Yoga Mudra: ಬಿಕ್ಕಳಿಕೆ ನಿಲ್ತಿಲ್ಲ ಎಂದಾದ್ರೆ ಈ ಮುದ್ರೆ ಮಾಡಿ

ಒಂದೇ ಸಮನೆ ಬಿಕ್ಕಳಿಕೆ ಬರ್ತಿದ್ದರೆ ಮಾತನಾಡೋದು ಕಷ್ಟವಾಗುತ್ತದೆ. ಅಪರೂಪಕ್ಕೆ ಬಂದ್ರೆ ಓಕೆ, ದಿನಕ್ಕೊಂದೆರಡು ಸಾರಿ ಈ ಬಿಕ್ಕಳಿಕೆ ಕಾಡಿದ್ರೆ ಅನುಭವಿಸೋದು ಕಷ್ಟ. ವೈದ್ಯರ ಬಳಿ ಹೋಗೋದು ಮಾತ್ರವಲ್ಲ ಮುದ್ರೆ ಸಹಾಯವನ್ನು ನೀವು ಪಡೆಯಬಹುದು.

Best Mudra for health, Yoga Mudra For Hiccups

ನೀವು ನಮ್ಮ ವಸ್ತು ಕದ್ದಿದ್ದೀರಾ, ಅದನ್ನು ತಕ್ಷಣ ಕೊಡಿ ಅಂತಾ ನನಗೆ ನನ್ನ ಸ್ನೇಹಿತರು ಎಚ್ಚರಿಕೆ ನೀಡಿದ್ರು. ನಾನೇನು ಕದ್ದಿದ್ದೇನೆ ಎಂಬ ಆಲೋಚನೆ, ಶಾಕ್ ನಲ್ಲಿ ಒಂದೇ ಸಮನೆ 10 ನಿಮಿಷದಿಂದ ಕಾಡ್ತಿದ್ದ ಬಿಕ್ಕಳಿಕೆ ಮಾಯವಾಗಿತ್ತು. ಈ ಬಿಕ್ಕಳಿಕೆ ಅನೇಕರಿಗೆ ಆಗಾಗ ಕಾಡ್ತಿರುತ್ತದೆ. ಗಬಗಬನೆ ತಿಂದಾಗ, ಮಿತಿಗಿಂತ ಹೆಚ್ಚು ಆಹಾರ ಸೇವನೆ ಮಾಡಿದಾಗ ಇಲ್ಲವೆ ಒಣಗಿದ ಆಹಾರವನ್ನು ಸೇವನೆ ಮಾಡಿದಾಗ ಮತ್ತೆ ಕೆಲವೊಮ್ಮೆ ಮಸಾಲೆ ಪದಾರ್ಥವನ್ನು ತಿಂದಾಗ ಬಿಕ್ಕಳಿಕೆ ಬರಲು ಶುರುವಾಗುತ್ತದೆ. ಗಂಟಲಿಗೆ ಯಾವುದೇ ಆಹಾರ ಸಿಕ್ಕಿಬಿದ್ದಾಗ್ಲೂ ಬಿಕ್ಕಳಿಕೆ ಕಾಡುತ್ತದೆ. ಕೆಲವರಿಗೆ ಒಂದೈದು ನಿಮಿಷ ಕಾಡಿ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಮತ್ತೆ ಕೆಲವರಿಗೆ ತುಂಬಾ ಸಮಯದವರೆಗೆ ಬಿಕ್ಕಳಿಗೆ ಬರ್ತಾನೇ ಇರುತ್ತದೆ.  

ನಿಮಗೆ ಆಗಾಗ ಬಿಕ್ಕಳಿಕೆ (Hiccups) ಬರ್ತಿದೆ ಎಂದಾದ್ರೆ ಅದನ್ನು ನಿರ್ಲಕ್ಷ್ಯ ಮಾಡೋದು ಒಳ್ಳೆಯದಲ್ಲ. ಜೀರ್ಣಕ್ರಿಯೆ (Digestion) ಯಲ್ಲಿ ಸಮಸ್ಯೆಯಾದಾಗ ಅಥವಾ ಒತ್ತಡ (Stress) ಸಮಸ್ಯೆ ನಿಮ್ಮನ್ನು ಕಾಡ್ತಿದ್ದರೆ ಅಥವಾ ಚಯಾಪಚಯ ಕ್ರಿಯೆ ಅಸ್ವಸ್ಥಗೊಂಡಿದ್ದರೆ ನಿಮಗೆ ಬಿಕ್ಕಳಿಗೆ ಬರುವ ಸಾಧ್ಯತೆಯಿರುತ್ತದೆ. ಪದೇ ಪದೇ ಬಿಕ್ಕಳಿಕೆ ಬರ್ತಿದೆ ಎಂದಾದ್ರೆ ನೀವು ವೈದ್ಯರನ್ನು ಭೇಟಿಯಾಗ್ಬೇಕಾಗುತ್ತದೆ. ಅಪರೂಪಕ್ಕೆ ಬಿಕ್ಕಳಿಕೆ ಬರ್ತಿದ್ದರೆ ಭಯಪಡುವ ಅಗತ್ಯವಿಲ್ಲ. ನೀವು ಮನೆಯಲ್ಲಿಯೇ ಕೆಲ ಮುದ್ರೆಗಳನ್ನು ಮಾಡುವ ಮೂಲಕ ಬಿಕ್ಕಳಿಕೆಗೆ ಕಡಿವಾಣ ಹಾಕಬಹುದು. ನಾವಿಂದು ಬಿಕ್ಕಳಿಕೆ ತಡೆಯುವ ಮುದ್ರೆಗಳ ಬಗ್ಗೆ ಮಾಹಿತಿ ನೀಡ್ತೇವೆ.

ಯೋನಿಮುದ್ರೆ ಅಂದರೆ ನಿಮಗೆ ಗೊತ್ತಾ? ಮಹಿಳೆಯರು ಇದನ್ನು ಮಾಡೋದರಿಂದ ಆಗೋ ಲಾಭಗಳು ನಿಮಗೆ ಗೊತ್ತಿರಲಿ!

ಬಿಕ್ಕಳಿಕೆ ನಿಯಂತ್ರಣಕ್ಕೆ ಅಪಾನ ವಾಯು ಮುದ್ರೆ : ಮುದ್ರೆಯ ಮೂಲಕ ನಮ್ಮ ದೇಹದ ಅನೇಕ ರೋಗಗಳನ್ನು ನಾವು ಗುಣಪಡಿಸಬಹುದು. ಯೋಗ ಮತ್ತು ಆಯುರ್ವೇದದಲ್ಲಿ ಪ್ರಾಣವನ್ನು ಶಕ್ತಿ ಎಂದು ಕರೆಯಲಾಗುತ್ತದೆ. ವಾಯು ಸಂಸ್ಕೃತ ಶಬ್ಧವಾಗಿದ್ದು ಅದ್ರ ಅರ್ಥ ಗಾಳಿ. ಈ ಮುದ್ರೆ ಮಾಡುವ ಸಂದರ್ಭದಲ್ಲಿ ಪೃಥ್ವಿ ಹಾಗೂ ಆಕಾಶ ಮುದ್ರೆ ರೂಪಗೊಳ್ಳುತ್ತದೆ. ಆಕಾಶ ಮುದ್ರೆ ಹೃದಯ, ಶ್ವಾಸಕೋಶ, ಕಿವಿ ಮತ್ತು ಗಂಟಲಿಗೆ ಸಂಬಂಧಿಸಿದ ಕಾಯಿಲೆ ಗುಣಪಡಿಸುತ್ತದೆ. ಪೃಥ್ವಿ ಮುದ್ರೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಬಿಕ್ಕಳಿಕೆ ಬಂದಾಗ ನೀವು ಅಪಾನ ವಾಯು ಮುದ್ರೆ ಮಾಡಿದ್ರೆ ಬಿಕ್ಕಳಿಕೆ ನಿಯಂತ್ರಣಕ್ಕೆ ಬರುತ್ತದೆ. ಇದಲ್ಲದೆ ಇದ್ರಿಂದ ಇನ್ನೂ ಅನೇಕ ಲಾಭವಿದೆ. 

ಋತುಬಂಧದ ಸಮಯದ ಸಮಸ್ಯೆಗಳಿಗೆ ಮುದ್ರೆ ಮಾಡಿನೋಡಿ

ಅಪಾನ ವಾಯು ಮುದ್ರೆ ಮಾಡಲು ನೇರವಾಗಿ ಕುಳಿತುಕೊಳ್ಳಬೇಕು. ಕೈಗಳನ್ನು ತೊಡೆಯ ಮೇಲೆ ಇಡಬೇಕು. ನಂತ್ರ ತೋರು ಬೆರಳನ್ನು ಹೆಬ್ಬೆರಳಿನ ಬುಡಕ್ಕೆ ತಾಗುವಂತೆ ಮಡಿಚಿ. ನಂತ್ರ ಉಂಗುರ ಬೆರಳು ಹಾಗೂ ಮಧ್ಯದ ಬೆರಳನ್ನು ಹೆಬ್ಬೆರಳಿಗೆ ಟಚ್ ಮಾಡಿ. 10 ನಿಮಿಷ ಇದೇ ಮುದ್ರೆಯಲ್ಲಿರಿ. ಉಸಿರಾಟದ ಮೇಲೆ ನಿಮ್ಮ ಗಮನವಿರಲಿ. ಈ ಮುದ್ರೆ ಮಾಡೋದ್ರಿಂದ ಶೇಕಡಾ 90ರಷ್ಟು ವಿಷವನ್ನು ದೇಹದಿಂದ ಹೊರಹಾಕಬಹುದು. ಅನಿಲ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆಗೆ ಆರಾಮ ನೀಡುತ್ತದೆ. ತಲೆನೋವು (Headache) ಕಡಿಮೆ ಮಾಡುತ್ತದೆ. ಒತ್ತಡ, ನಕಾರಾತ್ಮಕ ಆಲೋಚನೆಯಿಂದ ಮನಸ್ಸನ್ನು ದೂರವಿಡುತ್ತದೆ. ವಾತ, ಪಿತ್ತ ಮತ್ತು ಕಫದಂತಹ ಸಮಸ್ಯೆ ಕಡಿಮೆ ಮಾಡುವುದಲ್ಲದೆ ಹಲ್ಲಿನ ಆರೋಗ್ಯ ಕಾಪಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುವುದಲ್ಲದೆ ಮನಸ್ಸನ್ನು ಶಾಂತಗೊಳಿಸುತ್ತದೆ. 

ಬಿಕ್ಕಳಿಕೆ ಕಡಿಮೆ ಮಾಡಲು ಇದನ್ನು ಅನುಸರಿಸಿ : ಬಿಕ್ಕಳಿಕೆ ಬರ್ತಿದ್ದರೆ ನೀವು ನೀರು ಕುಡಿಯಬೇಕು. ಬೇರೆ ಕಡೆ ಮನಸ್ಸನ್ನು ಹೊರಳಿಸಿದ್ರೆ ಬಿಕ್ಕಳಿಕೆ ನಿಲ್ಲುತ್ತದೆ. ಒಂದು ಚಮಚ ಸಕ್ಕರೆಯನ್ನು ತಿಂದ್ರೆ ಅಥವಾ ಸಿಹಿ ಪದಾರ್ಥವನ್ನು ತಿಂದಾಗ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಸ್ವಲ್ಪ ಸಮಯ ಉಸಿರನ್ನು ಬಿಗಿಹಿಡಿದ್ರೆ ಬಿಕ್ಕಳಿಕೆ ನಿಲ್ಲುತ್ತದೆ. ನಿಂಬೆ ಹಣ್ಣಿನ ವಾಸನೆ ಕೂಡ ನಿಮ್ಮ ಬಿಕ್ಕಳಿಕೆ ನಿಲ್ಲಿಸುವ ಕೆಲಸವನ್ನು ಮಾಡುತ್ತದೆ.

Latest Videos
Follow Us:
Download App:
  • android
  • ios