Asianet Suvarna News Asianet Suvarna News

ಬಿಸಿಲ ಧಗೆ ಮಧ್ಯೆ ಸ್ವಲ್ಪ ರಿಲ್ಯಾಕ್ಸ್‌..ಟ್ರಾಫಿಕ್ ಸಿಗ್ನಲ್‌ನಲ್ಲಿ ಗ್ರೀನ್ ರೂಫ್ ಹಾಕಿದ ಸರ್ಕಾರ, ವೀಡಿಯೋ ವೈರಲ್‌

ದೇಶಾದ್ಯಂತ ಬಿಸಿಲ ಧಗೆ ಹೆಚ್ಚಿದೆ. ಸುಡುವ ಬಿಸಿಲಿನಿಂದ ಜನರು ಮನೆಯಿಂದ ಹೊರಗಿಳಿಯುವುದೇ ಕಷ್ಟ ಎಂಬಂತಾಗಿದೆ. ಬಿಸಿಲ ಧಗೆ, ಬೆವರು, ಸುಡುವ ಶಾಖಕ್ಕೆ ಜನರು ಹೈರಾಣಾಗಿದ್ದಾರೆ. ಹೀಗಿರುವಾಗ ಇಲ್ಲೊಂದೆಡೆ ಸರ್ಕಾರ ರಸ್ತೇಲಿ ಬಿಸಿಲ ಧಗೆಯಿಂದ ಪಾರಾಗೋಕೆ ಎಂಥಾ ಐಡಿಯಾ ಮಾಡಿದೆ ನೋಡಿ..

Netted Green Roof At Traffic Signals Need Of The Hour, Netizens React To Viral Video From Pondicherry Vin
Author
First Published May 2, 2024, 5:23 PM IST

ಪಾಂಡಿಚೇರಿ: ದೇಶಾದ್ಯಂತ ಬಿಸಿಲ ಧಗೆ ಹೆಚ್ಚಿದೆ. ಸುಡುವ ಬಿಸಿಲಿನಿಂದ ಜನರು ಮನೆಯಿಂದ ಹೊರಗಿಳಿಯುವುದೇ ಕಷ್ಟ ಎಂಬಂತಾಗಿದೆ. ಬಿಸಿಲ ಧಗೆ, ಬೆವರು, ಸುಡುವ ಶಾಖಕ್ಕೆ ಜನರು ಹೈರಾಣಾಗಿದ್ದಾರೆ. ಹೀಗಿದ್ದೂ ಅನಿವಾರ್ಯ ಸಂದರ್ಭಗಳಲ್ಲಿ ಮನೆಯಿಂದ ಹೊರ ಹೋಗಬೇಕಾಗಿ ಬಂದಾಗ ಬಿಸಿಲಿನಲ್ಲೇ ಓಡಾಡಬೇಕಾಗುತ್ತದೆ. ಕಿಕ್ಕಿರಿದ ರಸ್ತೆಗಳಲ್ಲಿ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಬಿಸಿಲಿನಲ್ಲಿ ನಿಲ್ಲುವುದು ಯಾರಿಗಾದರೂ ಕಷ್ಟಕರವಾದ ಕೆಲಸ. ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ಬಿಸಿಲ ಧಗೆ ತುಂಬಾ ಹೆಚ್ಚಾಗಿರುತ್ತದೆ. ರಸ್ತೆಗಳ ಪಕ್ಕದಲ್ಲಿ ಸಾಗುವ ಮರಗಳು ಸ್ವಲ್ಪ ನೆರಳು ನೀಡುತ್ತವೆ ಮತ್ತು ಪ್ರಯಾಣವನ್ನು ಸ್ವಲ್ಪ ಸುಗಮಗೊಳಿಸುತ್ತವೆ. ಆದ್ರೆ ಇತ್ತೀಚಿಗೆ ರಸ್ತೆಗಳ ಇಕ್ಕೆಲದಲ್ಲಿ ಮರಗಳೇ ಇಲ್ಲದ ಕಾರಣ ವಾಹನ ಸವಾರರು ಹೈರಾಣಾಗುವಂತಾಗಿದೆ.

ಹಸಿರಿನ ಕೊರತೆಯಿರುವ ಜಾಗಗಳ ಬಗ್ಗೆ ಜನರಿಗೆ ತಿಳಿದಿದ್ದರೂ, ಮರ ಬೆಳೆಯಲು ಮತ್ತು ಪ್ರಯಾಣಿಕರಿಗೆ ಆಶ್ರಯ ನೀಡಲು ವರ್ಷಗಳ ಕಾಲ ಬೇಕಾಗುತ್ತದೆ. ಇದನ್ನು ಗಮನಿಸಿದ ಪಾಂಡಿಚೇರಿ ಸಾರ್ವಜನಿಕ ಕಲ್ಯಾಣ ಇಲಾಖೆ ಬಿಸಿಲಿನ ಬೇಗೆಯಲ್ಲಿ ಪ್ರಯಾಣಿಸುವವರಿಗೆ ನೆರಳು ನೀಡಲು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಸಿರು ಮ್ಯಾಟ್‌ಗಳನ್ನು ಅಳವಡಿಸಿದೆ.

ರಾಜ್ಯದ 25 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ; ರಾಯಚೂರಲ್ಲಿ 46.7 ಡಿಗ್ರಿ ದಾಖಲು

ಪಾಂಡಿಚೇರಿಯ ಬೀದಿಗಳ ಸಿಗ್ನಲ್‌ಗಲ್ಲಿ ಈ ಗ್ರೀನ್ ಮ್ಯಾಟ್‌ನ್ನು ಹಾಕಿರುವುದನ್ನು ನೋಡಬಹುದು. ಇತ್ತೀಚಿಗೆ ವೈರಲ್ ಆದ ವೀಡಿಯೋ, ಜೀಬ್ರಾ ಕ್ರಾಸಿಂಗ್ ಲೈನ್ ಮತ್ತು ಟ್ರಾಫಿಕ್ ಸಿಗ್ನಲ್‌ನಿಂದ ಕೆಲವು ಮೀಟರ್‌ಗಳವರೆಗೆ ರಸ್ತೆಮಾರ್ಗದ ಮೇಲೆ ಅಳವಡಿಸಲಾದ ಹಸಿರು ಮ್ಯಾಟ್‌ನ್ನು ತೋರಿಸುತ್ತದೆ. ಜನರು ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಈ ಹಸಿರು ಛಾವಣಿಯ ವರೆಗೆ ಆಶ್ರಯ ಪಡೆಯುತ್ತಾರೆ.

ವೀಡಿಯೋದಲ್ಲಿ ಬೈಕ್ ಸವಾರರು ಗ್ರೀನ್‌ಮ್ಯಾಟ್‌ ಕೆಳಗೆ ವಾಹನ ನಿಲ್ಲಿಸಿರುವುದನ್ನು ನೋಡಬಹುದು. ಇನ್ನೊಂದು ಬದಿಯಲ್ಲಿ ಇತರ ದ್ವಿಚಕ್ರ ವಾಹನಗಳ ಜೊತೆಗೆ ಕೆಲವು ಆಟೋಗಳು ಮತ್ತು ಬಸ್‌ಗಳನ್ನು ನಿಲ್ಲಿಸಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ.

ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳಲ್ಲಿಟ್ಟ ನೀರು ಆರೋಗ್ಯಕ್ಕೆ ಬೆಸ್ಟ್

ನೆಟ್ಟಿಗರೊಬ್ಬರು, ಮುಂಬೈನಲ್ಲಿಯೂ ಬಿಸಿಲಿಗೆ ಇಂಥಾ ಗ್ರೀನ್‌ ಮ್ಯಾಟ್ ಹಾಕುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ದೆಹಲಿ, ಕೋಲ್ಕತ್ತಾ, ಕೇರಳದಲ್ಲೂ ಇದನ್ನು ಜಾರಿಗೊಳಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಹಲವಾರು ಜನರು ಪಾಂಡಿಚೇರಿಯಿಂದ ಸ್ಫೂರ್ತಿ ಪಡೆದು ತಮ್ಮ ನಗರಕ್ಕೂ ವ್ಯವಸ್ಥೆಯನ್ನು ತರಲು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದರು.

Follow Us:
Download App:
  • android
  • ios