Asianet Suvarna News Asianet Suvarna News

ಕಿರಿಯರ ಹಾಕಿ ವಿಶ್ವಕಪ್: ಕಂಚು ಕೈಚೆಲ್ಲಿದ ಭಾರತ

ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ 1-3 ಗೋಲುಗಳ ಸೋಲು ಎದುರಾಯಿತು. ಈ ಹಿಂದಿನ ಆವೃತ್ತಿಯಲ್ಲೂ ಭಾರತ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇನ್ನು ಫೈನಲಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಜರ್ಮನಿ ಚಾಂಪಿಯನ್ ಆಗಿ ಹೊರಹೊಮ್ಮಿತು.

FIH Junior Hockey World Cup 2023 Indian colts lose bronze to Spain kvn
Author
First Published Dec 17, 2023, 12:14 PM IST

ಕೌಲಾಲಂಪುರ(ಡಿ.17): ಕಿರಿಯರ ಹಾಕಿ ವಿಶ್ವಕಪ್‌ನಿಂದ ಭಾರತ ಬರಿಗೈನಲ್ಲಿ ವಾಪಸಾಗಲಿದೆ. ಸೆಮಿಫೈನಲ್‌ನಲ್ಲಿ ಹೀನಾಯ ಸೋಲು ಅನುಭವಿಸಿ ಪ್ರಶಸ್ತಿ ಸುತ್ತಿಗೇರುವ ಅವಕಾಶ ಕಳೆದುಕೊಂಡಿದ್ದ ಭಾರತ, ಶನಿವಾರ ಕಂಚಿನ ಪದಕದ ಪಂದ್ಯದಲ್ಲೂ ಸೋಲುಂಡಿತು. 

ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ 1-3 ಗೋಲುಗಳ ಸೋಲು ಎದುರಾಯಿತು. ಈ ಹಿಂದಿನ ಆವೃತ್ತಿಯಲ್ಲೂ ಭಾರತ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇನ್ನು ಫೈನಲಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಜರ್ಮನಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬಿಎಫ್‌ಸಿಗೆ ಎರಡನೇ ಜಯ

ಬೆಂಗಳೂರು: 10ನೇ ಆವೃತ್ತಿಯ ಐಎಸ್‌ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಎರಡನೇ ಜಯ ಸಾಧಿಸಿದೆ. ಶನಿವಾರ ಜಮ್ಷೆಡ್‌ಪುರ ಎಫ್‌ಸಿ ವಿರುದ್ದ 1-0 ಜಯ ಪಡೆಯಿತು. 11 ಪಂದ್ಯಗಳಲ್ಲಿ 2 ಜಯದೊಂದಿಗೆ ಬಿಎಫ್‌ಸಿ 9ನೇ ಸ್ಥಾನದಲ್ಲಿದೆ.

ಪ್ಯಾರಾ ಖೇಲೋ: ಟಿಟಿಯಲ್ಲಿ ರಾಜ್ಯಕ್ಕೆ ಎರಡು ಕಂಚಿನ ಪದಕ

ನವದೆಹಲಿ: ಚೊಚ್ಚಲ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಮತ್ತೆರಡು ಕಂಚಿನ ಪದಕಗಳು ದೊರೆತಿವೆ. ಪ್ಯಾರಾ ಟೇಬಲ್ ಟೆನಿಸ್‌ನ ಮಹಿಳೆಯರ ವೀಲ್ಹ್‌ಚೇರ್ 1-3 ವಿಭಾಗದಲ್ಲಿ ಡಾ. ಎಸ್.ಜಿ. ರಾಜಲಕ್ಷ್ಮಿ ಹಾಗೂ ಮಹಿಳೆಯರ ವೀಲ್ಹ್‌ಚೇರ್-4 ವಿಭಾಗದಲ್ಲಿ ಲಲಿತಾ ಶಂಕರ್ ಕಂಚಿನ ಪದಕ ಪಡೆದಿದ್ದಾರೆ. 

ದಕ್ಷಿಣ ಆಫ್ರಿಕಾ ಒನ್‌ಡೇ ಚಾಲೆಂಜ್‌ಗೆ ಟೀಂ ಇಂಡಿಯಾ ರೆಡಿ, ಇಂದು ಮೊದಲ ಪಂದ್ಯ

ಕ್ರೀಡಾಕೂಟದಲ್ಲಿ ಕರ್ನಾಟಕ 6 ಚಿನ್ನ, 8 ಬೆಳ್ಳಿ, 10 ಕಂಚಿನೊಂದಿಗೆ ಒಟ್ಟು 24 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ತಲಾ 38 ಚಿನ್ನ, ಬೆಳ್ಳಿ, 24 ಕಂಚಿನೊಂದಿಗೆ ಒಟ್ಟು 100 ಪದಕ ಗೆದ್ದಿರುವ ಹರ್ಯಾಣ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾನುವಾರ ಕೂಟಕ್ಕೆ ತೆರೆ ಬೀಳಲಿದೆ.

ಪ್ರೊ ಕಬಡ್ಡಿ ಲೀಗ್: ತೆಲುಗು ಟೈಟಾನ್ಸ್‌ಗೆ ಸತತ 5ನೇ ಸೋಲು

ಪುಣೆ: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ತಾರಾ ರೈಡರ್ ಪವನ್ ಶೆರಾವತ್ ನಾಯಕತ್ವದ ತೆಲುಗು ಟೈಟಾನ್ಸ್ ಸತತ 5ನೇ ಸೋಲು ಕಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 40-51 ಅಂಕಗಳ ಸೋಲುಂಡಿತು. ಡೆಲ್ಲಿಗಿದು ಈ ಆವೃತ್ತಿಯಲ್ಲಿ 2ನೇ ಜಯ. 

Breaking News: ಮುಂಬೈ ಇಂಡಿಯನ್ಸ್ ಸೇರುವ ಮುನ್ನ ಒಂದು ಕಂಡೀಷನ್ ಹಾಕಿದ್ದ ಪಾಂಡ್ಯ..!

14 ರೈಡ್ ಅಂಕ ಗಳಿಸಿದರೂ, ಪವನ್ ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ನಾಯಕನಿಗೆ ಉಳಿದ್ಯಾವ ರೈಡರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಇಡೀ ಪಂದ್ಯದಲ್ಲಿ ಟೈಟಾನ್ಸ್‌ನ ರಕ್ಷಣಾ ಪಡೆ ಕೇವಲ 7ಅಂಕ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ಆಶು ಮಲಿಕ್ 16, ನಾಯಕ ನವೀನ್ 14 ಅಂಕ ಹೆಕ್ಕಿದರು. 

ಪುಣೇರಿಗೆ ಗೆಲುವು: 

ಶನಿವಾರ ಮೊದಲ ಪಂದ್ಯದಲ್ಲಿ ಅತಿಥೇಯ ಪುಣೇರಿ ಪಲ್ಟನ್ 49-19ರಲ್ಲಿ ಬೆಂಗಾಲ್ ವಾರಿಯರ್ಸ್‌ ವಿರುದ್ಧ ಜಯಭೇರಿ ಬಾರಿಸಿತು. ಪಂದ್ಯದಲ್ಲಿ ಒಟ್ಟು 24 ಟ್ಯಾಕಲ್ ಅಂಕಗಳನ್ನು ಪಡೆದ ಪುಣೆ, ಪ್ರೊ ಕಬಡ್ಡಿ ಪಂದ್ಯವೊಂದರಲ್ಲಿ ಅತಿಹೆಚ್ಚು ಟ್ಯಾಕಲ್ ಅಂಕ ಪಡೆದ ತಂಡ ಎನ್ನುವ ದಾಖಲೆ ಬರೆಯಿತು.

ಇಂದಿನ ಪಂದ್ಯಗಳು:

ಪಾಟ್ನಾ-ಜೈಪುರ, ರಾತ್ರಿ8ಕ್ಕೆ

ಯು ಮುಂಬಾ-ತಲೈವಾಸ್, ರಾತ್ರಿ 9ಕ್ಕೆ
 

Follow Us:
Download App:
  • android
  • ios