ಹೊಸ ಬಟ್ಟೆ ಕೊಂಡು ತೊಳೆಯದೇ ಬಳಸೋ ಅಭ್ಯಾಸ ಸರೀನಾ?
ಶಾಪಿಂಗ್ ಮಾಡಿ ಬಂದ ತಕ್ಷಣ ಖುಷಿಯೋ ಖುಷಿ. ಹೊಸ ಬಟ್ಟೆಯನ್ನು ಹಾಕೋವರೆಗೂ ಸಮಾಧಾನ ಇರಲ್ಲ. ಹೀಗೆ ಕೆಲವರು ಹೊಸ ಬಟ್ಟೆಯನ್ನು ತೊಳೆಯದೇ ಧರಿಸುತ್ತಾರೆ. ಆದ್ರೆ ಹೀಗೆ ಮಾಡೋದು ಸರೀನಾ?
ಹೊಸ ಬಟ್ಟೆಗಳನ್ನು ಮೊದಲು ಒಗೆಯದೆ ಅಂಗಡಿಯಿಂದ ತಂದು ನೇರವಾಗಿ ಧರಿಸುವವರಲ್ಲಿ ನೀವೂ ಒಬ್ಬರೇ? ಹೊಸ ಡ್ರೆಸ್ ಶಾಪಿಂಗ್ ಮಾಡಿ ತಂದಾಕ್ಷಣ ಅಥವಾ ಮರುದಿನವೇ ಅದನ್ನು ಧರಿಸುವ ಅಭ್ಯಾಸವಿದ್ದರೆ ಇಂದೇ ಅದನ್ನು ಬದಲಾಯಿಸಿಕೊಳ್ಳಿ. ಏಕೆಂದರೆ ಒಗೆಯದೆ ಬಳಸುವ ಬಟ್ಟೆಯಿಂದ ಆರೋಗ್ಯ ಹದೆಗಡಬಹುದು. ಮಾತ್ರವಲ್ಲ ನಿಮಗೆ ಹಲವು ರೋಗಗಳು ಸಹ ಬರಬಹುದು. ಹೊಸ ಬಟ್ಟೆಗಳು ಮೃದುವಾಗಿರುತ್ತವೆ ಮತ್ತು ಉತ್ತಮವಾದ ಪರಿಮಳವನ್ನು ಸೂಸುತ್ತಿರುತ್ತವೆ ಅನ್ನೋದೇನೋ ನಿಜ. ಆದರೆ, ಮಳಿಗೆಗಳಿಂದ ತಂದ ಉಡುಪನ್ನು ನೀರಿನಲ್ಲಿ ಅದ್ದಿ ಒಣಗಿಸದೆ ನೇರವಾಗಿ ಬಳಸುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ಅಥವಾ ವೈರಸ್ ನಿಮ್ಮ ಮೈಗೆ ಅಂಟಿಕೊಂಡು ತುರಿಕೆ ಅಥವಾ ಅಲರ್ಜಿಯಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ರೋಗಾಣುಗಳ ವಾಸಸ್ಥಳ
ಹೊಸ ಬಟ್ಟೆಗಳಲ್ಲಿ ಕೆಲವು ಸೂಕ್ಷ್ಮಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಇರುವ ಸಾಧ್ಯತೆ ಹೆಚ್ಚಿರುತ್ತದೆ. ಅದು ಹಲವಾರು ಚರ್ಮದ ಸೋಂಕುಗಳಿಗೆ (Skin allergy) ಕಾರಣವಾಗಬಹುದು. ಫ್ಯಾಕ್ಟರಿಯಲ್ಲಿ ಬಟ್ಟೆ (Cloth)ಗಳನ್ನು ತಯಾರಿಸಿದ ನಂತರ, ಅಂಗಡಿಯನ್ನು ತಲುಪುವ ಮೊದಲು ಅವುಗಳನ್ನು ಪ್ಯಾಕ್ ಮಾಡಿ ವಿವಿಧ ಸಾರಿಗೆ ವಿಧಾನಗಳ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಲಾಗುತ್ತದೆ. ಬಟ್ಟೆಯನ್ನು ಎಲ್ಲಿ ತಯಾರಿಸಲಾಗಿದೆ, ಅದನ್ನು ಎಲ್ಲಿ ಇರಿಸಲಾಗಿದೆ ಮತ್ತು ಅದನ್ನು ಹೇಗೆ ಸಾಗಿಸಲಾಗಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚುವುದು ಕಷ್ಟ.
Home Remedies: ವಾರ್ಡ್ರೋಬ್‌ನಲ್ಲಿರೋ ಬಣ್ಣ ಮಾಸಿದ ಬಟ್ಟೆ ಈಗ್ಲೇ ಹೊರಗ್ ತೆಗಿರಿ
ತಯಾರಿಯ ರೀತಿ ಅಸ್ವಚ್ಛತೆಯಿಂದ ಕೂಡಿರಬಹುದು
ಹೊಸ ಬಟ್ಟೆಗಳನ್ನು ಹೊಲಿಯುವ ವೇಳೆ ಅವುಗಳ ಅಳತೆ ತೆಗೆದುಕೊಳ್ಳುವಾಗ ಅಥವಾ ಇನ್ನಿತರ ಸಂದರ್ಭಗಳಲ್ಲಿ ಅವುಗಳನ್ನು ನೆಲದ ಮೇಲೆ ಹಾಕಿರಬಹುದು. ಧೂಳು (Dust) ಕೊಳೆ ಅಂಟಿಕೊಂಡಿರಬಹುದು. ಇವು ನಿಮ್ಮ ಮೈಗೆ ತಾಕಿದರೆ ಗುಳ್ಳೆ ಅಥವಾ ಇತರ ಕಜ್ಜಿಗಳು ಮೂಡಬಹುದು. ಬಟ್ಟೆ ಸಿದ್ಧಪಡಿಸಿರುವ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ, ನಿಮ್ಮ ಹೊಸ ಉಡುಪು ಹಲವಾರು ರೋಗಕಾರಕಗಳು ಮತ್ತು ಸೂಕ್ಷ್ಮಜೀವಿಗಳೊಂದಿಗೆ ಸಂಪರ್ಕಕ್ಕೆ ಬಂದಿರಬಹುದು. ನೀವು ಈ ಸೂಕ್ಷ್ಮ ಜೀವಿಗಳನ್ನು ನೋಡಲು ಸಾಧ್ಯವಿಲ್ಲ ಆದರೆ ಅವುಗಳು ಅಸ್ತಿತ್ವದಲ್ಲಿಲ್ಲ ಎಂದು ಅರ್ಥವಲ್ಲ. ಆದ್ದರಿಂದ, ನಿಮ್ಮ ಸ್ವಂತ ಸುರಕ್ಷತೆಗಾಗಿ ಧರಿಸುವ ಮೊದಲು ನಿಮ್ಮ ಬಟ್ಟೆಗಳನ್ನು ಸ್ವಚ್ಛ (Clean)ಗೊಳಿಸುವುದು ಉತ್ತಮ.
ಹಲವಾರು ಜನರು ಬಟ್ಟೆ ಟ್ರೈ ಮಾಡಿರಬಹುದು
ಜನರು ಮಾಲ್, ಶಾಪ್‌ಗಳಿಗೆ ಬಟ್ಟೆಯ ಸೈಜ್ ಸರಿಹೊಂದುತ್ತದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಟ್ರಯಲ್ ಮಾಡುತ್ತಾರೆ. ಹೀಗೆ ಅಂಗಡಿಗೆ ಬಂದ ಹಲವರು ಬಟ್ಟೆಯನ್ನು ಟ್ರಯಲ್ ನೋಡಿರುತ್ತಾರೆ. ಮಳಿಗೆಯಲ್ಲಿ (Shop) ನಾವು ಬಟ್ಟೆ ಖರೀದಿಸುವ ಮೊದಲು ಅದನ್ನು ಎಷ್ಟು ಮಂದಿ ಅದನ್ನು ಟ್ರೈ ಮಾಡಿದ್ದರು ಎಂದು ನಿರ್ಧಿಷ್ಟವಾಗಿ ಹೇಳುವುದು ಕಷ್ಟ. ಹೀಗಾಗಿ ನೀವು ಅವುಗಳನ್ನು ಧರಿಸಿದಾಗ ಅವರ ಚರ್ಮದಿಂದ ಸತ್ತ ಚರ್ಮ ಮತ್ತು ಸೂಕ್ಷ್ಮಜೀವಿಗಳು ಬಟ್ಟೆಯ ಮೇಲೆ ಇರಬಹುದು. ಇದು ಡರ್ಮಟೈಟಿಸ್, ತುರಿಕೆ ಮತ್ತು ದದ್ದುಗಳಿಗೆ ಕಾರಣವಾಗಬಹುದು.
Interesting Facts: ಮುಕೇಶ್ ಅಂಬಾನಿ, ರತನ್ ಟಾಟಾ ಅವರೆಲ್ಲ ಈ ಬಣ್ಣದ ಬಟ್ಟೆ ಹಾಕೊಲ್ಲವೇಕೆ?
ಬಟ್ಟೆ ತಯಾರಿಗೆ ಬಳಸುವ ರಾಸಾಯನಿಕಗಳು
ವಿವಿಧ ರೀತಿಯ ರಾಸಾಯನಿಕಗಳನ್ನು (Chemical) ಮೊದಲು ಬಟ್ಟೆಯನ್ನು ತಯಾರಿಸಲು ಬಳಸಲಾಗುತ್ತದೆ ಮತ್ತು ನಂತರ ಅವುಗಳನ್ನು ನಿರ್ದಿಷ್ಟ ಬಣ್ಣಗಳಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಎಲ್ಲಾ ರಾಸಾಯನಿಕಗಳು ಚರ್ಮದ ಸಂಪರ್ಕಕ್ಕೆ ಬಂದಾಗ ತುರಿಕೆ ಮತ್ತು ಕೆಂಪು ಬಣ್ಣಕ್ಕೆ ಕಾರಣವಾಗಬಹುದು. ಇದಲ್ಲದೆ, ಬೆವರುವಿಕೆ ಮತ್ತು ಘರ್ಷಣೆಯು ಬಟ್ಟೆಯಿಂದ ಚದುರಿದ ಬಣ್ಣವನ್ನು ಹೊರಹಾಕಲು ಕಾರಣವಾಗಬಹುದು, ಇದು ಚರ್ಮದಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು.
ಬಟ್ಟೆಗಳನ್ನು ಧರಿಸುವ ಮೊದಲು ಒಗೆಯದೆ ಇರುವ ಮೂಲಕ ನೀವು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳನ್ನು (Health problem) ಅನುಭವಿಸದಿದ್ದರೂ, ದದ್ದುಗಳು ಮತ್ತು ಕಿರಿಕಿರಿಯು ಸ್ವಲ್ಪ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಧರಿಸುವ ಮೊದಲು ಬಟ್ಟೆ ಒಗೆಯುವುದು ಉತ್ತಮ ವೈಯಕ್ತಿಕ ನೈರ್ಮಲ್ಯವಾಗಿದೆ. ಇದಲ್ಲದೆ, ಹೊಸ ಬಟ್ಟೆಗಳು ಬೆವರನ್ನು ನೆನೆಸಲು ಸಾಧ್ಯವಾಗುವುದಿಲ್ಲ, ಅದು ಹೆಚ್ಚು ಕಿರಿಕಿರಿಯನ್ನು ಉಂಟುಮಾಡುತ್ತದೆ. ಶಿಶುಗಳ ಬಟ್ಟೆಗಳನ್ನು ಯಾವಾಗಲೂ ತೊಳೆಯಬೇಕು. ಏಕೆಂದರೆ ಅವರ ಚರ್ಮವು ವಯಸ್ಕರಿಗಿಂತ ಮೃದುವಾಗಿರುತ್ತದೆ.