FIH Pro League Hockey ‌: ಭಾರತಕ್ಕೆ ಇಂದು ಜರ್ಮನಿ ಸವಾಲು

* ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿಂದು ಭಾರತಕ್ಕೆ ಜರ್ಮನಿ ಎದುರಾಳಿ

* ಅಗ್ರಸ್ಥಾನದಲ್ಲೇ ಮುಂದುವರಿಯಲು ಎದುರು ನೋಡುತ್ತಿದೆ ಭಾರತ ಹಾಕಿ ತಂಡ

* 2ನೇ ಸ್ಥಾನದಲ್ಲಿರುವ ಜರ್ಮನಿ, 12 ಹೊಸ ಆಟಗಾರರೊಂದಿಗೆ ಭಾರತಕ್ಕೆ ಆಗಮಿಸಿದೆ

FIH Pro League Indian Hockey Team take on Germany in Bhubaneswar kvn

ಭುವನೇಶ್ವರ(ಏ.14): ಅನುಭವಿಗಳ ದಂಡನ್ನೇ ಹೊಂದಿರುವ ಭಾರತ ಪುರುಷರ ಹಾಕಿ ತಂಡ (Indian Men's Hockey Team), ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ (FIH Pro League) ಗುರುವಾರ, ಶುಕ್ರವಾರ ಜರ್ಮನಿ ವಿರುದ್ಧ ಸೆಣಸಲಿದೆ. 10 ಪಂದ್ಯಗಳಲ್ಲಿ 21 ಅಂಕ ಗಳಿಸಿರುವ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಅಂಕಗಳನ್ನು ಹೆಚ್ಚಿಸಿಕೊಂಡು ಅಗ್ರಸ್ಥಾನದಲ್ಲೇ ಮುಂದುವರಿಯಲು ಎದುರು ನೋಡುತ್ತಿದೆ. 8 ಪಂದ್ಯಗಳಿಂದ 17 ಅಂಕ ಗಳಿಸಿ 2ನೇ ಸ್ಥಾನದಲ್ಲಿರುವ ಜರ್ಮನಿ, 12 ಹೊಸ ಆಟಗಾರರೊಂದಿಗೆ ಭಾರತಕ್ಕೆ ಆಗಮಿಸಿದೆ. ಹೀಗಾಗಿ ಭಾರತ ಈ ಮುಖಾಮುಖಿಯಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ(Paris Olympics) ಮುನ್ನ ತನ್ನ ಬೆಂಚ್‌ ಸಾಮರ್ಥ್ಯವನ್ನು ಪರೀಕ್ಷಿಸಲು ಜರ್ಮನಿ ಈ ಪ್ರವಾಸವನ್ನು ಬಳಸಿಕೊಳ್ಳುವುದಾಗಿ ತಿಳಿಸಿದೆ. ತಂಡದ ಪ್ರಮುಖ ಆಟಗಾರರು ಕ್ಲಬ್‌ ಪಂದ್ಯಗಳನ್ನು ಆಡುತ್ತಿರುವುದು ಸಹ ಯುವ ಆಟಗಾರರೊಂದಿಗೆ ಆಗಮಿಸಲು ಕಾರಣ. ಈ ಎರಡು ಪಂದ್ಯಗಳು ಭಾರತ ತಂಡಕ್ಕೆ ತವರಿನಲ್ಲಿ ಕೊನೆ ಪಂದ್ಯಗಳೆನಿಸಿವೆ. ಇನ್ನುಳಿದ ಪಂದ್ಯಗಳನ್ನು ಭಾರತ ವಿದೇಶಗಳಲ್ಲಿ ಆಡಬೇಕಿದೆ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಟೆನಿಸ್‌: ಫ್ರೆಂಚ್‌ ಓಪನ್‌ಗೆ ಸಿದ್ಧತೆ ಆರಂಭಿಸಿದ ಜೋಕೋಗೆ ಹಿನ್ನಡೆ

ಮೊನಾಕೊ: ಕೋವಿಡ್‌ ಲಸಿಕೆ ಪಡೆಯದೆ ವಿವಾದಕ್ಕೆ ಗುರಿಯಾಗಿರುವ 20 ಗ್ರ್ಯಾನ್‌ ಸ್ಲಾಂಗಳ ಒಡೆಯ, ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ (Novak djokovic) ಮುಂದಿನ ತಿಂಗಳು ನಡೆಯಲಿರುವ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂನಲ್ಲಿ (French Open Grandslam) ಕಣಕ್ಕಿಳಿಯಲು ಸಿದ್ಧತೆ ಆರಂಭಿಸಿದ್ದಾರೆ. ಆದರೆ ಅವರಿಗೆ ಹಿನ್ನಡೆ ಉಂಟಾಗಿದೆ. 

Kuldeep Yadav: ಇದು ಅವಮಾನ ಮೆಟ್ಟಿನಿಂತ ಛಲಗಾರ ಸ್ಟೋರಿ

ಮಾಂಟೆ ಕಾರ್ಲೊ ಮಾಸ್ಟ​ರ್ಸ್‌ ಟೂರ್ನಿಯ 2ನೇ ಸುತ್ತಿನಲ್ಲಿ ಅವರು ಸ್ಪೇನ್‌ನ ಆಲಿಯಾಂಡ್ರೊ ಫೆಕಿನಾ ವಿರುದ್ಧ 3-6, 7-5, 1-6 ಸೆಟ್‌ಗಳಲ್ಲಿ ಸೋಲು ಅನುಭವಿಸಿದರು. ಫೆಬ್ರವರಿಯಲ್ಲಿ ದುಬೈ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದ ಜೋಕೋ ಆ ಬಳಿಕ ಇದೇ ಮೊದಲ ಬಾರಿಗೆ ವೃತ್ತಿಪರ ಟೂರ್ನಿಯೊಂದರಲ್ಲಿ ಕಣಕ್ಕಿಳಿದಿದ್ದರು.

ಭಾರತದ 3 ನಗರಗಳಲ್ಲಿ ಫಿಫಾ ಅಂಡರ್‌-17 ವಿಶ್ವಕಪ್‌

ಮುಂಬೈ: ಕೋವಿಡ್‌ನಿಂದಾಗಿ ಮುಂದೂಡಿಕೆಯಾಗಿದ್ದ 2020ರ ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವಕಪ್‌ ಈ ವರ್ಷ ಅಕ್ಟೋಬರ್‌ 11ರಿಂದ 30ರ ವರೆಗೂ ಭಾರತದಲ್ಲಿ ನಡೆಯಲಿದೆ. ಪಂದ್ಯಗಳಿಗೆ ಭುವನೇಶ್ವರ, ಗೋವಾ ಹಾಗೂ ನವಿ ಮುಂಬೈ ಆತಿಥ್ಯ ವಹಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಟೂರ್ನಿಯಲ್ಲಿ ಭಾರತ, ಬ್ರೆಜಿಲ್‌, ಚೀನಾ, ಜಪಾನ್‌, ನ್ಯೂಜಿಲೆಂಡ್‌, ಚಿಲಿ ಹಾಗೂ ಕೊಲಂಬಿಯಾ ಆಡುವುದು ಖಚಿತವಾಗಿದ್ದು, ಇನ್ನೂ 10 ಸ್ಥಾನಗಳು ಖಾಲಿ ಇವೆ. ಜೂ.24ರಂದು ಟೂರ್ನಿಯ ಡ್ರಾ ನಡೆಯಲಿದೆ.

ಮಹಿಳಾ ಲೈನ್‌ ಅಂಪೈರ್‌ಗೆ ತಲೆಯಲ್ಲಿ ಗುದ್ದಿದ ಕೋಚ್‌!

ನೊವಾ ವೆನಿಸಿಯಾ(ಬ್ರೆಜಿಲ್‌): ರೆಫ್ರಿಗಳ ಜೊತೆ ವಾಗ್ವಾದ ನಡೆಸುವ ವೇಳೆ ಮಹಿಳಾ ಲೈನ್‌ ಅಂಪೈರ್‌ ಮಧ್ಯಪ್ರವೇಶಿದ್ದಕ್ಕೆ ಅವರಿಗೆ ಕೋಚ್‌ ಒಬ್ಬರು ತಲೆಯಲ್ಲಿ ಗುದ್ದಿ ಗಾಯಗೊಳಿಸಿದ ಘಟನೆ ಬ್ರೆಜಿಲ್‌ನ ದೇಸಿ ಫುಟ್ಬಾಲ್‌ ಟೂರ್ನಿಯಲ್ಲಿ ನಡೆದಿದೆ. ನೊವಾ ವೆನಿಸಿಯಾ ವಿರುದ್ಧದ ಪಂದ್ಯದ ವೇಳೆ ಡೆಸ್ಪೋರ್ಟಿವಾ ತಂಡದ ಕೋಚ್‌ ರಾಫೆಲ್‌ ಸೊರಿಯಾನೊ, ಲೈನ್‌ ಅಂಪೈರ್‌ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾಗಿ ಡೆಸ್ಪೋರ್ಟಿವಾ ಕ್ಲಬ್‌ ಮಾಹಿತಿ ನೀಡಿದೆ.

ರೇಕಾವಿಕ್‌ ಚೆಸ್‌ ಟೂರ್ನಿ ಗೆದ್ದ 16ರ ಪ್ರಜ್ಞಾನಂದ

ರೇಕಾವಿಕ್‌(ಐಸ್‌ಲ್ಯಾಂಡ್‌): ಭಾರತದ 16 ವರ್ಷದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ಪ್ರತಿಷ್ಠಿತ ರೇಕಾವಿಕ್‌ ಓಪನ್‌ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಮಂಗಳವಾರ ನಡೆದ ಅಂತಿಮ ಸುತ್ತಿನಲ್ಲಿ ಭಾರತದವರೇ ಆದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ವಿರುದ್ಧ ಜಯಗಳಿಸಿದರು. 9 ಸುತ್ತುಗಳಲ್ಲಿ ಅಜೇಯರಾಗಿ ಉಳಿದ ಪ್ರಜ್ಞಾನಂದ ಒಟ್ಟು 7.5 ಅಂಕ ಗಳಿಸಿ ವಿಜೇತರಾಗಿ ಹೊರಹೊಮ್ಮಿದರು.

Latest Videos
Follow Us:
Download App:
  • android
  • ios