ಕೌಟುಂಬಿಕ ಹಾಕಿ ನಮ್ಮೆ: ಕುಲ್ಲೇಟಿರ, ಮುಕ್ಕಾಟಿರ, ಚೌರೀರ ತಂಡಕ್ಕೆ ಭಾರಿ ಗೆಲವು
* 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಭರ್ಜರಿ ಪ್ರದರ್ಶನ
* ಮಂಡೆಡ, ಕುಲ್ಲೇಟಿರ, ಮುಕ್ಕಾಟಿರ ತಂಡಗಳು ಜಯಭೇರಿ
* ಅಲ್ಲಂಡ, ಮುರುವಂಡ ಸೇರಿದಂತೆ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶ
ದುಗ್ಗಳ ಸದಾನಂದ, ಕನ್ನಡಪ್ರಭ
ನಾಪೋಕ್ಲು(ಏ.01): ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಶುಕ್ರವಾರದ ಪಂದ್ಯಗಳಲ್ಲಿ ಮಂಡೆಡ, ಕುಲ್ಲೇಟಿರ, ಮುಕ್ಕಾಟಿರ(ಪುಲಿಕೋಟು), ಚೌರೀರ (ಹೊದ್ದೂರು), ಅಲ್ಲಂಡ, ಮುರುವಂಡ ಸೇರಿದಂತೆ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.
ಮೈದಾನ ಒಂದರಲ್ಲಿ ನಡೆದ ಪಂದ್ಯದಲ್ಲಿ ಮಂಡೇಡ ತಂಡ ಕುಂದತ್ ಮಾಳೇಟಿರ (ಕುಕ್ಕುಲೂರು) ತಂಡದ ವಿರುದ್ಧ 1-0, ಕುಲ್ಲೇಟಿರ ಕರ್ತಮಾಡತಂಡದ ವಿರುದ್ಧ 6-0, ಮುಕ್ಕಾಟಿರ(ಪುಲಿಕೋಟು) ಕೋಡಿರ ತಂಡದ ವಿರುದ್ಧ 4-0, ಚೌರೀರ (ಹೊದ್ದೂರು) ತಂಡ ನೆರವಂಡ ತಂಡದ ವಿರುದ್ಧ 3-0, ಅಲ್ಲಂಡ, ಚೆರಿಯಪಂಡ ವಿರುದ್ಧ 5-3 ಹಾಗೂ ಮುರುವಂಡ, ಚೋಯಮಾಡಂಡ ತಂಡದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು.
ಮೈದಾನ 2ರಲ್ಲಿ ನಡೆದ ಪಂದ್ಯಗಳಲ್ಲಿ ಮಾರ್ಚಂಡ ಚೆರುವಾಳಂಡ ವಿರುದ್ಧ 5-2, ಐನಂಡ, ಪರದಂಡ ವಿರುದ್ಧ 4-2, ಮೇಕೇರಿರ, ಪೊನ್ನಚೆಟ್ಟೀರ ವಿರುದ್ಧ 4-0, ನೆಲ್ಲಮಕ್ಕಡದ, ಮೂಕಳೇರ ವಿರುದ್ಧ 4-0, ಚೆಕ್ಕೇರ, ದಿಯಂಡ ವಿರುದ್ಧ 3-0, ಕೋಡಂಡ, ಚೌರೀರ(ಹೊದವಾಡ) ವಿರುದ್ಧ 1-0 ಹಾಗೂ ಇಟ್ಟೀರ, ಮಲ್ಲಮಾಡ ತಂಡದ ವಿರುದ್ಧ 3-0 ಅಂತರದ ಜಯ ಸಾಧಿಸಿದವು.
Spain Masters: ಸೆಮೀಸ್‌ಗೆ ಪಿವಿ ಸಿಂಧು, ಹೊರಬಿದ್ದ ಕಿದಂಬಿ ಶ್ರೀಕಾಂತ್
ಮೈದಾನ ಮೂರರಲ್ಲಿ ಐಚೆಟ್ಟೀರ ಶಾಂತೆಯಂಡ ತಂಡದ ವಿರುದ್ಧ 3-0 ಅಂತರದ ಗೆಲವು ಸಾಧಿಸಿತು. ಕಲಿಯಂಡ ತಂಡವು ತೀತಮಾಡ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿದರೆ, ಚೇಂದಿರ ತಂಡವು ಅಪ್ಪನೆರವಂಡ ತಂಡದ ವಿರುದ್ಧ 4-0 ಅಂತರದಿಂದ ಗೆಲುವು ಸಾಧಿಸಿತು. ಪುದಿಯೊಕ್ಕಡ ತಂಡವು ಶಿವಚಾಳಿಯಂಡ ವಿರುದ್ಧ 2-0 ಅಂತರದಿಂದ ಮುನ್ನಡೆ ಸಾಧಿಸಿತು. ಕೊಂಗಂಡ, ಚೆಯ್ಯಂಡ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದರೆ, ಬಾರಿಯಂಡ, ತಂಬುಕುತ್ತಿರ ವಿರುದ್ಧ 1-0 ಅಂತರದಿಂದ ಮುಂದಿನ ಸುತ್ತು ಪ್ರವೇಸಿಸಿತು.
ಇಂದಿನ ಪಂದ್ಯಗಳು
ಮೈದಾನ ಒಂದು
9.30 ಕ್ಕೆ ಪಾಲೆಯಡ-ಚೊಟ್ಟೆಯಂಡಮಾಡ
10.30ಕ್ಕೆ ಕೊಲ್ಳಿರ-ಅಂಜಪರವಂಡ
12.30 ಕ್ಕೆ ಕಂಬೀರಂಡ-ಬೊಳಕಾರಂಡ
1.30 ಕ್ಕೆ ಕುಪ್ಪಂಡ-ಚೆರುಮಂದಂಡ
2.30 ಕ್ಕೆ ಕಲಿಯಾಟಂಡ-ಕೋಣಿಯಂಡ
ಮೈದಾನ 2
9:30ಕ್ಕೆ ಕೂತಂಡ-ಮಾತ್ರಂಡ
10.30 ಕ್ಕೆ ಕುಂಡ್ಯೋಳಂಡ-ಬೊವ್ವೇರಿಯಂಡ
11:30ಕ್ಕೆ ಪೆಮ್ಮಮಡ-ಚಂದುರ
12.30 ಕ್ಕೆ ವಾಟೇರಿರ-ತೀತಿಮಾಡ
1.30 ಕ್ಕೆ ಮಾಚಿಮಂಡ-ಮಣವಟ್ಟೀರ
2:30ಕ್ಕೆ ಪುಟ್ಟಿಚಂಡ-ಬೊಟ್ಟೋಳಂಡ
3.30 ಕ್ಕೆ ಚಪ್ಪಂಡ-ನಾಳಿಯಂಡ
ಮೈದಾನ 3
9.30 ಕ್ಕೆ ಚೋಕಿರ-ಪಳಂಗಂಡ
11:30ಕ್ಕೆ ಬೊಳ್ಳಂಡ-ಅಜ್ಜಮಾಡ
12..30ಕ್ಕೆ ಮುಕ್ಕಾಟಿರ(ಕಡಗದಾಳು)-ಮಂಡೇಡ
2.30 ಕ್ಕೆ ಮುಕ್ಕಾಟಿರ (ಹರಿಹರ)-ನಾಪಂಡ