Asianet Suvarna News Asianet Suvarna News

ಮೊಬೈಲ್ ನೋಡ್ತಾ ಲೇಟಾಗಿ ಮಲಗ್ತೀರಾ? ನಿದ್ರೆಸೋ ವಿಷ್ಯದಲ್ಲಿ ಗೂಬೆಗಳಾಗಿ!

ಬದಲಾದ ಜೀವನಶೈಲಿಯಿಂದ ಎಲ್ಲರೂ ಲೇಟಾಗಿ ಮಲಗೋದು ಕಾಮನ್ ಆಗಿದೆ. ಬಹುಶಃ ಅದೇ ಕಾರಣಕ್ಕೋ ಏನೋ, ಇದು ಮಾನಸಿಕ ಆರೋಗ್ಯವೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. 
 

What happens to the Health when you go to bed after midnight
Author
First Published Dec 20, 2023, 3:20 PM IST

ನಿದ್ದೆಯು ಉತ್ತಮ ಆರೋಗ್ಯ (Good Health)ದ ಮೂಲಾಧಾರ ಎಂದು ಕರೆಯಲಾಗಿದ್ದರೂ, ತಮ್ಮ ದೈನಂದಿನ ಜೀವನ ಜಂಜಾಟದಲ್ಲಿ ಹೆಚ್ಚಿನ ಜನರು ನಿದ್ರೆಗೆ (Sleep) ಆದ್ಯತೆ ನೀಡುವುದಿಲ್ಲ, ನಿದ್ರೆಗೆ ಕೊಡುವ  ಸಮಯದೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆ.  ಇದು ವ್ಯಕ್ತಿಯ ಆರೋಗ್ಯದ ಮೇಲೆ  ನಕಾರತ್ಮಕ ಪರಿಣಾಮವನ್ನು (Negative Effect) ಬೀರುತ್ತದೆ. 

ಉತ್ತಮ ಆರೋಗ್ಯಕ್ಕಾಗಿ ಪತ್ರಿದಿನ  7-8  ನಿದ್ದೆ ಮಾಡುವುದು ಅಗತ್ಯ.  ಹೆಚ್ಚು ಗಮನ ನಿದ್ದೆಗೆ ನೀಡದಿದ್ದರೆ,  ವ್ಯಕ್ತಿಯ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ, ಮಾನಸಿಕ ಆರೋಗ್ಯವೂ ಹದಗೆಡುವುದು ಗ್ಯಾರಂಟಿ. ಬೇಗ ಮಲಗುವವರಿಗೆ  ಹಲವು ಆರೋಗ್ಯ ಪ್ರಯೋಜನಗಳಿವೆ ಎಂದು ಸಂಶೋಧನೆಗಳು ನಿರಂತರವಾಗಿ ತಿಳಿಸುತ್ತಲೇ ಇವೆ. ಸರಿಯಾದ ಸಮಯದಲ್ಲಿ ನಿದ್ದೆ ಮಾಡುವುದರಿಂದ ನಮ್ಮ ಸಿರ್ಕಾಡಿಯನ್ (Circadian) ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ವ್ಯಕ್ತಿಗೆ ಹೆಚ್ಚಿನ ಶಕ್ತಿ ಮತ್ತು  ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಗೂಬೆಗಳು (owls) ತಮ್ಮ ನಿದ್ರಾ ಸಮಯವನ್ನು ಸರಿಯಾಗಿ ಹೊಂದಿಸಿಕೊಳ್ಳುವುದರಿಂದ  ಕಡಿಮೆ ಖಿನ್ನತೆ (depression) ಮತ್ತು ಒತ್ತಡವನ್ನು (stress) ಹೊಂದಿರುತ್ತವೆ ಎಂದು ಅಧ್ಯಯನಗಳು ತಿಳಿಸಿವೆ.

ಇದನ್ನು ಓದಿ: ಮಲಗೋ ಭಂಗಿಯಲ್ಲೇ ಇದೆ ಆರೋಗ್ಯ, ನಿಮ್ಮ ಮಲಗೋ ಭಂಗಿ ಸರಿಯಾಯೋ, ತಪ್ಪಾ ಚೆಕ್ ಮಾಡ್ಕೊಳ್ಳಿ!

ಗ್ಯಾಸ್ಟ್ರೋಎಂಟರಾಲಜಿಸ್ಟ್ (Gastroenterologist)  ಡಾ.  ಸೌರಭ್ ಸೇಥಿ (Dr Saurabh Sethi) ಅವರು ಮಧ್ಯರಾತ್ರಿ ನಂತರ ಮಲಗುವವರಿಗೆ ಉಂಟಾಗುವ ಹಾನಿಕಾರಕ ಪರಿಣಾಮವನ್ನು Instagram ನಲ್ಲಿ ಬಹಿರಂಗಪಡಿಸುವ ವೀಡಿಯೊವನ್ನು  ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ನೀವು ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ, ನಿಮ್ಮ ಆರೋಗ್ಯದ ಮೇಲೆ ಹಲವು ನಕಾರತ್ಮಕ ಪರಿಣಾಮಗಳು ಬೀರಬಹುದು. ಅವುಗಳೆಂದರೆ, ದೇಹದ ತೂಕದ ಹೆಚ್ಚಳ (Gaining Body Weight), ಮಾನಸಿಕ ಆರೋಗ್ಯದ ಮೇಲೆ ಪ್ರಭಾವ, ಒತ್ತಡದ (Stress) ಮಟ್ಟ ಹೆಚ್ಚಾಗುತ್ತಲೇ ಹೋಗುವುದು ಮತ್ತು ದಿನನಿತ್ಯದ ಚಟುವಟಿಕೆಯಲ್ಲಿ ಸರಿಯಾಗಿ ಗಮನ ಹರಿಸಲು ಕಷ್ಟಪಡಬಹುದು.ಇದಲ್ಲದೆ, ನೆನಪು, ಗಮನ ಮತ್ತು ಜಾಗರೂಕತೆಯಂತಹ ಅರಿವಿನ ಕಾರ್ಯಗಳು ಸರಿಯಾಗಿ ನಿರ್ವಹಿಸಲು ಸಾಕಷ್ಟು ನಿದ್ದೆ ಅಗತ್ಯವೆಂದು ವಿಡಿಯೋದಲ್ಲಿ ತಿಳಿಸಿದೆ.

ನಿದ್ದೆಯು  ಚಯಾಪಚಯವನ್ನು ನಿಯಂತ್ರಿಸುವ (Digestive System) ಮತ್ತು ಇಮ್ಯುನಿಟಿಯನ್ನು (Immunity Power)  ಹೆಚ್ಚಿಸುವ  ಮೂಲಕ ದೈಹಿಕ ಆರೋಗ್ಯದಲ್ಲಿ (Physical Health) ಮಹತ್ವದ ಪಾತ್ರವನ್ನು ವಹಿಸುತ್ತದೆ. ಸ್ಥೂಲಕಾಯತೆ, ಮಧುಮೇಹ, ಹೃದಯರಕ್ತನಾಳದ ಕಾಯಿಲೆ, ಮತ್ತು ಕೆಲವು ಕ್ಯಾನ್ಸರ್ (Cancer) ಸೇರಿ ಹೆಚ್ಚಿನ  ಸಮಸ್ಯೆಗಳಿಗೆ ನಿದ್ರೆ ಕಡಿಮೆಯಾಗುತ್ತಿರುವುದು ಕಾರಣವಾಗಿದೆ. 

ನಿದ್ರೆಯ ಅಭಾವ ಕೇವಲ ವೈಯಕ್ತಿಕ ಆರೋಗ್ಯವನ್ನು  ಹಾಳು ಮಾಡುವುದು ಮಾತ್ರವಲ್ಲದೆ, ಇತರೆ ಸಮಸ್ಯೆಗಳನ್ನು ಸೃಷ್ಟಿಸಬಹುದು. ನಿದ್ದೆಯ ಕೊರತೆಯಿಂದ ನಿರ್ಣಯ ಮತ್ತು ಪ್ರತಿಕ್ರಿಯೆ ನೀಡುವ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದು  ಹೆಚ್ಚು ಅಪಘಾತಗಳು ಮತ್ತು ಗಾಯಗಳನ್ನು ಸೃಷಟಿಸುವ  ಅಪಾಯವನ್ನು ಹೊಂದಿದೆ. ಅಲ್ಲದೆ, ಇದು ಕೆಲಸ ಸ್ಥಳ ಅಥವಾ ಶಾಲೆಯಲ್ಲಿ ವ್ಯಕ್ತಿಯ ಕಾರ್ಯಕ್ಷಮತೆಯ (Work Efficiency) ಮೇಲೆ ಪರಿಣಾಮ ಬೀರಬಹುದು ಮತ್ತು ವೈಯಕ್ತಿಕ ಸಂಬಂಧವನ್ನು ಹಾಳುಮಾಡಬಹುದು.

ಇದನ್ನು ಓದಿ: ರಾತ್ರಿ ನಿದ್ರೆಯೇ ಬರೋಲ್ವಾ? ಮಲಗೋ ಮುಂಚೆ ಈ ಹಣ್ಣು ತಿಂದ್ಬಿಡಿ ಸಾಕು

ನಿದ್ರಾ ತಜ್ಞ ಡಾ. ಯೋಂಗ್ಚಿಯಾಟ್ ವಾಂಗ್ (YongChiat Wong), ನಿದ್ರೆಯ ಸಮಯದಲ್ಲಿ ದೇಹವು ಬಲವರ್ಧನೆಯ ಪ್ರಕ್ರಿಯೆಗೆ ಒಳಗಾಗುತ್ತದೆ ಎಂದಿದ್ದಾರೆ. ನಿದ್ರಿಸುವಾಗ ನಮ್ಮ ದೇಹ ಚಲಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವವಾಗಿ ನಮ್ಮ ಮೆದುಳು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತದೆ. ಇದು ಕಲಿಯುವುದು ಮತ್ತುಅಲ್ಪಾವಧಿಯ ಸ್ಮರಣೆಯನ್ನು ದೀರ್ಘಾವಧಿಯ ಸ್ಮರಣೆಗೆ ಪರಿವರ್ತಿಸಲು ಕಾರ್ಯನಿರ್ವಹಿಸುತ್ತದೆ. ಇದು ರಾತ್ರಿಯಲ್ಲಿ ಮಾತ್ರ  ಮೆದುಳು ಕಾರ್ಯನಿರ್ವಹಿಸಲು ಸಾಧ್ಯ ಎಂದು  ಡಾ ವಾಂಗ್ ಹೇಳಿದರು.

ಉತ್ತಮ ನಿದ್ರೆಯ ಅಭ್ಯಾಸವನ್ನು ಬೆಳೆಸಲು, ತಜ್ಞರು ಪ್ರತಿನಿತ್ಯ ನಿಖರವಾದ ನಿದ್ರಾ ವೇಳಾಪಟ್ಟಿಯನ್ನು ಅನುಸರಿಸುವಂತೆ ಸಲಹೆ ನೀಡುತ್ತಾರೆ. ಮಲಗುವ ಸಮಯದಲ್ಲಿ ಕೆಫೀನ್‌ನಂಥ ವಸ್ತುಗಳನ್ನು ದೂರವಿಡುವ ಮೂಲಕ ಉತ್ತಮ ನಿದ್ರೆಯ ವಾತಾವರಣವನ್ನು ಕಲ್ಪಿಸಬೇಕು. ಜೊತೆಗೆ,  ಬೆಳಗಿನ ವ್ಯಾಯಾಮ ಮತ್ತು ಆರೋಗ್ಯಕರ ಉಪಹಾರವು ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ  ಒಟ್ಟಾರೆ ದೈನಂದಿನ ಕಾರ್ಯ ನಿರ್ವಹಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಸಿಂಧು ಕೆ ಟಿ. ಕುವೆಂಪು ವಿಶ್ವವಿದ್ಯಾಲಯ

Follow Us:
Download App:
  • android
  • ios