FIH Pro League Hockey: ಭಾರ​ತ​ಕ್ಕೆ ಇಂದು ಹಾಲಿ ಚಾಂಪಿಯನ್‌ ಡಚ್‌ ಸವಾ​ಲು

ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿ​ಯಲ್ಲಿ ಭಾರತಕ್ಕೆ ಆತಿಥೇಯ ನೆದರ್‌ಲೆಂಡ್ಸ್ ಸವಾಲು
ಮೊದಲ ಮುಖಾ​ಮುಖಿ​ಯ​ಲ್ಲಿ ಭಾರತ 1-4 ಗೋಲು​ಗ​ಳಿಂದ ಸೋಲ​ನು​ಭ​ವಿ​ಸಿತ್ತು
ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ

FIH Hockey Pro League India take on Defending Champion Netherlands kvn

ಐಂಡ್‌​ಹೊ​ವೆ​ನ್‌​(​ನೆ​ದ​ರ್‌​ಲೆಂಡ್‌್ಸ​): ಪ್ರೊ ಲೀಗ್‌ ಹಾಕಿ ಟೂರ್ನಿ​ಯಲ್ಲಿ ಭಾರತ ತಂಡಕ್ಕೆ ಶನಿ​ವಾರ ಮತ್ತೆ ನೆದ​ರ್‌​ಲೆಂಡ್‌್ಸ ಸವಾಲು ಎದು​ರಾ​ಗ​ಲಿದೆ. ಹಾಲಿ ಚಾಂಪಿ​ಯನ್‌ ನೆದ​ರ್‌​ಲೆಂಡ್‌್ಸ ವಿರುದ್ಧ ಬುಧ​ವಾರದ ಮೊದಲ ಮುಖಾ​ಮುಖಿ​ಯ​ಲ್ಲಿ ಭಾರತ 1-4 ಗೋಲು​ಗ​ಳಿಂದ ಸೋಲ​ನು​ಭ​ವಿ​ಸಿತ್ತು. 

ಇದರ ಹೊರ​ತಾ​ಗಿಯೂ ಸದ್ಯ ಭಾರತ 14 ಪಂದ್ಯ​ಗ​ಳಲ್ಲಿ 27 ಅಂಕ​ಗ​ಳೊಂದಿಗೆ ಅಗ್ರ​ಸ್ಥಾನದಲ್ಲಿದ್ದು, ಡಚ್‌ ಪಡೆ ವಿರುದ್ಧ ಸೇಡು ತೀರಿ​ಸಿ​ಕೊ​ಳ್ಳು​ವು​ದರ ಜೊತೆಗೆ ಅಗ್ರ​ಸ್ಥಾನ ಭದ್ರ​ಪ​ಡಿ​ಸಿ​ಕೊ​ಳ್ಳುವ ನಿರೀ​ಕ್ಷೆ​ಯ​ಲ್ಲಿದೆ. ಈ ಬಾರಿ ಟೂರ್ನಿ​ಯಲ್ಲಿ ನೆದ​ರ್‌​ಲೆಂಡ್‌್ಸ ಕೇವಲ 5 ಪಂದ್ಯ​ಗ​ಳ​ನ್ನಾ​ಡಿದ್ದು, 8 ಅಂಕ​ಗ​ಳೊಂದಿಗೆ 8ನೇ ಸ್ಥಾನ​ದ​ಲ್ಲಿದೆ.

ಮಹಿಳಾ ಹಾಕಿ: ಇಂದು ಭಾರ​ತ-ಜಪಾನ್‌ ಸೆಮೀ​ಸ್‌

ಕಾಕ​ಮಿ​ಗ​ಹ​ರಾ​(​ಜ​ಪಾ​ನ್‌​): 8ನೇ ಆವೃ​ತ್ತಿಯ ಕಿರಿಯ ಮಹಿ​ಳೆ​ಯರ ಏಷ್ಯಾ​ಕಪ್‌ ಹಾಕಿ ಟೂರ್ನಿ​ಯ ಮೊದಲ ಸೆಮಿ​ಫೈ​ನ​ಲ್‌​ನಲ್ಲಿ ಭಾರತ ತಂಡ ಜಪಾನ್‌ ವಿರುದ್ಧ ಸೆಣ​ಸಲಿದೆ. ಈ ಪಂದ್ಯ​ದಲ್ಲಿ ಗೆದ್ದರೆ ಭಾರತ ಟೂರ್ನಿಯ ಇತಿ​ಹಾ​ಸ​ದಲ್ಲಿ 2ನೇ ಬಾರಿ ಫೈನ​ಲ್‌​ಗೇ​ರು​ವು​ದರ ಜೊತೆಗೆ, ವರ್ಷಾಂತ್ಯ​ದಲ್ಲಿ ಚಿಲಿ​ಯಲ್ಲಿ ನಡೆ​ಯ​ಲಿ​ರುವ ಎಫ್‌​ಐ​ಎಚ್‌ ಕಿರಿಯರ ಮಹಿಳಾ ವಿಶ್ವ​ಕ​ಪ್‌ಗೆ ಅರ್ಹತೆ ಪಡೆಯಲಿದೆ. 

ರೆಸ್ಲ​ರ್‌​ಗಳ ಆರೋಪ ನಿಜ, ಬ್ರಿಜ್‌ರ ಅಸ​ಭ್ಯ ವರ್ತ​ನೆ​ಯನ್ನು ಕಣ್ಣಾರೆ ಕಂಡಿ​ದ್ದೇನೆ ಎಂದ ಅಂತಾರಾಷ್ಟ್ರೀಯ ರೆಫ್ರಿ!

ಭಾರತ ಈ ಬಾರಿ ಟೂರ್ನಿ​ಯಲ್ಲಿ ಅಜೇ​ಯವಾಗಿ ಉಳಿ​ದಿದ್ದು, 3 ಜಯ, 1 ಡ್ರಾದೊಂದಿಗೆ ‘ಎ’ ಗುಂಪಿ​ನಲ್ಲಿ ಅಗ್ರ​ಸ್ಥಾ​ನಿ​ಯಾ​ಗಿತ್ತು. ಅತ್ತ ಜಪಾನ್‌ 4 ಪಂದ್ಯ​ದಲ್ಲಿ 9 ಅಂಕ​ದೊಂದಿಗೆ ‘ಬಿ’ ಗುಂಪಿ​ನಲ್ಲಿ 2ನೇ ಸ್ಥಾನಿ​ಯಾ​ಗಿ ಉಪಾಂತ್ಯ ತಲು​ಪಿದೆ. ಶನಿ​ವಾ​ರದ ಮತ್ತೊಂದು ಸೆಮೀ​ಸ್‌​ನಲ್ಲಿ ಚೀನಾ-ದ.ಕೊ​ರಿಯಾ ಸೆಣ​ಸಾ​ಡ​ಲಿವೆ.

ಪಂದ್ಯ: ರಾತ್ರಿ 9.10ಕ್ಕೆ

ಫುಟ್ಬಾ​ಲ್‌: ಮಂಗೋ​ಲಿ​ಯಾ ವಿರುದ್ಧ ಭಾರ​ತಕ್ಕೆ 2-0 ಜಯ

ಭುವ​ನೇ​ಶ್ವ​ರ: ಮುಂಬ​ರುವ ಸ್ಯಾಫ್‌ ಚಾಂಪಿ​ಯ​ನ್‌​ಶಿ​ಪ್‌ನ ನಡೆ​ಯು​ತ್ತಿ​ರುವ 3ನೇ ಆವೃ​ತ್ತಿಯ ಇಂಟರ್‌ ಕಾಂಟಿ​ನೆಂಟಲ್‌ ಫುಟ್ಬಾಲ್‌ ಟೂರ್ನಿ​ಯಲ್ಲಿ ಆತಿ​ಥೇಯ ಭಾರತ ಶುಭಾ​ರಂಭ ಮಾಡಿದೆ. ಶುಕ್ರ​ವಾರ ಮಂಗೋ​ಲಿಯಾ ವಿರು​ದ್ಧದ ಪಂದ್ಯ​ದಲ್ಲಿ ಭಾರತ 2-0 ಗೆಲುವು ದಾಖ​ಲಿ​ಸಿತು.

ಪಂದ್ಯದ 2ನೇ ನಿಮಿ​ಷ​ದಲ್ಲೇ ಸಹಲ್‌ ಅಬ್ದುಲ್‌ ಸಮದ್‌ ಬಾರಿ​ಸಿದ ಗೋಲಿ​ನಿಂದಾಗಿ ಭಾರತ ಮುನ್ನಡೆ ಸಾಧಿ​ಸಿತು. ಲಾಲಿ​ಯ​ನ್ಜು​ವಾಲಾ ಚಾಂಗ್ಟೆ14ನೇ ನಿಮಿ​ಷ​ದಲ್ಲಿ ಹೊಡೆದ ಆಕ​ರ್ಷಕ ಗೋಲಿನ ಬಳಿಕ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿ​ಸಿದ ಭಾರತ ಗೆಲು​ವನ್ನು ತನ್ನತ್ತ ಒಲಿ​ಸಿ​ಕೊಂಡಿತು. ಭಾರತ ತನ್ನ 2ನೇ ಪಂದ್ಯ​ದಲ್ಲಿ ಸೋಮ​ವಾರ ವಾನ​ವಾ​ಟು ವಿರುದ್ಧ ಸೆಣ​ಸಾ​ಡ​ಲಿದ್ದು, ಲೆಬ​ನಾನ್‌ ವಿರು​ದ್ಧದ ಕೊನೆ ಪಂದ್ಯ ಜೂ.15ಕ್ಕೆ ನಿಗ​ದಿ​ಯಾ​ಗಿದೆ. 4 ತಂಡ​ಗಳ ಟೂರ್ನಿ​ಯಲ್ಲಿ ಅಗ್ರ 2 ತಂಡ​ಗಳು ಫೈನಲ್‌ ಪ್ರವೇ​ಶಿ​ಸ​ಲಿವೆ.

ಕಿರಿ​ಯರ ಶೂಟಿಂಗ್‌ ವಿಶ್ವ​ಕ​ಪ್‌: 15 ಪದ​ಕ ಗೆದ್ದ ಭಾರ​ತೀ​ಯ​ರು

ಸಹ್‌್ಲ​(​ಜ​ರ್ಮ​ನಿ​): ಐಎ​ಸ್‌​ಎ​ಸ್‌​ಎಫ್‌ ಜೂನಿ​ಯರ್‌ ಶೂಟಿಂಗ್‌ ವಿಶ್ವ​ಕ​ಪ್‌​ನಲ್ಲಿ ಭಾರತ 15 ಪದ​ಕ​ಗ​ಳೊಂದಿಗೆ ಅಗ್ರ​ಸ್ಥಾ​ನಿ​ಯಾಗಿ ಅಭಿ​ಯಾನ ಕೊನೆ​ಗೊ​ಳಿ​ಸಿದೆ. ಭಾರ​ತ ಕೂಟ​ದಲ್ಲಿ 6 ಚಿನ್ನ, 6 ಬೆಳ್ಳಿ ಹಾಗೂ 3 ಕಂಚಿನ ಪದ​ಕ​ಗ​ಳನ್ನು ತನ್ನ​ದಾ​ಗಿ​ಸಿ​ಕೊಂಡಿತು. ಕೊನೆ ದಿನವಾದ ಗುರು​ವಾರ ಪುರು​ಷರ 25 ಮೀ. ರಾರ‍ಯಪಿಡ್‌ ಫೈರ್‌ ಪಿಸ್ತೂಲ್‌ ವಿಭಾ​ಗ​ದಲ್ಲಿ ಸಮೀರ್‌, ರಾಜ್‌​ಕ​ನ್ವಾರ್‌ ಸಿಂಗ್‌ ಹಾಗೂ ಜತಿನ್‌ ಜೋಡಿ ಬೆಳ್ಳಿ ಪಡೆ​ಯಿತು. ಕೊರಿಯಾ 12 ಪದ​ಕ​ಗ​ಳೊಂದಿಗೆ ಪಟ್ಟಿ​ಯ​ಲ್ಲಿ 2ನೇ ಸ್ಥಾನ ಪಡೆ​ದರೆ, ಅಮೆ​ರಿಕ 9 ಪದಕ ಗೆದ್ದು 3ನೇ ಸ್ಥಾನಿ​ಯಾ​ಯಿ​ತು.

ಕಿರಿಯರ ಬ್ಯಾಡ್ಮಿಂಟನ್‌: ರಾಜ್ಯದ ನಾಲ್ವರು ಆಯ್ಕೆ

ನವದೆಹಲಿ: ಜು.7ರಿಂದ 16ರ ವರೆಗೂ ಇಂಡೋನೇಷ್ಯಾದಲ್ಲಿ ನಡೆಯಲಿರುವ ಕಿರಿಯರ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ಗೆ 20 ಸದಸ್ಯರ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ನಾಲ್ವರು ಶಟ್ಲರ್‌ಗಳು ಆಯ್ಕೆಯಾಗಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗಕ್ಕೆ ಆಯುಷ್‌ ಶೆಟ್ಟಿ, ಪುರುಷರ ಡಬಲ್ಸ್‌ಗೆ ನಿಕೋಲಸ್‌ ನೇಥನ್‌ ರಾಜ್‌ ಹಾಗೂ ತುಷಾರ್‌ ಸುವೀರ್‌, ಮಹಿಳಾ ಡಬಲ್ಸ್‌ಗೆ ಕಾರ್ಣಿಕಾ ಶ್ರೀ ಆಯ್ಕೆಯಾಗಿದ್ದಾರೆ.

Latest Videos
Follow Us:
Download App:
  • android
  • ios