Asianet Suvarna News Asianet Suvarna News

ಕ್ಯಾನ್ಸರ್‌ಗೆ 2 ವರ್ಷ ಔಷಧಿ ತೆಗೆದುಕೊಂಡವಳಿಗೆ ರೋಗವೇ ಇರ್ಲಿಲ್ಲ, ಆಸ್ಪತ್ರೆ ತಪ್ಪಿಗೆ ಶಿಕ್ಷೆಯಾಯ್ತಾ?

ಆಸ್ಪತ್ರೆ, ವೈದ್ಯರನ್ನೇ ನಾವು ದೇವರು, ದೇವಸ್ಥಾನ ಅಂತಾ ಪೂಜೆ ಮಾಡ್ತೇವೆ. ಅವರು ಹೇಳಿದ್ದನ್ನು ಕೇಳ್ತೇವೆ. ತಪ್ಪದೆ ಮಾತ್ರೆ, ಔಷಧಿ ತೆಗೆದುಕೊಳ್ತೇವೆ. ಯಾವಾಗ್ಲೂ ಒಬ್ಬರನ್ನೇ ನಂಬಿ ನಿರ್ಧಾರ ತೆಗೆದುಕೊಳ್ಬಾರದು. ಅನಾರೋಗ್ಯ ವಿಷ್ಯದಲ್ಲಿ ಒಂದೆರಡು ವೈದ್ಯರಿಗೆ ತೋರಿಸಿದ್ರೆ ತಪ್ಪೇನಿಲ್ಲ ಎಂಬುದನ್ನು ಈ ಸುದ್ದಿ  ಹೇಳ್ತಿದೆ.
 

Woman Wrongly Diagnosed With Cancer After Two Years Case Against Hospital Wins Compensation roo
Author
First Published Oct 20, 2023, 3:03 PM IST

ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ನಡೆಯುವ ತಪ್ಪು ಒಬ್ಬರ ಜೀವ ತೆಗೆಯೋದಿದೆ. ಯಾವುದೋ ವ್ಯಕ್ತಿಗೆ ನೀಡ್ಬೇಕಾಗಿದ್ದ ಚುಚ್ಚುಮದ್ದನ್ನು ಇನ್ನಾರಿಗೋ ನೀಡುವ ಕೆಲ ಆಸ್ಪತ್ರೆ ಸಿಬ್ಬಂದಿ ರೋಗಿಗಳ ಜೀವನವನ್ನು ನರಕ ಮಾಡ್ತಾರೆ. ಇನ್ನು ಕೆಲವು ಬಾರಿ ರಿಪೋರ್ಟ್ ಅದಲುಬದಲಿಯಾಗೋದಿದೆ. ತಮಗಿಲ್ಲದ ಖಾಯಿಲೆಗೆ ಮಾತ್ರೆ, ಔಷಧಿ ತೆಗೆದುಕೊಂಡು, ಕೊನೆಯಲ್ಲಿ ನಮಗೆ ಆ ಖಾಯಿಲೆಯೇ ಇರಲಿಲ್ಲ ಎಂಬುದು ಗೊತ್ತಾದ್ರೆ ಹೇಗಾಗುತ್ತೆ. ಒಂದ್ಕಡೆ ಖುಷಿಯಾದ್ರೆ ಇನ್ನೊಂದು ಕಡೆ ಇಷ್ಟುದಿನ ಆಸ್ಪತ್ರೆ ಅಲೆದಾಟ, ಮಾನಸಿಕ ಹಿಂಸೆ, ಔಷಧಿ, ಮಾತ್ರೆಗಳ ಸೇವನೆ ನೋವು ಮನುಷ್ಯರನ್ನು ಕಾಡುತ್ತದೆ. ಈ ಮಹಿಳೆಗೂ ಈಗ ಇದೇ ಸ್ಥಿತಿ ನಿರ್ಮಾಣವಾಗಿದೆ.

ಘಟನೆ ನಡೆದಿರೋದು ಯುನೈಟೆಡ್ ಕಿಂಗ್‌ಡಮ್ (United Kingdom)  ನಲ್ಲಿ. ಯಾರ್ಕ್‌ಷೈರ್ ನಿವಾಸಿ ಮಹಿಳೆಯೊಬ್ಬರು 2 ವರ್ಷಗಳಿಂದ ಚರ್ಮ (Skin) ದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ ಅವಧಿಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ (Surgery) ಯೂ ನಡೆದಿದೆ. ಮಹಿಳೆ ನಿರಂತರವಾಗಿ ಚಿಕಿತ್ಸೆ ಪಡೆದಿದ್ದಾಳೆ.  

HEALTH TIPS : ಚಳಿಗಾಲದಲ್ಲಿ ಹೆಚ್ಚಾಗುತ್ತೆ ಮೈಗ್ರೇನ್, ಓಡಿಸಲು ಹೀಗ್ ಮಾಡಿದ್ರೂ ಓಕೆ!

ಯಾಕೋ ಮಹಿಳೆಗೆ ಅನುಮಾನ ಬಂದಿದೆ. ಹಾಗಾಗಿ ಬೇರೊಂದು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾಳೆ.  ಆದ್ರೆ ಆ ಆಸ್ಪತ್ರೆ ನೀಡಿದ ವರದಿ ಮಹಿಳೆಯನ್ನು ಕಂಗಾಲು ಮಾಡಿದೆ. 
ವಾಸ್ತವವಾಗಿ ಮಹಿಳೆಗೆ ಚರ್ಮದ ಕ್ಯಾನ್ಸರ್ ಇರಲಿಲ್ಲ. ಅವರಿಗೆ ಕ್ಯಾನ್ಸರ್ ಇರುವ ಬಗ್ಗೆ ತಪ್ಪು ಮಾಹಿತಿ ನೀಡಲಾಗಿತ್ತು. ಇದಾದ ನಂತರ ಆಸ್ಪತ್ರೆ ಮಹಿಳೆಗೆ ದೊಡ್ಡ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿ ಮಾಡಿದೆ. 

ಪೂರ್ವ ಯಾರ್ಕ್‌ಷೈರ್‌ನ 33 ವರ್ಷದ  ರಂಗಭೂಮಿ ಮೇಕಪ್ ಕಲಾವಿದೆ ಮೇಗನ್ ರಾಯ್ಲ್ ಜೀವನದಲ್ಲಿ ಈ ಎಲ್ಲ ಆಟ ನಡೆದಿದೆ. 2019 ರಲ್ಲಿ ಆಕೆಗೆ ಚರ್ಮದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕ್ಯಾನ್ಸರ್ ಪತ್ತೆಯಾದ ನಂತ್ರ ಆಕೆ ಸಂಪೂರ್ಣ ತತ್ತರಿಸಿ ಹೋಗಿದ್ದಳು. ಕ್ಯಾನ್ಸರ್ ನಿಂದ ಹೊರಬರುವುದು ಆಕೆಗೆ ಮುಖ್ಯವಾಗಿತ್ತು. ಹಾಗಾಗಿ ನಿರಂತರ ಚಿಕಿತ್ಸೆ ಪಡೆಯುತ್ತಲೇ ಇದ್ದಳು.  2021 ರಲ್ಲಿ ಮಹಿಳೆ ಮತ್ತೊಮ್ಮೆ ಬೇರೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ತನಗೆ ಕ್ಯಾನ್ಸರ್ ಇಲ್ಲ ಎಂಬುದು ಗೊತ್ತಾಯ್ತು.

Male Contraceptive: ಪುರುಷರಿಗೆ ಗರ್ಭನಿರೋಧಕ ಇಂಜೆಕ್ಷನ್‌, ಯಶಸ್ವಿ ಪ್ರಯೋಗ ನಡೆಸಿದ ಐಸಿಎಂಆರ್‌

ಅಷ್ಟು ವರ್ಷಗಳ ಕಾಲ ಮಾನಸಿಕ ಹಿಂಸೆ (Mental Harrassment) ಅನುಭವಿಸಿದ ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ, ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಸುಮಾರು 2 ವರ್ಷಗಳಿಂದ ನಡೆಯುತ್ತಿರುವ ಈ ಪ್ರಕರಣ ಈಗ ಇತ್ಯರ್ಥಗೊಂಡಿದೆ. ನ್ಯಾಯಾಲಯ ಆಸ್ಪತ್ರೆಯ ಪರವಾನಿಗೆ ರದ್ದುಪಡಿಸಿ ಆದೇಶ ನೀಡಿದೆ. ಅಲ್ಲದೆ ಮಹಿಳೆಗೆ ಭಾರೀ ಪ್ರಮಾಣದ ಪರಿಹಾರ ನೀಡುವಂತೆ ಆದೇಶಿಸಿದೆ. ಯಾಕೆ ಹೀಗಾಯ್ತು ಎನ್ನುವುದು ನನಗೆ ತಿಳಿಯುತ್ತಿಲ್ಲ. ನನಗೆ ಕ್ಯಾನ್ಸರ್ ಇದೆ ಎಂದು ಎರಡು ವರ್ಷಗಳಿಂದ ನಂಬಿದ್ದೆ ಎಂದು ಮೇಗನ್ ರಾಯಲ್ ಹೇಳಿದ್ದಾರೆ. ಅದಕ್ಕೆ ಎಲ್ಲಾ ಟ್ರೀಟ್ಮೆಂಟ್ ಮಾಡ್ಕೊಂಡೆ ಆಮೇಲೆ ಒಂದು ದಿನ ಕ್ಯಾನ್ಸರ್ ಇಲ್ಲ ಅಂತ ಹೇಳಿದ್ರು. ಅದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು ಎಂದು ಆಕೆ ಹೇಳಿದ್ದಾರೆ. ವಿಷ್ಯ ಗೊತ್ತಾದಾಗ ದೊಡ್ಡ ಹತಾಶೆ ಮತ್ತು ಕೋಪ ಎರಡೂ ಉಂಟಾಯಿತು. ಆದ್ರೆ ಕೊನೆಯಲ್ಲಿ ನನಗೆ ಜಯ ಸಿಕ್ಕಿದ್ದು ನೆಮ್ಮದಿ ತಂದಿದೆ ಎಂದು ಆಕೆ ಹೇಳಿದ್ದಾರೆ.

ಚರ್ಮದ ಕ್ಯಾನ್ಸರ್ (Skin Cacner) ಅಂದ್ರೇನು? : ಚರ್ಮದ ಕ್ಯಾನ್ಸರ್  ಚರ್ಮದ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಉಂಟಾಗುವ ಮಾರಣಾಂತಿಕ ಕಾಯಿಲೆಯಾಗಿದೆ. ಈ ಕ್ಯಾನ್ಸರ್ ಚರ್ಮದ ಯಾವುದೇ ಪ್ರದೇಶದಲ್ಲಿ ಸಂಭವಿಸಬಹುದು. ಆದರೆ ಹೆಚ್ಚಿನ ಚರ್ಮದ ಕ್ಯಾನ್ಸರ್ ಗಳು ಸೂರ್ಯನಿಗೆ ಒಡ್ಡಿಕೊಳ್ಳುವ ದೇಹದ ಪ್ರದೇಶಗಳಲ್ಲಿ ಬೆಳೆಯುತ್ತವೆ. ನೇರಳಾತೀತ ವಿಕಿರಣಕ್ಕೆ ಒಡ್ಡಿಕೊಳ್ಳುವುದು ಚರ್ಮದ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿದೆ. ಇದು ಸೂರ್ಯನಿಂದ ಅಥವಾ ಟ್ಯಾನಿಂಗ್ ಹಾಸಿಗೆಗಳಂತಹ ಕೃತಕ ಮೂಲಗಳಿಂದ ಉದ್ಭವಿಸಬಹುದು. ನೇರಳಾತೀತ ವಿಕಿರಣವು ಚರ್ಮದ ಕೋಶಗಳಲ್ಲಿ DNA ಹಾನಿಯನ್ನು ಉಂಟುಮಾಡಬಹುದು ಮತ್ತು ರೂಪಾಂತರಗಳನ್ನು ಉಂಟುಮಾಡಬಹುದು, ಇದು ಜೀವಕೋಶಗಳು ಅಸಹಜವಾಗಿ ಬೆಳವಣಿಗೆಯಾಗುವಂತೆ ಮಾಡುತ್ತದೆ.   
 

Follow Us:
Download App:
  • android
  • ios