ಮಹಿಳಾ ಹಾಕಿ: ಸೆಮೀಸಲ್ಲಿ ಇಂದು ಭಾರತ vs ಜರ್ಮನಿ
ಆತಿಥೇಯ ಭಾರತ ಟೂರ್ನಿಯಲ್ಲಿ ‘ಬಿ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿದ್ದರೂ. ಬಳಿಕ ನ್ಯೂಜಿಲೆಂಡ್ ಹಾಗೂ ಇಟಲಿಯನ್ನು ಸೋಲಿಸಿ ನಾಕೌಟ್‌ಗೇರಿದೆ. ಅತ್ತ ಜರ್ಮನಿ ತಂಡ ‘ಎ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 1ರಲ್ಲಿ ಡ್ರಾ ಸಾಧಿಸಿ ಅಗ್ರಸ್ಥಾನಿಯಾಗಿಯೇ ಸೆಮೀಸ್‌ಗೇರಿದೆ. ಗುರುವಾರದ ಮತ್ತೊಂದು ಸೆಮೀಸ್‌ನಲ್ಲಿ ಜಪಾನ್-ಅಮೆರಿಕ ಮುಖಾಮುಖಿಯಾಗಲಿವೆ.
ರಾಂಚಿ: ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಯ ಮೇಲೆ ಕಣ್ಣಿಟ್ಟಿರುವ ಭಾರತ ಮಹಿಳಾ ಹಾಕಿ ತಂಡ, ಗುರುವಾರ ಅರ್ಹತಾ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಸೆಣಸಾಡಲಿದೆ. ಗೆದ್ದು ಫೈನಲ್‌ಗೇರಿದರೆ ಭಾರತಕ್ಕೆ ಒಲಿಂಪಿಕ್ಸ್ ಟಿಕೆಟ್ ಖಚಿತವಾಗಲಿದ್ದು, ಸೋತರೆ 3ನೇ ಸ್ಥಾನಕ್ಕಾಗಿ ಹೋರಾಡಬೇಕಿದೆ. ಟೂರ್ನಿಯಲ್ಲಿ ಅಗ್ರ-3 ತಂಡಗಳು ಒಲಿಂಪಿಕ್ಸ್ ಪ್ರವೇಶಿಸಲಿವೆ.
ಆತಿಥೇಯ ಭಾರತ ಟೂರ್ನಿಯಲ್ಲಿ ‘ಬಿ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿದ್ದರೂ. ಬಳಿಕ ನ್ಯೂಜಿಲೆಂಡ್ ಹಾಗೂ ಇಟಲಿಯನ್ನು ಸೋಲಿಸಿ ನಾಕೌಟ್‌ಗೇರಿದೆ. ಅತ್ತ ಜರ್ಮನಿ ತಂಡ ‘ಎ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 1ರಲ್ಲಿ ಡ್ರಾ ಸಾಧಿಸಿ ಅಗ್ರಸ್ಥಾನಿಯಾಗಿಯೇ ಸೆಮೀಸ್‌ಗೇರಿದೆ. ಗುರುವಾರದ ಮತ್ತೊಂದು ಸೆಮೀಸ್‌ನಲ್ಲಿ ಜಪಾನ್-ಅಮೆರಿಕ ಮುಖಾಮುಖಿಯಾಗಲಿವೆ.
ಪಂದ್ಯ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ
ಎಎಫ್‌ಸಿ ಫುಟ್ಬಾಲ್: ಇಂದು ಭಾರತ vs ಉಜ್ಬೇಕಿಸ್ತಾನ
ಅಲ್ ರಯ್ಯಾನ್(ಕತಾರ್): ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ವೀರೋಚಿತ ಸೋಲು ಕಂಡಿದ್ದ ಭಾರತ, ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಗುರುವಾರ ಉಜ್ಬೇಕಿಸ್ತಾನ ವಿರುದ್ಧ ಸೆಣಸಾಡಲಿದೆ.
Australian Open 2024: ನೋವಾಕ್ ಜೋಕೋವಿಚ್ 3ನೇ ಸುತ್ತಿಗೆ
‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 0-2 ಗೋಲುಗಳಿಂದ ಸೋತಿತ್ತು. 4 ತಂಡಗಳಿರುವ ಗುಂಪಿನಲ್ಲಿ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿ ನಾಕೌಟ್‌ಗೇರಬೇಕಿದ್ದರೆ ಭಾರತಕ್ಕೆ ಉಜ್ಬೇಕಿಸ್ತಾನ ವಿರುದ್ಧ ಗೆಲ್ಲಲೇಬೇಕಿದೆ. ಆದರೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 68ನೇ ಸ್ಥಾನದಲ್ಲಿರುವ ಉಜ್ಬೇಕಿಸ್ತಾನದಿಂದ 102ನೇ ಸ್ಥಾನದಲ್ಲಿರುವ ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. ಈ ವರೆಗೆ ಇತ್ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, 5ರಲ್ಲಿ ಉಜ್ಬೇಕಿಸ್ತಾನ, 1ರಲ್ಲಿ ಮಾತ್ರ ಭಾರತ ಗೆದ್ದಿದೆ. ಉಜ್ಬೇಕಿಸ್ತಾನ ಆರಂಭಿಕ ಪಂದ್ಯದಲ್ಲಿ ಸಿರಿಯಾ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತ್ತು.
ಪಂದ್ಯ: ರಾತ್ರಿ 8ಕ್ಕೆ, ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ
ನಾವು ನಡೆಸುವ ಕೂಟಕ್ಕಷ್ಟೇ ಮಾನ್ಯತೆ: ಸ್ವತಂತ್ರ ಸಮಿತಿ
ನವದೆಹಲಿ: ಭಾರತೀಯ ಒಲಿಂಪಿಕ್ ಸಮಿತಿಯು ಕುಸ್ತಿ ಫೆಡರೇಶನ್ ಮೇಲ್ವಿಚಾರಣೆಗೆ ನೇಮಿಸಿರುವ ಸ್ವತಂತ್ರ ಸಮಿತಿ ಆಯೋಜಿಸುವ ಕೂಟಗಳಿಗೆ ಮಾತ್ರ ಮಾನ್ಯತೆ ಇದೆ ಎಂದು ಸಮಿತಿಯ ಮುಖ್ಯಸ್ಥ ಭೂಪೇಂದ್ರ ಸಿಂಗ್ ಬಜ್ವಾ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟನೆ ನೀಡಿರುವ ಅವರು, ಸ್ವತಂತ್ರ ಸಮಿತಿ ಆಯೋಜಿಸುವ ಕೂಟದಲ್ಲಿ ಭಾಗಿಯಾಗುವ ಕ್ರೀಡಾಪಟುಗಳಿಗೆ ಮಾತ್ರ ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿವೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಕ್ರೀಡಾ ಸಚಿವಾಲಯಕ್ಕೆ ಸಡ್ಡು ಹೊಡೆದಿದ್ದ ಕುಸ್ತಿ ಸಂಸ್ಥೆ ಅಧ್ಯಕ್ಷ ಸಂಜಯ್ ಸಿಂಗ್, ನಮಗೆ ಕೂಟ ಆಯೋಜಿಸುವ ಸಾಂವಿಧಾನಿಕ ಹಕ್ಕು ಇದೆ. ಸ್ವತಂತ್ರ ಸಮಿತಿಗೆ ಇಲ್ಲ ಎಂದಿದ್ದರು.