Asianet Suvarna News Asianet Suvarna News

MRI ಸ್ಕ್ಯಾನಿಂಗ್ ಏಕೆ ಮಾಡ್ತಾರೆ? ಅದ್ರ ಪ್ರಯೋಜನ ಏನು?

ಈಗಿನ ದಿನಗಳಲ್ಲಿ ಬಹುತೇಕ ಎಲ್ಲ ರೋಗಕ್ಕೂ ಮದ್ದು ಕಂಡು ಹಿಡಿಯಲಾಗ್ತಿದೆ. ಮೊದಲು ಬಂದಿರುವ ಖಾಯಿಲೆ ಯಾವುದು ಎಂಬುದನ್ನು ಪತ್ತೆ ಮಾಡಿದ್ರೆ ಮಾತ್ರ ಅದಕ್ಕೆ ಔಷಧಿ ನೀಡಲು ಸಾಧ್ಯ. ಅದನ್ನು ಸುಲಭ ಯಂತ್ರದ ಮೂಲಕ ನೋವಿಲ್ಲದೆ ಮಾಡ್ಬಹುದು.
 

What Are The Advantages Of MRI Scan
Author
First Published Jan 31, 2023, 3:33 PM IST

ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಬದಲಾವಣೆಯಾಗಿದೆ. ಮನುಷ್ಯನ ದೇಹದೊಳಗೆ ಏನೆಲ್ಲ ಇದೆ, ಎಲ್ಲಿ ಸಮಸ್ಯೆ ಕಾಡುತ್ತಿದೆ ಎಂಬುದನ್ನು ಕೆಲವೇ ನಿಮಿಷದಲ್ಲಿ ವೈದ್ಯರು ತಂತ್ರಜ್ಞಾನದ ಮೂಲಕ ಪತ್ತೆ ಮಾಡ್ತಾರೆ. ಇದ್ರಲ್ಲಿ ಎಂಆರ್ ಐ ಸ್ಕ್ಯಾನ್ ಕೂಡ ಸೇರಿದೆ. ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗೆ ಎಂಆರ್ ಐ ಸ್ಕ್ಯಾನ್ ಆಡ್ಬೇಕು ಎಂದು ಹೇಳಿರೋದನ್ನು ನೀವು ಕೇಳಿರಬಹುದು. ನಾವಿಂದು ನಿಮಗೆ ಎಂಆರ್ ಐ ಸ್ಕ್ಯಾನಿಂಗ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡ್ತೇವೆ.

ಎಂಆರ್ ಐ (MRI) ಸ್ಕ್ಯಾನಿಂಗ್ ಅಂದ್ರೇನು? : ಎಂಆರ್ ಐ ಪೂರ್ಣ ಹೆಸರು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್. ಇದು ಒಂದು ರೀತಿಯ ಸ್ಕ್ಯಾನಿಂಗ್  (Scanning ) ಯಂತ್ರ. ಇದು ಅತ್ಯಂತ ಶಕ್ತಿಯುತ ಮತ್ತು ನಿಯಂತ್ರಿತ ವಿದ್ಯುತ್ ಕ್ಷೇತ್ರಗಳು, ರೇಡಿಯೋ (Radio) ತರಂಗಗಳು ಮತ್ತು ಕಂಪ್ಯೂಟರ್ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಅದರ ಸಹಾಯದಿಂದ, ಮಾನವ ದೇಹದ ಒಳಭಾಗದ ವಿವರವಾದ ಚಿತ್ರಗಳನ್ನು  ಹೊರತೆಗೆಯಲಾಗುತ್ತದೆ.  ಎಂಆರ್ ಐ ಸ್ಕ್ಯಾನಿಂಗ್ ನಲ್ಲಿ ಎಕ್ಸ್-ರೇ (X ray) ವಿಕಿರಣವನ್ನು ಬಳಸಲಾಗುವುದಿಲ್ಲ. ಎಂಆರ್ ಐ ತಂತ್ರಜ್ಞಾನವನ್ನು ಹೆಚ್ಚಾಗಿ ರೋಗವನ್ನು ಪತ್ತೆಹಚ್ಚಲು, ರೋಗನಿರ್ಣಯ ಮಾಡಲು ಮತ್ತು ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತದೆ. ಹೆಚ್ಚಿನ ಎಂಆರ್ ಐ ಯಂತ್ರಗಳು ದೊಡ್ಡದಾದ, ಟ್ಯೂಬ್ ಆಕಾರದ ಆಯಸ್ಕಾಂತಗಳಾಗಿರುತ್ತವೆ.

ಚೀಸ್ ತಿಂದು ಮಲಗೋ ಕೆಲಸಕ್ಕೆ ಸಿಗ್ತಿದೆ 81 ಸಾವಿರ ರೂ ವೇತನ!

ಎಂಆರ್ಐ ತಂತ್ರವನ್ನು ಏಕೆ ಬಳಸಲಾಗುತ್ತದೆ? : ಕೀಲುಗಳು ಮತ್ತು ಮೂಳೆಗಳಿಗೆ ಸಂಬಂಧಿಸಿದ ರೋಗಗಳನ್ನು ಪತ್ತೆಹಚ್ಚಲು. ಹೃದಯ ಸಂಬಂಧಿ ಕಾಯಿಲೆಗಳನ್ನು ಗುರುತಿಸಲು. ಸ್ತನ ಕ್ಯಾನ್ಸರ್ ಅಪಾಯವನ್ನು ಕಂಡುಹಿಡಿಯಲು. ಬೆನ್ನುಹುರಿ ಮತ್ತು ಮೆದುಳಿನ ಸಮಸ್ಯೆಗಳನ್ನು ಪತ್ತೆಹಚ್ಚಲು. ಗರ್ಭಧಾರಣೆ ಮತ್ತು ಯಕೃತ್ತಿನ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು. ಬಂಜೆತನಕ್ಕೆ ಚಿಕಿತ್ಸೆ ಪಡೆಯುವ ಮಹಿಳೆಯರಲ್ಲಿ ಗರ್ಭಾಶಯದ ಅಸಹಜತೆಗಳನ್ನು ಪತ್ತೆಹಚ್ಚಲು. ಎಂಡೊಮೆಟ್ರಿಯೊಸಿಸ್ ಮತ್ತು ಫೈಬ್ರಾಯ್ಡ್ ಗಳನ್ನು ಒಳಗೊಂಡಿರುವ ಮಹಿಳೆಯರಲ್ಲಿ ಶ್ರೋಣಿಯ ನೋವಿನ ಕಾರಣಗಳನ್ನು ಮೌಲ್ಯಮಾಪನ ಮಾಡಲು. ದೇಹದ ವಿವಿಧ ಭಾಗಗಳಲ್ಲಿ ಹುಣ್ಣುಗಳು, ಗೆಡ್ಡೆಗಳು ಅಥವಾ ಇತರ ಕಾಯಿಲೆಗಳನ್ನು ಪತ್ತೆಹಚ್ಚಲು ಎಂಆರ್ ಐ ಸ್ಕ್ಯಾನಿಂಗ್ ಬಳಸಲಾಗುತ್ತದೆ. 

ಎಂಆರ್ ಐ ಹೇಗೆ ಮಾಡಲಾಗುತ್ತದೆ? : ಎಂಆರ್ ಐ ಸ್ಯಾನಿಂಗ್ ಗೆ ಒಳಪಡುವ ವ್ಯಕ್ತಿ ಆಸ್ಪತ್ರೆಯ ಗೌನ್ ಅನ್ನು ಧರಿಸಬೇಕು. ದೇಹದ ಮೇಲೆ ಯಾವುದೇ ಲೋಹದ ವಸ್ತು ಇರಬಾರದು.  ಸ್ಕ್ಯಾನ್ ಮಾಡುವ ಮೇಜಿನ ಮೇಲೆ ಮಲಗಬೇಕಾಗುತ್ತದೆ. ಈ ಟೇಬಲ್ ನಂತರ ಗುಮ್ಮಟದ ಆಕಾರದ ಸ್ಕ್ಯಾನರ್ ಒಳಗೆ ಹೋಗುತ್ತದೆ. ನಿಮ್ಮ ತಲೆ ಅಥವಾ ನಿಮ್ಮ ಪಾದಗಳು ಮೊದಲು ಒಳಗೆ ಹೋಗುತ್ತವೆ. ಅಲ್ಲಿ  ಕಾಂತೀಯ ಕ್ಷೇತ್ರವು ನಿಮ್ಮ ದೇಹದಲ್ಲಿನ ನೀರಿನ ಅಣುಗಳನ್ನು ತಾತ್ಕಾಲಿಕವಾಗಿ ಮರುಹೊಂದಿಸುತ್ತದೆ. ರೇಡಿಯೋ ತರಂಗಗಳು ಈ ಜೋಡಿಸಲಾದ ಪರಮಾಣುಗಳಿಂದ ಸಂಕೇತಗಳನ್ನು ಉತ್ಪಾದಿಸುತ್ತವೆ. ಇವುಗಳನ್ನು ಎಂಆರ್ ಐ ಚಿತ್ರಗಳನ್ನು ರಚಿಸಲು ಬಳಸಲಾಗುತ್ತದೆ.  

ಸ್ಕ್ಯಾನಿಂಗ್ ವೇಳೆ ಶಬ್ಧ ಬರುವುದು ಏಕೆ? : ಸ್ಕ್ಯಾನ್ ಮಾಡುವಾಗ ಜೋರಾಗಿ ಥಂಪಿಂಗ್ ಅಥವಾ ಪಾಪಿಂಗ್ ಶಬ್ದ ಕೇಳುತ್ತದೆ. ಇದಕ್ಕೆ ಹೆದರುವ ಅಥವಾ ಚಿಂತಿಸುವ ಅಗತ್ಯವಿಲ್ಲ. ಎಂಆರ್ ಐ ಸ್ಕ್ಯಾನರ್ ಕಾಯಿಲ್‌ನಲ್ಲಿನ ವಿದ್ಯುತ್ ಪ್ರವಾಹವನ್ನು ಆನ್ ಮತ್ತು ಆಫ್ ಮಾಡಿದಾಗ ಈ ಥಂಪಿಂಗ್ ಸಂಭವಿಸುತ್ತದೆ.

ಎಂಆರ್ ಐ ಸ್ಕ್ಯಾನಿಂಗ್ ಗೆ ಎಷ್ಟು ಸಮಯ ಬೇಕು? : ಎಂಆರ್ ಐ ಸ್ಕ್ಯಾನಿಂಗ್ ಗೆ 15 – 20 ನಿಮಿಷ ಅಗತ್ಯವಿರುತ್ತದೆ. ಇಡೀ ದೇಹವನ್ನು ಸ್ಕ್ಯಾನ್ ಮಾಡಿ ಚಿತ್ರ ತೆಗೆಯುವ ಸಮಯ ಇದಾಗಿದೆ.
ಸ್ಕ್ಯಾನ್ ಮಾಡಿದ ನಂತ್ರ ರೆಡಿಯೋಲಾಜಿಸ್ಟ್ ಈ ಚಿತ್ರಗಳನ್ನು ಪರೀಕ್ಷಿಸುತ್ತಾರೆ ಮತ್ತು ರೋಗಿಗೆ ಸಮಸ್ಯೆಗಳನ್ನು ವಿವರಿಸುತ್ತಾರೆ. ದೇಹದೊಳಗೆ ಬುಲೆಟ್‌ ಅಥವಾ ಲೋಹದ ಚೂರು ಹೊಂದಿರುವ ಜನರು, ರಾಡ್ ಹಾಕಿದ ಜನರಿಗೆ ಎಂಆರ್ ಐ ಸ್ಕ್ಯಾನ್ ಮಾಡುವುದಿಲ್ಲ.  

ಸಿಗರೇಟ್ ಬಿಡಲೇ ಬೇಕಾ? ಗಟ್ಟಿ ಮನಸ್ಸು ಮಾಡಿ, ಈ ಟಿಪ್ಸ್ ಫಾಲೋ ಮಾಡಿ, ಶುಭವಾಗಲಿ

ಎಂಆರ್ ಐ ಸ್ಕ್ಯಾನ್ ಪ್ರಯೋಜನ : ಇದರಲ್ಲಿ ನೋವುರಹಿತ ಚಿತ್ರ ತೆಗೆಯಬಹುದು. ಇದರಲ್ಲಿ ವಿಕಿರಣದ ಅಪಾಯವಿಲ್ಲ. ಮೆದುಳು, ಬೆನ್ನುಮೂಳೆ, ಕೀಲುಗಳು, ಹೃದಯ, ಯಕೃತ್ತು ಮತ್ತು ಇತರ ಅನೇಕ ಅಂಗಗಳಂತಹ ದೇಹದ ಮೃದು ಅಂಗಾಂಶ ರಚನೆಗಳನ್ನು ಎಂಆರ್ ಐ ನಿಂದ ಹೆಚ್ಚು ನಿಖರವಾಗಿ ಗುರುತಿಸಬಹುದು. ಕ್ಯಾನ್ಸರ್, ಹೃದ್ರೋಗ, ಸ್ನಾಯು ಮತ್ತು ಮೂಳೆ ರೋಗಗಳು ಮತ್ತು ಇತರ ಅನೇಕ ರೋಗಗಳನ್ನು ಎಂಆರ್ಐ ಸ್ಕ್ಯಾನ್ ಮೂಲಕ ಕಂಡುಹಿಡಿಯಬಹುದು.

Follow Us:
Download App:
  • android
  • ios