Worst Lifestyle Habits: ಇಂಥಹಾ ಅಭ್ಯಾಸಗಳು ನೀವು ವಯಸ್ಸಾಗಿ ಕಾಣುವಂತೆ ಮಾಡುತ್ತದೆ

ವಯಸ್ಸಾಗುವ ಬಗ್ಗೆ ಎಲ್ಲರಿಗೂ ಭಯವಿದೆ. ಎಲ್ಲರೂ ತಾವೂ ಯಾವಾಗಲೂ ಯಂಗ್ (Young) ಆಗಿ ಕಾಣಬೇಕೆಂದೇ ಇಷ್ಟಪಡುತ್ತಾರೆ. ಆದ್ರೆ ನಮ್ಮಲ್ಲಿರುವ ಕೆಲವೊಂದು ಅಭ್ಯಾಸ (Habit)ಗಳೇ ನಾವು ಹೆಚ್ಚು ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ ಎಂಬುದು ನಿಮಗೆ ಗೊತ್ತಾ..? ಹಾಗಾದ್ರೆ ಬೇಗ ವಯಸ್ಸಾಗದಂತೆ ಕಾಣಬೇಕಾದ್ರೆ ಏನ್ ಮಾಡ್ಬೇಕು..?

Worst Lifestyle Habits Causing You to Feel Older

ಎಲ್ಲರಿಗೂ ವಯಸ್ಸಾಗುತ್ತದೆ. ಕಾಲ ಕಳೆದಂತೆ ಎಲ್ಲರೂ ಮುಪ್ಪಿಗೆ ಜಾರುತ್ತಾರೆ. 2050ರ ಹೊತ್ತಿಗೆ, ಜಾಗತಿಕ ಮಟ್ಟದಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎರಡು ಶತಕೋಟಿ ಜನರು ಇರುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ವಾಸ್ತವವಾಗಿ, ಪ್ರಪಂಚದಾದ್ಯಂತ ಜನರು ಹಿಂದೆಂದಿಗಿಂತಲೂ ಹೆಚ್ಚು ಕಾಲ ಬದುಕುತ್ತಿದ್ದಾರೆ ಮತ್ತು ಆ ಪ್ರವೃತ್ತಿಯು ನಿಧಾನಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಡೆಮಾಗ್ರಾಫಿಕ್ ರಿಸರ್ಚ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಈ ಶತಮಾನದ ಅಂತ್ಯದ ವೇಳೆಗೆ ಮಾನವರು 120 ವರ್ಷಗಳ ಕಾಲ ಬದುಕುವ ಸಾಧ್ಯತೆಯಿದೆ ಎಂದು ಹೇಳಿದೆ.

ಆದರೆ ಕೆಟ್ಟ ಜೀವನಶೈಲಿ, ಕೆಲವೊಂದು ಅಭ್ಯಾಸಗಳು ವ್ಯಕ್ತಿ ವಯಸ್ಸಾಗಿ ಕಾಣುವಂತೆ ಮಾಡುತ್ತದೆ ಎಂದು ವಿಜ್ಞಾನ (Science) ಹೇಳುತ್ತದೆ. ಎಲ್ಲರೂ ತಾವೂ ಯಾವಾಗಲೂ ಯಂಗ್ ಆಗಿ ಕಾಣಬೇಕೆಂದೇ ಇಷ್ಟಪಡುತ್ತಾರೆ. ಹಾಗಾದ್ರೆ ಬೇಗ ವಯಸ್ಸಾಗದಂತೆ ಕಾಣಬೇಕಾದ್ರೆ ಏನ್ ಮಾಡ್ಬೇಕು..?

Young @ 50 : ಮದ್ಯ ವಯಸ್ಸಿನಲ್ಲಿಯೂ ಯಂಗ್ ಕಾಣಲು ಏನು ತಿನ್ನಬೇಕು?

ಅಗತ್ಯಕ್ಕಿಂತ ಹೆಚ್ಚು ಟಿವಿ ನೋಡುವುದು ಒಳ್ಳೆಯದಲ್ಲ

ಯಾವುದೂ ಅತಿಯಾದರೆ ಒಳ್ಳೆಯದಲ್ಲ, ಹಾಗೆಯೇ ಟಿವಿ (Television) ನೋಡುವುದು ಕೂಡಾ. ಅದರಲ್ಲೂ ಕೆಲವೊಬ್ಬರು ದಿನಪೂರ್ತಿ ಟಿವಿಯ ಎದುರು ಕುಳಿತುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಂಡಿರುತ್ತಾರೆ. ಇದು ಸುತಾರಂ ಒಳ್ಳೆಯದಲ್ಲ. ಟಿವಿಯ ಎದುರೇ ಊಟ, ತಿಂಡಿ, ನಿದ್ದೆಯನ್ನು ಕಳೆಯುವ ಅಭ್ಯಾಸ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನ ಸಂಶೋಧನೆಯ ಪ್ರಕಾರ, ಈ ರೀತಿ ನಿರಂತರವಾಗಿ ಟಿವಿ ನೋಡುವುದು ಆಲೋಚನಾ ಕೌಶಲ್ಯಗಳ ನಷ್ಟಕ್ಕೆ ಕಾರಣವಾಗಬಹುದು ಎಂದು ತಿಳಿದುಬಂದಿದೆ. ಟಿವಿಯ ಮುಂದೆ ನಿರಂತರವಾಗಿ ಕುಳಿತಿರುವುದರಿಂದ ದೇಹದಲ್ಲಿ ಯಾವುದೇ ಚಟುವಟಿಕೆಗಳು ಆಗುವುದಿಲ್ಲ. ಬದಲಾಗಿ ಅತ್ತಿತ್ತ ಓಡಾಡುವುದರಿಂದ, ವ್ಯಾಯಾಮದಿಂದ ನಮ್ಮ ಸ್ನಾಯುಗಳು ಮತ್ತು ಮೂಳೆಗಳು ಆರೋಗ್ಯಕರವಾಗುತ್ತವೆ.

ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸಿ

ಕಡಿಮೆ ಮಲಗುವುದು, ಅತಿಯಾಗಿ ಮಲಗುವುದು. ಇವೆರಡೂ ಅಭ್ಯಾಸಗಳು ಒಳ್ಳೆಯದಲ್ಲ. ದೇಹಕ್ಕೆ ಕಡಿಮೆ ನಿದ್ದೆ (Sleep)ಯಾದರೆ ಸುಸ್ತು, ನಿಶ್ಯಕ್ತಿ ಉಂಟಾಗುತ್ತದೆ. ಹೆಚ್ಚು ನಿದ್ದೆಯಾದರೆ ಸೋಮಾರಿತನ ಕಾಣಿಸಿಕೊಳ್ಳುತ್ತದೆ. ಹೀಗಾಗಿ ದೇಹಕ್ಕೆ ಅಗತ್ಯವಾಗಿ ಬೇಕಾದಷ್ಟು ನಿದ್ರೆಯಾದರೆ ಮಾತ್ರ ಸಾಕು. ಹೀಗಾಗಿ ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸಿ. ಯಾವಾಗಲೂ ಒಂದೇ ಸಮಯಕ್ಕೆ ಮಲಗುವುದು ಹಾಗೂ ಏಳುವುದನ್ನು ರೂಢಿಸಿಕೊಳ್ಳಿ.

ಅಶ್ವಗಂಧದಿಂದ ಬ್ಲೂ ಬೆರ್ರಿವರೆಗೆ, 30 ವರ್ಷ ಕಳೆದ ಬಳಿಕ ಯಾವ ಆಹಾರ ಸೇವಿಸಬೇಕು

ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಒಳ್ಳೆಯದಲ್ಲ

ಇಂಟರ್‌ನೆಟ್ (Internet) ಸಂಬಂಧಿತ ಸಾಧನಗಳ ಬಳಕೆ ಇವತ್ತಿನ ದಿನಗಳಲ್ಲಿ ಹೆಚ್ಚಾಗಿದೆ. ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್‌ಗಳಿಲ್ಲದೆ ಜೀವನವೇ ಅಸಾಧ್ಯ ಎಂಬ ಸ್ಥಿತಿಗೆ ತಲುಪಿದೆ. ಆದರೆ ಈ ರೀತಿ ಹೆಚ್ಚು ಸಮಯವನ್ನು ಆನ್ ಲೈನ್‌ನಲ್ಲಿ ಕಳೆಯುವುದು ಬೇಗನೇ ವಯಸ್ಸಾಗುವಂತೆ ಮಾಡುತ್ತದೆ. ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಅವುಗಳಿಂದ ಹೊರಸೂಸುವ ನೀಲಿ ಬೆಳಕು ದೀರ್ಘಕಾಲದ ವರೆಗೆ ದೇಹಕ್ಕೆ ಬೀಳುವುದರಿಂದ ಇದು ವಯಸ್ಸು (Age) ಆಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಏಜಿಂಗ್ ಅಂಡ್ ಮೆಕ್ಯಾನಿಸಮ್ಸ್ ಆಫ್ ಡಿಸೀಸ್‌ನಲ್ಲಿ ಪ್ರಕಟವಾದ ಅಧ್ಯಯನವು ನೀಲಿ ಬೆಳಕು ಮೆದುಳು ಮತ್ತು ಕಣ್ಣಿನ ಕೋಶಗಳನ್ನು ಹಾನಿಗೊಳಿಸಬಹುದು ಎಂದು ತಿಳಿಸಿದೆ.

ಹೀಗಾಗಿ ಆನ್ ಲೈನ್ (Online) ಬಳಕೆ ಕಡಿಮೆ ಮಾಡಿ ಓದುವುದು, ಬರೆಯುವುದು ಮೊದಲಾದ ಆಫ್‌ಲೈನ್ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ. ಕಂಪ್ಯೂಟರ್ ಉಪಯೋಗಿಸುವುದನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆನ್ನು ನೋವು ನಿವಾರಿಸಲು ಸಹಾಯ ಮಾಡುತ್ತದೆ. ಓದುವಿಕೆ ಅಭ್ಯಾಸ ದೃಷ್ಟಿಯನ್ನು ಸುಧಾರಿಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಿ

ಕಾಲ ವೇಗವಾಗಿ ಚಲಿಸುತ್ತದೆ. ಹೀಗಾಗಿ ಯಾವುದೇ ವಿಷಯವನ್ನು ದೀರ್ಘಕಾಲ ನೆನಪಿಸಿಕೊಂಡು ಚಿಂತಿಸುತ್ತಿರುವುದು ಅಸಾಧ್ಯ. ನಿರಂತರವಾದ ಒತ್ತಡ ಖಿನ್ನತೆಗೆ ಕಾರಣವಾಗುತ್ತದೆ. ಟೆನ್ಶನ್ ಮುಖದಲ್ಲಿ ಸುಕ್ಕು, ನೆರಿಗೆಗಳನ್ನು ಮೂಡಿಸಿ ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ಹೀಗಾಗಿ ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸಿ. ಒತ್ತಡವನ್ನು ಸೂಕ್ತ ಮಾರ್ಗದಿಂದ ಬಗೆಹರಿಸಿಕೊಳ್ಳಿ.

Latest Videos
Follow Us:
Download App:
  • android
  • ios