Asianet Suvarna News Asianet Suvarna News

Asian Champions Trophy 2021: ಸೆಮೀಸ್‌ನಲ್ಲಿಂದು ಭಾರತ-ಜಪಾನ್ ಫೈಟ್

* ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮೀಸ್‌ನಲ್ಲಿಂದು ಭಾರತ-ಜಪಾನ್ ಪೈಪೋಟಿ

* ಗ್ರೂಪ್ ಹಂತದಲ್ಲಿ ಜಪಾನ್ ವಿರುದ್ದ ಗೆದ್ದು ಬೀಗಿದ್ದ ಮನ್‌ಪ್ರೀತ್ ಸಿಂಗ್ ಪಡೆ

* ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ ಭಾರತ ಹಾಕಿ ತಂಡ

Asian Champions Trophy hockey Indian Hockey Team Take on Japan in Semi Final kvn
Author
Bengaluru, First Published Dec 21, 2021, 11:58 AM IST

ಢಾಕಾ(ಡಿ.21): ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ (Asian Champions Trophy Hockey) ಟೂರ್ನಿಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಭಾರತ, ಮಂಗಳವಾರ ಜಪಾನ್‌ ವಿರುದ್ಧ ಸೆಣಸಾಡಲಿದೆ. ರೌಂಡ್‌ ರಾಬಿನ್‌ ಮಾದರಿಯ ಕೊನೆ ಪಂದ್ಯದಲ್ಲಿ ಭಾನುವಾರ ಜಪಾನ್‌ ವಿರುದ್ಧ 6-0 ಗೋಲುಗಳಿಂದ ಗೆದ್ದಿದ್ದ ಭಾರತ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಟೂರ್ನಿಯಲ್ಲಿ ಅಜೇಯವಾಗಿಯೇ ಸೆಮೀಸ್‌ ತಲುಪಿರುವ ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ತಂಡ ಈ ಪಂದ್ಯದಲ್ಲೂ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದು, 5ನೇ ಬಾರಿ ಫೈನಲ್‌ ಪ್ರವೇಶಿಸುವ ಕಾತರದಲ್ಲಿದೆ. 

ಇನ್ನು, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಗ್ರೂಪ್ ಹಂತದಲ್ಲಿ  4 ಪಂದ್ಯಗಳನ್ನಾಡಿ ಕೇವಲ 1ರಲ್ಲಿ ಗೆದ್ದು ಸೆಮೀಸ್‌ ತಲುಪಿದ್ದ ಜಪಾನ್‌, ಭಾರತ ವಿರುದ್ಧದ ಸೋಲಿಗೆ ಸೇಡು ತೀರಿಸಲು ಕಾಯುತ್ತಿದೆ. 2013ರ ರನ್ನರ್‌-ಅಪ್‌ ಜಪಾನ್‌ 2ನೇ ಬಾರಿ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದೆ.

ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಮನ್‌ಪ್ರೀತ್ ಸಿಂಗ್ (Manpreet Singh) ನೇತೃತ್ವದ ಭಾರತ ಹಾಕಿ ತಂಡವು (Indian Hockey Team) ಇದೀಗ ಮತ್ತೊಮ್ಮೆ ಏಷ್ಯಾದ ಹಾಕಿ ಸಾಮ್ರಾಟನಾಗುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಕಳೆದ ಆವೃತ್ತಿಯ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು. 

ರಾಷ್ಟ್ರೀಯ ಹಾಕಿ: ಸೆಮೀಸ್‌ನಲ್ಲಿ ಯುಪಿಗೆ ಶರಣಾದ ಕರ್ನಾಟಕ

ಪುಣೆ: 11ನೇ ರಾಷ್ಟ್ರೀಯ ಪುರುಷರ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ (Karnataka Hockey Team) ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದೆ. ಸೋಮವಾರ ಮೊದಲ ಸೆಮೀಸ್‌ನಲ್ಲಿ ರಾಜ್ಯ ತಂಡ ಉತ್ತರ ಪ್ರದೇಶ ವಿರುದ್ಧ 1-2 ಗೋಲುಗಳಿಂದ ಸೋಲನುಭವಿಸಿತು.

ಉತ್ತರ ಪ್ರದೇಶ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 4ನೇ ನಿಮಿಷದಲ್ಲಿ ಅಮೀರ್‌ ಖಾನ್‌ ಉತ್ತರಪ್ರದೇಶ ಪರ ಮೊದಲ ಗೋಲು ಬಾರಿಸಿದರೆ, ವಿಶಾಲ್‌ ಸಿಂಗ್‌ 8ನೇ ನಿಮಿಷದಲ್ಲಿ ಗೋಲು ಹೊಡೆದು 2-0 ಮುನ್ನಡೆ ಒದಗಿಸಿದರು. ಬಳಿಕ 22ನೇ ನಿಮಿಷದಲ್ಲಿ ಕರ್ನಾಟಕದ ನಾಯಕ ಮೊಹಮದ್‌ ರಾಹೀಲ್‌ ತಂಡದ ಪರ ಏಕೈಕ ಗೋಲು ಬಾರಿಸಿದರು.

Asian Champions Trophy 2021: ಜಪಾನ್ ಮಣಿಸಿ ಅಜೇಯವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

ಗುಂಪು ಹಂತದಲ್ಲಿ ಎಲ್ಲಾ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ರಾಜ್ಯ ತಂಡ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಅಂತಿಮ 8ರ ಘಟ್ಟಪ್ರವೇಶಿಸಿತ್ತು. ಬಳಿಕ ಕ್ವಾರ್ಟರ್‌ನಲ್ಲಿ ಬೆಂಗಾಲ್‌ ವಿರುದ್ಧ 3-2 ಗೋಲುಗಳಿಂದ ಜಯಗಳಿಸಿತ್ತು.

ತಾವು ಫುಟ್ಬಾಲ್‌ ಆಡಿದ ಮೊದಲ ತಂಡವನ್ನೇ ಖರೀದಿಸಿದ ರೊನಾಲ್ಡೋ!

ಬ್ರೆಸಿಲಿಯಾ: ದಿಗ್ಗಜ ಫುಟ್ಬಾಲ್‌ ಆಟಗಾರ, ಬ್ರೆಜಿಲ್‌ನ ರೊನಾಲ್ಡೋ (Ronaldo) ತಾವು ವೃತ್ತಿಪರ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ್ದ ತಂಡವನ್ನೇ ಖರೀದಿಸಿದ್ದಾರೆ. 45 ವರ್ಷದ ರೊನಾಲ್ಡೋ ಬ್ರೆಜಿಲ್‌ನ 2ನೇ ದರ್ಜೆಯ ಫುಟ್ಬಾಲ್‌ ಕ್ಲಬ್‌ ಕ್ರುಜಿಯಿರೋ ತಂಡವನ್ನು ಖರೀದಿಸಿದ್ದಾಗಿ ಭಾನುವಾರ ತಂಡದ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಮಾಹಿತಿ ನೀಡಲಾಗಿದ್ದು, ಒಪ್ಪಂದಕ್ಕೆ ಸಹಿ ಮಾಡುವ ವಿಡಿಯೋವನ್ನು ಟ್ವೀಟ್‌ ಮಾಡಲಾಗಿದೆ. 

ರೊನಾಲ್ಡೋ 1993 ಮತ್ತು 1994ರಲ್ಲಿ ಕ್ರುಜಿಯಿರೋ ತಂಡದ ಪರ ಆಡಿದ್ದರು. 45 ವರ್ಷದ ರೊನಾಲ್ಡೋ 2 ಬಾರಿ ಫಿಫಾ ವಿಶ್ವಕಪ್‌ (FIFA World Cup) ಗೆದ್ದ ಬ್ರೆಜಿಲ್‌ ತಂಡದಲ್ಲಿದ್ದರು. ಅವರು 2018ರಲ್ಲಿ ಸ್ಪೇನ್‌ನ ಫುಟ್ಬಾಲ್‌ ಕ್ಲಬ್‌ ವಲ್ಲಡೊಲಿಡ್‌ ತಂಡದ ಶೇ.51ರಷ್ಟು ಪಾಲುದಾರಿಕೆ ಪಡೆದಿದ್ದರು.

Follow Us:
Download App:
  • android
  • ios