ಹಾಕಿ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ-ಸ್ಪೇನ್‌ ಮುಖಾಮುಖಿ48 ವರ್ಷಗಳ ಬಳಿಕ ಕಪ್ ಜಯಿಸುವ ವಿಶ್ವಾಸದಲ್ಲಿ ಭಾರತ'ಡಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಅತಿಥೇಯ ಭಾರತ

ರೂರ್ಕೆಲಾ(ಜ.13): 48 ವರ್ಷಗಳ ಬಳಿಕ ಹಾಕಿ ವಿಶ್ವಕಪ್‌ ಎತ್ತಿಹಿಡಿಯುವ ನಿರೀಕ್ಷೆಯೊಂದಿಗೆ ಆತಿಥೇಯ ಭಾರತ 15ನೇ ಆವೃತ್ತಿಯ ಟೂರ್ನಿಗೆ ಕಾಲಿಡಲಿದ್ದು, ಶುಕ್ರವಾರ ‘ಡಿ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಬಿರ್ಸಾ ಮುಂಡಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿರುವ ಭಾರತ, ಈ ಬಾರಿ ತವರಿನ ಅಂಗಳದ ಲಾಭವೆತ್ತುವ ತವಕದಲ್ಲಿದೆ. 1971ರಲ್ಲಿ ಕಂಚು, 1973ರಲ್ಲಿ ಬೆಳ್ಳಿ ಗೆದ್ದಿದ್ದ ಭಾರತ, 1975ರಲ್ಲಿ ಚಾಂಪಿಯನ್‌ ಆಗಿತ್ತು. ಬಳಿಕ 1978ರಿಂದ 2014ರ ವರೆಗೂ ಗುಂಪು ಹಂತದಿಂದ ಮುಂದಕ್ಕೆ ಹೋಗಿರಲಿಲ್ಲ. 

ಒಡಿಶಾದಲ್ಲೇ ನಡೆದ ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಆದರೆ ವಿಶ್ವ ನಂ.6 ಭಾರತ ಕಳೆದೆರಡು ವರ್ಷಗಳಲ್ಲಿ ಪ್ರೊ ಲೀಗ್‌ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ.

ಪಂದ್ಯ: ಸಂಜೆ 7ಕ್ಕೆ

ಟೂರ್ನಿ ಮಾದರಿ ಹೇಗೆ?

16 ತಂಡಗಳು ಕಣಕ್ಕಳಿಯಲಿದ್ದು, ತಲಾ 4 ತಂಡಗಳಂತೆ ನಾಲ್ಕು ಗುಂಪು ರಚಿಸಲಾಗಿದೆ. ಗುಂಪು ಹಂತದಲ್ಲಿ ಪ್ರತಿ ತಂಡವು ತಲಾ 3 ಪಂದ್ಯಗಳನ್ನಾಡಲಿವೆ. ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಲಿದೆ. 2, 3ನೇ ಸ್ಥಾನ ಪಡೆಯುವ ತಂಡಗಳು ಕ್ರಾಸ್‌ ಓವರ್‌ ಪಂದ್ಯಗಳು ಅಂದರೆ ಪ್ರಿ ಕ್ವಾರ್ಟರ್‌ಗೆ ಅರ್ಹತೆ ಪಡೆಯಲಿವೆ. ಕ್ರಾಸ್‌ ಓವ​ರ್‍ಸ್ ಹಂತದಲ್ಲಿ 4 ಪಂದ್ಯಗಳು ನಡೆಯಲಿದ್ದು, ಗೆಲ್ಲುವ ತಂಡಗಳು ಕ್ವಾರ್ಟರ್‌ಗೇರಲಿವೆ. ಈ ಬಾರಿ ಕ್ವಾರ್ಟರ್‌ಗೇರದ ತಂಡಗಳು 9-16ನೇ ಸ್ಥಾನಕ್ಕಾಗಿಯೂ ಪಂದ್ಯಗಳನ್ನಾಡಲಿವೆ.

4 ಬಾರಿ ವಿಶ್ವಕಪ್‌ ಗೆದ್ದಿದ್ದ ಪಾಕಿಸ್ತಾನ ಈ ಬಾರಿ ಇಲ್ಲ!

ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದಿದ್ದ ಪಾಕಿಸ್ತಾನ ಈವರೆಗೆ 4 ಬಾರಿ ಚಾಂಪಿಯನ್‌ ಆಗಿದ್ದು, ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ 2 ಬಾರಿ ರನ್ನರ್‌-ಅಪ್‌ ಕೂಡಾ ಆಗಿರುವ ಪಾಕಿಸ್ತಾನ ಈ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿಲ್ಲ. 

ಇಂದಿನಿಂದ ಹಾಕಿ ವಿಶ್ವಕಪ್‌ ಮಹಾಕದನ..! 16 ತಂಡಗಳ ಬಲಾಬಲಗಳೇನು?

2022ರ ಏಷ್ಯಾಕಪ್‌ನಲ್ಲಿ ಜಪಾನ್‌ ವಿರುದ್ಧ ಸೋಲುವ ಮೂಲಕ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗಿತ್ತು. ಈ ಮೊದಲು 2014ರಲ್ಲೂ ತಂಡ ವಿಶ್ವಕಪ್‌ನಲ್ಲಿ ಆಡಿರಲಿಲ್ಲ. ಕಳೆದ ಆವೃತ್ತಿಯ ಟೂರ್ನಿಯಲ್ಲಿ ಪಾಲ್ಗೊಂಡಿದ್ದರೂ ಒಂದೂ ಪಂದ್ಯ ಗೆದ್ದಿರಲಿಲ್ಲ.

ವಿಶ್ವಕಪ್‌ ವೇಳಾಪಟ್ಟಿ(ಗುಂಪು ಹಂತ)

ದಿನಾಂಕ ಪಂದ್ಯ ಸಮಯ

ಜ.13 ಅರ್ಜೆಂಟೀನಾ-ದ.ಆಫ್ರಿಕಾ ಮಧ್ಯಾಹ್ನ 1ಕ್ಕೆ

ಜ.13 ಆಸ್ಪ್ರೇಲಿಯಾ-ಫ್ರಾನ್ಸ್‌ ಸಂಜೆ 3ಕ್ಕೆ

ಜ.13 ಇಂಗ್ಲೆಂಡ್‌-ವೇಲ್ಸ್‌ ಸಂಜೆ 5ಕ್ಕೆ

ಜ.13 ಭಾರತ-ಸ್ಪೇನ್‌ ಸಂಜೆ 7ಕ್ಕೆ

ಜ.14 ನ್ಯೂಜಿಲೆಂಡ್‌-ಚಿಲಿ ಮಧ್ಯಾಹ್ನ 1ಕ್ಕೆ

ಜ.14 ನೆದರ್‌ಲೆಂಡ್‌್ಸ-ಮಲೇಷ್ಯಾ ಸಂಜೆ 3ಕ್ಕೆ

ಜ.14 ಬೆಲ್ಜಿಯಂ-ಕೊರಿಯಾ ಸಂಜೆ 5ಕ್ಕೆ

ಜ.14 ಜರ್ಮನಿ-ಜಪಾನ್‌ ಸಂಜೆ 7ಕ್ಕೆ

ಜ.15 ಸ್ಪೇನ್‌-ವೇಲ್ಸ್‌ ಸಂಜೆ 5ಕ್ಕೆ

ಜ.15 ಭಾರತ-ಇಂಗ್ಲೆಂಡ್‌ ಸಂಜೆ 7ಕ್ಕೆ

ಜ.16 ಮಲೇಷ್ಯಾ-ಚಿಲಿ ಮಧ್ಯಾಹ್ನ 1ಕ್ಕೆ

ಜ.16 ನ್ಯೂಜಿಲೆಂಡ್‌-ನೆದರ್‌ಲೆಂಡ್‌್ಸ ಸಂಜೆ 3ಕ್ಕೆ

ಜ.16 ಫ್ರಾನ್ಸ್‌-ದ.ಆಫ್ರಿಕಾ ಸಂಜೆ 5ಕ್ಕೆ

ಜ.16 ಅರ್ಜೆಂಟೀನಾ-ಆಸ್ಪ್ರೇಲಿಯಾ ಸಂಜೆ 7ಕ್ಕೆ

ಜ.17 ಕೊರಿಯಾ-ಜಪಾನ್‌ ಸಂಜೆ 5ಕ್ಕೆ

ಜ.17 ಜರ್ಮನಿ-ಬೆಲ್ಜಿಯಂ ಸಂಜೆ 7ಕ್ಕೆ

ಜ.19 ಮಲೇಷ್ಯಾ-ನ್ಯೂಜಿಲೆಂಡ್‌ ಮಧ್ಯಾಹ್ನ 1ಕ್ಕೆ

ಜ.19 ನೆದರ್‌ಲೆಂಡ್‌್ಸ-ಚಿಲಿ ಸಂಜೆ 3ಕ್ಕೆ

ಜ.19 ಸ್ಪೇನ್‌-ಇಂಗ್ಲೆಂಡ್‌ ಸಂಜೆ 5ಕ್ಕೆ

ಜ.19 ಭಾರತ-ವೇಲ್ಸ್‌ ಸಂಜೆ 7ಕ್ಕೆ

ಜ.20 ಆಸ್ಪ್ರೇಲಿಯಾ-ದ.ಆಫ್ರಿಕಾ ಮಧ್ಯಾಹ್ನ 1ಕ್ಕೆ

ಜ.20 ಫ್ರಾನ್ಸ್‌-ಅರ್ಜೆಂಟೀನಾ ಸಂಜೆ 3ಕ್ಕೆ

ಜ.20 ಬೆಲ್ಜಿಯಂ-ಜಪಾನ್‌ ಸಂಜೆ 5ಕ್ಕೆ

ಜ.20 ಕೊರಿಯಾ-ಜರ್ಮನಿ ಸಂಜೆ 7ಕ್ಕೆ