ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ದಿಲೀಪ್ ಟಿರ್ಕೆ ಅವಿರೋಧ ಆಯ್ಕೆಭಾರತ ಹಾಕಿ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದ ದಿಲೀಪ್ ಈಗ ಹಾಕಿ ಇಂಡಿಯಾ ಅಧ್ಯಕ್ಷಹಾಕಿ ಇಂಡಿಯಾ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಆಟಗಾರ ದಿಲೀಪ್ ಟಿರ್ಕೆ
ನವದೆಹಲಿ(ಸೆ.24): ಭಾರತದ ಮಾಜಿ ನಾಯಕ ದಿಲೀಪ್ ಟಿರ್ಕೆ ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯು ಅಕ್ಟೋಬರ್ 1ರಂದು ನಡೆಯಬೇಕಿತ್ತು. ಆದರೆ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಶುಕ್ರವಾರವೇ ಫಲಿತಾಂಶವನ್ನು ಪ್ರಕಟಿಸಲಾಯಿತು.
ಉತ್ತರ ಪ್ರದೇಶ ಹಾಕಿ ಸಂಸ್ಥೆಯ ಮುಖ್ಯಸ್ಥ ರಾಕೇಶ್ ಕಟ್ಯಾಲ್ ಹಾಗೂ ಹಾಕಿ ಜಾರ್ಖಂಡ್‌ನ ಭೋಲಾ ನಾಥ್ ಸಿಂಗ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರಾದರೂ ಶುಕ್ರವಾರ ತಮ್ಮ ನಾಮಪತ್ರವನ್ನು ವಾಪಸ್ ಪಡೆದರು. ಈ ಹಿನ್ನೆಲೆಯಲ್ಲಿ ದಿಲೀಪ್ ಅವಿರೋಧವಾಗಿ ಆಯ್ಕೆಯಾದರು. ಭೋಲಾ ನಾಥ್ ಪ್ರಧಾನ ಕಾರ‍್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ಟಿರ್ಕೆ ಹಾಗೂ ಅವರ ತಂಡದ ಆಯ್ಕೆಗಳನ್ನು ಒಪ್ಪಿಕೊಂಡಿದೆ. ಕರ್ನಾಟಕದ ವಿ.ಎಸ್.ಸುಬ್ರಮಣ್ಯ ಗುಪ್ತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
2023ರ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂಗೂ ಜೋಕೋ ಇಲ್ಲ?
ಲಂಡನ್: ಕೋವಿಡ್ ಲಸಿಕೆ ಪಡೆಯದ ಕಾರಣ ಈ ವರ್ಷ ಆರಂಭದಲ್ಲಿ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ದಿಗ್ಗಜ ಟೆನಿಸಿಗ ನೋವಾಕ್ ಜೋಕೋವಿಚ್, 2023ರ ಟೂರ್ನಿಯಲ್ಲೂ ಆಡುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆಸ್ಪ್ರೇಲಿಯಾಗೆ ಕಾಲಿಡಲು ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯ ಎನ್ನುವ ನಿಯಮ ಮುಂದುವರಿದರೆ, ಜೋಕೋವಿಚ್ ಮುಂದಿನ ವರ್ಷದ ಟೂರ್ನಿಯನ್ನೂ ತಪ್ಪಿಸಿಕೊಳ್ಳಬೇಕಾಗುತ್ತದೆ.
Laver Cup 2022 ಟೆನಿಸ್ ತಾರೆಯರ ಜತೆ ಡಿನ್ನರ್ ಪಾರ್ಟಿ ಮಾಡಿದ ರೋಜರ್ ಫೆಡರರ್..!
ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಬಿಯಾ ಆಟಗಾರ, ‘ಆಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ನನ್ನ ಕೈಯಲ್ಲಿಲ್ಲ. ಒಳ್ಳೆಯ ಸುದ್ದಿ ಸಿಗಬಹುದು ಎಂದುಕೊಂಡಿದ್ದೇನೆ’ ಎಂದಿದ್ದಾರೆ. ಈ ವರ್ಷ ಆಸ್ಟ್ರೇಲಿಯಾಗೆ ಬಂದಿಳಿದಿದ್ದ ಜೋಕೋವಿಚ್‌ರನ್ನು ಏರ್‌ಪೋರ್ಟ್‌ನಲ್ಲೇ ತಡೆ ಹಿಡಿದು ಬಳಿಕ ಅವರನ್ನು ಗಡಿಪಾರು ಮಾಡಲಾಗಿತ್ತು. ಹೀಗಾಗಿ ಜೋಕೋವಿಚ್ ಭಾರೀ ಮುಜುಗರಕ್ಕೆ ಒಳಗಾಗಿದ್ದರು.
ಐಒಎ ಸಂವಿಧಾನ ತಿದ್ದುಪಡಿ ಹೊಣೆ ನ್ಯಾ.ರಾವ್ ಹೆಗಲಿಗೆ
ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಯ ಸಂವಿಧಾನವನ್ನು ತಿದ್ದುಪಡಿ ಮಾಡಿ, ಈ ವರ್ಷ ಡಿಸೆಂಬರ್ 15ರ ಒಳಗೆ ಚುನಾವಣೆ ನಡೆಸಲು ವ್ಯವಸ್ಥೆ ಮಾಡುವಂತೆ ಸೂಚಿಸಿ ಸುಪ್ರೀಂ ಕೋರ್ಚ್‌ನ ನಿವೃತ್ತ ನ್ಯಾಯಮೂರ್ತಿ ಎಲ್.ನಾಗೇಶ್ವರ್ ರಾವ್ ಅವರನ್ನು ನ್ಯಾ.ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂ ಕೋರ್ಚ್ ದ್ವಿಸದಸ್ಯ ಪೀಠ ನೇಮಿಸಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಸೆ.8ರಂದು ಐಒಎನಲ್ಲಿನ ಆಡಳಿತ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಡಿಸೆಂಬರ್ ಒಳಗೆ ಚುನಾವಣಾ ಪ್ರಕ್ರಿಯೆಯನ್ನು ಮುಗಿಸಲು ಎಚ್ಚರಿಕೆ ನೀಡಿತ್ತು. ಐಒಸಿ ಸೂಚನೆ ಪಾಲಿಸುವಲ್ಲಿ ಐಒಎ ವಿಫಲವಾದರೆ ನಿಷೇಧಕ್ಕೆ ಗುರಿಯಾಗಲಿದೆ.
