Asianet Suvarna News Asianet Suvarna News

Murugha Sri case: ಪುರುಷತ್ವ ಪರೀಕ್ಷೆ ಎಂದರೇನು ? ಟೆಸ್ಟ್ ಯಾವ ರೀತಿ ನಡೆಯುತ್ತೆ ?

ಮುರುಘಾ ಮಠದ ಶಿವಾಚಾರ್ಯ ಶರಣರ ಪುರುಷತ್ವ ಪರೀಕ್ಷೆ ನಡೆಸಲಾಗಿದ್ದು ಅವರ ಗಂಡಸ್ತನ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. ಇಷ್ಟಕ್ಕೂ ಪುರುಷತ್ವ ಪರೀಕ್ಷೆ ಎಂದರೇನು? ಇದನ್ನು ಹೇಗೆ ಮಾಡಲಾಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

What Is Virility Test, How Is The Test Conducted Vin
Author
First Published Sep 3, 2022, 1:10 PM IST

ಮುರುಘಾ ಮಠದ ಶಿವಾಚಾರ್ಯ ಶರಣರ ಪುರುಷತ್ವ ಪರೀಕ್ಷೆ ನಡೆಸಲಾಗಿದ್ದು ಅವರ ಗಂಡಸ್ತನ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಸಂಜೆಯೇ ಅವರನ್ನು ಪರೀಕ್ಷೆಗೊಳಪಡಿಸಲಾಗಿದ್ದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಈಗಾಗಲೇ ವರದಿ ನೀಡಿದ್ದಾರೆ. ಮೂಲಗಳ ಪ್ರಕಾರ, ನಿನ್ನೆ ಸಂಜೆಯೇ ಶಿವಾಚಾರ್ಯರಿಗೆ ಪುರುಷತ್ವ ಪರೀಕ್ಷೆ (Shivacharya Seer undergoes fertility test) ನಡೆಸಲಾಗಿತ್ತು. ಇಂದು ಬೆಳಗ್ಗೆಯೇ ಈ ಸಂಬಂಧ ವರದಿಯನ್ನು ಕೂಡ ನೀಡಲಾಗಿದೆ. ಉಳಿದ ಮಾದರಿಗಳನ್ನು ಮಡಿವಾಳದ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಈ ಹಿಂದೆ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಪುರುಷನಲ್ಲ ಎಂದು ಅಫಿಡವಿಟ್‌ ಸಲ್ಲಿಸಿದರೆ ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿತ್ತು. ನಿತ್ಯಾನಂದ ಪ್ರಕರಣದಲ್ಲಿ ಇದೇ ರೀತಿ ಅಫಿಡವಿಟ್‌ ಸಲ್ಲಿಕೆಯ ನಂತರ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಅಸಾರಾಂ ಬಾಪುವನ್ನು ಕೂಡ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಷ್ಟಕ್ಕೂ ಪುರುಷತ್ವ ಪರೀಕ್ಷೆ ಎಂದರೇನು? ಇದನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. 

ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸುವ ಪರೀಕ್ಷೆ
ಲೈಂಗಿಕ ಕಿರುಕುಳ (Sexual harrasment), ಅತ್ಯಾಚಾರ (Rape) ಮುಂತಾದ ದೂರುಗಳು ಕೇಳಿ ಬಂದಾಗ ಆರೋಪಿ ಪುರುಷನ ಲೈಂಗಿಕ (Sex) ಸಾಮರ್ಥ್ಯ ಅಳೆಯಲು ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ (Test) ನಡೆಸಲಾಗುತ್ತದೆ. ಇದು ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸಲು ನಡೆಸುವ ಪರೀಕ್ಷೆಯಾಗಿದೆ. ಪುರುಷರ ಜನನಾಂಗ ನಿಮಿರುವಿಕೆ, ವೀರ್ಯ ವಿಶ್ಲೇಷಣೆ, ಶಿಶ್ನಕ್ಕೆ ಪೂರೈಕೆಯಾಗುವ ರಕ್ತನಾಳಗಳ ಪರೀಕ್ಷೆಯನ್ನು ಮುಖ್ಯವಾಗಿ ನಡೆಸಲಾಗುತ್ತದೆ.  ಆಂಡ್ರೋಲಜಿಸ್ಟ್ ಸೇರಿದಂತೆ ನಾಲ್ವರು ತಜ್ಞ ವೈದ್ಯರ ತಂಡ ಈ ಪರೀಕ್ಷೆ ನಡೆಸುತ್ತಾರೆ. 

Murugha Sri case: ಮುರುಘಾ ಶರಣರಿಗೆ ಪುರುಷತ್ವ ಪರೀಕ್ಷೆ, ವರದಿಯಲ್ಲಿ ಗಂಡಸ್ತನ ಸಾಬೀತು

ವೀರ್ಯ ವಿಶ್ಲೇಷಣೆ (A Semen Analysis) 
ಪುರುಷನ (Men) ವೀರ್ಯ ಮತ್ತು ವೀರ್ಯಾಣುಗಳ ಕೆಲ ಗುಣಲಕ್ಷಣಗಳ ಮೌಲ್ಯಮಾಪನ ನಡೆಸುವ ಪರೀಕ್ಷೆ ಇದಾಗಿದೆ. ಬಂಜೆತನ (Fertility)ದಿಂದ ಬಳಲುವ ದಂಪತಿಗಳ ಪೈಕಿ ಪುರುಷರ ವೀರ್ಯ (Sperm) ಪರೀಕ್ಷೆ ನಡೆಸುವಂತೆ ಇಲ್ಲೂ ಪರೀಕ್ಷೆಯನ್ನು ನಡೆಸಲಾಗುತ್ತದೆ. ವೀರ್ಯದಾನ ಸಂದರ್ಭದಲ್ಲೂ ಇದೇ ವಿಧಾನ ಅನುಸರಿಸಲಾಗುತ್ತದೆ. ವ್ಯಾಸೆಕ್ಟಮಿ(ಜನನ ನಿಯಂತ್ರಣ ಚಿಕಿತ್ಸೆ) ಮಾಡಿಸಿಕೊಂಡಿದ್ದರೂ ಈ ಪರೀಕ್ಷೆಯಿಂದ ಎಲ್ಲವೂ ತಿಳಿಯಲಿದೆ. ವೀರ್ಯ ಸಂಗ್ರಹಿಸಲು ಆರೋಪಿ ಹಸ್ತಮೈಥುನ ಮಾಡಿಕೊಳ್ಳಲು ಸೂಚನೆ ನೀಡಲಾಗುತ್ತೆ. ಇದರಿಂದ ಆರೋಪಿಯ ವೀರ್ಯದ ಫಲವತ್ತತೆ ಅದರಲ್ಲಿರುವ ಪ್ರೋಟಿನ್ ಅಂಶ ಬಹಿರಂಗವಾಗುತ್ತದೆ. 

ಶಿಶ್ನದ ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆ (Penile Doppler Ultrasound)
ಶಿಶ್ನಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುತ್ತಿದೆಯೆ? ಶಿಶ್ನದಿಂದ ಹೊರಬಿದ್ದ ವೀರ್ಯದಲ್ಲಿ ರಕ್ತದ ಪ್ರಮಾಣ ಎಷ್ಟಿದೆ? ಎಂಬುದು ತಿಳಿಸುವ ಟೆಸ್ಟ್ ಇದಾಗಿದೆ. ಶಿಶ್ನದ ಒಳ ಹೊರಗಿನ ರಕ್ತನಾಳದ ಪರೀಕ್ಷೆ ಇದಾಗಿದ್ದು, ವಯಾಗ್ರಾದಂಥ ಔಷಧ ಸೇವಿಸಿದರೂ ಕೂಡಾ ಶೀಘ್ರ ಸ್ಖಲನ, ನಿಮಿರುವಿಕೆ ತೊಂದರೆ ಇದ್ದಾಗ ಈ ಪರೀಕ್ಷೆ ನಡೆಸಲಾಗುತ್ತದೆ. ಶಿಶ್ನ ನಿಮಿರುವಿಕೆಗೆ ಸಮರ್ಪಕ ರಕ್ತ ಸಂಚಾರ ಅತ್ಯಗತ್ಯ. ಶಿಶ್ನದ ಒಳ -ಹೊರಗೂ ರಕ್ತ ಯಾವ ದಿಕ್ಕಿನಲ್ಲಿ ಹರಿಯುತ್ತಿದೆ ಎಂಬುದನ್ನು ತಿಳಿಯಲು ಸಾಧನವೊಂದನ್ನು ಬಳಸಿ ಪತ್ತೆ ಹಚ್ಚಲಾಗುತ್ತದೆ. ಆರೋಪಿಗೆ Venous Leak Syndrome ಇದ್ದರೆ ಶಿಶ್ನಕ್ಕೆ ರಕ್ತ ಸಂಚಾರ ಅಧಿಕಗೊಂಡು ನಿಮಿರುವಿಕೆ ಸ್ಥಿಮಿತದಲ್ಲಿರುವುದಿಲ್ಲ. ವಯಾಗ್ರಾ ಕೊಟ್ಟರೂ ಶಿಶ್ನ ನಿಮಿರುವುದಿಲ್ಲ.

ಆತ್ಮಹತ್ಯೆಗೆ ಯತ್ನಿಸಿದ ಮುರುಘಾ ಶರಣರ ಶಿಷ್ಯ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿ ಹೈಡ್ರಾಮಾ

ಶಿಶ್ನ ನಿಮಿರುವಿಕೆ ಪೂರಕ ಪರೀಕ್ಷೆ (Visual Erection Examination)
ನಿಮಿರು ಮತ್ತು ಉದ್ರೇಕರಹಿತ ಸ್ಥಿತಿ ಎರಡೂ ಸ್ಥಿತಿಯನ್ನು ಅವಲೋಕಿಸಿ ವೈದ್ಯರು ನಡೆಸುವ ಪರೀಕ್ಷೆ ಇದಾಗಿದೆ. ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥ ಎನ್ನಲು ಶಾಶ್ವತ ನಿಮಿರುವಿಕೆ ದೋಷವಿರಬೇಕು. ಹೀಗಿದ್ದರೆ ಮಾತ್ರ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ. ಯಾವುದೇ ಸಂದರ್ಭದಲ್ಲಿಯೂ(ಪ್ರಚೋದನಕಾರಿ ಚಿತ್ರ, ವಿಡಿಯೋ ನೋಡಿ ಅಥವಾ ವಯಗ್ರಾ ಸೇವಿಸಿಯೂ ಕೂಡಾ) ಶಿಶ್ನ ನಿಮಿರುವುದಿಲ್ಲ ಎಂದು ತಿಳಿದಾಗ ವೈದ್ಯರು ಸರ್ಜರಿ ಮೂಲಕ ಸರಿಪಡಿಸಲು ಯತ್ನಿಸುತ್ತಾರೆ. ಸಾಧ್ಯವಾಗದಿದ್ದರೆ. ಲೈಂಗಿಕವಾಗಿ ಅಸಮರ್ಥ ಎಂದು ಘೋಷಿಸುತ್ತಾರೆ

ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುವ ಪರೀಕ್ಷೆ (Nocturnal Penile Tumescence (NPT) Test)
ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುವ ಪರೀಕ್ಷೆಯಿದು. ವ್ಯಕ್ತಿಯೊಬ್ಬ ರಾತ್ರಿ ನಿದ್ರೆಯಲ್ಲಿ ಎಷ್ಟು ಬಾರಿ  ಗಡುಸು ಪಡೆಯುತ್ತಾನೆ ಎಂದು ಎನ್‌ಪಿಟಿ ಪರೀಕ್ಷೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈ ಪರೀಕ್ಷೆ ಸಾಮಾನ್ಯವಾಗಿ ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುತ್ತದೆ. ವ್ಯಕ್ತಿಯ ಅರಿವಿಗೆ ಬಾರದಂತೆ ನಡೆಯುವ ನಿಮಿರುವಿಕೆಯನ್ನು ಈ ಉಪಕರಣ ದಾಖಲಿಸುತ್ತದೆ. ಕಣ್ಣು ನಿದ್ರಾವಸ್ಥೆಯಲ್ಲಿರುವುದರಿಂದ ಸುಪ್ತ ಸ್ಥಿತಿಯಲ್ಲಿ ಮೆದುಳು ಕಳಿಸುವ ಸಂದೇಶ ರಕ್ತನಾಳಗಳ ಮೂಲಕ ಶಿಶ್ನಕ್ಕೆ ಹರಿದು ನಿಮಿರುವ ಸಾಧ್ಯತೆಯನ್ನು ಕಂಡುಕೊಳ್ಳಲಾಗುತ್ತದೆ.

Follow Us:
Download App:
  • android
  • ios