Asianet Suvarna News Asianet Suvarna News

ಚಳಿ ಎಂದ ಮೇಲೆ ಮಕ್ಕಳಿಗೆ ಅನಾರೋಗ್ಯ ಕಾಡೋದು ಸಹಜ, ವೀಸಿಂಗ್‌ಗೇನು ಪರಿಹಾರ?

ಚಳಿಗಾಲ ಬಂತೆಂದರೆ ಸಾಕು ಮಕ್ಕಳ ಆರೋಗ್ಯ ತಪ್ಪುತ್ತೆ. ಶೀತ, ಕೆಮ್ಮಿಗೆ ಸೀಮಿತವಾದ ಅನಾರೋಗ್ಯ ವೀಸಿಂಗ್‌ಗೂ ಟರ್ನ್ ಆದರೆ ಎಷ್ಟು ಹುಷಾರಿದ್ದರೂ ಸಾಲದು. 

wheeszing problem during winter among kids soulution to keep them healthy
Author
First Published Jan 9, 2024, 4:49 PM IST

- ಡಾ ಯೋಗೇಶ್ ಕುಮಾರ್ ಗುಪ್ತಾ, ಶಿಶುವೈದ್ಯ ಫೋರ್ಟಿಸ್ ಆಸ್ಪತ್ರೆ, 

ಚಳಿಗಾಲದ ಬಂತೆಂದರೆ 5 ವರ್ಷದೊಳಗಿನ ಮಕ್ಕಳಲ್ಲಿ ಕಾಡುವ ವ್ಹೀಜಿಂಗ್‌ ಸಮಸ್ಯೆಯಿಂದ ಕಾಪಾಡಿಕೊಳ್ಳಲು ಪೋಷಕರು ಹೆಣಗಾಡುತ್ತಾರೆ. ಮನೆಮದ್ದು ಎಂದೆಲ್ಲಾ ಸಾಕಷ್ಟು ಪ್ರಯತ್ನಿಸಿದರೂ ಕೆಲವೊಮ್ಮೆ ಮಕ್ಕಳು ಉಸಿರಾಟದ ಸಮಯದಲ್ಲಿ ಶಿಳ್ಳೆ ರೀತಿಯ ವ್ಹೀಸಿಂಗ್‌ ಬರುವುದನ್ನು ತಡೆಯೋದು ಕಷ್ಟ. ಇದರಿಂದ ಮಕ್ಕಳು ಸಹ ಉಸಿರಾಡಲು ಸಾಕಷ್ಟು ಕಷ್ಟಪಡುತ್ತಾರೆ. ಈ ಸಮಸ್ಯೆ ನಿವಾರಣೆಗೆ ಪೋಷಕರು ಏನೆಲ್ಲಾ ಕಾಳಜಿ ವಹಿಸಬಹುದು ಎಂಬುದಿಲ್ಲಿದೆ.

ಮಕ್ಕಳ ವ್ಹೀಜಿಂಗ್‌ಗೆ ಕಾರಣ:
*ವೈರಲ್‌ ಸೋಂಕು (Viral Infection): ಮಕ್ಕಳಲ್ಲಿ ಉಬ್ಬಸ ಕಾಣಿಸಲು ವೈರಲ್‌ ಸೋಂಕು ಕಾರಣವಾಗವಾಗಬಹುದು, ಚಳಿಗಾಲದಲ್ಲಿ ಶೀತಯುಕ್ತ ಪ್ರದೇಶದಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಹೆಚ್ಚು ಕ್ರಿಯಾಶೀಲವಾಗಿರಲಿದ್ದು, ಮಕ್ಕಳಿಗೆ ಸುಲಭವಾಗಿ ಹರಡಲಿದೆ. ಇದರಿಂದ ಮಕ್ಕಳಿಗೆ ಶೀತವಾಗಿ, ಇದು ಉಬ್ಬಸಕ್ಕೆ ಕಾರಣವಾಗಬಹುದು.
* ಆಸ್ತಮಾ: ಇನ್ನೂ ಕೆಲ ಮಕ್ಕಳಿಗೆ ಶ್ವಾಸನಾಳದ ಪೈಪ್‌ ಕಿರಿದಾಗಿ ನಿರ್ಮಾಣವಾಗಿದ್ದರೂ, ಉಬ್ಬಸ ಕಾಣಿಸಲಿದೆ, ಇದು ಸಾಮಾನ್ಯವಾಗಿ ಅನುವಂಶಿಕವಾಗಿ ಕಾಡಲಿದ್ದು, 13 ವರ್ಷದ ಬಳಿಕ ಮಕ್ಕಳನ್ನು ಹೆಚ್ಚು ಕಾಡಲಿದೆ. ಹೀಗಾಗಿ, ಪ್ರಾರಂಭದಲ್ಲಿಯೇ ಈ ಸಮಸ್ಯೆ ಬಗ್ಗೆ ವೈದ್ಯರನ್ನು ಕಾಣುವುದು ಉತ್ತಮ.
* ಅಲರ್ಜಿ (Allergy): ಮಕ್ಕಳ ಆರೋಗ್ಯವು ಅತಿ ಸೂಕ್ಷ್ಮವಾದ ಕಾರಣ, ಧೂಳಿನಿಂದಲೂ ವ್ಹೀಜಿಂಗ್‌ ಬರುವ ಸಾಧ್ಯತೆ ಇದೆ. ಇನ್ನು ಕೆಲವು ಆಟಿಕೆಗಳಲ್ಲಿನ ಕಣಗಳು, ಬಟ್ಟೆಯಲ್ಲಿನ ಸಣ್ಣ ಪಾರ್ಟಿಕಲ್ಸ್‌ ಮಕ್ಕಳಿಗೆ ಉಬ್ಬಸ ಕಾಡುವಂತೆ ಮಾಡಬಹುದು. ಹೀಗಾಗಿ ಮಗುವಿಗೆ ನೀಡುವ ಪ್ರತಿ ವಸ್ತುವನ್ನು ಶುಚಿಗೊಳಿಸಿ ನೀಡುವುದು ಉತ್ತಮ.
*  ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ (OSA): ನಿದ್ರೆಯ ಸಮಯದಲ್ಲಿ ಉಸಿರಾಟದ ಏರಿಳಿತದಿಂದ ಮಕ್ಕಳಲ್ಲಿ ಉಬ್ಬಸ ಮತ್ತು ಗೊರಕೆಗೆ ಕಾರಣವಾಗಬಹುದು.

ಅಮ್ಮನಾದ್ಮೇಲೆ ಕಾಡೋ ಅಪರಾಧಿ ಭಾವ, ಹಿಂಗ್ಯಾಕೆ ಮನಸ್ಸಿಗೆ ಕೋಪ, ಕಂಟ್ರೋಲ್ ಮಾಡ್ಕೊಳ್ಳಿ!

ಲಕ್ಷಣಗಳು:
ಮಕ್ಕಳಲ್ಲಿ ಉಬ್ಬಸವಿದೆಯೇ ಎಂಬುದನ್ನು ಈ ಲಕ್ಷಣಗಳು ನಿಮಗೆ ತಿಳಿಸಲಿದೆ. ಮಕ್ಕಳು ಉಸಿರಾಡಲು ಕಷ್ಟ ಪಡುತ್ತಿರುವುದು, ಪದೇ ಪದೇ ಕೆಮ್ಮುವುದು, ಕಟ್ಟಿದ ಮೂಗು, ಮಲಗಿದ್ದ ವೇಳೆ ಹೆಚ್ಚು ಗೊರಕೆ ಹೊಡೆಯುವುದು ಅಥವಾ ಉಸಿರಾಟಲು ಕಷ್ಟಪಡುತ್ತಿರುವುದು, ಹೆಚ್ಚು ಕಫ ಕಟ್ಟಿರುವುದು, ಎದೆಯ ಸ್ನಾಯು ಹಿಡಿದಂತಾಗುವು, ಕುತ್ತಿಗೆ ಮತ್ತು ಬೆರಳಿನ ಉಗುರುಗಳು ನೀಲಿಯಂತಾಗಿರುವುದು ಸಹ ಮಕ್ಕಳಲ್ಲಿ ಉಬ್ಬಸ ಇರುವುದನ್ನು ಕಾಣಬಹುದು. ಈ ಲಕ್ಷಣಗಳು ಕಂಡ ಬಂದ ಕೂಡಲೇ ಪೋಷಕರು ಜಾಗರೂಕರಾಗುವುದು ಒಳಿತು.

ಯಾವಾಗ ವೈದ್ಯರನ್ನು ಕಾಣಬೇಕು?
ಕೆಲವೊಮ್ಮೆ ಪೋಷಕರು ಮನೆಮದ್ದುಗಳಿಂದಲೇ ಇದನ್ನು ಪರಿಹಾರ ಮಾಡಿಕೊಳ್ಳುತ್ತಾರೆ, ಆದರೆ, ಕೆಲವೊಮ್ಮೆ ಈ ಉಬ್ಬಸ ಅತಿರೇಕವೆನಿಸಿದಾಗ ನಿರ್ಲಕ್ಷಿಸದೇ ವೈದ್ಯರನ್ನು ಕಾಣಿ. ಉದಾಹರಣೆಗೆ ಮಕ್ಕಳ ತುಟಿ ಅಥವಾ ಬೆರಳು ನೀಲಿ ಬಣ್ಣಕ್ಕೆ ತಿರುಗಿದರೆ, ಮಕ್ಕಳು ಉಸಿರಾಟದ ವೇಳೆ ಹೆಚ್ಚು ಉಸಿರನ್ನು ಬಿಡಲು ತೀರ ಕಷ್ಟಪಡುತ್ತಿದ್ದರೆ, ಮಕ್ಕಳು ಮಾತನಾಡಲು ಅಥವಾ ಅಳಲು ಸಾಧ್ಯವಾಗದೇ ಹೋದರೆ, 103 ಡಿಗ್ರಿಗಿಂತ ಹೆಚ್ಚು ಜ್ವರವಿದ್ದರೆ ತಪ್ಪದೇ ವೈದ್ಯರನ್ನು ಕಾಣುವುದು ಸೂಕ್ತ.

ಚಿಕಿತ್ಸೆ ಏನು?
ಮೊದಲಿಗೆ ಮಕ್ಕಳಲ್ಲಿ ವ್ಹೀಜಿಂಗ್‌ ಯಾವ ಕಾರಣಕ್ಕಾಗಿ ಬಂದಿದೆ ಎಂಬುದನ್ನು ಎದೆಯ X-Ray ಮತ್ತು ಶ್ವಾಸಕೋಶದ ಕಾರ್ಯ ಪರೀಕ್ಷೆ ಮೂಲಕ ತಿಳಿದು ಕೊಳ್ಳಬೇಕು. ಮಕ್ಕಳಲ್ಲಿ ವ್ಹೀಜಿಂಗ್‌ಗೆ ಕಾರಣವೇನು ಎಂಬುದನ್ನು ತಿಳಿದು ನಂತರ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ವೈರಲ್‌ ಸೋಂಕು (Viral Infection) ಹಾಗೂ ಅಸ್ತಮಾ, ಅಲರ್ಜಿಯಿಂದ ಉಬ್ಬಸವಾಗುತ್ತಿದ್ದರೆ ಇದಕ್ಕೆ ಔಷಧಗಳಿಂದ ಗುಣಪಡಿಸಬಹುದು, ಈ ಪ್ರಕರಣದಲ್ಲಿ ಹೆಚ್ಚು ತೀವ್ರವಾಗಿದ್ದರೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರಲಿದೆ. ಉಬ್ಬಸ ತಡೆಗಟ್ಟಲು ಸೂಕ್ತ ಚಿಕಿತ್ಸೆ ಎಂದರೆ ಯೋಗ ಮತ್ತು ಪ್ರಾಣಯಾಮ. ಮಕ್ಕಳಲ್ಲಿ ಉಸಿರಾಟದ ವ್ಯಾಯಾಮವನ್ನು ಪ್ರಾರಂಭದಿಂದಲೇ ಹೇಳಿಕೊಡುವುದರಿಂದ ಕ್ರಮೇಣವಾಗಿ ಕಡಿಮೆಯಾಗಲಿದೆ. ಜೊತೆಗೆ, ಆಹಾರ ಕ್ರಮಗಳಲ್ಲಿಯೂ ಸಹ ಒಂದಷ್ಟು ಬದಲಾವಣೆ ಮಾಡಿಕೊಳ್ಳುವುದು.  

ಮಕ್ಕಳ ಆಹಾರ ಕ್ರಮ ಹೇಗಿರಬೇಕು? ಅವರ ಬುದ್ಧಿಶಕ್ತಿಗೆ ಅಗತ್ಯವಾದ ಆಹಾರ ಪದ್ಧತಿ ಯಾವುದು ?

ಇನ್ನೇನು ಮಾಡಬೇಕು?
- ಮಕ್ಕಳು ಅಲರ್ಜಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು
- ನಿಯಮಿತ ಫ್ಲೂ ಲಸಿಕೆ ಹಾಕಿಸುವುದು
- ಉತ್ತಮ ನೈರ್ಮಲ್ಯ ಅಭ್ಯಾಸ ಮಾಡಿಸುವುದು
- ಸೆಕೆಂಡ್‌ಹ್ಯಾಂಡ್‌ ಹೊಗೆಗೆ ಒಡ್ಡಿಕೊಳ್ಳುವುದನ್ನು ತಡೆಯುವುದು.
- ಧೂಪ, ಸಾಂಬ್ರಾಣಿ ಇತರೆ ಹೊಗೆ ಹಾಗೂ ಪ್ರದೂಷಣೆಯಿಂದ ದೂರ ಇರುವುದು
- ಜಂಕ್‌ಫುಡ್‌ಗಳ ಅಭ್ಯಾಸ ತಪ್ಪಿಸುವುದು

Follow Us:
Download App:
  • android
  • ios