Asianet Suvarna News Asianet Suvarna News

ಹಾಕಿ ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ, ಬಲಿಷ್ಠ ಸ್ಪೇನ್ ವಿರುದ್ಧ 2-0 ಗೆಲುವು!

ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಸ್ಪಿನ್ ವಿರುದ್ಧದ ಹೋರಾಟದಲ್ಲಿ ಭಾರತ 2-0 ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

India celebrate first victory against spain by 2 0 gols in hockey world cup 2023 Bhubaneswar ckm
Author
First Published Jan 13, 2023, 9:17 PM IST

ರೂರ್ಕೆಲಾ (ಜ.13):  15ನೇ ಆವೃತ್ತಿಯ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ ಶುಭಾರಂಭ ಮಾಡಿದೆ. 48 ವರ್ಷಗಳ ಬಳಿಕ ಹಾಕಿ ವಿಶ್ವಕಪ್ ಗೆಲ್ಲುವ ಭರವಸೆಯೊಂದಿಗೆ ಅಖಾಡಕ್ಕಿಳಿದಿರುವ ಭಾರತ, ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಬಲಿಷ್ಠ ಸ್ಪೇನ್ ವಿರುದ್ದ ನಡೆದ ಪಂದ್ಯದಲ್ಲಿ ಭಾರತ 2-0 ಅಂತರದ ಗೆಲುವು ಸಾಧಿಸಿದೆ. ಅಂತಿಮ ಹಂತದಲ್ಲಿ ಅಭಿಷೇಕ್ ಹಳದಿ ಕಾರ್ಡ್ ಪಡೆದು ಭಾರತದ ಆತಂಕ ಹೆಚ್ಚಿಸಿದರು. ಹೀಗಾಗಿ 10 ಮಂದಿಯೊಂದಿಗೆ ಹೋರಾಟ ನಡೆಸಿತ್ತು. ಈ ವೇಳೆ ಸ್ಪೇನ್ ಪೆನಾಲ್ಟಿ ಕಾರ್ನರ್ ಅವಕಾಶವನ್ನೂ ಪಡೆದಿತ್ತು. ಆದರೆ ಭಾರತದ ಹೋರಾಟಕ್ಕೆ ಸ್ಪೇನ್ ಗೋಲಿನ ಖಾತೆ ಆರಂಭಿಸಲು ಸಾಧ್ಯಾಗಲೇ ಇಲ್ಲ. 

ಒಡಿಶಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಸಂಪೂರ್ಣ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿತ್ತು. 12ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಸಡಿಸಿದ ಗೋಲಿನಿಂದ ಭಾರತ ಖಾತೆ ತೆರೆಯಿತು. ಈ ನಡೆ ಸ್ಪೇನ್‌ಗೆ ತೀವ್ರ ಹಿನ್ನಡೆ ತಂದಿದೆ. ಪಂದ್ಯದ ಆರಂಭದಲ್ಲಿ ಭಾರತ ಗೋಲು ಸಿಡಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.  

ಇಂದಿನಿಂದ ಹಾಕಿ ವಿಶ್ವಕಪ್‌ ಮಹಾಕದನ..! 16 ತಂಡಗಳ ಬಲಾಬಲಗಳೇನು?

ಮೊದಲ ಗೋಲಿನಿಂದ 1-0 ಅಂತರದ ಮುನ್ನಡೆ ಪಡೆದ ಭಾರತ 26ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಎರಡನೇ ಗೋಲು ಸಿಡಿಸಿದರು. ಇದರೊಂದಿಗೆ ಭಾರತ 2-0 ಅಂತರದ ಮುನ್ನಡೆ ಪಡೆಯಿತು. ಇದಾದ ಬಳಿಕ ಸ್ಪೇನ್ ಗೋಲು ಗಳಿಸುವ ಕೆಲ ಅವಕಾಶಗಳನ್ನು ಪಡೆದಿತ್ತು. ಆದರೆ ಭಾರತದ ಹೋರಾಟದ ಮುಂದೆ ಸಾಧ್ಯವಾಗಲಿಲ್ಲ.

ಕಳೆದ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಆದರೆ ನೆದರ್ಲೆಂಡ್ ವಿರುದ್ದದ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿತ್ತು. ನೆದರ್ಲೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿತು. ಕಳೆದ ಬಾರಿಗಿಂತ ಈ ಬಾರಿ ಭಾರತ ಹಾಕಿ ತಂಡ ಬಲಿಷ್ಠವಾಗಿದೆ. ಇಷ್ಟೇ ಅಲ್ಲ ಸಾಕಷ್ಟು ಬದಲಾಗಿದೆ. 

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿರುವ ಭಾರತ, ಈ ಬಾರಿ ತವರಿನ ಅಂಗಳದ ಲಾಭವೆತ್ತುವ ತವಕದಲ್ಲಿದೆ. 1971ರಲ್ಲಿ ಕಂಚು, 1973ರಲ್ಲಿ ಬೆಳ್ಳಿ ಗೆದ್ದಿದ್ದ ಭಾರತ, 1975ರಲ್ಲಿ ಚಾಂಪಿಯನ್‌ ಆಗಿತ್ತು. ಬಳಿಕ 1978ರಿಂದ 2014ರ ವರೆಗೂ ಗುಂಪು ಹಂತದಿಂದ ಮುಂದಕ್ಕೆ ಹೋಗಿರಲಿಲ್ಲ. ಒಡಿಶಾದಲ್ಲೇ ನಡೆದ ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಆದರೆ ವಿಶ್ವ ನಂ.6 ಭಾರತ ಕಳೆದೆರಡು ವರ್ಷಗಳಲ್ಲಿ ಪ್ರೊ ಲೀಗ್‌ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. 

Hockey World Cup 2023: ಭಾರತದ ಪಂದ್ಯಗಳ ಟಿಕೆಟ್‌ ಸೋಲ್ಡೌಟ್‌

ಜ.13ರಿಂದ ಜ.29ರವರೆಗೆ ಪುರುಷರ 15ನೇ ಹಾಕಿ ವಿಶ್ವಕಪ್‌ ಟೂರ್ನಿ ನಡೆಯಲಿದೆ.. ಎಲ್ಲ 44 ಪಂದ್ಯಗಳು ಒಡಿಶಾದಲ್ಲಿ ಆಯೋಜನೆ ಮಾಡಲಾಗಿದೆ. 16 ತಂಡಗಳಿಂದ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಭಾರತ ಈವರೆಗೆ ಒಂದೇ ಬಾರಿ ಹಾಕಿ ವಿಶ್ವಕಪ್‌ ಗೆದ್ದಿಕೊಂಡಿದೆ. ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ 4 ಬಾರಿ ಚಾಂಪಿಯನ್ ಆಗಿದೆ. ಆದರೆ ಈ ಬಾರಿ ಪಾಕಿಸ್ತಾನ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

Follow Us:
Download App:
  • android
  • ios