ಹಾಕಿ ಟೀಂ ಇಂಡಿಯಾದ ನಾಯಕ ಸೇರಿ ಐವರಿಗೆ ಕೊರೋನಾ ಕನ್ಫರ್ಮ್!
ಭಾರತ ಹಾಕಿ ತಂಡದ ನಾಯಕ ಸೇರಿದಂತೆ ಐವರಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಇದೀಗ ಅವರನ್ನೆಲ್ಲ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.08): ಭಾರತ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಸೇರಿದಂತೆ ಒಟ್ಟು 5 ಆಟಗಾರರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.
ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ದಲ್ಲಿ ಅಭ್ಯಾಸ ಶಿಬಿರಕ್ಕೆ ಹಾಜರಾದ ಆಟಗಾರರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಪೈಕಿ ಮನ್‌ಪ್ರೀತ್, ಡಿಫೆಂಡರ್‌ಗಳಾದ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ಗೋಲ್ ಕೀಪರ್ ಕೃಷನ್ ಪಾಠಕ್ ಹಾಗೂ ಡ್ರ್ಯಾಗ್ ಫ್ಲಿಕ್ಕರ್ ವರುಣ್ ಕುಮಾರ್‌ಗೆ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಶುಕ್ರವಾರ ಸಾಯ್ ತಿಳಿಸಿದೆ.
ಭಾರತ ಹಾಕಿ ಆಟಗಾರ್ತಿಯಿಂದ ಈಗ ಗದ್ದೆ ಕೆಲಸ!
ರ‍್ಯಾಪಿಡ್ ಟೆಸ್ಟ್ ವೇಳೆ ಈ ಎಲ್ಲಾ ಐದು ಆಟಗಾರರ ವರದಿ ನೆಗೆಟಿವ್ ಬಂದಿತ್ತು. ಆದಾಗಿಯೂ ಮನ್‌ಪ್ರೀತ್ ಹಾಗೂ ಸುರೇಂದರ್ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಬಳಿಕ ಗುರುವಾರ RT-PCR ಟೆಸ್ಟ್ ಮಾಡಲಾಗಿದೆ. ಆಗ ಈ 5 ಆಟಗಾರರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.
ಬೆಂಗಳೂರಿಗೆ ಆಗಮಿಸುವ ವೇಳೆ ಅವರಿಗೆ ಸೋಂಕು ತಗುಲಿರಬಹುದು ಎಂದು ಸಾಯ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಟಗಾರರನ್ನು ಸಾಯ್ ಕೇಂದ್ರದಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.