Asianet Suvarna News Asianet Suvarna News

ಬೆತ್ತಲೆಯ ಭಯದಿಂದ ವೈವಾಹಿಕ ಬದುಕು ಅಲ್ಲೋಲ ಕಲ್ಲೋಲ;ಈ ಕಾಲದ ನಗ್ನ ಸಮಸ್ಯೆ ಜಿಮ್ನೋಫೋಬಿಯಾ!

ಫೋಬಿಯಾ ಅಂದರೆ ವಿನಾ ಕಾರಣ ಭಯ. ಕಾಲ ಕಾಲಕ್ಕೆ ಈ ಫೋಬಿಯಾ ಲಿಸ್ಟ್‌ಗೆ ಒಂದೊಂದು ಬಗೆಯ ಹೊಸ ಫೋಬಿಯಾಗಳು ಸೇರುತ್ತಾ ಹೋಗುತ್ತವೆ. ಈಗ ಒಂದಿಷ್ಟುಜನರನ್ನು ಕಾಡುತ್ತಿರುವುದು ಜಿಮ್ನೋಫೋಬಿಯಾ. ನಗ್ನತೆಯ ಬಗೆಗಿನ ಭಯವಿದು. ಇತ್ತೀಚೆಗೆ ಈ ಸಮಸ್ಯೆ ಹೆಚ್ಚಾಗುತ್ತಿದೆ. ಈ ಫೋಬಿಯಾದ ಹಿನ್ನೆಲೆ ಮುನ್ನೆಲೆ ಇಲ್ಲಿದೆ.

what is gymniphobia how to over come fear of nudity
Author
Bangalore, First Published Sep 10, 2020, 3:09 PM IST

ಮನಃಶಾಸ್ತ್ರಜ್ಞರ ಡೈರಿಯಿಂದ ಆರಿಸಿದ ಎರಡು ಕೇಸ್‌ ಸ್ಟಡಿಗಳಿವು. ಇವು ಜಿಮ್ನೋಫೋಬಿಯಾಕ್ಕೆ ಒಳಗಾದವರ ಕತೆಯನ್ನು ಹೇಳುತ್ತವೆ.

ರಣವೀರ್ - ಶಾರುಖ್ ಖಾನ್: ಕ್ಯಾಮೆರಾ ಮುಂದೆ ಬೆತ್ತಲೆಯಾಗಿರುವ ಬಾಲಿವುಡ್‌ ಹೀರೊಗಳು

1. ಸೌಮ್ಯಾ ಮಧ್ಯಮ ವರ್ಗದ ಹುಡುಗಿ. ಅವಳು ಒಮ್ಮೆ ಯಾವುದೋ ಫಂಕ್ಷನ್‌ಗೆ ಹೋಗಿದ್ದಾಗ ಮಕ್ಕಳ ಜೊತೆಗೆ ಇವಳೂ ಹೊರಗೆ ಆಟ ಆಡ್ತಾ ಇದ್ದಳು. ಆಗ ಸಂಬಂಧಿಕರಲ್ಲೇ ಒಬ್ಬಾತ ಇವಳನ್ನು ಚಾಕ್ಲೇಟ್‌ ಕೊಟ್ಟು ಆಚೆ ಕರೆದೊಯ್ದ. ಇವಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾದ. ಈಕೆ ಕಿರುಚಾಡಿ, ಉಳಿದ ಮಕ್ಕಳೆಲ್ಲ ಅಲ್ಲಿಗೆ ಬಂದು ಹೇಗೋ ಆತನ ಕೈಯಿಂದ ಪಾರಾದಳು. ಆದರೆ ಆ ಬಳಿಕದಿಂದ ಈಕೆಗೆ ವಿಚಿತ್ರ ಭಯ ಶುರುವಾಯ್ತು. ಸ್ನಾನ ಮಾಡುವಾಗಲೂ ಎಲ್ಲಿ ಯಾರು ನೋಡುತ್ತಾರೋ ಅಂತ ಭಯ. ಬಹಳ ಬೇಗ ಅವಳ ಸ್ನಾನ ಮುಗಿಯುತ್ತಿತ್ತು. ಉಳಿದೆಲ್ಲ ಹೆಣ್ಮಕ್ಕಳ ಜೊತೆಗೂ ಅವಳಿಗೆ ಡ್ರೆಸ್‌ ಚೇಂಜ್‌ ಮಾಡಲಾಗುತ್ತಿರಲಿಲ್ಲ. ಮುಂದೆ ಮದುವೆ ಆದ ಮೇಲಂತೂ ಗಂಡ ಇವಳ ಪಾಲಿಗೆ ವಿಲನ್‌ ಆಗಿಬಿಟ್ಟ. ಅವನನ್ನು ಕಂಡರೆ ಭಯದಿಂದ ನಡುಗುತ್ತಿದ್ದಳು. ಕೊನೆಗೆ ಸೌಮ್ಯಾ ಮನಃಶಾಸ್ತ್ರಜ್ಞರ ಬಳಿಗೆ ಹೋದಾಗ ಅವಳ ಸಮಸ್ಯೆ ಏನು ಅಂತ ಗೊತ್ತಾಯ್ತು. ಅವರು ಈಕೆಯನ್ನು, ಇವಳ ಗಂಡನನ್ನೂ ಕೂರಿಸಿ ಸಮಸ್ಯೆ ಬಗ್ಗೆ ಹೇಳಿದರು. ಒಂದಿಷ್ಟುಕಾಲದ ಟ್ರೀಟ್‌ಮೆಂಟ್‌ ಬಳಿಕ ಈಕೆಯನ್ನು ಕಾಡಿದ ಜಿಮ್ನೋಫೋಬಿಯಾ ಹತೋಟಿ ಬಂತು. ಆದರೆ ಈವರೆಗೆ ಸೌಮ್ಯಾಗೆ ಇದರಿಂದ ಸಂಪೂರ್ಣ ಹೊರಬರಲಾಗಲಿಲ್ಲ.

what is gymniphobia how to over come fear of nudity

2. ಸುಜಿತ್‌ಗೆ ವಿಭಾಳ ಪರಿಚಯ ಆಗುವವರೆಗೂ ತನಗೆ ಆ ಥರದ್ದೊಂದು ಸಮಸ್ಯೆ ಇರಬಹುದು ಅನ್ನುವ ಕಲ್ಪನೆಯೂ ಇರಲಿಲ್ಲ. ಒಂದು ವಿಚಾರದಲ್ಲಿ ಆತ ಉಳಿದವರಿಗಿಂತ ಭಿನ್ನವಾಗಿದ್ದ. ಅವನಿಗೆ ಪಬ್ಲಿಕ್‌ ಟಾಯ್ಲೆಟ್‌ ಬಳಸಲಾಗುತ್ತಿರಲಿಲ್ಲ. ಬಯಲಲ್ಲಿ ಮೂತ್ರಶಂಕೆ ತೀರಿಸಿಕೊಳ್ಳಲಾಗುತ್ತಿರಲಿಲ್ಲ. ತನಗಿರುವ ಸಂಕೋಚ ಪ್ರವೃತ್ತಿಯಿಂದ ಹೀಗಾಗ್ತಿದೆ ಅಂತ ಆತ ಸುಮ್ಮನಿದ್ದ. ಕಾಲೇಜ್‌ನಲ್ಲಿದ್ದಾಗ ಫ್ರೆಂಡ್ಸ್‌ ಜೊತೆಗೆ ಆರಾಮದಿಂದಿದ್ದ. ಉದ್ಯೋಗಿಯಾದ ಮೇಲೆ ವಿಭಾಳ ಪರಿಚಯವಾಯ್ತು, ಅದು ಸ್ನೇಹಕ್ಕೆ ತಿರುಗಿತು. ಸ್ನೇಹ ಬಹಳ ಬೇಗ ಪ್ರೇಮವಾಗಿ ಬದಲಾಯ್ತು. ಒಮ್ಮೆ ಅವಳೊಂದಿಗೆ ಆಪ್ತವಾಗಿ ಕಳೆಯುವ ಕ್ಷಣ ಬಂದಾಗ ಮಾತ್ರ ಸುಜಿತ್‌ ಸಂಪೂರ್ಣ ಬೆವೆತುಹೋದ, ಎದೆ ಹೊಡೆದುಕೊಳ್ಳಲಾರಂಭಿಸಿತು. ವಾಕರಿಕೆಯಂಥಾ ಫೀಲಿಂಗ್‌ ಶುರುವಾಯ್ತು... ಏನೋ ಕಾರಣ ಹೇಳಿ ಅವಳಿಂದ ಅವತ್ತು ತಪ್ಪಿಸಿಕೊಂಡ. ಬಳಿಕದ್ದು ಕಡು ಕಷ್ಟದ ದಿನಗಳು. ತಾನು ಪರಿಪೂರ್ಣ ಗಂಡಸಲ್ಲ ಅನ್ನೋ ಭಾವನೆ ಅವನನ್ನು ಕುಸಿಯೋ ಹಾಗೆ ಮಾಡಿತು. ವಿಭಾಳಿಂದಲೂ ದೂರಾಗುತ್ತಾ ಬಂದ. ಖಿನ್ನತೆಯ ಲಕ್ಷಣಗಳು ಗೋಚರಿಸಲಾರಂಭಿಸಿದವು.

ಫೋಟೊಗಳಿಂದಾನೇ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ 'ನ್ಯೂಡ್ ಯೋಗ ಗರ್ಲ್' !

ಅಸಹಜ ಮನಸ್ಥಿತಿ

ಈ ಎರಡು ಕೇಸ್‌ ಹಿಸ್ಟರಿಗಳನ್ನು ಗಮನಿಸಿದರೆ ನಮಗೆ ಜಿಮ್ನೋಫೋಬಿಯಾದ ಚಿತ್ರಣ ಸಿಗುತ್ತದೆ. ಇದು ಬೆತ್ತಲೆಯ ಬಗೆಗೆ ಇರುವ ಭಯ. ಕೆಲವರಿಗೆ ತಮ್ಮ ನಗ್ನತೆಯನ್ನೇ ನೋಡಲಾಗುವುದಿಲ್ಲ. ಕೆಲವರಿಗೆ ಇತರರ ನಗ್ನತೆ ಭಯ ತರಿಸುತ್ತದೆ. ಇನ್ನೂ ಕೆಲವರಿಗೆ ತಮ್ಮದೂ, ಇತರರ ಬೆತ್ತಲೆಯನ್ನು ನೋಡಲಾಗುವುದಿಲ್ಲ. ಈ ಬಗೆಯ ಮಾತುಕತೆಗಳೂ ವಾಕರಿಕೆ ತರಿಸಬಹುದು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಲೈಂಗಿಕತೆಯನ್ನು ಅಸಹ್ಯವೆಂದು ನೋಡುವ ಮನೆಮಂದಿಯಿಂದ ಮಕ್ಕಳಲ್ಲಿ ಆ ಬಗ್ಗೆ ಹೇವರಿಕೆ ಭಯ ಬೆಳೆಯುತ್ತದೆ. ಅತಿ ಸಂಕೋಚದ ಪ್ರವೃತ್ತಿಯಿಂದಲೂ ಹೀಗಾಗಬಹುದು. ಒಬ್ಬೊಬ್ಬರಿಗೆ ಒಂದೊಂದು ಕಾರಣ ಇರುತ್ತದೆ. ವಿನಾ ಕಾರಣ ಹೀಗಾದರೂ, ಬೆಳೆದ ಪರಿಸರ ಪರೋಕ್ಷ ಕಾರಣವಾಗಿರುತ್ತದೆ.

what is gymniphobia how to over come fear of nudity

ಸಮಸ್ಯೆಗೆ ಪರಿಹಾರ ಇದೆಯಾ?

- ದಂಪತಿ ತಮ್ಮ ರೂಮ್‌ ಅನ್ನು ಸಂಪೂರ್ಣ ಕತ್ತಲೆ ಮಾಡಿ ಲೈಂಗಿಕತೆ ನಡೆಸುವುದು ಒಂದು ಪರಿಹಾರ ಆಗಬಹುದು ಅಂತಾರೆ ಮನಃಶಾಸ್ತ್ರಜ್ಞರು.

- ನಗ್ನತೆಯಿಂದ ತನಗ್ಯಾವುದೇ ತೊಂದರೆಯಾಗಲ್ಲ ಅನ್ನೋದನ್ನ ಹಂತ ಹಂತವಾಗಿ ಮನದಟ್ಟು ಮಾಡುತ್ತಾ ಬರಬಹುದು.

- ಸಮಸ್ಯೆ ಬಗ್ಗೆ ಅರಿವು ಮೂಡಿಸಿ ಅದರಿಂದಾಚೆ ತರುವ ಕಾಗ್ನೆಟಿವ್‌ ಬಿಹೇವಿಯರಲ್‌ ಥೆರಪಿ (ಸಿಬಿಟಿ), ಬಿಡಬ್ಲ್ಯೂಆರ್‌ಟಿ ಅನ್ನೋ ಮಿದುಳಿಗೆ ಮತ್ತೆ ಮತ್ತೆ ಇದು ಅಪಾಯಕಾರಿ ಅಲ್ಲ ಅನ್ನೋದನ್ನು ಮನದಟ್ಟು ಮಾಡೋ ಇತ್ತೀಚಿನ ಥೆರಪಿಗಳು ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತವೆ.

Follow Us:
Download App:
  • android
  • ios