ಮಗು ಹಾಲು ಸರಿಯಾಗಿ ಕುಡಿಯುತ್ತಿದೆಯೇ...

ತಾಯಿ ಅನುಕೂಲವಾದ ಭಂಗಿಯಲ್ಲಿ ಮಗುವಿಗೆ ಹಾಲೂಡುತ್ತಾಳೆ ಸರಿ. ಆದರೆ ಮಗುವಿಗೆ ಹಾಲು ಕುಡಿಯಲು ಆ ಭಂಗಿ ಸರಿಯಿದೆಯೇ ನೋಡಿ. ಏಕೆಂದರೆ ಕೆಲವೊಂದು ಹಾಲೂಡುವ ಭಂಗಿ ಮಗುವಿಗೆ ಉಸಿರುಗಟ್ಟಿಸುವಂಥಾ ಫೀಲ್ ಕೊಡಬಹುದು. ಕೆಲವೊಮ್ಮೆ ಸ್ತನತೊಟ್ಟು ಚಿಕ್ಕದಿದ್ದು ಮಗುವಿಗೆ ಹಾಲು ಹೀರಲು ಸಾಧ್ಯವಾಗದೇ ಇರಬಹುದು. ತಾಯಿಗೆ ಬೇರೇನೂ ಸಮಸ್ಯೆ ಇಲ್ಲದಿದ್ದಾಗ, ಮಗು ಸರಾಗವಾಗಿ ಹಾಲು ಕುಡಿಯುತ್ತಿದೆ ಅಂದಾಗ ಅದಕ್ಕೆ ಬೇಕಾದಷ್ಟು ಎದೆಹಾಲು ಸಾಮಾನ್ಯವಾಗಿ ಉತ್ಪತ್ತಿಯಾಗುತ್ತೆ. ಹಾಗಾಗಿ ಮೊದಲು ಮಗುವಿಗೆ ಸರಿಯಾಗಿ ಹಾಲು ಕುಡಿಸಲು ಸಾಧ್ಯವೇ ನೋಡಿ. ಚೆನ್ನಾಗಿ ಹಾಲು ಕುಡೀತಿದ್ದೂ ಹಾಲು ಕಡಿಮೆ ಆಗ್ತಿದೆ ಅಂದರೆ ಬೇರೇನು ಸಮಸ್ಯೆಯಾಗಿದೆ ಅಂತ ಗಮನಿಸಿ.

ತಾಯಿ ಎದೆಹಾಲುಣಿಸು: ಭವಿಷ್ಯದ ಭಾರತ ನಿನ್ನ ಕೂಸು!

ಆಗಾಗ ಹಾಲು ಕುಡಿಸುತ್ತಿರಿ

ಮಗು ಕುಡಿದು ಎದೆ ಹಾಲು ಕಡಿಮೆಯಾದಷ್ಟು ಮತ್ತಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಹಾಗಾಗಿ ಆಗಾಗ ಹಾಲೂಡುತ್ತಿದ್ದರೆ ಮತ್ತೆ ಮತ್ತೆ ತುಂಬಿಕೊಳ್ಳುತ್ತದೆ. ಇಡೀ ದಿನ ಪ್ರತೀ ಎರಡು ಗಂಟೆಗಳಿಗೊಮ್ಮೆ ಹಾಲೂಡಿಸಬೇಕು.

ದೇಹದಲ್ಲಿ ನೀರಿನಂಶ ಇರೋದು ಬಹಳ ಮುಖ್ಯ

ತಾಯಿ ಎಷ್ಟು ಪ್ರಮಾಣದಲ್ಲಿ ನೀರು ಕುಡೀತಾಳೆ ಅನ್ನೋದೂ ಹಾಲೂಡುವ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಒಂದು ವೇಳೆ ಮಗು ಬಯಸಿದಷ್ಟು ಹಾಲು ಉತ್ಪತ್ತಿ ಆಗಲ್ಲ ಅನಿಸಿದರೆ ಹೆಚ್ಚೆಚ್ಚು ನೀರು ಕುಡಿಯೋದನ್ನು ರೂಢಿಸಿಕೊಳ್ಳಿ. ಹಾಲು ಹೆಚ್ಚೆಚ್ಚು ಕುಡಿಯಿರಿ. ಆಹಾರದಲ್ಲಿ ಪೌಷ್ಠಿಕಾಂಶ ಇರುವಂತೆ ನೋಡಿಕೊಳ್ಳಿ. ಸಬ್ಬಸ್ಸಿಗೆಯಂಥ ಸೊಪ್ಪುಗಳ ತಂಬ್ಳಿ ಮಾಡಿ ಅನ್ನದ ಜೊತೆಗೆ ತಿಂದರೆ ಹಾಲು ಹೆಚ್ಚಾಗುತ್ತೆ.

ಮಗು Lefty ನಾ Righty? ತಾಯಿ ಎದೆ ಹಾಲುಣಿಸುವಾಗ್ಲೇ ಗೊತ್ತಾಗುತ್ತೆ!

ಎರಡೂ ಬದಿ ಹಾಲುಣಿಸೋದು ಅಭ್ಯಾಸ ಮಾಡಿ

ಒಂದೇ ಬದಿ ಹಾಲುಣಿಸೋದಕ್ಕಿಂತ ಎರಡೂ ಕಡೆ ಹಾಲುಣಿಸೋದರಿಂದ ಮಗುವಿಗೆ ಬೇಕಾದಷ್ಟು ಹಾಲು ಸಿಗುತ್ತೆ. ಬಲಭಾಗದಲ್ಲಿ ಹಾಲೂಡುತ್ತಿರುವಾಗ ಮಗುವಿಗೆ ಹಾಲು ಕಡಿಮೆಯಾಯ್ತು ಅನಿಸಿದರೆ ಎಡ ಭಾಗಕ್ಕೆ ಶಿಫ್ಟ್ ಮಾಡಿ. ಆಗ ಎರಡೂ ಕಡೆ ಹಾಲು ಉತ್ಪತ್ತಿ ಹೆಚ್ಚಾಗಿ ಮಗುವಿಗೆ ಹೊಟ್ಟೆ ತುಂಬುತ್ತೆ.