Health : 24 ಗಂಟೆ ಬರೀ ಹಣ್ಣು, ಬಿಸಿ ನೀರು ಕುಡಿದ್ರೆ ಏನಾಗುತ್ತೆ?
ನಮ್ಮ ದೇಹಕ್ಕೆ ಎಲ್ಲ ರೀತಿಯ ಪೋಷಕಾಂಶದ ಅಗತ್ಯವಿರುತ್ತದೆ. ದೇಹಕ್ಕೆ ಒಂದಂಶ ಕಡಿಮೆ ಆದ್ರೂ ಅನಾರೋಗ್ಯ ನಮ್ಮನ್ನು ಕಾಡುತ್ತೆ. ಹಣ್ಣು ಮತ್ತೆ ನೀರು ಎರಡೂ ನಮಗೆ ಬೇಕು. ಆದ್ರೆ ಅವರೆಡನ್ನೇ ತಿಂದು ಬದುಕ್ತೇನೆ ಅಂದ್ರೆ ಕಷ್ಟ.
ಬಿಗ್ ಬಾಸ್ ಒಟಿಟಿ 3 ಈಗಾಗಲೇ ಶುರುವಾಗಿದೆ. ಹೆಡ್ ಲೈನ್ ನಲ್ಲಿ ಇರೋದೇ ಒಂದು ಇವರು ಹೇಳ್ತಿರೋದೇ ಒಂದು ಅಂತ ಕನ್ಫ್ಯೂಸ್ ಆಗ್ಬೇಡಿ. ನಾವು ಹೇಳ್ತಿರೋ ವಿಷ್ಯಕ್ಕೂ ಬಿಗ್ ಬಾಸ್ ಹಿಂದಿ ಒಟಿಟಿ ಶೋಗೂ ಸಂಬಂಧವಿದೆ. ವಾಸ್ತವವಾಗಿ, ಬಿಗ್ ಬಾಸ್ ಒಟಿಟಿ ಸ್ಪರ್ಧಿಗಳು, ತಮಗೆ ನೀಡಿದ ಆಹಾರವನ್ನು ಎರಡು ದಿನದಲ್ಲಿ ಖಾಲಿ ಮಾಡ್ಕೊಂಡಿದ್ದಾರೆ. ಈಗ ಅವರ ಬಳಿ ಬರೀ ಹಣ್ಣು ಹಾಗೂ ನೀರಿದೆ. ಹೊಟ್ಟೆ ತುಂಬಿಸಿಕೊಳ್ಳಲು ಸ್ಪರ್ಧಿಗಳು ಬಿಸಿ ನೀರು ಹಾಗೂ ಹಣ್ಣಿನ ಸೇವನೆ ಮಾಡ್ತಿದ್ದಾರೆ. ಈ ಬಗ್ಗೆ ದೂರು ನೀಡುವುದಾಗಿ ಸ್ಪರ್ಧಿ ಸನಾ ಎಚ್ಚರಿಕೆ ಕೂಡ ನೀಡಿದ್ದಾರೆ. ಅದೇನೇ ಇರಲಿ, ಸ್ಪರ್ಧಿಗಳು ಒಂದು ವಾರದವರೆಗೆ ಹೀಗೆ ಇರ್ತಾರಾ ಎಂಬುದು ಗೊತ್ತಿಲ್ಲ. ಆದ್ರೆ 24 ಗಂಟೆಗೂ ಹೆಚ್ಚು ಕಾಲ ಹಣ್ಣು ಹಾಗೂ ಬಿಸಿ ನೀರನ್ನು ಮಾತ್ರ ಸೇವನೆ ಮಾಡಿದ್ರೆ ದೇಹ ಏನಾಗುತ್ತೆ ಎಂಬುದನ್ನು ತಜ್ಞರು ಹೇಳಿದ್ದಾರೆ.
ಹಣ್ಣು (Fruit) , ನೀರು ಸೇವನೆಯಿಂದಾಗುವ ಸಮಸ್ಯೆಗಳು : ತಜ್ಞರ ಪ್ರಕಾರ, 24 ಗಂಟೆಗಳ ಕಾಲ ಕುದಿಸಿದ ನೀರ (Water) ನ್ನು ಕುಡಿಯುವುದು ಮತ್ತು ಹಣ್ಣುಗಳನ್ನು ತಿನ್ನುವುದು ಪೌಷ್ಟಿಕಾಂಶ (Nutrition) ದ ಕೊರತೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಹಣ್ಣುಗಳಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಪ್ರಮುಖ ಖನಿಜ ಸೇರಿದಂತೆ ಅಗತ್ಯ ಪೋಷಕಾಂಶಗಳು ಇರೋದಿಲ್ಲ. ಇದು ದೇಹದ ಎಲೆಕ್ಟ್ರೋಲೈಟ್ ಮಟ್ಟದಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ. ಕುದಿಸಿದ ನೀರಿನಲ್ಲಿ ಅಗತ್ಯವಾದ ಖನಿಜಗಳ ಕೊರತೆಯಿರುತ್ತದೆ. ದೀರ್ಘಕಾಲ ಈ ಕುದಿಸಿದ ನೀರನ್ನು ಕುಡಿಯೋದ್ರಿಂದ ಖನಿಜಗಳ ಕೊರತೆಗೆ ಕಾರಣವಾಗಬಹುದು. ಈ ಸಂಯೋಜನೆಯು ತಲೆತಿರುಗುವಿಕೆ, ತಲೆನೋವು, ಆಯಾಸ ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟ ತ್ವರಿತವಾಗಿ ಕಡಿಮೆ ಆಗುತ್ತದೆ. ಇದು ಹೈಪೊಗ್ಲಿಸಿಮಿಯಾಕ್ಕೆ ಕಾರಣವಾಗುತ್ತದೆ. ಕುದಿಸಿದ ನೀರು ಹಾಗೂ ಬರೀ ಹಣ್ಣಿನ ಸೇವನೆ ಮಾಡಿದ್ರೆ ದೇಹದ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಸೋಂಕಿನ ಅಪಾಯವನ್ನು ಹೆಚ್ಚಾಗುತ್ತದೆ.
ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕಣ್ಣೂರಿನ 13 ವರ್ಷದ ಹುಡುಗಿ ಬಲಿ; ಏನಿದರ ಲಕ್ಷಣಗಳು?
ಇದು ನಿಮ್ಮ ದೇಹದ ಮೇಲೆ ದೀರ್ಘಕಾಲಿಕ ಪರಿಣಾಮವನ್ನು ಕೂಡ ಬೀರುತ್ತದೆ. ಈ ಆಹಾರವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ದೈಹಿಕವಾಗಿ ಇದು ತೂಕ ನಷ್ಟ, ಕೂದಲು ನಷ್ಟ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ದೀರ್ಘಕಾಲದ ಅಪೌಷ್ಟಿಕತೆಯು ಅಂಗ ಹಾನಿ, ರಕ್ತಹೀನತೆ ಮತ್ತು ಮೂಳೆ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.
ಅಗತ್ಯ ಪೋಷಕಾಂಶಗಳ ಕೊರತೆಯಿಂದಾಗಿ ಆತಂಕ, ಖಿನ್ನತೆ ಮತ್ತು ಕಿರಿಕಿರಿ ನಿಮ್ಮನ್ನು ಕಾಡುತ್ತದೆ. ಮೆಮೊರಿ ನಷ್ಟ ಮತ್ತು ಏಕಾಗ್ರತೆಯ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ದೇಹದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಆಸ್ಟಿಯೊಪೊರೋಸಿಸ್ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
ಹುಟ್ಟಿದ ವರ್ಷವನ್ನು 2023 ಎಂದು ಬದಲಿಸಿದ ನಟಿ ಸುಷ್ಮಿತಾ ಸೇನ್! ಇದರ ಹಿಂದಿದೆ ಕುತೂಹಲದ ಕಥೆ...
ಪೋಷಕಾಂಶದ ಕೊರತೆ ಇರುವ ವ್ಯಕ್ತಿ ಎಷ್ಟು ದಿನ ಬದುಕಬಲ್ಲ? : ಪೋಷಕಾಂಶದ ಕೊರತೆಯಾದಲ್ಲಿ ವ್ಯಕ್ತಿ ಎಷ್ಟು ದಿನ ಬದುಕಬಲ್ಲ ಎಂಬುದು ಆತನ ಆರೋಗ್ಯ ಮತ್ತು ದೈಹಿಕ ಚಟುವಟಿಕೆಯಂತಹ ಅಂಶಗಳನ್ನು ಅವಲಂಬಿಸಿದೆ. ಮಾನವ ದೇಹವು ಹಲವಾರು ವಾರಗಳವರೆಗೆ ಸರಿಯಾದ ಪೋಷಣೆಯಿಲ್ಲದೆ ಬದುಕಬಲ್ಲದು. ಆಹಾರವಿಲ್ಲದ ಸಮಯದಲ್ಲಿ ದೇಹವು ಶಕ್ತಿಗಾಗಿ ಸಂಗ್ರಹವಾದ ಕೊಬ್ಬನ್ನು ಬಳಸುತ್ತದೆ. ಯಕೃತ್ತು ಶೇಖರಿಸಿದ ಗ್ಲೈಕೋಜೆನ್ ಅನ್ನು ಶಕ್ತಿಗಾಗಿ ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಅಗತ್ಯ ಪೋಷಕಾಂಶ ನಿಮ್ಮ ದೇಹಕ್ಕೆ ತಲುಪದೆ ಹೋದಾಗ ನಿಮ್ಮ ದೇಹ ಬೇಗನೆ ದುರ್ಬಲಗೊಳ್ಳುತ್ತದೆ. ಆರಂಭದಲ್ಲಿ ತಲೆಸುತ್ತು, ಸುಸ್ತು, ತೂಕ ಇಳಿಕೆ ನಿಮ್ಮನ್ನು ಕಾಡಲು ಶುರುವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.