World Health Day 2022: ಈ ದಿನದ ಇತಿಹಾಸ, ಮಹತ್ವವೇನು ?

ಆರೋಗ್ಯ (Health)ದ ಬಗ್ಗೆ ಯಾರಿಗೆ ತಾನೇ ಕಾಳಜಿ (Care)ಯಿಲ್ಲ ಹೇಳಿ. ಯಾವುದೇ ತೊಂದರೆಯಿಲ್ಲದೆ ಆರೋಗ್ಯವಾಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹಾಗೆಯೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಒಂದು ದಿನವೂ ಇದೆ ಅನ್ನೋದು ನಿಮ್ಗೆ ಗೊತ್ತಾ ? ಇಂದು ಏಪ್ರಿಲ್ 7, 2022 ವಿಶ್ವ ಆರೋಗ್ಯ ದಿನ (World Health Day). ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಒಂದಿಷ್ಟು ತಿಳಿಯೋಣ.

World Health Day 2022: Know History, Significance, This Years Theme Vin

ಇಂದು ಏಪ್ರಿಲ್ 7, 2022 ವಿಶ್ವ ಆರೋಗ್ಯ ದಿನ (World Health Day)ವೆಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) 1948ರಲ್ಲಿ ಮೊದಲ ವಿಶ್ವ ಆರೋಗ್ಯ ಅಸೆಂಬ್ಲಿಯನ್ನು ನಡೆಸಿತು ಮತ್ತು ಈ ವೇಳೆ ವಿಶ್ವ ಆರೋಗ್ಯ ದಿನವನ್ನು ಸ್ಥಾಪನೆ ಮಾಡಿತು. ನಂತರ, ವಿಶ್ವ ಆರೋಗ್ಯ ದಿನವನ್ನು ಮೊದಲ ಬಾರಿಗೆ ಏಪ್ರಿಲ್ 7, 1950 ರಂದು ಆಚರಿಸಲಾಯಿತು.  ಈ ದಿನದ ಇತಿಹಾಸ (History), ಮಹತ್ವವೇನು, ಈ ವರ್ಷದ ಆಚರಣೆಯ ಥೀಮ್‌ ಏನು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮನುಷ್ಯನಿಗೆ ಎಲ್ಲಕಿಂತಲೂ ಆರೋಗ್ಯ ಬಹಳ ಮುಖ್ಯ. ಆರೋಗ್ಯವಿದ್ದರೆ ಬೇರೆ ಯಾವುದನ್ನಾದರೂ ಸುಲಭವಾಗಿ ಪಡೆದುಕೊಳ್ಳಬಹುದು. ಅದರಲ್ಲೂ ಕೊರೋನಾ ಸೋಂಕಿನ (Corona Virus0 ಹರಡುವಿಕೆಯ ನಂತರ ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚಾಗಿದೆ. ಒಂದು, ಎರಡು, ಮೂರನೇ ಅಲೆಯಿಂದ ಭಾರತದಲ್ಲೇ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಮತ್ತು, ಈಗಾಗಲೇ ನಾಲ್ಕನೆಯ ಅಲೆಯ ಮಾತುಗಳು ಸಹ ಕೇಳಿಬರುತ್ತಿದೆ. ಹಾಗೂ, ಕೆಲ ದೇಶಗಳಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ನಾವು ಎಚ್ಚರಿಕೆಯಿಂದ ಇರಲೇಬೇಕು.

Covid XE variant ಕೋವಿಡ್ ಓಮಿಕ್ರಾನ್ XE ಹೊಸ ತಳಿ ಪತ್ತೆ ವರದಿ ನಿರಾಕರಿಸಿದ ಕೇಂದ್ರ!

ಏಪ್ರಿಲ್ 7ರ ಮಹತ್ವವೇನು?
ಆರೋಗ್ಯವಂತ ಜನರು ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ ಮತ್ತು ಹೆಚ್ಚು ಕಾಲ ಬದುಕುತ್ತಾರೆ. ಹೀಗಾಗಿ ಜನರ ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮದ ಅರಿವನ್ನು ಉತ್ತೇಜಿಸಲು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಏಪ್ರಿಲ್ 7 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ವೈದ್ಯಕೀಯ ಸಿಬ್ಬಂದಿಯ ವ್ಯಾಪಕ ಕೊಡುಗೆ ಮತ್ತು ಯಶಸ್ಸನ್ನು ಗುರುತಿಸುವ ಪ್ರಯತ್ನವಾಗಿದೆ ಎಂದು ಹೇಳಲಾಗಿದೆ

ವಿಶ್ವ ಆರೋಗ್ಯ ದಿನ 2022: ಇತಿಹಾಸ
ವಿಶ್ವ ಆರೋಗ್ಯ ಸಂಸ್ಥೆ (WHO) 1948ರಲ್ಲಿ ಮೊದಲ ವಿಶ್ವ ಆರೋಗ್ಯ ಅಸೆಂಬ್ಲಿಯನ್ನು ನಡೆಸಿತು. ಈ ಸಂದರ್ಭದಲ್ಲಿ ವೇಳೆ ವಿಶ್ವ ಆರೋಗ್ಯ ದಿನವನ್ನು ಸ್ಥಾಪನೆ ಮಾಡಿತು. ನಂತರ, ವಿಶ್ವ ಆರೋಗ್ಯ ದಿನವನ್ನು ಮೊದಲ ಬಾರಿಗೆ ಏಪ್ರಿಲ್ 7, 1950 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷವೂ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್‌ 7 ರಂದು ಆಚರಿಸಲಾಗುತ್ತಿದೆ.

ಸಂಧಿವಾತದಿಂದ ಬಳಲುತ್ತಿದ್ದೀರಾ ? ಹಾಗಿದ್ರೆ ಸಸ್ಯಾಹಾರ ಮಾತ್ರ ಸೇವಿಸಿ

ವಿಶ್ವ ಆರೋಗ್ಯ ದಿನ 2022: ಮಹತ್ವ
ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಮತ್ತು ಇತರ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಪಾತ್ರವನ್ನು ವಹಿಸುತ್ತದೆ ಮತ್ತು ಅವುಗಳನ್ನು ಸಹ ಪರಿಹರಿಸುತ್ತದೆ. ಅವರು ತಕ್ಷಣ ಗಮನ ನೀಡಬೇಕಾದ ಸಮಕಾಲೀನ ಆರೋಗ್ಯ ಸಮಸ್ಯೆಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಾರೆ ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ದಿನವನ್ನು ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ಇದು ವೈದ್ಯಕೀಯ ಸಿಬ್ಬಂದಿಯ ವ್ಯಾಪಕ ಕೊಡುಗೆ ಮತ್ತು ಯಶಸ್ಸನ್ನು ಗುರುತಿಸುವ ಪ್ರಯತ್ನವಾಗಿದೆ. ಈ ವರ್ಷದ ವಿಶ್ವ ಆರೋಗ್ಯ ದಿನದ 2022 ರ ಥೀಮ್ 'ನಮ್ಮ ಗ್ರಹ, ನಮ್ಮ ಆರೋಗ್ಯ' ಎಂಬುದಾಗಿದೆ.

ಭೂಮಿ ಆರೋಗ್ಯವಾಗಿದ್ದಾಗಲಷ್ಟೇ ಜೀವಸಂಕುಲ ಆರೋಗ್ಯವಾಗಿರಲು ಸಾಧ್ಯ. ಕೋವಿಡ್ - 19 ಮಾತ್ರವಲ್ಲ, ಎಲ್ಲ ವೈರಾಣುವಿನಿಂದ ಹಾಗೂ ಬ್ಯಾಕ್ಟೀರಿಯಾಗಳಿಂದ ಹರಡುವ ರೋಗಗಳು ಸೇರಿ ಒಟ್ಟಾರೆ ಎಲ್ಲ ರೋಗಗಳ ವಿರುದ್ಧವೂ ನಾವು ಎಚ್ಚರಿಕೆಯಿಂದ ಇರಬೇಕು. ಇದಕ್ಕೆ, ಪ್ರಮುಖವಾಗಿ ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಲಬೇಕು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆರೋಗ್ಯಕರ ಎಂದರೆ ಕೇವಲ ದೈಹಿಕ ಆರೋಗ್ಯವಲ್ಲ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಸಹ ಅರ್ಥೈಸುತ್ತದೆ.

Latest Videos
Follow Us:
Download App:
  • android
  • ios