Asianet Suvarna News Asianet Suvarna News

ರಾತ್ರಿ ಊಟದ ನಂತರ 10 ನಿಮಿಷ ಈ ಕೆಲಸ ಮಾಡಿ, ಶುಗರ್ ಕಂಟ್ರೋಲ್‌ಗೆ ಬರುತ್ತೆ

ರಾತ್ರಿ ಊಟ ಮಾಡಿದ ನಂತರ ಹೆಚ್ಚಿನವರು ಕೂಡಲೇ ಮಲಗಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಆ ಕ್ಷಣಕ್ಕೆ ಸುಸ್ತಾಗಿದೆ, ಮಲಗಿಬಿಡೋಣ ಅಂತೆನಿಸಿದರೂ ವಾಸ್ತವದಲ್ಲಿ ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಫಿಟ್ ಆಗಿರಲು ಪ್ರತಿದಿನ ರಾತ್ರಿ ಊಟದ ನಂತರ ಹತ್ತು ನಿಮಿಷ ಮೀಸಲಿಟ್ಟರೆ ಸಾಕು. ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. 

Walking After Dinner At Night, Blood Sugar Will Be Under Control Vin
Author
Bengaluru, First Published Aug 24, 2022, 10:54 AM IST

ವ್ಯಾಯಾಮ ಮಾಡಲು ಅಥವಾ ಯೋಗ, ಧ್ಯಾನ ಮೊದಲಾದ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ದಿನವಿಡೀ ಸಮಯವನ್ನು ಹೊಂದಿಸುವುದು ಕಷ್ಟವಾಗಿದೆ. ಆದರೆ ಪ್ರತೀ ದಿನ ಕೆಲವು ನಿಮಿಷಗಳನ್ನು ನೀವು ಆರೋಗ್ಯಕರ ಚಟುವಟಿಕೆಗಳಿಗಾಗಿ ಮೀಸಲಿಡಬಹುದು. ಇದು ನಿಮಗೆ ಫಿಟ್ ಆಗಿರಲು ಮಾತ್ರ ಸಹಾಯ ಮಾಡುವುದಿಲ್ಲ. ಬದಲಿಗೆ, ನೀವು ಇದರ ಮೂಲಕ ಇತರ ಹಲವು ಪ್ರಯೋಜನಗಳನ್ನು ಪಡೆಯುತ್ತೀರಿ. ರಾತ್ರಿ ಊಟದ ನಂತರ ಕೇವಲ 10 ನಿಮಿಷ ವಾಕ್ ಮಾಡಿ ಸಾಕು, ಅದ್ರಿಂದ ಆರೋಗ್ಯಕ್ಕಾಗುವ ಲಾಭ ಒಂದೆರಡಲ್ಲ. ಆ ಬಗ್ಗೆ ಮಾಹಿತಿ ಇಲ್ಲಿದೆ/

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಊಟದ ನಂತರ ನಡೆಯುವ ಅಭ್ಯಾಸ ನಿಮ್ಮ ದೇಹವು ಹೆಚ್ಚು ಗ್ಯಾಸ್ಟ್ರಿಕ್ ಕಿಣ್ವಗಳನ್ನು ಮಾಡಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆ (Digestion)ಯನ್ನು ಸುಧಾರಿಸುತ್ತದೆ. ಮಾತ್ರವಲ್ಲ ಹೊಟ್ಟೆ ಉಬ್ಬುವ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಅದರಿಂದ ಪರಿಹಾರವನ್ನು ನೀಡುತ್ತದೆ.

ಉಪವಾಸ ಮಾಡ್ತೀರಾ ? ತಲೆಸುತ್ತಿ ಬೀಳ್ಬಾರ್ದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ, ಊಟದ ನಂತರ 10 ನಿಮಿಷಗಳ ಕಾಲ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು. ವಾಸ್ತವವಾಗಿ, ತಿಂದ 30 ನಿಮಿಷಗಳ ನಂತರ ರಕ್ತದಲ್ಲಿನ ಸಕ್ಕರೆಯ ಹೆಚ್ಚಳವಾಗಲು ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಾಕಿಂಗ್ ಮೂಲಕ, ದೇಹವು (Body) ಶಕ್ತಿಗಾಗಿ ಗ್ಲೂಕೋಸ್ ಅನ್ನು ಬಳಸುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.

ಚಯಾಪಚಯ ಹೆಚ್ಚುತ್ತದೆ: ಚಯಾಪಚಯವನ್ನು ಹೆಚ್ಚಿಸಲು ಸುಲಭವಾದ ಮಾರ್ಗವೆಂದರೆ ಊಟವಾದ ತಕ್ಷಣ ಮಲಗುವ ಬದಲು ವಾಕ್ ಮಾಡುವುದು. ಇದು ನೀವು ವಿಶ್ರಾಂತಿಯಲ್ಲಿರುವಾಗ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಮತ್ತು ನಿಮ್ಮ ದೇಹವನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ರಾತ್ರಿ ಊಟದ ನಂತರದ ನಡಿಗೆಯು ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರಿಗೂ ಸಹಕಾರಿ. ಮೆಟಾಬಾಲಿಸಂ ಕುಂಠಿತವಾದರೆ ತೂಕ (Weight) ಹೆಚ್ಚಾಗಲು ಶುರುವಾಗುತ್ತದೆ, ಫಿಟ್‌ನೆಸ್ ಮಂತ್ರ ಹೇಳಿದ 48ರ ಹರೆಯದ ಮಲೈಕಾ ಅರೋರಾ, ಪ್ರತಿದಿನ ಈ 3 ಯೋಗಾಸನಗಳನ್ನು ಮಾಡುತ್ತಾರೆ.

ಮನಸ್ಸು ಒತ್ತಡಕ್ಕೊಳಗಾಗುವುದಿಲ್ಲ: ವಾಕಿಂಗ್ ಒತ್ತಡ (Pressure)ವನ್ನು ನಿವಾರಿಸಲು ಮತ್ತು ದೇಹದಲ್ಲಿ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಮನಸ್ಸಿಗೆ ಉತ್ತಮ ಭಾವನೆಯನ್ನು ನೀಡುತ್ತದೆ. ರಾತ್ರಿ ಊಟದ ನಂತರ ನಡಿಗೆಯು ನಿಮ್ಮನ್ನು ಸಂತೋಷವಾಗಿಡಬಹುದು ಮತ್ತು ಖಿನ್ನತೆಯನ್ನು ದೂರವಿರಿಸಬಹುದು.

Healthy Food: ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿ ಯಡವಟ್ಟು ಮಾಡ್ಕೊಳ್ಬೇಡಿ

ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ: ರಾತ್ರಿಯ ಊಟದ ನಂತರ ವಾಕ್ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಅಗತ್ಯವಾಗಿರುತ್ತದೆ. ಇದು ಆಂತರಿಕ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೆ ನಿಮ್ಮ ರೋಗನಿರೋಧಕ ಶಕ್ತಿಯು (Immunity power) ಸುಧಾರಿಸುತ್ತದೆ. ಕೋವಿಡ್‌ನಂತಹ  ಸೋಂಕುಗಳನ್ನು ನಿವಾರಿಸಲು ದೇಹವನ್ನು ಶಕ್ತಗೊಳಿಸುತ್ತದೆ. 

ಉತ್ತಮ ನಿದ್ರೆಗಾಗಿ ವಾಕ್ ಅಗತ್ಯ: ದೈಹಿಕವಾಗಿ ಸದೃಢವಾಗಿರುವುದರ ಜೊತೆಗೆ ರಾತ್ರಿಯ ಊಟದ ನಂತರ ನಡೆಯುವುದು ಮಾನಸಿಕ ಆರೋಗ್ಯಕ್ಕೂ (Mental Health) ಪ್ರಯೋಜನಕಾರಿ. ನಿಮಗೆ ರಾತ್ರಿ ಮಲಗಲು ತೊಂದರೆಯಾಗಿದ್ದರೆ, ರಾತ್ರಿಯ ಊಟದ ನಂತರ ಪ್ರತಿ ರಾತ್ರಿ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ.

Follow Us:
Download App:
  • android
  • ios