ಒಂದ್ಸಲ ಕೊರೊನಾ ವೈರಸ್‌ ನಿಮ್ಮ ದೇಹವನ್ನು ಹೊಕ್ಕು ನಿಮ್ಮನ್ನು ನಖಶಿಖಾಂತ ಕೆಡವಿ ಹಾಕಿದರೆ ಏನಾಗುತ್ತದೆ ಎಂಬುದನ್ನು ಅದನ್ನು ಅನುಭವಿಸಿದವರೇ ಬಲ್ಲರು. ನೀವು ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಬರದೇ ಇರಬಹುದು; ಆದರೆ ಮನೆಯಲ್ಲೇ ಇದ್ದರೂ ಕೊರೊನಾ ನಿಮ್ಮ ದೇಹವನ್ನು ಹಣಿದುಹಾಕುತ್ತದೆ. ದೇಹದ ಶಕ್ತಿಯೆಲ್ಲವನ್ನೂ ಅದು ಬಸಿದುಹಾಕುತ್ತದೆ. ನಿಮ್ಮ ದೇಹದ ಇಮ್ಯುನಿಟಿ ಕೂಡ, ಕೊರೊನಾವನ್ನು ಎದುರಿಸಿ ಬಳಲಿರುತ್ತದೆ.

ಹೀಗಾಗಿ ಕೊರೊನಾ ಟೈಮ್‌ನಲ್ಲಿ ಹಾಗೂ ಅದರ ನಂತರ ನಿಮ್ಮ ಆಹಾರಕ್ರಮ ಚೆನ್ನಾಗಿ, ಸಂತುಲಿತ ರೀತಿಯಲ್ಲಿ ಇರಬೇಕಾದುದು ಮುಖ್ಯ. ಅದು ಹೇಗೆ? ಡಯಟಿಶಿಯನ್‌ಗಳು ಏನು ಹೇಳುತ್ತಾರೆ?

- ಇಂತಹ ಸಮಯದಲ್ಲಿ ಪ್ಯಾಕ್ ಮಾಡಿದ ಆಹಾರವನ್ನು ಸೇವಿಸಬೇಡಿ. ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿ. ಅರಿಶಿನ, ಬೆಳ್ಳುಳ್ಳಿ, ಶುಂಠಿ, ಹಸಿರು ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಹೊರಗಿನ ಆಹಾರ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ದುರ್ಬಲಗೊಳಿಸುಬಹುದು. ಆರೋಗ್ಯಕರವಾದ, ಮನೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಬೇಕು. ಈಗ ಎಲ್ಲಾ ರೀತಿಯ ಜಂಕ್ ಫುಡ್‌ಗಳನ್ನು ತಪ್ಪಿಸಲು ತಜ್ಞರು ಶಿಫಾರಸ್ಸು ಮಾಡುತ್ತಾರೆ.
- ಸಾಮಾನ್ಯವಾಗಿ ಈಗ ಎಲ್ಲರೂ ಮನೆಯಲ್ಲೇ ಇರುವ ಕಾರಣ, ಫ್ಯಾಮಿಲಿ ಸಮೇತ ಭರ್ಜರಿ ಭೋಜನ ಮಾಡೋಣ ಎಂದು ಪಿಜ್ಝಾ, ಫ್ರೈಡ್ ಚಿಕನ್‌ ಮುಂತಾದ ಆಹಾರವನ್ನು ಆನ್‌ಲೈನ್‌ ಆರ್ಡರ್ ಮಾಡಿ ಸೇವಿಸುತ್ತಾರೆ. ಆದರೆ ಇದು ನಿಮ್ಮ ದೇಹಕ್ಕೆ ಹೆಚ್ಚಿನ ಇಮ್ಯುನಿಟಿಯನ್ನೇನೂ ಸೇರಿಸುವುದಿಲ್ಲ. ಬದಲಾಗಿ ಬೊಜ್ಜನ್ನು ಸೇರಿಸುತ್ತದೆ. ಬೊಜ್ಜು ಅಪಾಯಕಾರಿ. 
- ಮೊಳಕೆ ಕಾಳು ಸೇವಿಸಿ. ಮೊಟ್ಟೆಯ ಹಳದಿ ಮತ್ತು ಬಿಳಿ ಎರಡೂ ಭಾಗಗಳೂ ಶ್ರೇಷ್ಟ. ಇವು ಪ್ರೊಟೀನ್ ರಿಚ್ ಆಹಾರಗಳು. ಪ್ರೊಟೀನ್‌ ನಿಮ್ಮ ದೇಹಕ್ಕೆ ಈಗ ಅಗತ್ಯವಾಗಿ ಬೇಕು. ಅದು ದೇಹದ ಎಲ್ಲ ಅಂಗಗಳಿಗೂ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. 

ಬೆಳ್ಳುಳ್ಳಿ ತಿನ್ನೋದ್ರಿಂದ ಮಾತ್ರವಲ್ಲ, ದಿಂಬು ಕೆಳಿಗಿಟ್ಟರೂ ಇವೆ ಲಾಭ! ...

- ಹಣ್ಣುಗಳನ್ನು ಸೇವಿಸುವಾಗ ಆಯ್ದುಕೊಂಡು ಸೇವಿಸಿ. ಕಿತ್ತಳೆ, ಮೂಸಂಬಿ ಮುಂತಾದ ನೀರಿನ ಅಂಶ ಹೆಚ್ಚು ಇರುವ, ಪಪ್ಪಾಯಿ ಚಿಕ್ಕು ಮುಂತಾದ ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚು ಇರುವ, ಪೊಟ್ಯಾಶಿಯಂ ಸಮೃದ್ಧವಾಗಿರುವ ಬ್ಲೂ ಬೆರ್ರಿ, ನೇರಳೆ,  ಹಣ್ಣುಗಳನ್ನು ಸೇವಿಸಿ. ಇದು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 
- ಎಲ್ಲ ಬಗೆಯ ತರಕಾರಿ ಸೇವಿಸಿ. ಅದರಲ್ಲೂ ಕ್ಯಾರೆಟ್ ಬೀಟ್‌ರೂಟ್ ಮುಂತಾದ ಗಡ್ಡೆಗಳಿಗಿಂತಲೂ ಹಸಿರು ತರಕಾರಿ ಅತ್ಯಂತ ಶ್ರೇಷ್ಠ. ಹೂಕೋಸು, ಬೀನ್ಸ್, ನವಿಲುಕೋಸು, ಹೀರೆಕಾಯಿ, ಪಡುವಲಕಾಯಿ ,ಸೌತೆಕಾಯಿ ಇತ್ಯಾದಿಗಳು ಒಳ್ಳೆಯದು. ನಿಮ್ಮ ಆಹಾರದಲ್ಲಿ ತರಕಾರಿ ಸೂಪ್ ಅಥವಾ ಸಾರು ಸೇರಿಸಿ. ಇದು ಜೀರ್ಣಿಸಿಕೊಳ್ಳಲು ಸುಲಭ ಮತ್ತು ಸಮೃದ್ಧವಾದ ನಾರಿನಂಶವನ್ನು ಹೊಂದಿರುತ್ತದೆ. ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. 
- ನಿಮ್ಮ ಆಹಾರದಲ್ಲಿ ತೆಂಗಿನ ನೀರು, ಕಂದು ಅಕ್ಕಿ ಸೇರಿಸಿ. ಕುಚ್ಚಲಕ್ಕಿಯ ಗಂಜಿ ಮಾಡಿಕೊಂಡು ಸೇವಿಸುವುದು ಶ್ರೇಷ್ಠ. ಗಂಜಿಯ ತಿಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಳೆಹಣ್ಣು ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಆಲೂಗಡ್ಡೆ ಮಿತವಾಗಿ ಸೇವಿಸಬಹುದು. 
- ತಜ್ಞರ ಪ್ರಕಾರ ಚೀಸೀ ಭಕ್ಷ್ಯಗಳು, ಕ್ರೀಮ್ ಸಾಸ್, ಹುರಿದ ಆಹಾರಗಳು, ಕೆಂಪು ಮಾಂಸ, ಸಕ್ಕರೆ ಆಹಾರಗಳು, ಏರೇಟೆಡ್ ಪಾನೀಯಗಳನ್ನು ಸೇವಿಸಬಾರದು.

#ChinaMade ಈ ಕ್ಯೂಟ್ ಗೊಂಬೆಗಳು ಸಿಕ್ಕಾಪಟ್ಟೆ ಡೇಂಜರಸ್, ಹೇಗೆ ಗೊತ್ತೇ? ...

- ಮದ್ಯಪಾನ ಬೇಡ, ಧೂಮಪಾನವೂ ಬೇಡ. ಮದ್ಯ ನಿಮ್ಮ ಲಿವರ್‌ ಅನ್ನು ಡ್ಯಾಮೇಜ್ ಮಾಡುತ್ತದೆ. ಕೆಟ್ಟುಹೋದ ಲಿವರ್‌, ಬ್ಲ್ಯಾಕ್ ಫಂಗಸ್‌ ಬೆಳೆಯಲು ನೆಲೆಯಾಗುತ್ತದೆ. ಧೂಮಪಾನದಿಂದ ಶ್ವಾಸಕೋಶ ಸುಟ್ಟುಹೋಗುತ್ತದೆ. ಕೊರೊನಾ ವೈರಸ್‌ಗೆ ಕೆಟ್ಟುಹೋಗುತ್ತಿರುವ ಶ್ವಾಸಕೋಶ ಕಂಡರೆ ಸಿಕ್ಕಾಪಟ್ಟೆ ಪ್ರೀತಿ. ಬಲುಬೇಗ ಅಲ್ಲಿ ಸೇರಿಕೊಂಡುಬಿಡುತ್ತದೆ. 
- ಕೋವಿಡ್ ಆಗಲೀ ಅಥವಾ ಇನ್ಯಾವುದೇ ಬಗೆಯ ಜ್ವರವಾಗಲೀ (ಡೆಂಗೆ, ಮಲೇರಿಯಾ, ಚಿಕುನ್ ಗುನ್ಯಾ) ಅದರಿಂದ ನೀವು ಚೇತರಿಸಿಕೊಂಡ ಬಳಿಕ ನಿಮ್ಮ ದೇಹದ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಒಣಹಣ್ಣುಗಳನ್ನು ಸೇವಿಸಬೇಕು. ರಾತ್ರಿ ನೆನೆಹಾಕಿದ ಬಾದಾಮಿ, ಒಣದ್ರಾಕ್ಷಿಗಳನ್ನು ಮುಂಜಾನೆ ಖಾಲಿ ಹೊಟ್ಟೆಗೆ ಸೇವಿಸಿ. ಅಂಜೂರ, ಗೋಡಂಬಿ, ಖರ್ಜೂರ ಇವುಗಳೂ ನಿಮ್ಮ ಮೆನುವಿನಲ್ಲಿ ಇರಲಿ. 

ಕೊರೋನಾದಿಂದ ಮಕ್ಕಳನ್ನ ರಕ್ಷಣೆ ಮಾಡುವುದು ಹೇಗೆ? ವೈದ್ಯರು ಹೇಳ್ತಾರೆ ಕೇಳಿ ...

- ಹಾಲು ಇತರ ಸಮಯದಲ್ಲಿ ಒಳ್ಳೆಯದು. ಆದರೆ ಈಗ ಅಷ್ಟು ಒಳ್ಳೆಯದಲ್ಲ. ತುಪ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಹಾಲಿನಿಂದ ಮಾಡಿದ ಕಾಫಿ ಮತ್ತು ಟೀಗಳನ್ನು ಆದಷ್ಟು ಕಡಿಮೆ ಸೇವಿಸಿ. ಇವು ಕೆಫೀನ್‌ಯುಕ್ತವಾಗಿದ್ದು, ನಿಮ್ಮ ದೇಹಕ್ಕೆ ಸುಳ್ಳು ಚೈತನ್ಯದ ಭರವಸೆ ನೀಡುತ್ತದೆ.