#ChinaMade ಈ ಕ್ಯೂಟ್ ಗೊಂಬೆಗಳು ಸಿಕ್ಕಾಪಟ್ಟೆ ಡೇಂಜರಸ್, ಹೇಗೆ ಗೊತ್ತೇ?
ಮಕ್ಕಳು ಖುಷಿಖುಷಿಯಾಗಿ ನೀರು ಚಿಮ್ಮಿಸಿಕೊಂಡು ಆಡುವ ಬಾತುಕೋಳಿ ಮುಂತಾದ ರಬ್ಬರ್ ಟಬ್ ಟಾಯ್‌ಗಳಿಂದ ಆಗುವ ಅಪಾಯ ತಿಳಿದರೆ ನೀವು ದಂಗಾಗುತ್ತೀರಿ.
ಈ ಕ್ಯೂಟ್ ಗೊಂಬೆಗಳನ್ನು ನೀವು ನೋಡಿರಬಹುದು, ನಿಮ್ಮ ಮಗು ಇವುಗಳಲ್ಲಿ ಆಡುತ್ತಿರಬಹುದು. ಇವು ಎಲ್ಲೆಲ್ಲೂ ಸಿಗುತ್ತವೆ. ಹೆಚ್ಚಾಗಿ ಚೈನಾ ಮೇಡ್ ಆಗಿರುವ ಈ ಗೊಂಬೆಗಳು ರಬ್ಬರ್‌ನವು. ನೋಡೋಕೆ ಕ್ಯೂಟಾಗಿರುವ ಹಾಗೂ ಆಡೋಕೆ ಮೆತ್ತಮೆತ್ತಗೆ ಚೆನ್ನಾಗಿದೆ ಅನಿಸುವ ಇವುಗಳಿಂದ ಏನಾಗುತ್ತದೆ ಎಂಬುದನ್ನು ತಿಳಿದರೆ ನೀವು ಇವುಗಳ ಸಹವಾಸ ಮಾಡಲಾರಿರಿ.
ಇನ್‌ಸ್ಟಗ್ರಾಮ್‌ನಲ್ಲಿ ಒಬ್ಬಾಕೆ ತಾಯಿ, ಈ ಗೊಂಬೆಗಳಿಂದ ತನ್ನ ಮಗುವಿಗೆ ಏನಾಯಿತು ಎಂಬುದನ್ನು ಬರೆದುಕೊಂಡಿದ್ದಾಳೆ.
ಜ್ವರ ಬಂದಿದ್ಯಾ? ಥರ್ಮಾಮೀಟರ್ ಹೇಗೆ ಯೂಸ್ ಮಾಡ್ಬೇಕು? ...
ನನ್ನ ಮಗ ಬಾಟ್‌ಟಬ್‌ನಲ್ಲಿ ಈ ಡಕ್ ಗೊಂಬೆಗಳನ್ನು ಇಟ್ಟುಕೊಂಡು ಆಡುವುದನ್ನು ಇಷ್ಟಪಡುತ್ತಾನೆ. ಅದನ್ನು ಮುಳುಗಿಸಿದಾಗ ಅದರಲ್ಲಿ ನೀರು ತುಂಬಿಕೊಳ್ಳುತ್ತದೆ ಹಾಗೂ ಅದನ್ನು ಒತ್ತಿ ಹೊರಗೆ ನೀರನ್ನು ಚಿಮ್ಮಿಸಬಹುದು. ಮಕ್ಕಳಿಗೆ ಇದು ಖುಷಿ ನೀಡುವ ಸಂಗತಿ. ನನ್ನ ಮಗನೂ ಹಾಗೇ. ಅಂದೂ ಕೂಡ ಬಾತ್‌ಟಬ್‌ನಲ್ಲಿ ಆತ ಹಾಗೇ ಆಡಿದ. ಇದಾಗಿ ರಾತ್ರಿಯ ಹೊತ್ತಿಗೆ ಆತನ ಕಣ್ಣುಗಳು ಕೆಂಪಾದವು. ಅವುಗಳಲ್ಲಿ ನೀರು ತುಂಬಿಕೊಂಡಿತ್ತು. ಸ್ವಲ್ಪ ಗಾಬರಿಯಾದರೂ, ಡಾಕ್ಟರ್‌ಗೆ ಫೋನ್ ಮಾಡಿ ಅವರಿಂದ ಸಲಹೆ ಪಡೆದು, ಕಣ್ಣಿನ ಡ್ರಾಪ್ಸ್ ಹಾಕಿದೆ.
ಅಂದು ನಡುರಾತ್ರಿ ಎಚ್ಚರಾಗಿ ನೋಡಿದರೆ, ಶಾಕ್ ಆಯ್ತು. ಮಗ ಅಳುತ್ತಿದ್ದ. ಕಣ್ಣುಗಳು ಕೆಂಪಾಗಿ ಕೆಂಡದ ಉಂಡೆಗಳಂತೆ ಆಗಿದ್ದವು. ಅವುಗಳಿಂದ ಒಂದೇ ಸಮನೆ ನೀರು ಹೊರಬರುತ್ತಾ ಇತ್ತು. ಅವನಿಗೆ ಕಣ್ಣು ಬಿಡಲೇ ಆಗುತ್ತಿರಲಿಲ್ಲ ಮತ್ತು ಏನೂ ಕಾಣುತ್ತಿರಲಿಲ್ಲ. ಕೂಡಲೇ ಡಾಕ್ಟರ್ ಬಳಿಗೆ ಧಾವಿಸಿದೆ. ಮೈ ಜ್ವರದಿಂದ ಸುಡುತ್ತಿತ್ತು. ಹುಬ್ಬಿನ ಭಾಗವೂ ಉಬ್ಬಿಕೊಂಡಿತ್ತು. ಸೆಲ್ಯುಲೈಟಿಸ್ ಆರಂಭವಾಗಿ ಆತನ ಎರಡೂ ಕಣ್ಣುಗಳಿಗೆ ಹಬ್ಬಿಕೊಂಡಿತು. ಮುಖ ಬಾತುಕೊಂಡಿತ್ತು. ಕುಡಲೇ ಆಂಟಿಬಯಾಟಿಕ್ ಹಾಗೂ ಔಷಧ ಕೊಡಲಾಯಿತು. ಸಿಟಿ ಸ್ಕ್ಯಾನ್ ಮಾಡಲಾಯಿತು.
ಸರಿಯಾಗಿ ಟೀ ಮಾಡಿ ಕುಡಿಯುವುದು ಹೇಗೆ? ಜೋಗಿ ಹೇಳ್ತಾರೆ! ...
ಮಗುವಿನ ಕಣ್ಣುಗಳ ದೃಷ್ಟಿಯೇ ಹೊರಟುಹೋಗುವ ಸಾಧ್ಯತೆಯೂ ಇದೆ ಎಂದು ಡಾಕ್ಟರ್ ಎಚ್ಚರಿಸಿದರು. ಆದರೆ ದೇವರ ದಯೆ, ಹಾಗೇನೂ ಆಗಲಿಲ್ಲ. ಪುಣ್ಯವಶಾತ್, ಹಲವು ದಿನಗಳ ಒದ್ದಾಟದಿಂದ ಅವನ ದೃಷ್ಟಿ ಮರಳಿತು.
ಅರ್ಥ ಮಾಡಿಕೊಳ್ಳಿ. ಟಬ್ ಟಾಯ್‌ಗಳನ್ನು ಎಂದಿಗೂ ಉಪಯೋಗಿಸಬೇಡಿ. ಅವುಗಳಿಂದ ಖುಷಿಗಿಂತ ಹಾನಿಯೇ ಹೆಚ್ಚು.
ತಜ್ಞರು, ವೈದ್ಯರ ಎಚ್ಚರಿಸುತ್ತಾರೆ.
- ಟಬ್ ಟಾಯ್‌ಗಳನ್ನು ಒಳಗಡೆ ಕ್ಲೀನ್ ಮಾಡೋಕೆ ಆಗೋಲ್ಲ. ಅದರಲ್ಲಿ ಬ್ಯಾಕ್ಟೀರಿಯಾಗಳು ತುಂಬಿಕೊಳ್ಳುತ್ತವೆ.
- ನೀರನ್ನು ತುಂಬಿಸಿ ಚಿಮ್ಮಿಸುವಾಗ ಈ ಬ್ಯಾಕ್ಟೀರಿಯಾಗಳು ಅಥವಾ ವೈರಸ್‌ಗಳು ಅಥವಾ ಸೋಂಕುಕಾರಕ ಫಂಗಸ್‌ಗಳು ಹೊರಬಂದು ನಿಮ್ಮ ಕಣ್ಣಿನ ಅಥವಾ ಚರ್ಮದ ಸಂಪರ್ಕಕ್ಕೆ ಬರಬಹುದು.
- ಅದರಿಂದ ಚರ್ಮದ ಕಾಯಿಲೆ ಅಥವಾ ಕಣ್ಣಿನ ಸಮಸ್ಯೆ ಶುರುವಾಗುವುದು ಖಾತ್ರಿ.
- ಬೇಕಿದ್ದರೆ ನೀವೇ ಬಳಸಿದ ಒಂದು ಟಬ್ ಟಾಯ್ ಅನ್ನು ಕತ್ತರಿಸಿ ನೋಡಿ, ಒಳಗೆ ಕಪ್ಪಾಗಿ, ಕೊಳಕು ತುಂಬಿಕೊಂಡಿರುತ್ತದೆ. ಇದೇ ಬ್ಯಾಕ್ಟೀರಿಯಾಗಳ ತಾಣ.
ಹಾಗಿದ್ದರೆ ಇದಕ್ಕೆ ಪರ್ಯಾಯವೇನು?
ಇತರ ಗೊಂಬೆಗಳನ್ನು ಬಳಸಿ. ತೂತಿಲ್ಲದ ರಬ್ಬರ್ ಗೊಂಬೆಗಳು ಓಕೆ, ಇದನ್ನು ಆಗಾಗ ಸ್ವಚ್ಛಗೊಳಿಸಬಹುದು. ಬಟ್ಟೆಯ ಗೊಂಬೆಗಳಾದರೆ ಆಗಾಗ ತೊಳೆದು ಒಣಗಿಸಬೇಕು. ಟಪ್ಪರ್‌ವೇರ್ ಐಟಂಗಳು ಓಕೆ. ಪ್ಲಾಸ್ಟಿಕ್ ಬಾಟಲ್‌ಗಳನ್ನೂ ಒಂದೆರಡು ಬಾರಿಗೆ ನೀರು ಚಿಮ್ಮಿಸಲು ಬಳಸಬಹುದು. ಅನುಮಾನವಿದ್ದಾಗ, ಈ ನೀರು ಚಿಮ್ಮಿಸುವ ಆಟದಲ್ಲಿ ಕಣ್ಣಿಗೆ ಯಾವತ್ತೂ ನೀರು ಚಿಮ್ಮಿಸಬೇಡಿ. ಆಟದ ಖುಷಿ ಒಂದು ಕ್ಷಣದ್ದು, ಆದರೆ ದೃಷ್ಟಿ ಯಾವತ್ತೂ ಇರಬೇಕಾದ್ದು. ಹೀಗಾಗಿ ಇಂಥ ಅಪಾಯಕಾರಿ ಟಾಯ್‌ಗಳನ್ನು ಮಕ್ಕಳಿಗೆ ಕೊಡಬೇಡಿ. ಅವು ಮೇಲ್ನೋಟಕ್ಕೆ ಚಂದ ಕಂಡರೂ ಒಳಗೊಳಗೇ ತಂದಿಡುವ ಅಪಾಯ ಅನೂಹ್ಯ ಎಂದು ಎಚ್ಚರಿಸುತ್ತಾರೆ ವೈದ್ಯರು.
ಗುಪ್ತಾಂಗ, ಚರ್ಮ, ಮೆದುಳಿಗೆ ಹಾನಿ, ಬ್ಲ್ಯಾಕ್ ಫಂಗಸ್‌ಗಿಂತಲೂ ಡೇಂಜರ್ ಈ ವೈಟ್ ಫಂಗಸ್! ...