ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಚೀನಾ ಮೊದಲ ಎದುರಾಳಿ
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ವೇಳಾಪಟ್ಟಿ ಪ್ರಕಟ
ಚೆನ್ನೈನಲ್ಲಿ ಆಗಸ್ಟ್ 03ರಿಂದ ಟೂರ್ನಿಗೆ ಅಧಿಕೃತ ಚಾಲನೆ
ಮೊದಲ ಪಂದ್ಯದಲ್ಲಿ ಭಾರತಕ್ಕೆ ಚೀನಾ ಚಾಲೆಂಜ್
ಚೆನ್ನೈ(ಜೂ.21): 7ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಟೂರ್ನಿ ಚೆನ್ನೈನಲ್ಲಿ ಆಗಸ್ಟ್ 3ರಿಂದ 12ರ ವರೆಗೂ ನಡೆಯಲಿದೆ ಎಂದು ಏಷ್ಯನ್ ಹಾಕಿ ಫೆಡರೇಶನ್ ಮಂಗಳವಾರ ಘೋಷಿಸಿದೆ. ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿವೆ.
ಆಗಸ್ಟ್ 03ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊರಿಯಾ ಹಾಕಿ ತಂಡವು ಜಪಾನ್ ತಂಡವನ್ನು ಎದುರಿಸಲಿದೆ. ಇನ್ನು ಆತಿಥೇಯ ಭಾರತ ಹಾಕಿ ತಂಡವು ಮೊದಲ ದಿನದ ಮೂರನೇ ಪಂದ್ಯದಲ್ಲಿ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ನೆರೆಯ ಚೀನಾವನ್ನುಎದುರಿಸಲಿದೆ.
3 ಬಾರಿ ಚಾಂಪಿಯನ್ ಭಾರತ ತಂಡ ಇದಾದ ಬಳಿಕ ಆಗಸ್ಟ್ 4ರಂದು ಜಪಾನ್, ಆಗಸ್ಟ್ 6ರಂದು ಮಲೇಷ್ಯಾ, ಆಗಸ್ಟ್ 7ಕ್ಕೆ ಕೊರಿಯಾ ಹಾಗೂ ಕೊನೆ ಪಂದ್ಯದಲ್ಲಿ ಆಗಸ್ಟ್ 9ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಗ್ರ 4 ಸ್ಥಾನ ಪಡೆವ ತಂಡಗಳು ಸೆಮಿಫೈನಲ್ಗೇರಲಿವೆ. ಆಗಸ್ಟ್ 12ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಕೊರಿಯಾ, ಮಲೇಷ್ಯಾ, ಪಾಕಿಸ್ತಾನ, ಜಪಾನ್, ಚೀನಾ ಹಾಗೂ ಭಾರತ ಹಾಕಿ ತಂಡಗಳು ಪಾಲ್ಗೊಳ್ಳುತ್ತಿವೆ. ಒಂದು ತಂಡವು ಉಳಿದ 5 ತಂಡಗಳ ಎದುರು ಒಮ್ಮೆ ಕಾದಾಟ ನಡೆಸಲಿವೆ.
ಈ ಕುರಿತಂತೆ ಮಾತನಾಡಿರುವ ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕೆ, " ಚೆನ್ನೈನಲ್ಲಿ 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ನಿಜಕ್ಕೂ ತುಂಬಾ ಸಂತೋಷವಾಗುತ್ತಿದೆ. ಇಂದು ಟೂರ್ನಿಗೆ ವೇಳಾಪಟ್ಟಿ ಪ್ರಕಟಿಸಿದ್ದು, ಒಂದು ಮೈಲುಗಲ್ಲು. ಹಾಕಿ ಪಂದ್ಯಾಟಕ್ಕೆ ಇದೀಗ ದಿನಗಣನೆ ಆರಂಭವಾಗಿದೆ" ಎಂದು ಹೇಳಿದ್ದಾರೆ.
ಜೀವನಶ್ರೇಷ್ಠ 3ನೇ ಸ್ಥಾನಕ್ಕೆ ಜಿಗಿದ ಸಾತ್ವಿಕ್-ಚಿರಾಗ್ ಕಿಲಾಡಿ ಜೋಡಿ
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ(2011, 2016 & 2018) ಮತ್ತು ಪಾಕಿಸ್ತಾನ(2012, 2013 & 2018) ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಾಗಿ ಹೊರಹೊಮ್ಮಿವೆ. 2018ರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು ಎನ್ನುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ಹಾಕಿ: ಕರ್ನಾಟಕ ಔಟ್
ರೂರ್ಕೆಲಾ: 13ನೇ ಆವೃತ್ತಿಯ ರಾಷ್ಟ್ರೀಯ ಕಿರಿಯರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ಕ್ವಾರ್ಟರ್ ಫೈನಲ್ನಲ್ಲಿ ಅಭಿಯಾನ ಕೊನೆಗೊಳಿಸಿದೆ. ಗುಂಪು ಹಂತದಲ್ಲಿ ಮೂರೂ ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿಯೇ ನಾಕೌಟ್ಗೇರಿದ್ದ ರಾಜ್ಯ ತಂಡ, ಸೋಮವಾರ ರಾತ್ರಿ ನಡೆದ ಒಡಿಶಾ ವಿರುದ್ಧದ ಅಂತಿಮ 8ರ ಘಟ್ಟದ ಪಂದ್ಯದಲ್ಲಿ 2-4 ಗೋಲುಗಳಿಂದ ಪರಾಭವಗೊಂಡಿತು.
ಫಿಫಾ ವಿಶ್ವಕಪ್‌ನಲ್ಲಿ ವೈರಲ್ ಆಗಿದ್ದ ಮಾಡೆಲ್ ಮತ್ತೆ ಪ್ರತ್ಯಕ್ಷ; ಪಡ್ಡೆ ಹುಡುಗರ ಕಣ್ಣಿಗೆ ಹಬ್ಬ
ಜು.15ಕ್ಕೆ ಬಿಸಿಐಸಿ ಗಾಲ್ಫ್ ಟೂರ್ನಿ
ಬೆಂಗಳೂರು: ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರೀಸ್ ಆ್ಯಂಡ್ ಕಾಮರ್ಸ್(ಬಿಸಿಐಸಿ)ಯ 12ನೇ ಆವೃತ್ತಿಯ ಗಾಲ್ಫ್ ಟೂರ್ನಿ ಜುಲೈ 15ರಂದು ಕ್ಲೋವರ್ ಗಾಲ್ಫ್ ಕೋರ್ಸ್ನಲ್ಲಿ ನಡೆಯಲಿದೆ. ಟೂರ್ನಿ 2010ರಲ್ಲಿ ಆರಂಭವಾಗಿದ್ದು, ಈ ಬಾರಿ 100ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆಸಕ್ತರು ಬಿಸಿಐಸಿ ಕಚೇರಿ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಲು ಬಿಸಿಐಸಿ ಪ್ರಕಟಣೆ ತಿಳಿಸಿದೆ.
ವನಿತಾ ಫುಟ್ಬಾಲ್: ಇಂದು ಕರ್ನಾಟಕ-ಒಡಿಶಾ ಫೈಟ್
ಅಮೃತ್ಸರ್: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್ ಸುತ್ತಿನಲ್ಲಿ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡ ಬುಧವಾರ ನಿರ್ಣಾಯಕ ಪಂದ್ಯದಲ್ಲಿ ಒಡಿಶಾ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ ರಾಜ್ಯ ತಂಡ ತಲಾ 1 ಗೆಲುವು, ಸೋಲು, ಡ್ರಾ ಕಂಡಿದೆ. ಸದ್ಯ ‘ಎ’ ಗುಂಪಿನಲ್ಲಿ ಕರ್ನಾಟಕ 4 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ತಮಿಳುನಾಡು(09 ಅಂಕ), ಒಡಿಶಾ(06), ಚಂಡೀಗಢ(04) ಮೊದಲ 3 ಸ್ಥಾನಗಳಲ್ಲಿವೆ.