ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡದ ಪ್ರೋ ಲೀಗ್ ಹಾಕಿ ಪಂದ್ಯಗಳು ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಲುಸ್ಸಾನೆ(ಮೇ.05): ಭಾರತ ಪುರುಷರ ಹಾಕಿ ತಂಡದ ಪ್ರೊ ಲೀಗ್‌ ಪಂದ್ಯಗಳು ಕೋವಿಡ್‌ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ. ತಂಡ ಈ ವಾರ ಲಂಡನ್‌ಗೆ ತೆರಳಬೇಕಿತ್ತು. 

ಆದರೆ ಭಾರತೀಯ ಪ್ರಯಾಣಿಕರನ್ನು ಬ್ರಿಟನ್‌ ‘ಕೆಂಪು ಪಟ್ಟಿ’ಗೆ ಸೇರಿಸಿರುವ ಕಾರಣ ಪ್ರಯಾಣ ಕಷ್ಟ. ಸ್ಪೇನ್‌ ವಿರುದ್ಧ ಮೇ 15, 16 ಹಾಗೂ ಜರ್ಮನಿ ವಿರುದ್ಧ ಮೇ 23, 24ಕ್ಕೆ ಪಂದ್ಯಗಳು ನಡೆಯಬೇಕಿತ್ತು.

ಭಾರತ ಹಾಕಿ ತಂಡಗಳಿಗೆ ಮೊದಲ ಡೋಸ್‌ ಲಸಿಕೆ

ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆಗೆ ಸೋಂಕು

ಬೆಂಗಳೂರು: ಭಾರತದ ಬ್ಯಾಡ್ಮಿಂಟನ್‌ ದಿಗ್ಗಜ ಪ್ರಕಾಶ್‌ ಪಡುಕೋಣೆಗೆ ಕೋವಿಡ್‌ ಸೋಂಕು ತಗುಲಿದೆ ಎನ್ನುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 10 ದಿನಗಳ ಹಿಂದೆಯೇ ಅವರ ಕೋವಿಡ್‌ ಪರೀಕ್ಷಾ ವರದಿ ಪಾಸಿಟಿವ್‌ ಬಂದಿತ್ತು. ಮನೆಯಲ್ಲಿಯೇ ಐಸೋಲೇಷನ್‌ನಲ್ಲಿದ್ದ ಅವರು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಚೇತರಿಕೆ ಕಂಡಿದ್ದು, ಶೀಘ್ರ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona