ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟ ಆಸ್ಟ್ರೇಲಿಯಾ, ಬೆಲ್ಜಿಯಂಸತತ 12ನೇ ಬಾರಿಗೆ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದ ಆಸ್ಟ್ರೇಲಿಯಾಸ್ಪೇನ್ ಎದುರು ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯಾ

ಭುವನೇಶ್ವರ(ಜ.25): ಜೆರಿಮಿ ಹೇವರ್ಡ್‌ 4 ನಿಮಿಷಗಳಲ್ಲಿ 2 ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸಿದ್ದರ ಜೊತೆಗೆ 9 ನಿಮಿಷಗಳಲ್ಲಿ ಒಟ್ಟು 4 ಗೋಲು ಬಾರಿಸಿದ ಆಸ್ಪ್ರೇಲಿಯಾ, ಸ್ಪೇನ್‌ ವಿರುದ್ಧ ರೋಚಕ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 4-3 ಗೋಲುಗಳ ಗೆಲುವು ಸಾಧಿಸಿ ಸತತ 12ನೇ ಬಾರಿಗೆ ಹಾಕಿ ವಿಶ್ವಕಪ್‌ನ ಸೆಮಿಫೈನಲ್‌ ಪ್ರವೇಶಿಸಿದೆ.

1978ರಿಂದ 2018ರ ನಡುವಿನ 11 ವಿಶ್ವಕಪ್‌ಗಳಲ್ಲೂ ಸೆಮಿಫೈನಲ್‌ಗೇರಿದ್ದ ಆಸ್ಪ್ರೇಲಿಯಾ, 1986, 2010, 2014ರಲ್ಲಿ ಚಾಂಪಿಯನ್‌ ಆಗಿತ್ತು. ಸ್ಪೇನ್‌ನ ನಾಯಕ ಮಾರ್ಕ್ ಮಿರಾಲೆಸ್‌, ಪಂದ್ಯ ಮುಕ್ತಾಯಕ್ಕೆ ಕೇವಲ 5 ನಿಮಿಷ ಬಾಕಿ ಇದ್ದಾಗ ಪೆನಾಲ್ಟಿಸ್ಟ್ರೋಕ್‌ ವ್ಯರ್ಥಗೊಳಿಸಿದರು. ಈ ಹಂತದಲ್ಲಿ 3-4ರ ಹಿನ್ನಡೆಯಲ್ಲಿದ್ದ ಸ್ಪೇನ್‌, ಪೆನಾಲ್ಟಿಸ್ಟ್ರೋಕ್‌ನಲ್ಲಿ ಗೋಲು ಬಾರಿಸಿದ್ದರೆ ಪಂದ್ಯ ಪೆನಾಲ್ಟಿಶೂಟೌಟ್‌ಗೆ ಹೋಗುವ ಸಾಧ್ಯತೆ ಇರುತ್ತಿತ್ತು.

19ನೇ ನಿಮಿಷದಲ್ಲಿ ಗಿಸ್ಪರ್ಚ್‌ ಕ್ಸೇವಿಯರ್‌, 23ನೇ ನಿಮಿಷದಲ್ಲಿ ರೆಕಾಸೆನ್ಸ್‌ ಮಾರ್ಕ್ ಗೋಲು ಬಾರಿಸಿ ಸ್ಪೇನ್‌ಗೆ 2-0 ಆರಂಭಿಕ ಮುನ್ನಡೆ ಒದಗಿಸಿದರು. ಆದರೆ ಸಮಬಲ ಸಾಧಿಸಲು ವಿಶ್ವ ನಂ.1 ಆಸ್ಪ್ರೇಲಿಯಾಗೆ ಹೆಚ್ಚು ಸಮಯ ಬೇಕಾಗಲಿಲ್ಲ. 29ನೇ ನಿಮಿಷದಲ್ಲಿ ಒಗಿಲ್ವಿ ಫ್ಲೈನ್‌, 31ನೇ ನಿಮಿಷದಲ್ಲಿ ಜೆಲೆವ್ಸಿಕ್ ಅರನ್‌ ಆಕರ್ಷಕ ಫೀಲ್ಡ್‌ ಗೋಲುಗಳನ್ನು ಬಾರಿಸಿದರು. ಹೇವರ್ಡ್‌ 32, 36 ನಿಮಿಷಗಳಲ್ಲಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. 40ನೇ ನಿಮಿಷದಲ್ಲಿ ಪೆನಾಲ್ಟಿಕಾರ್ನರ್‌ ಮೂಲಕ ಗೋಲು ಬಾರಿಸಿದ ಮಾರ್ಕ್, 55ನೇ ನಿಮಿಷದಲ್ಲಿ ಪೆನಾಲ್ಟಿಸ್ಟೊ್ರೕಕ್‌ ಅವಕಾಶ ಕೈಚೆಲ್ಲಿದರು.

Hockey World Cup: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಜರ್ಮನಿ, ಕೊರಿಯಾ..!

ಬೆಲ್ಜಿಯಂಗೆ ಸುಲಭ ತುತ್ತಾದ ನ್ಯೂಜಿಲೆಂಡ್‌

ಭುವನೇಶ್ವರ: ಕ್ರಾಸ್‌ ಓವರ್‌ ಪಂದ್ಯದಲ್ಲಿ ಭಾರತವನ್ನು ಮಣಿಸಿ ಭಾರತೀಯ ಅಭಿಮಾನಿಗಳಿಗೆ ಆಘಾತ ನೀಡಿದ್ದ ನ್ಯೂಜಿಲೆಂಡ್‌ನ ಓಟ ಕ್ವಾರ್ಟರ್‌ ಫೈನಲ್‌ನಲ್ಲಿ ಮುಕ್ತಾಯಗೊಂಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಲ್ಜಿಯಂ 2-0 ಗೋಲುಗಳಲ್ಲಿ ಬ್ಲ್ಯಾಕ್‌ ಸ್ಟಿಕ್ಸ್‌ ಪಡೆಯನ್ನು ಸೋಲಿಸಿತು. ಮೊದಲ ಕ್ವಾರ್ಟರಲ್ಲೇ 2 ಗೋಲು ದಾಖಲಿಸಿ ನ್ಯೂಜಿಲೆಂಡ್‌ ಮೇಲೆ ಒತ್ತಡ ಹೇರಿದ ಬೆಲ್ಜಿಯಂ, ಮುಂದಿನ 3 ಕ್ವಾರ್ಟರ್‌ಗಳಲ್ಲಿ ಉತ್ತಮ ರಕ್ಷಣಾ ಕೌಶಲ್ಯ ಪ್ರದರ್ಶಿಸಿ ಪಂದ್ಯ ಕೈಜಾರದಂತೆ ಎಚ್ಚರ ವಹಿಸಿತು. ತಂಡದ ಪರ 10ನೇ ನಿಮಿಷದಲ್ಲಿ ಬೂನ್‌ ಟಾಮ್‌, 15ನೇ ನಿಮಿಷದಲ್ಲಿ ವಾನ್‌ ಫೆä್ಲೕರೆಂಟ್‌ ಗೋಲು ಬಾರಿಸಿದರು.

ಇಂದು ಮತ್ತೆರಡು ಕ್ವಾರ್ಟರ್‌

ಭುವನೇಶ್ವರ: ಹಾಕಿ ವಿಶ್ವಕಪ್‌ನ 3, 4ನೇ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಬುಧವಾರ ನಡೆಯಲಿದೆ. ಮೊದಲ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್‌ ಹಾಗೂ ಜರ್ಮನಿ ಮುಖಾಮುಖಿಯಾಗಲಿದ್ದು, 2ನೇ ಸೆಮೀಸ್‌ನಲ್ಲಿ ನೆದರ್‌ಲೆಂಡ್‌್ಸ ಹಾಗೂ ಕೊರಿಯಾ ಸೆಣಸಲಿವೆ.

ಇಂದಿನ ಪಂದ್ಯಗಳು

ಇಂಗ್ಲೆಂಡ್‌-ಜರ್ಮನಿ, ಸಂಜೆ 4.30ಕ್ಕೆ

ನೆದರ್‌ಲೆಂಡ್‌್ಸ-ಕೊರಿಯಾ, ಸಂಜೆ 7ಕ್ಕೆ