Asianet Suvarna News Asianet Suvarna News

ಕಂಟ್ರೋಲ್‌ ನಲ್ಲಿ ಇಲ್ಲದಿರೋದನ್ನ ಯಾಕೆ ನಿಯಂತ್ರಿಸಲು ಹೋಗ್ತೀರ? ಅದ್ರಿಂದ ನೋವೇ ಹೆಚ್ಚು

ಜೀವನದಲ್ಲಿ ನೆಮ್ಮದಿ ಹೊಂದಬೇಕು ಎನ್ನುವುದು ಎಲ್ಲರ ಆಸೆ. ಆದರೆ, ಅದಕ್ಕೆ ಒಂದಿಷ್ಟು ವಿವೇಚನೆ ಅಗತ್ಯ. ಜೀವನದಲ್ಲಿ ಯಾವುದು ನಮ್ಮ ನಿಯಂತ್ರಣದಲ್ಲಿ ಇಲ್ಲ, ಯಾವುದು ನಮ್ಮ ನಿಯಂತ್ರಣದಲ್ಲಿ ಇದೆ ಎನ್ನುವುದನ್ನು ಅರಿತುಕೊಂಡು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ವಿವೇಚನೆ ಎನಿಸಿಕೊಳ್ಳುತ್ತದೆ.
 

What we can control what not in life
Author
First Published Aug 20, 2023, 7:00 AM IST

ಜೀವನದಲ್ಲಿ ಯಶಸ್ಸು ಸಾಧಿಸಬೇಕು, ಅಂದುಕೊಂಡಿದ್ದೆಲ್ಲವೂ ನಮ್ಮದಾಗಬೇಕು ಎನ್ನುವುದು ಎಲ್ಲರ ಬಯಕೆ. ಕೊನೆಯ ಪಕ್ಷ ನೆಮ್ಮದಿಯಿಂದ ಜೀವಿಸಬೇಕು ಎಂದು ಅಂದುಕೊಳ್ಳುತ್ತೇವೆ. ಆದರೆ, ಎಲ್ಲರಿಗೂ ಯಶಸ್ಸು ಅಥವಾ ನೆಮ್ಮದಿ ಖಂಡಿತ ದೊರೆಯುವುದಿಲ್ಲ. ಏಕೆಂದರೆ, ಅದಕ್ಕೆ ಬೇಕಾದ ವಿವೇಚನೆಯೇ ನಮ್ಮಲ್ಲಿ ಇರುವುದಿಲ್ಲ. ವಿವೇಚನೆಯಿದ್ದರೆ ಖಂಡಿತವಾಗಿ ಜೀವನ ಸುಂದರವಾಗುತ್ತದೆ. ಯಾವುದನ್ನು ನಮಗೆ ನಿಯಂತ್ರಿಸಲು ಸಾಧ್ಯವಾಗುವುದಿಲ್ಲೋ, ಯಾವುದು ನಮ್ಮ ನಿಯಂತ್ರಣದಲ್ಲಿ ಇದೆಯೋ ಅವುಗಳ ಬಗ್ಗೆ ಸ್ಪಷ್ಟತೆ ಹೊಂದುವುದು ಮತ್ತು ಅವುಗಳನ್ನು ಸರಿಯಾಗಿ ನಿಭಾಯಿಸುವುದು ವಿವೇಚನೆಯನ್ನು ಆಧರಿಸಿರುತ್ತದೆ.

ಕೆಲವರನ್ನು ನೋಡಿ, ಎಷ್ಟು ಬುದ್ಧಿವಂತರಾದರೂ ವಿವೇಚನಾ ಶಕ್ತಿಯನ್ನು ಹೊಂದಿರುವುದಿಲ್ಲ. ವಿವೇಚನಾ ಶೂನ್ಯರಾಗಿದ್ದಾಗ ನಾವು ಅಂದುಕೊಂಡಿದ್ದು ಖಂಡಿತವಾಗಿ ನೆರವೇರುವುದಿಲ್ಲ. ಏಕೆಂದರೆ, ಅದಕ್ಕೆ ಬೇಕಾದ ಪ್ರಯತ್ನಗಳನ್ನು ನಾವು ಧನಾತ್ಮಕವಾಗಿ ಮಾಡಿರುವುದಿಲ್ಲ. ಹಠಮಾರಿ ಪ್ರವೃತ್ತಿಗೆ ಬಿದ್ದು ಇರುವುದನ್ನೂ ಕಳೆದುಕೊಳ್ಳುತ್ತೇವೆ. ಹೀಗಾಗಿ, ಮೊಟ್ಟಮೊದಲು ಜೀವನದಲ್ಲಿ ಯಾವುದು ನಮ್ಮ ನಿಯಂತ್ರಣದಲ್ಲಿದೆ, ಯಾವುದು ನಮ್ಮ ನಿಯಂತ್ರಣದಲ್ಲಿಲ್ಲ ಎನ್ನುವ ಬಗ್ಗೆ ಅತ್ಯಂತ ಸ್ಪಷ್ಟತೆ ಬೇಕಾಗುತ್ತದೆ. 

ಮನೆಯಲ್ಲಿರೋ ಕೆಟ್ಟ ವಾತಾವರಣ ಮನಸ್ಸಿನ ಮೇಲೂ ಪರಿಣಾಮ ಬೀರುತ್ತಿದ್ಯಾ?

ಯಾವುದು ನಿಯಂತ್ರಣದಲ್ಲಿಲ್ಲ?
•    ಮತ್ತೊಬ್ಬರ ಭಾವನೆಗಳು (Others Feelings)
ನಿಮ್ಮ ಬಗ್ಗೆ ಮತ್ತೊಬ್ಬರು ಏನು ಯೋಚಿಸುತ್ತಾರೆ (Think), ಅಂದುಕೊಳ್ಳುತ್ತಾರೆ, ಮಾತನಾಡಿಕೊಳ್ಳುತ್ತಾರೆ ಎನ್ನುವುದು ಖಂಡಿತವಾಗಿ ನಿಮ್ಮ ನಿಯಂತ್ರಣದಲ್ಲಿ (Control) ಇಲ್ಲ. ಹೀಗಾಗಿ, ಈ ಬಗ್ಗೆ ಯೋಚಿಸುವುದು ಅನಗತ್ಯ. ಒಂದೊಮ್ಮೆ ಅವರು ನಿಮ್ಮ ಬಗ್ಗೆ ಕೆಟ್ಟ ಮಾತುಗಳನ್ನೇ ಆಡಿದರೂ ತಲೆಕೆಡಿಸಿಕೊಳ್ಳುವುದು ಸರಿಯಲ್ಲ. ಏಕೆಂದರೆ, ಅದು ಅವರ ಭಾವನೆ. 

•    ಇತರರ ಉದ್ದೇಶ (Motive)
ಯಾರಿಗಾದರೂ ನಿಮಗೆ ಕೆಡುಕನ್ನೇ (Bad) ಮಾಡಬೇಕೆಂಬ ಉದ್ದೇಶ ಇದ್ದಿರಬಹುದು. ಆದರೆ, ಅದನ್ನು ನಿಯಂತ್ರಿಸಲು ಸಾಧ್ಯವೇ? ಹೀಗಾಗಿ, ಅದರ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ನಿಮ್ಮ ಪಥದಲ್ಲಿ ನೀವು ಸಾಗುವುದು ಉಚಿತ. ಅಂಥ ಉದ್ದೇಶದೊಂದಿಗೆ ಅವರು ನಿಮಗೆ ಮುಖಾಮುಖಿಯಾದಾಗ ಎದುರಿಸಬೇಕೆ (Face) ಹೊರತು ಅದರ ಬಗ್ಗೆಯೇ ಯೋಚಿಸುವುದರಿಂದ ನಿಮ್ಮ ಸಮಯ (Time) ವ್ಯರ್ಥವಾಗುತ್ತದೆ.

•    ಇತರರ ನಂಬಿಕೆಗಳು (Belief)
ಯಾರಿಗಾದರೂ ನಿಮ್ಮ ಬಗ್ಗೆ ತಪ್ಪು ತಿಳಿವಳಿಕೆ, ನಂಬಿಕೆ ಮೂಡಿದ್ದರೆ ಏನು ಮಾಡುತ್ತೀರಿ? ಅದನ್ನು ಹೋಗಲಾಡಿಸಲು ಪ್ರಯತ್ನ ಪಡುತ್ತ ಅನಗತ್ಯವಾಗಿ ಶ್ರಮ ಪಡುತ್ತೀರಾ? ನಿಮ್ಮ ಆದ್ಯತೆಯನ್ನು ಬಿಟ್ಟು ಇನ್ನೊಬ್ಬರ ಬಗ್ಗೆ ಗಮನಹರಿಸುವ ಬದಲು ಅವರ ನಂಬಿಕೆಗಳು ಅವರಿಗೆ ಎಂದು ಬಿಟ್ಟುಬಿಡುವುದು ಒಳ್ಳೆಯದು.

•    ಇತಿಹಾಸ (History)
ಆಗಿಹೋದ ಇತಿಹಾಸ ನಮ್ಮ ಕೈಯಲ್ಲಿರುತ್ತದೆಯೇ? ಒಂದೊಮ್ಮೆ ನೀವೇ ತಪ್ಪು (Mistake) ಮಾಡಿ, ಅದರ ಬಗ್ಗೆ ಪಶ್ಚಾತ್ತಾಪ (Regret) ಪಟ್ಟರೂ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ತಪ್ಪುಗಳಿಂದ ಪಾಠ ಕಲಿಯಬೇಕೇ ವಿನಾ ಆಗಿಹೋದುದರ ಬಗ್ಗೆ ಚಿಂತಿಸುವುದರಿಂದ ಹಾನಿಯೇ ಹೆಚ್ಚು.

•    ಬಾಹ್ಯ ಪರಿಸ್ಥಿತಿ (External Situation)
ನಿಮ್ಮನ್ನು ಹೊರತುಪಡಿಸಿ ಬೇರೆ ಯಾವುದೇ ಸಂಗತಿಗಳು ನಿಮ್ಮ ವ್ಯಾಪ್ತಿಗೆ, ನಿಯಂತ್ರಣಕ್ಕೆ ಒಳಪಟ್ಟಿಲ್ಲ ಎನ್ನುವುದು ಸತ್ಯವಾದ ಸಂಗತಿ. ಹೀಗಿರುವಾಗ ಯಾವುದೇ ಬಾಹ್ಯ ಪರಿಸ್ಥಿತಿಯ ಬಗ್ಗೆ ಚಿಂತಿತರಾಗುವುದು ನೋವನ್ನು (Pain) ತರುತ್ತದೆಯಷ್ಟೇ ಹೊರತು ಮತ್ತೇನಿಲ್ಲ. 

Mental Health: ವ್ಯಕ್ತಿತ್ವಕ್ಕೆ ಸಂಬಂಧಿಸಿದ ಗುಪ್ತ ಸಮಸ್ಯೆಗಳಿದ್ರೆ ಹೀಗೆಲ್ಲ ವರ್ತಿಸೋದು ಸಹಜ, ಎಚ್ಚರ

ನಿಯಂತ್ರಣದಲ್ಲಿರುವುದೇನು?
•    ನಿಮ್ಮ ವರ್ತನೆ (Behave) ನಿಮ್ಮದೇ ಕೈಯಲ್ಲಿದೆ. ಮತ್ತೊಬ್ಬರನ್ನು ಇದಕ್ಕೆ ಯಾವುದೇ ಕಾರಣಕ್ಕೂ ಹೊಣೆಗಾರರನ್ನಾಗಿ ಮಾಡುವುದು ಸಲ್ಲದು.
•    ನಿಮ್ಮ ಆರೋಗ್ಯವೂ (Health) ನಿಮ್ಮ ನಿಯಂತ್ರಣದಲ್ಲಿದೆ. ಪರಿಸ್ಥಿತಿಯನ್ನು ದೂಷಿಸುವುದರಿಂದ ಪ್ರಯೋಜನವಿಲ್ಲ. ಆರೋಗ್ಯಕ್ಕೆ ಬೇಕಾದುದನ್ನು ನೀವೇ ಅರಿತುಕೊಂಡು ಅಳವಡಿಸಿಕೊಳ್ಳಬೇಕು.
•    ಆಂತರಿಕ ಶಾಂತಿ (Inner Peace) ನಿಮ್ಮಲ್ಲೇ ಇದೆ. ಹೊರಗಿನ ಪರಿಸ್ಥಿತಿಯಿಂದ ಅದು ದಕ್ಕುವುದಿಲ್ಲ.
•    ನಿಮ್ಮ ಉತ್ಪಾದಕತೆ (Productivity), ಕ್ರಿಯಾಶೀಲತೆ, ಉತ್ಸಾಹ ಎಲ್ಲವೂ ನಿಮ್ಮದು.
•    ಹಾಗೆಯೇ, ಕೆಟ್ಟ ಮನಸ್ಥಿತಿಯೂ (Mentality) ನಿಮ್ಮದೇ. ಅದನ್ನು ನಿಯಂತ್ರಣಕ್ಕೆ ತರಬೇಕಾದವರೂ ನೀವೇ.
•    ನಿಮ್ಮ ಸಂಬಂಧ (Relation), ಸ್ನೇಹ (Friendship) ನಿಮ್ಮದು. ಅವುಗಳನ್ನು ಚೆನ್ನಾಗಿ ರೂಪಿಸಿಕೊಳ್ಳುವುದು ನಿಮ್ಮದೇ ಕೈಯಲ್ಲಿದೆ.
 

Follow Us:
Download App:
  • android
  • ios