪೂನಿಯಾ, ಶರ್ಮಿಳಾ ದೇವಿ, ರಂಜನಿ, ನವ್ಜೋತ್‌ ಕೌರ್‌, ನವ್‌ನೀತ್‌ ಕೌರ್‌ ಹಾಗೂ ಸುಶೀಲಾ ಸೋಂಕಿತ ಆಟಗಾರ್ತಿಯರು. ಯಾರಿಗೂ ಸೋಂಕಿನ ಲಕ್ಷಣಗಳು ಇಲ್ಲದ ಕಾರಣ, ಸಾಯ್‌ ಕೇಂದ್ರದಲ್ಲೇ ಐಸೋಲೇಷನ್‌ನಲ್ಲಿ ಇರಿಸಲಾಗಿದೆ.

ಭಾರತದ ಪ್ರಥಮ ಮಹಿಳಾ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮಾ ಕೊರೋನಾಗೆ ಬಲಿ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಸಂಭಾವ್ಯ 25 ಮಹಿಳಾ ಆಟಗಾರ್ತಿರನ್ನೊಳಗೊಂಡ ಗುಂಪು ತರಭೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಭಾನುವಾರವಷ್ಟೇ ಬೆಂಗಳೂರಿಗೆ ಬಂದಿಳಿದಿತ್ತು.  ಎಲ್ಲಾ ಆಟಗಾರ್ತಿಯರು ಹಾಗೂ ಸಹಾಯಕ ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಹೀಗಾಗಿ ಅವರನ್ನೆಲ್ಲ ಪ್ರತ್ಯೇಕವಾಗಿಟ್ಟು, ವೈದ್ಯಕೀಯ ಸಿಬ್ಬಂದಿ ಅವರ ಮೇಲೆ ನಿಗಾ ಇಟ್ಟಿದೆ ಎಂದು ಸಾಯ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 

Follow Us:
Download App:
  • android
  • ios