ಬೆಂಗಳೂರು(ಏ. 28)  ಮನೆಯಲ್ಲಿಯೇ ಐಸೋಲೇಶನ್ ನಲ್ಲಿರುವ ಜನರಿಗೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಲವು ನಿರ್ದೇಶನಗಳನ್ನು ನೀಡಿದೆ.  ಕೊರೋನಾದ ಆರಂಭಿಕ ಲಕ್ಷಣಗಳು ಅಥವಾ ಆ ಬಗೆಯ  ಸಿಮ್‌ ಟಮ್ಸ್ ಎದುರಿಸುತ್ತಿರುವವರು ಇದನ್ನು ಪಾಲಿಸಲೇಬೇಕು. ಹಾಗಾದರೆ ಮನೆಯಲ್ಲಿ ಇರುವವರು ಹೇಗಿರಬೇಕು?

ಸೆಲ್ಫ್ ಐಸೋಲೇಶನ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದ್ದು ಕೆಲ ನಿಯಮಾವಳಿಗಳನ್ನು ತಿಳಿಸಿದೆ.

ಕೊರೋನಾ ತಡೆಗೆ ಮನೆಯಲ್ಲೇ ಇದ್ದು ಮಾಹಬಹುದಾದ ಮುನ್ನೆಚ್ಚರಿಕಾ ಕ್ರಮಗಳು

ಹೋಮ್ ಐಸೋಲೇಶನ್ ಎಲಿಜಬಿಲಿಟಿ
* ಹೋಂ ಐಸೋಲೇಶನ್ ಪಡೆದುಕೊಳ್ಳುವ ವ್ಯಕ್ತಿ ವೈದ್ಯರಿಂದ ಅಥವಾ ಸಂಬಂಧಿಸಿದ ಮೆಡಿಕಲ್ ಆಫೀಸರ್  ರಿಂದ ಕೊರೋನಾದ ಆರಂಭಿಕ ಲಕ್ಷಣದಿಂದ ಬಳಲುತ್ತಿರುವ ಬಗ್ಗೆ ದೃಢೀಕರಣ ಬೇಕು.

* ಈ ಕೇಸುಗಳಲ್ಲಿ ಮನೆಯವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತದೆ.

* ಹೋಂ ಐಸೋಲೇಶನ್ ವ್ಯಕ್ತಿಗೆ ದಿನದ 24 ಗಂಟೆ ಸೇವೆ ನೀಡಲಾಗುತ್ತದೆ. ಒಬ್ಬ ಕೇರ್ ಗಿವರ್ ನನ್ನು ನೀಡಲಾಗುವುದು ಈತ ಆಸ್ಪತ್ರೆ ಮತ್ತು ಪೇಶಂಟ್ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತಾನೆ.

* ಕೇರ್ ಗೀವರ್ ಮತ್ತು ಕ್ಲೋಸ್ ಕಾಂಟಾಕ್ಟ್ ಹೊಂದಿರುವವರು ಸಹ Hydroxychloroquine ತೆಗೆದುಕೊಳ್ಳಬೇಕಾಗುತ್ತದೆ.

* ಆರೋಗ್ಯ ಸೇತು ಅಪ್ಲಿಕೇಶನ್  ಬಳಸಿಕೊಳ್ಳಬೇಕು.

8 ಜಿಲ್ಲೆಗಳಲ್ಲಿ ಮತ್ತಷ್ಟು ಬಿಗಿಯಾದ ಲಾಕ್ ಡೌನ್


* ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗೆ ಕಾಲಕಾಲಕ್ಕೆ ಪೇಶೆಂಟ್ ವರದಿ ನೀಡಲು ಬದ್ಧರಾಗಿರಬೇಕು .

*ಹೋಂ ಕ್ವಾರಂಟೈನ್ ನ ಇತರ ನಿಯಮಾವಳಿಗಳಿಗೂ ಬದ್ಧರಾಗಿರಬೇಕು 

* ಉಸಿರಾಟದಲ್ಲಿ ತೀವ್ರ ಸಮಸ್ಯೆ, ಎದೆ ನೋವು, ಮಾನಸಿಕ ಅಸಮತೋಲನ, ತುಟಿ ಮತ್ತು ಮುಖದ ಮೇಲೆ ಒಡೆದ ಗುರುತು, ಮೆಡಿಕಲ್ ಆಫಿಸರ್ ಸಲಹೆ ನೀಡಿದರೆ ತಕ್ಷಣ ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕು .

* ನಿರ್ದಿಷ್ಟ ಪಡಿಸಿದ ಅಧಿಕಾರಿ ಹೋಂ ಐಸೋಲೇಶನ್ ಮುಕ್ತಾಯ ಎಂದು ಘೋಷಣೆ ಮಾಡಿದ ಮೇಲೆ ವ್ಯಕ್ತಿ ಪ್ರೀ ಆಗುತ್ತಾನೆ.

* ಕೇರ್ ಗೀವರ್ ಗಳಿಗೂ ಕೆಲಸ ಸೂಚನೆ ನೀಡಲಾಗಿದೆ. ಮೂರು ಲೇಯರ್ ಮಾಸ್ಕ್ ಧರಿಸಬೇಕು, ಸಾನಿಟೈಸರ್ ಬಳಕೆ, ಗ್ಲೌಸ್ ಬಳಕೆ, ಪೆಶಂಟ್ ಗೆ ನೇರ ಸಂಪರ್ಕಕ್ಕೆ ಬಾರದಿರುವುದು ಮತ್ತು ಆಗಾಗ ತನ್ನ ಟೆಂಪರೇಶರ್ ಸೆಲ್ಫ್ ಮಾನಿಟರ್ ಮಾಡಿಕೋಳ್ಳಬೇಕು ಎಂದು ತಿಳಿಸಲಾಗಿದೆ.

* ಇನ್ನು ಪೇಶಂಟ್ ಸಹ ಸೂಚನೆಗಳನ್ನು ಪಾಲಿಸಬೇಕು, ತನ್ನ ವೈಯಕ್ತಿಕ ವಸ್ತುಗಳನ್ನು ಯಾರೊಂದಿಗೂ ಶೇರ್ ಮಾಡಿಕೊಳ್ಳಬಾರದು. ಮಾಸ್ಕ್ ಧರಿಸುವುದು ಕಡ್ಡಾಯ .