Asianet Suvarna News Asianet Suvarna News

Summer Heatwave: ರೆಡ್‌. ಆರೆಂಜ್, ಯೆಲ್ಲೋ, ಗ್ರೀನ್‌ ಅಲರ್ಟ್ ಎಂದರೆ ಏನು?

ರಾಜ್ಯದಲ್ಲಿ ಕಳೆದ ಹಲವು ತಿಂಗಳಿಂದ ವಿಪರೀತ ಬಿಸಿಲಿನ ತಾಪವಿದೆ. ಹೆಚ್ಚುತ್ತಿರುವ ಬಿಸಿಲಿನ ಧಗೆಯಿಂದಾಗಿ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತಿವೆ. ದೇಶದ ಹಲವೆಡೆ ಹವಾಮಾನ ಇಲಾಖೆ ಅಲರ್ಟ್‌ನ್ನು ಸಹ ಘೋಷಿಸಿದೆ. ಇಷ್ಟಕ್ಕೂ IMDಯ ಕೆಂಪು, ಕಿತ್ತಳೆ, ಹಳದಿ, ಹಸಿರು ಅಲರ್ಟ್ ಎಂದರೆ ಏನು? ಆ ಬಗ್ಗೆ ಇಲ್ಲಿದೆ ಮಾಹಿತಿ.

What is Red, orange, yellow, green alert in Summer, Here is description about weather warning Vin
Author
First Published May 4, 2024, 10:27 AM IST

ಸಾಮಾನ್ಯವಾಗಿ, ಹವಾಮಾನ ಇಲಾಖೆಯು ಎಲ್ಲಾ ಋತುಮಾನಗಳಲ್ಲೂ ಹವಾಮಾನದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಹವಾಮಾನ ವೈಪರೀತ್ಯಗಳು ಮತ್ತು ಅವುಗಳ ತೀವ್ರತೆಯನ್ನು ಜನರಿಗೆ ತಿಳಿಸಲು ನಿರ್ದಿಷ್ಟವಾಗಿ ಬಣ್ಣ ಆಧಾರಿತ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಅವುಗಳನ್ನು ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳಲ್ಲಿ ಸಂಕೇತಗಳಾಗಿ ಬಳಸಲಾಗುತ್ತದೆ. ಇಷ್ಟಕ್ಕೂ IMDಯ ಕೆಂಪು, ಕಿತ್ತಳೆ, ಹಳದಿ, ಹಸಿರು ಅಲರ್ಟ್ ಎಂದರೆ ಏನು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಗ್ರೀನ್ ಅಲರ್ಟ್
ಗ್ರೀನ್ ಅಲರ್ಟ್ ವೇಳೆ ಜನರು ಗಾಬರಿ ಪಡುವ ಅಗತ್ಯವಿಲ್ಲ, ಯಾವುದೇ ಎಚ್ಚರಿಕೆಯ ಫಲಕಗಳಿದ್ದರೆ ಮಾತ್ರ ಹವಾಮಾನ ಇಲಾಖೆಯಿಂದ ಈ ಗ್ರೀನ್ ಅಲರ್ಟ್ ಬಿಡುಗಡೆ ಮಾಡಲಾಗುತ್ತದೆ. ಇದು ಹೆಚ್ಚು ಅಪಾಯಕಾರಿಯಲ್ಲ ಎಂಬುದನ್ನು ಹೇಳುತ್ತದೆ.

ಬಿಸಿಲ ಧಗೆ ಮಧ್ಯೆ ಸ್ವಲ್ಪ ರಿಲ್ಯಾಕ್ಸ್‌..ಟ್ರಾಫಿಕ್ ಸಿಗ್ನಲ್‌ನಲ್ಲಿ ಗ್ರೀನ್ ರೂಫ್ ಹಾಕಿದ ಸರ್ಕಾರ, ವೀಡಿಯೋ ವೈರಲ್‌

ಯೆಲ್ಲೋ ಅಲರ್ಟ್‌
ಯೆಲ್ಲೋ ಅಲರ್ಟ್‌ ಎಚ್ಚರಿಕೆಯು ಕೆಟ್ಟ ಹವಾಮಾನವನ್ನು ಸೂಚಿಸುತ್ತದೆ. ಹವಾಮಾನ ಇಲಾಖೆ ಈ ಹಳದಿ ಎಚ್ಚರಿಕೆಯನ್ನು ನೀಡಿದರೆ ಜನರು ತುಂಬಾ ಜಾಗರೂಕರಾಗಿರಬೇಕು. ಯಾಕೆಂದರೆ ಇದು ದೈನಂದಿನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಆರೆಂಜ್ ಅಲರ್ಟ್
ಹವಾಮಾನ ಪರಿಸ್ಥಿತಿಗಳು ಕೆಟ್ಟದಾಗಿದ್ದಾಗ ಮಾತ್ರ ಆರೆಂಜ್ ಅಲರ್ಟ್ ನೀಡಲಾಗುತ್ತದೆ. ಈ ಅಲರ್ಟ್‌ ನೀಡಿದಾಗ ಮೀನುಗಾರಿಕೆ, ಸಂಚಾರ, ರೈಲು ಮತ್ತು ವಿಮಾನಯಾನಕ್ಕೆ ಅಡಚಣೆ ಉಂಟಾಗುತ್ತದೆ. ಆದ್ದರಿಂದ, ಈ ಎಚ್ಚರಿಕೆ ಜಾರಿಯಲ್ಲಿರುವಾಗ ಜನರು ದೂರದ ಸ್ಥಳಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸೂಚಿಸಲಾಗುತ್ತದೆ

ರೆಡ್ ಅಲರ್ಟ್
ಹವಾಮಾನ ಪರಿಸ್ಥಿತಿಗಳು ತುಂಬಾ ಕೆಟ್ಟದಾಗಿದ್ದಾಗ ಮಾತ್ರ ಈ ರೆಡ್ ಅಲರ್ಟ್‌ನ್ನು ನೀಡಲಾಗುತ್ತದೆ. ಈ ಕೋಡ್ ಅಪಾಯದ ಸಂಕೇತವಾಗಿದೆ. ಈ ಎಚ್ಚರಿಕೆ ಜಾರಿಯಲ್ಲಿರುವಾಗ ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ಇಲ್ಲದಿದ್ದರೆ ಈ ಕೆಟ್ಟ ಹವಾಮಾನ ಪರಿಸ್ಥಿತಿ ಜೀವ ತೆಗೆಯುವಷ್ಟೂ ಅಪಾಯಕಾರಿಯಾಗಿದೆ.

ರಾಜ್ಯದ 25 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ; ರಾಯಚೂರಲ್ಲಿ 46.7 ಡಿಗ್ರಿ ದಾಖಲು

ಸದ್ಯ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲಿನ ತಾಪ ಕಾಣಿಸಿಕೊಂಡಿದೆ. ಆಗೀಗ ಮಾತ್ರ ಸ್ಪಲ್ಪ ಮಳೆ ಸುರಿದು ವಾತಾವರಣ ತಂಪಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ ರಾಜ್ಯದಲ್ಲಿ ಈ ಬಿಸಿಗಾಳಿ ಮುಂದಿನ 3 ದಿನಗಳ ಕಾಲ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. 

Follow Us:
Download App:
  • android
  • ios