ನವದೆಹಲಿ(ಡಿ.30): ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕಗಳು ಆರಂಭಗೊಳ್ಳುತ್ತಿದೆ. ಹಲವು ನಿರ್ಬಂಧನೆಗಳು, ಆಯಾ ದೇಶದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇದೀಗ ಕ್ರೀಡಾ ಚಟುವಟಿಕೆ ಆರಂಭಗೊಳ್ಳುತ್ತಿದೆ. ಸರಿಸುಮಾರು ಒಂದು ವರ್ಷಗಳ ಬಳಿಕ ಭಾರತೀಯ ಹಾಕಿ ಸಕ್ರೀಯವಾಗುತ್ತಿದೆ. ಭಾರತ ಮಹಿಳಾ ಹಾಕಿ ತಂಡ ಇದೀಗ ಅರ್ಜಂಟೀನಾ ಪ್ರವಾಸಕ್ಕೆ ಸಜ್ಜಾಗಿದೆ.

ಧ್ಯಾನ್‌ ಚಂದ್ ಅವರ ಹಾಕಿ ಸ್ಟಿಕ್‌ ಮ್ಯಾಜಿಕ್ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ.

ಅರ್ಜಂಟೀನಾ ವಿರುದ್ಧದ 8 ಪಂದ್ಯಗಳ ಹಾಕಿ ಸರಣಿಗಾಗಿ ಭಾರತ ಮಹಿಳಾ ತಂಡ ಜನವರಿ 3 ರಂದು ದೆಹಲಿಯಿಂದ ಅರ್ಜಂಟೀನಾಗೆ ಪ್ರಯಾಣ ಬೆಳೆಸಲಿದೆ. 25 ಆಟಗಾರ್ತಿಯರು ಹಾಗೂ 7 ಸಿಬ್ಬಂದಿಗಳನ್ನೊಳಗೊಂಡ ಭಾರತ ತಂಡ, ಕಠಿಣ ಅಭ್ಯಾಸ ನಡೆಸಿದೆ. ಇನ್ನು ಜನವರಿ 17 ರಿಂದ ಟೂರ್ನಿ ಆರಂಭಗೊಳ್ಳಲಿದೆ.

ಭಾರತ ಹಾಕಿ ಆಟಗಾರ್ತಿಯಿಂದ ಈಗ ಗದ್ದೆ ಕೆಲಸ!

ಟೊಕಿಯೋ ಒಲಿಂಪಿಕ್ಸ್ ಗೇಮ್ಸ್‌ಗೂ ಮುುನ್ನು ಅರ್ಜಂಟೀನಾದಂತ ಬಲಿಷ್ಠ ತಂಡದ ವಿರುದ್ಧ ಪಂದ್ಯ ಆಡುವುದು ಭಾರತಕ್ಕೆ ಅತೀ ಮುಖ್ಯವಾಗಿದೆ. 5 ತಿಂಗಳು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ತರಬೇತಿಯಲ್ಲಿ ಪಾಲ್ಗೊಂಡಿದ್ದೇವೆ ಎಂದು ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ಹೇಳಿದ್ದಾರೆ. 

ಭಾರತ ಮಹಿಳಾ ಹಾಕಿ ತಂಡ ಕೊನೆಯದಾಗಿ ಪಂದ್ಯ ಆಡಿರುವುದು 2020ರ ಜನವರಿಯಲ್ಲಿ. ನ್ಯೂಜಿಲೆಂಡ್ ಪ್ರವಾಸದ ಮಾಡಿದ ಭಾರತ ಮಹಿಳಾ ಹಾಕಿ ತಂಡ 5 ಪಂದ್ಯಗಳ ಸರಣಿ ಆಡಿತ್ತು. ಈ ಸರಣಿಯಲ್ಲಿ 3 ಗೆಲುವು ದಾಖಲಿಸಿದ ಭಾರತ ಸಂಭ್ರಮ ಆಚರಿಸಿತ್ತು. ಬಳಿಕ ಕೊರೋನಾ ಕಾರಣ ಲಾಕ್‌ಡೌನ್ ಸೇರಿದಂತೆ ಹಾಕಿ ಸೇರಿದಂತೆ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ಥಗಿತಗೊಂಡಿತ್ತು.