ಚಳಿಗಾಲದಲ್ಲಿ ಕೆಮ್ಮು, ಜ್ವರದ ಜೊತೆಗೆ ಚಳಿಗಾಲದ ಖಿನ್ನತೆಯೂ ಕಾಡಬಹುದು. ಸೂರ್ಯನ ಬೆಳಕಿನ ಕೊರತೆಯಿಂದ ಈ ಖಿನ್ನತೆ ಉಂಟಾಗುತ್ತದೆ. ವಿಟಮಿನ್ ಡಿ ಪೂರಕಗಳು, ಸೂರ್ಯನ ಬೆಳಕು, ವ್ಯಾಯಾಮ, ಸಮಾಜಿಕ ಸಂಪರ್ಕ, ಸರಿಯಾದ ಆಹಾರ ಮತ್ತು ನಿದ್ರೆ ಈ ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಗತ್ಯವಿದ್ದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಚಳಿಗಾಲ (Winter) ಶುರುವಾಗಿದೆ. ಕೊರೆಯುವ ಚಳಿಯಲ್ಲಿ ಮನೆಯಿಂದ ಹೊರಗೆ ಬರೋದು ಕಷ್ಟ. ಕೆಲವರು ಈ ಚಳಿಯನ್ನು ಎಂಜಾಯ್ ಮಾಡ್ತಿದ್ದರೂ, ಕೆಮ್ಮು, ಜ್ವರ, ನೆಗಡಿ ಸೇರಿದಂತೆ ಅನೇಕ ಆರೋಗ್ಯ (health) ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದ್ರ ಜೊತೆ ಚಳಿಗಾಲದಲ್ಲಿ ಮಾನಸಿಕ ಸಮಸ್ಯೆ ಕೂಡ ಜನರನ್ನು ಕಾಡುತ್ತದೆ. ಶೀತ ಹವಾಮಾನದಲ್ಲಿ ಹಗಲು ಕಡಿಮೆ ಇರುವ ಕಾರಣ ಅನೇಕರು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (SAD) ನಿಂದ ಬಳಲುತ್ತಾರೆ. ಇದನ್ನು ಚಳಿಗಾಲದ ಖಿನ್ನತೆ ಎಂದೂ ಕರೆಯುತ್ತಾರೆ. ಇದರ ಲಕ್ಷಣ ಸಾಮಾನ್ಯ ಖಿನ್ನತೆಯಂತೆ ಇರುತ್ತೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2015 ರಲ್ಲಿ, ವಿಶ್ವದಾದ್ಯಂತ 30 ಕೋಟಿಗೂ ಹೆಚ್ಚು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ಸಂಖ್ಯೆಯು ವಿಶ್ವದ ಜನಸಂಖ್ಯೆಯ ಶೇಕಡಾ 4.3ರಷ್ಟಿದೆ.

ಚಳಿಗಾಲದ ಖಿನ್ನತೆಯ ಲಕ್ಷಣಗಳೇನು? : ಇದು ಒಂದು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಇದು ಮುಖ್ಯವಾಗಿ ಚಳಿಗಾಲದಲ್ಲಿ ಕಂಡುಬರುತ್ತದೆ. ಇದರಿಂದಾಗಿ ವ್ಯಕ್ತಿಯಲ್ಲಿ ಕಿರಿಕಿರಿ, ಸೋಮಾರಿತನ, ಒತ್ತಡದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದು ಚಳಿಗಾಲ ಆರಂಭದಿಂದ ಅಂತ್ಯದವರೆಗೆ ಇರುತ್ತದೆ. ಚಳಿಗಾಲದ ಖಿನ್ನತೆ ಯಾರನ್ನು ಬೇಕಾದ್ರೂ ಕಾಡ್ಬಹುದು. 

ಎಣ್ಣೆ ಅಥವಾ ತುಪ್ಪ ಯಾವುದು ಆರೋಗ್ಯಕ್ಕೆ ಒಳ್ಳೆದು?

ಚಳಿಗಾಲದ ಖಿನ್ನತೆಗೆ ಕಾರಣ ಏನು? : ಚಳಿಗಾಲದಲ್ಲಿ ಸೂರ್ಯನ ಕಿರಣ ಅಪರೂಪ. ತಾಪಮಾನ ಕಡಿಮೆ ಆದಂತೆ ಜೀವನಶೈಲಿಯೂ ಬದಲಾಗುತ್ತದೆ. ಇದು ಕೆಲವರಲ್ಲಿ ಚಳಿಗಾಲದ ಖಿನ್ನತೆಯನ್ನು ಉಂಟುಮಾಡಬಹುದು. ನಿದ್ರೆಗೆ ಸಂಬಂಧಿಸಿದ ಹಾರ್ಮೋನ್ ಮೆಲಟೋನಿನ್ ಸಹ ಚಳಿಗಾಲದ ಖಿನ್ನತೆಯನ್ನು ಹೆಚ್ಚಿಸುತ್ತದೆ. ಹಗಲಿನಲ್ಲಿ ಸಾಕಷ್ಟು ಬೆಳಕು ಇರದ ಕಾರಣ ದೇಹದಲ್ಲಿ ಹೆಚ್ಚು ಮೆಲಟೋನಿನ್ ಉತ್ಪತ್ತಿಯಾಗುತ್ತದೆ. ಇದು ಚಳಿಗಾಲದ ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ. ದುಃಖ, ಒತ್ತಡ, ಶಕ್ತಿಯ ಕೊರತೆ, ಅತಿಯಾದ ನಿದ್ರೆ ಮತ್ತು ತೂಕ ಹೆಚ್ಚಾಗುವುದು ಸೇರಿದಂತೆ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 

ಚಳಿಗಾಲದ ಖಿನ್ನತೆ ಹೀಗೆ ತಪ್ಪಿಸಿ : ಚಳಿಗಾಲದ ಖಿನ್ನತೆಯನ್ನು ತಪ್ಪಿಸಲು ವಿಟಮಿನ್ ಡಿ ಅತ್ಯಂತ ಮುಖ್ಯವಾಗಿದೆ. ಇದು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಸಿರೊಟೋನಿನ್ ಸಂತೋಷದ ಹಾರ್ಮೋನ್ ಆಗಿದ್ದು, ಇದು ಮನಸ್ಥಿತಿಯನ್ನು ಸಮತೋಲನದಲ್ಲಿಡುತ್ತದೆ. ವಿಟಮಿನ್ ಡಿ ನಮ್ಮ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಆಗಿದೆ. ಇದರ ಮುಖ್ಯ ಮೂಲವೆಂದರೆ ಸೂರ್ಯನ ಬೆಳಕು. ಚಳಿಗಾಲದಲ್ಲಿ ಕಡಿಮೆ ಸೂರ್ಯನ ಬೆಳಕಿದ್ದಾಗ ದೇಹದ ಸಿರ್ಕಾಡಿಯನ್ ಲಯ ಬದಲಾಗುತ್ತದೆ. ಇದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ನಮ್ಮ ಚರ್ಮವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ದೇಹವು ವಿಟಮಿನ್ ಡಿ ಅನ್ನು ಉತ್ಪಾದಿಸುತ್ತದೆ, ಇದು ಮೂಳೆಗಳು, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಮಾನಸಿಕ ಆರೋಗ್ಯಕ್ಕೆ ಅವಶ್ಯಕವಾಗಿದೆ. ಚಳಿಗಾಲದಲ್ಲಿ ಸೂರ್ಯನ ಬೆಳಕಿಗೆ ನಿಮ್ಮ ದೇಹ ಒಡ್ಡಿಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ 15 ರಿಂದ 30 ನಿಮಿಷಗಳ ಕಾಲ ಸೌಮ್ಯವಾದ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಿ. ಹೊರಗೆ ಹೋಗಲು ಸಾಧ್ಯವಾಗದಿದ್ದರೆ, ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.

ಇಷ್ಟೊಂದು ಜನ ಮಾವಿನಕಾಯಿ ಉಪ್ಪಿನಕಾಯಿ ರೆಸಿಪಿ ಗೂಗಲ್ ಮಾಡಿದ್ದು ಯಾಕೆ? ಲಾಭವೂ ಇದೆ

ಆಹಾರದ ಮೇಲೆ ಗಮನ ನೀಡಬೇಕು. ಫಾಸ್ಟ್ ಫುಡ್, ಜಂಕ್ ಫುಡ್ ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವುಗಳಿಂದ ದೂರವಿರಿ. ಖಿನ್ನತೆ ಕಾಡುತ್ತಿದ್ದರೆ ಪ್ರತಿ ದಿನ 30 ನಿಮಿಷ ತಪ್ಪದೆ ವ್ಯಾಯಾಮವನ್ನು ಮಾಡಿ. ಚಳಿಗಾಲದಲ್ಲಿ ಏಕಾಂಗಿಯಾಗಿರಬೇಡಿ. ಆದಷ್ಟು ಸ್ನೇಹಿತರು, ಕುಟುಂಬಸ್ಥರ ಜೊತೆ ಸಮಯ ಕಳೆಯಿರಿ. ನಿದ್ರಾಹೀನತೆ ಕೂಡ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ನಿತ್ಯ 7 – 8 ಗಂಟೆ ನಿದ್ರೆ ಮಾಡೋದನ್ನು ಮರೆಯಬೇಡಿ. ವೈದ್ಯಕೀಯ ಚಿಕಿತ್ಸೆ ಪಡೆಯುವ ಮೂಲಕವೂ ನೀವು ಇದರಿಂದ ಹೊರಬರಬಹುದು.